ಡುಪ್ಲಿಕೇಟ್ ವೈದೇಹಿ ಮನೆಗೆ ಎಂಟ್ರಿ ಕೊಟ್ಟಾಯ್ತು: ಒರಿಜಿನಲ್ ವೈದೇಹಿ ಕಿಕ್ ಔಟ್ ಆಗುತ್ತಾಳಾ..?
ಗಟ್ಟಿಮೇಳ ಧಾರಾವಾಹಿಯಲ್ಲಿ ಚಂದ್ರಕಲಾ ಈಗ ವೈದೇಹಿಯಾಗಿ ವೇದಾಂತ್ ಎದುರಿಗೆ ಬಂದಿದ್ದಾಳೆ. ವೇದಾಂತ್ ಹಾಗೂ ಮನೆಯವರೆಲ್ಲರೂ ಚಂದ್ರಕಲಾಳನ್ನೇ ವೈದೇಹಿ ಎಂದು ನಂಬಿದ್ದಾರೆ. ಆಕೆಯನ್ನು ಮನೆಗೆ ಕರೆದುಕೊಂಡು ಹೋಗಲು ಮುಂದಾಗಿದ್ದಾನೆ.
ವೇದಾಂತ್ ವೈದೇಹಿಯನ್ನು ಒಂದೇ ಸಮನೆ ಪ್ರಶ್ನೆ ಮಾಡಲು ಶುರು ಮಾಡುತ್ತಾನೆ. ಬದುಕಿದ್ದರೂ ಯಾಕೆ ನಮ್ಮಿಂದ ಇಷ್ಟು ವರ್ಷ ದೂರವಿದ್ದೆ. ನಿನಗೆ ನಾವು ಬೇಕಿರಲಿಲ್ವಾ.? ಒಂದು ಸಾರಿಯೂ ನಿನಗೆ ನಮ್ಮನ್ನು ನೋಡಬೇಕು ಎಂದು ಅನಿಸಲಿಲ್ವಾ.? ಯಾಕಮ್ಮ ಹೀಗೆ ಮಾಡಿದೆ ಎಂದು ವೇದಾಂತ್ ಒಂದೇ ಸಮನೆ ಪ್ರಶ್ನೆ ಮಾಡುತ್ತಾನೆ.
ಆಗ ವೈದೇಹಿ ನನಗೂ ಆಸೆ ಇತ್ತು ವೇದಾಂತ್. ನಿತ್ಯ ದೇವರಿಗೆ ಅದನ್ನೇ ಕೇಳಿಕೊಳ್ಳುತ್ತಿದ್ದೆ. ಹೇಗಾದರೂ ನನಗೆ ನನ್ನ ಮಕ್ಕಳು ಸಿಗುವಂತಾಗಲಿ ಎಂದು ಹೇಳುತ್ತಾಳೆ. ಅಷ್ಟರಲ್ಲಿ ತೇಜಸ್, ವೇದಾಂತ್ ಸರ್ ಒಂದೇ ಸಲಕ್ಕೆ ಅವರಿಗೆ ಇಷ್ಟೊಂದು ಪ್ರಶ್ನೆ ಕೇಳಿದರೆ ಹೇಗೆ.? ಬನ್ನಿ ಎಲ್ಲರೂ ಕಾಯುತ್ತಿದ್ದಾರೆ ಬನ್ನಿ ಎಂದು ಹೇಳಿ ಕರೆದುಕೊಂಡು ಹೋಗುತ್ತಾರೆ.

ಚಂದ್ರಕಲಾ ಇನ್ನುಮುಂದೆ ಡುಪ್ಲಿಕೇಟ್ ವೈದೇಹಿ
ಮನೆಯಲ್ಲಿ ಎಲ್ಲರೂ ವೈದೇಹಿಗಾಗಿ ಕಾಯುತ್ತಾ ಕುಳಿತಿದ್ದಾರೆ. ವೈದೇಹಿ ಮನೆಗೆ ಬರುತ್ತಿದ್ದಂತೆ ಎಲ್ಲರೂ ತುಂಬಾ ಖುಷಿ ಪಡುತ್ತಾರೆ. ವೈದೇಹಿಯನ್ನು ನೋಡುತ್ತಿದ್ದಂತೆ ಸುಹಾಸಿನಿ ತಬ್ಬಿಕೊಂಡು ಅಳುತ್ತಾಳೆ. ಸುಹಾಸಿನಿ ಅಕ್ಕ ನಿನ್ನನ್ನು ಎಷ್ಟು ಹುಡುಕಿದರೂ ಸಿಗಲಿಲ್ಲ ಎಂದೆಲ್ಲಾ ಎಮೋಷನಲ್ ಅಗಿ ಮಾತನಾಡುತ್ತಾಳೆ. ಬಳಿಕ ವೈದೇಹಿ ಅವರ ತಾಯಿ ಬಳಿ ಹೋಗಿ ತಬ್ಬಿಕೊಂಡು ಅಳುತ್ತಾಳೆ. ಆಗ ಅವರ ತಾಯಿ 25 ವರ್ಷದಿಂದ ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದೆ. ಆ ದೇವರಿಗೆ ನನ್ನ ಕೂಗು ಕೇಳಿಸಿ ನೀನು ಮನೆಗೆ ಬರುವಂತೆ ಮಾಡಿದ್ದಾರೆ. ಆದರೆ ನನ್ನ ದುರಾದೃಷ್ಟ ನೋಡು ನನಗೆ ನಿನ್ನನ್ನು ನೋಡುವುದಕ್ಕೆ ಕಣ್ಣೇ ಕಾಣಿಸುತ್ತಿಲ್ಲವಲ್ಲ ಎಂದು ಹೇಳುತ್ತಾಳೆ. ಆಗ ವೈದೇಹಿ ಇದೇನಾಯ್ತು ಎಂದಾಗ, ಅಜ್ಜಿ ತಲೆಗೆ ಏಟು ಬಿದ್ದು, ಕಣ್ಣು ಹೋಗಿದೆ ಎನ್ನುತ್ತಾರೆ.

ಮತ್ತೆ ನಾಟಕ ಶುರು ಮಾಡಿದ ಸುಹಾಸಿನಿ
ಮತ್ತೆ ವೈದೇಹಿ, ಸುಹಾಸಿನಿಯನ್ನು ತಬ್ಬಿಕೊಂಡು ಅಳುತ್ತಾಳೆ. ಆಗ ಸುಹಾಸಿನಿ ಇಷ್ಟು ವರ್ಷ ನಿನ್ನ ಮಕ್ಕಳ ಜವಾಬ್ದಾರಿಯನ್ನು ಹೊತ್ತಿದ್ದೆ. ಅವರನ್ನು ಈ ಮಟ್ಟಕ್ಕೆ ಬೆಳೆಸಿದ್ದೇನೆ. ಇನ್ನು ನಿನಗೆ ಬಿಟ್ಟಿದ್ದು. ನಾನಿನ್ನು ಹೊರಡುತ್ತೀನಿ ಎಂದು ನಾಟಕ ಮಾಡುತ್ತಾಳೆ. ಆಗ ವೇದಾಂತ್ ಮಾತನಾಡಿ, ಹಾಗೆಲ್ಲ ಯಾಕೆ ಹೇಳ್ತೀರಾ. ಈ ಮೊದಲು ಈ ಮನೆಯಲ್ಲಿ ಹೇಗಿತ್ತೋ ಹಾಗೆಯೇ ಇನ್ನು ಮುಂದೆಯೂ ಇರುತ್ತದೆ. ನೀವು ಎಲ್ಲಿಗೂ ಹೋಗುವುದು ಬೇಡ ಎಂದು ಹೇಳುತ್ತಾನೆ.

ಧ್ರುವನ ಬಗ್ಗೆ ವಿಚಾರಿಸಿದ ವೈದೇಹಿ
ಬಳಿಕ ವೈದೇಹಿ, ವಿಕ್ರಾಂತ್ ಮತ್ತು ಆದ್ಯರನ್ನು ತಬ್ಬಿಕೊಂಡು ಮುದ್ದಾಡುತ್ತಾಳೆ. ನಂತರ ಎಲ್ಲರೂ ತಮ್ಮ ತಮ್ಮ ಪರಿಚಯ ಮಾಡಿಕೊಳ್ಳುತ್ತಾರೆ. ಕೊನೆಗೆ ಧ್ರುವ ಕಾಣಿಸದೆ ಇದ್ದಾಗ ವೈದೇಹಿ ಧ್ರುವ ಎಲ್ಲಿ ಕಾಣಿಸುತ್ತಿಲ್ಲ. ಅವನಿಗೆ ನಾನು ಬರುವ ವಿಚಾರ ಗೊತ್ತಿಲ್ವಾ.? ನೀವ್ಯಾರು ಹೇಳಿಲ್ವಾ ಎಂದು ಕೇಳುತ್ತಾಳೆ. ಆಗ ಧ್ರುವನ ಸ್ಥಿತಿ ಬಗ್ಗೆ ತಿಳಿದು ವೈದೇಹಿ ಕಣ್ಣೀರು ಹಾಕುತ್ತಾಳೆ.

ವೈಜಯಂತಿ ಮನೆಯಿಂದ ಕಿಕ್ ಔಟ್..?!
ಇತ್ತ ವೈದೇಹಿ ಧ್ರುವನ ಬಳಿ ಹೋಗಿ ನನ್ನ ನಿನ್ನ ಪರಿಸ್ಥಿತಿ ಒಂದೇ. ಇಬ್ಬರಿಗೂ ನಿಜವಾದ ವೈದೇಹಿ ಯಾರು ಅಂತ ಗೊತ್ತಿದ್ದರೂ ಬಾಯಿ ಬಿಡಲಾಗದೇ ಸುಮ್ಮನೇ ಇರಬೇಕಾಗಿದೆ. ಸುಹಾಸಿನಿ ಎಲ್ಲವನ್ನೂ ಹಾಳು ಮಾಡಿದಳು ಎಂದು ಕಣ್ಣೀರು ಹಾಕುತ್ತಿರುತ್ತಾಳೆ. ಇನ್ನು ವೂದೇಹಿ ಮಕ್ಕಳಿಗೆ ಅಡುಗೆ ಮಾಡಿ ಊಟ ಮಾಡಿಸುತ್ತಾಳೆ. ಈ ವೇಳೆ ವೈಜಯಂತಿ ಮಾಡಿದ ಪಾಯಸವನ್ನು ಕುಡಿಯಬಾರದು ಎಂದು ರಾತ್ರಿ ಹೊತ್ತು ಸಿಹಿ ಬೇಡ ಎನ್ನುತ್ತಾಳೆ. ಹಾಗಾದರೆ ಇನ್ಮುಂದೆ ವೈಜಯಂತಿ ಮನೆಯಲ್ಲಿ ಇರುತ್ತಾಳಾ..? ಇಲ್ಲವೇ ಡುಪ್ಲಿಕೇಟ್ ವೈದೇಹಿ, ವೈಜಯಂತಿಯನ್ನು ಮನೆಯಿಂದ ಹೊರಗೆ ಕಳಿಸುತ್ತಾಳಾ ಅನ್ನೋ ಕುತೂಹಲ ಮೂಡಿದೆ.


Click it and Unblock the Notifications











