Gattimela: ಮಗನನ್ನೇ ಗುರುತು ಹಿಡಿಯದ ಸೂರ್ಯನಾರಾಯಣ; ಅಸಲಿ ಆಟ ಶುರುವಂತೆ!

By Shruthi Harish Gowda

ಅದಿತಿ ಧ್ರುವನನ್ನ ಟ್ರೀಟ್ಮೆಂಟ್‌ಗೆ ಎಂದು ಕರೆದುಕೊಂಡು ಹೋಗಿದ್ದಾಳೆ. ಸದ್ಯಕ್ಕೆ ಧ್ರುವ ಟ್ರೀಟ್ಮೆಂಟ್‌ಗೆ ಸ್ಪಂದಿಸುತ್ತಿದ್ದು ನಡೆಯುವ ರೀತಿ ಆಗಿದ್ದಾನೆ. ಅದಿತಿ ಕಳಿಸಿರುವ ಫೋಟೋವನ್ನ ಆದ್ಯಾ ಸಮರ್ಥ್‌ಗೆ ತೋರಿಸಿದ್ದಾಳೆ. ನೋಡು ಅತಿಥಿ ಗಂಡನನ್ನ ಎಷ್ಟು ಪ್ರೀತಿ ಮಾಡುತ್ತಾಳೆ ಎಂದು ಹೇಳಿದ್ದಾಳೆ. ನಂತರ ಅದೇ ಸಮಯಕ್ಕೆ ಅಮೂಲ್ಯ ಸಹ ಅಲ್ಲಿಗೆ ಬಂದಿದ್ದಾಳೆ ಅಮೂಲ್ಯಳಿಗೂ ಸಹ ಆದ್ಯ ಫೋಟೋ ತೋರಿಸಿದ್ದಾಳೆ.

ಧ್ರುವ ಎದ್ದು ನಿಲ್ಲುವಂತೆ ಆಗಿದ್ದಾನೆ ನಾಳೆ ಮನೆಗೆ ಬರುತ್ತಿದ್ದಾರೆ ಎಂದು ಆದ್ಯಾ ಸಂತೋಷವನ್ನು ವ್ಯಕ್ತಪಡಿಸಿದ್ದಾಳೆ. ಇದೇ ವೇಳೆ ಈ ವಿಷಯವನ್ನ ವಿಕ್ಕಿ ಅಣ್ಣನಿಗೆ ಹೇಳುತ್ತೇನೆ ಎಂದು ಅಂದಿದ್ದಾಳೆ. ವಿಕ್ಕಿಯನ್ನು ನೆನಪಿಸಿಕೊಂಡು ಜೋರಾಗಿ ಕಣ್ಣೀರನ್ನು ಹಾಕಿದ್ದಾಳೆ. ಅಮೂಲ್ಯ ಆದ್ಯಾಳಿಗೆ ಸಮಾಧಾನ ಮಾಡುತ್ತಿದ್ದಾಳೆ. ಆದರೂ ಸಹ ಆದ್ಯಾ ಸಮಾಧಾನ ಮಾಡಿಕೊಳ್ಳುತ್ತಿಲ್ಲ. ನಾನು ವಿಕ್ಕಿ ಅಣ್ಣನ ಜೊತೆ ಎಲ್ಲಾ ಕಷ್ಟ ಸುಖಗಳನ್ನ ಹಂಚಿಕೊಳ್ಳುತ್ತಿದ್ದೆ ಎಂದು ಆದ್ಯಾ ಕಣ್ಣೀರು ಹಾಕಿದ್ದಾಳೆ.

Gattimela serial 24th August episode written update

ಒಂದು ಸ್ವೀಟ್ ತಿಂದರೆ ನಾನು ಅರ್ಧ ತಿಂದು ವಿಕ್ಕಿ ಅಣ್ಣನಿಗೆ ಅರ್ಧ ಕೊಡುತ್ತಿದ್ದೆ. ಮ್ಯೂಸಿಕ್ ಕೇಳಿದರು ಅಷ್ಟೇ ನಾನು ಅರ್ಧ ಕೇಳಿ ಕಾಡಿಬೇಡಿ ವಿಕ್ಕಿ ಅಣ್ಣನನ್ನು ಅರ್ಧ ಕೇಳುವಂತೆ ಮಾಡುತ್ತಿದ್ದೇ ಎಂದು ಕಣ್ಣಿರನ್ನು ಹಾಕಿದ್ದಾಳೆ. ಅಮೂಲ್ಯ ಆದ್ಯಗೆ ವಿಕ್ಕಿ ಅವರು ಎಲ್ಲೂ ಹೋಗಿಲ್ಲ ಮಗುವಿನ ರೂಪದಲ್ಲಿ ನಮ್ಮ ಮನೆಗೆ ಬಂದಿದ್ದಾರೆ. ನಾವು ಅವನನ್ನ ನೋಡಿಕೊಂಡು ಇರೋಣ ಎಂದು ಸಮಾಧಾನವನ್ನು ಮಾಡಿದ್ದಾಳೆ.

ತಂದೆಯನ್ನು ತಬ್ಬಿಕೊಂಡು ನಾನೇ ನಿಮ್ಮ ಮಗ ಎಂದು ವೇದಾಂತ್ ಹೇಳುತ್ತಿದ್ದರು ಸಹ ಸೂರ್ಯನಾರಾಯಣ್ ಅವರು ವೇದಾಂತ್‌ನನ್ನು ಒಪ್ಪಿಕೊಳ್ಳುವ ಪರಿಸ್ಥಿತಿಯಲ್ಲಿ ಇಲ್ಲ. ಅಪ್ಪ ಬನ್ನಿ ಮನೆಯಲ್ಲಿ ಆದ್ಯ, ನಾನು ಎಲ್ಲರೂ ಕಾಯುತ್ತಾ ಇದ್ದೇವೆ ದಯವಿಟ್ಟು ಬನ್ನಿ ಎಂದು ಕರೆದಿದ್ದಾನೆ. ಸೂರ್ಯನಾರಾಯಣ್ ನೀನು ಏನು ಹೇಳುತ್ತಿದ್ದೀಯೊ ನನಗೆ ಅರ್ಥವಾಗುತ್ತಿಲ್ಲ ಎಂದು ಹೇಳಿದ್ದಾರೆ.

ಈ ಅಗ್ನಿ ನೀವು ಅಂದುಕೊಂಡಷ್ಟು ಒಳ್ಳೆಯವನಲ್ಲ ನಮ್ಮ ಫ್ಯಾಮಿಲಿ ಗೆ ತುಂಬಾನೆ ತೊಂದರೆಯನ್ನು ಕೊಟ್ಟಿದ್ದಾನೆ ಎಂದು ಹೇಳಿದರು ಸೂರ್ಯನಾರಾಯಣ್ ಅರ್ಥ ಮಾಡಿಕೊಳ್ಳುತ್ತಿಲ್ಲ. ಅಗ್ನಿ ನನ್ನ ಗೆಳೆಯ ಅವನಿಗೆ ಅವಮಾನ ಮಾಡಿದರೆ ನನಗೂ ಅವಮಾನ ಮಾಡಿದಂತೆ, ನೀನು ಇನ್ನು ಹೊರಡಬಹುದು ಎಂದು ಹೇಳಿದ್ದಾರೆ.‌ ವೇದಾಂತ್ನನ್ನು ಈ ಪರಿಸ್ಥಿತಿಯಲ್ಲಿ ನೋಡಿದ ಅಗ್ನಿ ತುಂಬಾ ಖುಷಿ ಪಡುತ್ತಿದ್ದಾನೆ ನಿನ್ನನ್ನ ಈ ಪರಿಸ್ಥಿತಿಯಲ್ಲಿ ನಾನು ನೋಡಬೇಕು ಎಂದುಕೊಂಡಿದ್ದೇನೆ ಎಂದು ಕೊಂಡಿದ್ದಾನೆ.

ಅಗ್ನಿ ಹೇಳುತ್ತಿರುವ ಸತ್ಯವನ್ನ ಕೇಳಿಸಿಕೊಂಡ ವೇದಾಂತ್ ಗೆ ಶಾಕ್ ಆಗಿದೆ ಯಾಕೆಂದರೆ ಸೂರ್ಯನಾರಾಯಣಗೆ ಏನು ಸಹ ನೆನಪಿಲ್ಲವಂತೆ. ಅವರು ಜಸ್ಟ್ ನಾರಾಯಣನಾಗಿ ಇದ್ದಾರಂತೆ ಇದಕ್ಕೂ ಮೊದಲು ಜಸ್ಟಿನ್ ಸೂರ್ಯನಾರಾಯಣ್ ಆಗಿದ್ದವರಿಗೆ ಏನು ನೆನಪಿಲ್ಲ ನೀನು ಅವರನ್ನ ಹೇಗೆ ಕರೆದುಕೊಂಡು ಹೋಗುತ್ತೀಯಾ ಎಂದು‌ ಅಗ್ನಿ ಕೇಳಿದ್ದಾನೆ. ಈಗ ನನ್ನ ಮತ್ತು ನಿನ್ನ ನಡುವೆ ಅಸಲಿ ಆಟ ಶುರುವಾಗಿದೆ ಎಂದು ವೇದಾಂತ ಬಳಿ ಅಗ್ನಿ ಹೇಳುತ್ತಿದ್ದಾನೆ.

ಹಾವು ಏಣಿ ಆಟದಲ್ಲಿ ನಾನು ಈಗ ಒಂದನೇ ಮೆಟ್ಟಿಲಿಗೆ ಬಂದಿರಬಹುದು ಆದರೆ ಮುಂದೊಂದು ದಿನ ನಾನು ಕೊನೆಯ ಮೆಟ್ಟಿಲಲ್ಲಿ ಇರುತ್ತೇನೆ. ನನ್ನ ತಂದೆಯನ್ನ ನನ್ನ ಜೊತೆ ಕರೆದುಕೊಂಡು ಹೋಗುತ್ತೇನೆ ಎಂದು ವೇದಾಂತ್‌ ಅಗ್ನಿಗೆ ಚಾಲೆಂಜ್ ಮಾಡಿದ್ದಾನೆ. ಈ ಕಡೆ ಅಮೂಲ್ಯ ವೇದಾಂತ್‌ಗಾಗಿ ಕಾಯುತ್ತಿದ್ದಾಳೆ. ಮನೆಗೆ ಬಂದ ವೇದಾಂತ‌್‌ಗೆ ತಂದೆ ಸಿಕ್ಕಿದ್ರ ಎಂದು ಕೇಳಿದ್ದಾಳೆ. ಈ ವೇಳೆ ವೇದಾಂತ್ ಅವರಿಗೆ ಯಾವುದೇ ನೆನಪಿಲ್ಲ ಎಂಬ ವಿಷಯವನ್ನು ತಿಳಿಸಿದ್ದಾನೆ. ಹಾಗಾದರೆ ಮುಂದೆ ಏನು ಮಾಡಬೇಕು ಎಂಬುದರ ಬಗ್ಗೆ ವೇದಾಂತ್ ಹಾಗೂ ಅಮೂಲ್ಯ ಇಬ್ಬರು ಯೋಚಿಸುತ್ತಿದ್ದಾರೆ.

More from Filmibeat

English summary
Zee Kannada serial gattimela here details suryanarayana can't find out vendanth, vendanth disappointed about agini speak.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X