Gattimela: ಸೂರ್ಯ ನಾರಾಯಣರನ್ನು ಮನೆಗೆ ಕರೆ ತರಲು ಹೊಸದೊಂದು ಮಾಸ್ಟರ್ ಪ್ಲಾನ್!
ವೇದಾಂತ್ ಗೆ ಈಗ ತನ್ನ ತಂದೆಯದೆ ಯೋಚನೆಯಾಗಿದೆ ಅವರು ನನ್ನನ್ನ ಗುರುತು ಹಿಡಿಯಲೇ ಇಲ್ಲ ನಾನು ಏನೇನು ಆಸೆ ಇಟ್ಟುಕೊಂಡಿದ್ದೆ ಎಂದು ಅಮೂಲ್ಯ ತೊಡೆಯ ಮೇಲೆ ಮಲಗಿಕೊಂಡು ಯೋಚನೆ ಮಾಡುತ್ತಾ ಇದ್ದಾನೆ. ನಾನು ನನ್ನ ತಂದೆಯ ಬಳಿ ಏನೇನು ಮಾತನಾಡಬೇಕೆಂದುಕೊಂಡಿದ್ದೆ ಆದರೆ ಅವರು ಯಾವುದಕ್ಕೂ ಆಸ್ಪದ ಕೊಡದೆ ಆ ಅಗ್ನಿಯ ಪರವಾಗಿಯೇ ಮಾತನಾಡಿದರು. ಆ ವೇಳೆ ನನಗೆ ಎಷ್ಟು ನೋವಾಯಿತು ಗೊತ್ತಾ ಎಂದು ಅಮೂಲ್ಯ ಬಳಿಯಲ್ಲಿ ವೇದಾಂತ್‌ತನ್ನ ನೋವನ್ನು ಅಮೂಲ್ಯ ಬಳಿ ವ್ಯಕ್ತಪಡಿಸುತ್ತಾ ಇದ್ದಾನೆ.
ಅಮೂಲ್ಯ ವೇದಾಂತ್‌ಗೆ ಸಮಾಧಾನ ಮಾಡುತ್ತಾ ಇದ್ದಾಳೆ ಇದೇ ವೇಳೆ ಅಂದು ಅಗ್ನಿಯನ್ನು ಸೂರ್ಯನಾರಾಯಣರು ಯಾವುದಕ್ಕೆ ರಕ್ಷಣೆ ಮಾಡಿದರು ಎಂಬುದನ್ನು ನಾವು ಮೊದಲು ಪತ್ತೆ ಹಚ್ಚಬೇಕು. ನಂತರ ನಾವು ಮುಂದಿನ ಕೆಲಸವನ್ನ ಮಾಡಬೇಕು ಎಂದು ಅಮೂಲ್ಯ ವೇದಾಂತ್‌ಗೆ ಹೇಳುತ್ತಿದ್ದಾಳೆ. ಹೌದು ಅಮೂಲ್ಯ ಆ ವಿಷಯ ನನಗೆ ಇನ್ನೂ ಕೂಡ ನಿಗೂಢವಾಗಿಯೇ ಇದೆ ನನ್ನ ತಂದೆ ಆ ಅಗ್ನಿಯನ್ನ ಯಾಕೆ ಅಂದು ರಕ್ಷಿಸಿದರು ಎಂಬುದೇ ತಿಳಿಯುತ್ತಿಲ್ಲ ಎಂದು ವೇದಾಂತ ಕೂಡ ಅನ್ನುತ್ತಿದ್ದಾನೆ.

ಹೇಗಾದರೂ ಮಾಡಿ ನನ್ನ ತಂದೆಯನ್ನ ಮನೆಗೆ ಕರೆದುಕೊಂಡು ಬಂದು ನನ್ನ ಫ್ಯಾಮಿಲಿಯನ್ನು ಕಂಪ್ಲೀಟ್ ಮಾಡಬೇಕು. ನನ್ನ ತಂದೆಯನ್ನು ಆ ಅಗ್ನಿಯ ಕೈಯಿಂದ ಬಿಡಿಸಿಕೊಂಡು ಬರಲು ಏನಾದರೂ ಒಂದು ಯೋಚನೆಯನ್ನು ಮಾಡಬೇಕು ಎಂದು ವೇದಾಂತ್ ಯೋಚಿಸುತ್ತಾ ಇದ್ದಾನೆ. ಅಮೂಲ್ಯ ಸಹ ಹೇಗಾದರೂ ಮಾಡಿ ವೇದಾಂತ್ ಚಿಂತೆಯನ್ನು ದೂರ ಮಾಡಬೇಕು ಎಂದು ಯೋಚನೆ ಮಾಡುತ್ತಾ ಇದ್ದಾಳೆ ಈ ವೇಳೆ ಅಮೂಲ್ಯ ಗೆ ಒಂದು ಸಖತ್ತಾಗಿರುವ ಐಡಿಯಾವೊಂದು ಹೊಳೆದಿದೆ.
ವೈದೇಹಿ ಹುಡುಕಬೇಕಂತೆ ವೇದಾಂತ್ ಅಮ್ಮನ ಮುಂದಿಟ್ಟು ಕರೆತರುವ ಯೋಜನೆ
ಅಮೂಲ್ಯ ವೇದಾಂತ್‌ಗೆ ನಾವು ವೈದೇಹಿ ಅಮ್ಮನನ್ನ ಹುಡುಕಿ ಸೂರ್ಯನಾರಾಯಣರ ಮುಂದೆ ನಿಲ್ಲಿಸಬೇಕು. ಆಗ ಅವರಿಗೆ ಹಳೆಯದೆಲ್ಲವೂ ಸಹ ನೆನಪಾಗಬಹುದು ಎಂಬ ಐಡಿಯಾವನ್ನ ವೇದಾಂತ್ ಗೆ ಕೊಟ್ಟಿದ್ದಾಳೆ. ಅಮೂಲ್ಯ ಹೇಳಿದ ಐಡಿಯಾಕ್ಕೆ ವೇದಾಂತ್‌ಗೆ ತುಂಬಾ ಖುಷಿಯಾಗಿದೆ. ಯಾಕೆಂದರೆ ನಮ್ಮನ್ನೆಲ್ಲ ನಮ್ಮ ತಂದೆ ಮರೆತಿರಬಹುದು ಆದರೆ ಅವರ ಹೆಂಡತಿಯನ್ನು ಮಾತ್ರ ಮರೆತಿರಲು ಸಾಧ್ಯವಿಲ್ಲ. ಮೊದಲು ಈಗ ನಾವು ಮಾಡಬೇಕಾಗಿರುವುದು ವೈದೇಹಿ ಅಮ್ಮನನ್ನು ಹುಡುಕುವ ಕೆಲಸ ಎಂದು ಅಮೂಲ್ಯಾಗೆ ಹೇಳಿದ್ದಾನೆ.
ಅಮೂಲ್ಯ ಪ್ಲೀಸ್ ನನ್ನ ತಾಯಿಯನ್ನು ಹುಡುಕಲು ನೀನು ಸಹಾಯ ಮಾಡು ಎಂದು ಅಮೂಲ್ಯಳನ್ನ ವೇದಾಂತ್ ಕೇಳಿದ್ದಾನೆ. ವೇದಾಂತ್ ಮಾತಿಗೆ ಅಮೂಲ್ಯ ಕೋಪ ಮಾಡಿಕೊಂಡು ನಿನಗೆ ಐಡಿಯಾವನ್ನು ಕೊಟ್ಟಾಗ ಮಾತ್ರ ನನ್ನ ಮೇಲೆ ಪ್ರೀತಿ ಬರುತ್ತದೆ. ಇಲ್ಲದಿದ್ದರೆ ಒಳ್ಳೆಯ ಹಸುವಿನ ರೀತಿ ಮೂತಿ ಮಾಡಿಕೊಂಡು ಇರುತ್ತೀಯಾ ಎಂದು ಅಮೂಲ್ಯ ವೇದಾಂತ್‌ಗೆ ಬೈದಿದ್ದಾಳೆ.
ವೈದೇಹಿ ದೂರವಿಡುವಂತೆ ಅಗ್ನಿ ಸಲಹೆ ವೇದಾಂತ್ ಪರಿಸ್ಥಿತಿಗೆ ಸುಹಾಸಿನಿಗೆ ನಗು
ಅಗ್ನಿ ಸುಹಾಸನಿಗೆ ಫೋನ್ ಮಾಡಿ ವೇದಾಂತ್ ಪರಿಸ್ಥಿತಿಯ ಬಗ್ಗೆ ವಿವರವಾಗಿ ಹೇಳುತ್ತಿದ್ದಾನೆ. ಒಳ್ಳೆ ಹಸು ಕಳೆದುಕೊಂಡ ಕರುವಿನ ರೀತಿ ವೇದಾಂತ್ ವರ್ತಿಸುತ್ತಿದ್ದ ಅವನಿಗೆ ಅನಾಥನೆಂಬ ಫೀಲ್ ಬರಬೇಕು. ಅವನ ಅಪ್ಪ ಸೂರ್ಯನಾರಾಯಣ ಅವನನ್ನ ಗುರುತು ಹಿಡಿಯಲಿಲ್ಲ ಎಂದು ಸುಹಾಸಿನಿಯ ಬಳಿ ಹೇಳುತ್ತಾ ಇದ್ದಾನೆ. ಇನ್ನು ಸುಹಾಸಿನಿ ಆ ವೇದಾಂತ್‌ನ ಆ ಮುಖವನ್ನು ನೋಡಲು ನಾನು ಅಲ್ಲಿ ಇರಬೇಕಾಗಿತ್ತು ಎಂದು ಹೇಳುತ್ತಾ ಇದ್ದಾಳೆ. ನನ್ನ ಗುರಿ ಬೇರೆ ಇದೆ ನನಗೆ ಸಾವು ತೋರಿಸಿದ ವೇದಾಂತ್ ಗೆ ನಾನು ಸರಿಯಾದ ರೀತಿಯಲ್ಲಿಯೇ ಪಾಠವನ್ನು ಕಲಿಸುತ್ತೇನೆ ಎಂದು ಅಗ್ನಿ ಹೇಳಿದ್ದಾನೆ.
ಸೂರ್ಯನಾರಾಯಣ್ ನಮಗೆ ಚಿನ್ನದ ಮೊಟ್ಟೆ ಇಡುವ ಕೋಳಿಯಂತೆ ಅವನನ್ನ ಕಳೆದುಕೊಂಡರೆ ವೇದಾಂತ ನನ್ನನ್ನ ಸುಮ್ಮನೆ ಬಿಡೋದಿಲ್ಲ. ಇದಕ್ಕಾಗಿ ವೈದೇಹಿಯನ್ನ ದೂರ ಇಡಬೇಕು ಯಾಕೆಂದರೆ ವೈದೇಹಿಯ ಮುಖವನ್ನು ನೋಡಿದರೆ ಸೂರ್ಯನಾರಾಯಣ್‌ಗೆ ಅಳೆಯದೆಲ್ಲ ನೆನಪು ಬರಬಹುದು ಎಂದು ಸುಹಾಸನಿಗೆ ಅಗ್ನಿಹೇಳುತ್ತಾ ಇದ್ದಾನೆ. ಅಗ್ನಿ ಫೋನ ಇಟ್ಟ ಬಳಿಕ ಸುಹಾಸಿನಿ ನನ್ನ ಭಾವ ಅಕ್ಕನ ಮುಖ ನೋಡಿದರೆ ಅಷ್ಟೇ ನನ್ನ ಕಥೆ ಎಂದು ಹೇಳುತ್ತಾ ಇದ್ದಾಳೆ.


Click it and Unblock the Notifications











