Gattimela: ಅಗ್ನಿ ಮೇಲೆ ಕೆಂಡದಂತೆ ಕೋಪ ಕಾರುತ್ತಿರುವ ವೇದಾಂತ್: ಮನೆಗೆ ಬಂದ ಅದಿತಿ, ಧ್ರುವ
ಟ್ರೀಟ್ಮೆಂಟ್ ಗೆಂದು ಹೋಗಿದ್ದ ಅದಿತಿ ಹಾಗೂ ಧ್ರುವ ಇಬ್ಬರೂ ಸಹ ಟ್ರೀಟ್ಮೆಂಟ್ ಮುಗಿಸಿಕೊಂಡು ಮನೆಗೆ ಬಂದಿದ್ದಾರೆ. ಅದಿತಿ ಹಾಗೂ ಧ್ರುವನನ್ನ ನೋಡಿದ ಆದ್ಯಾ ಹಾಗೂ ಸಮರ್ಥ್ ಪ್ರೀತಿಯಿಂದ ಸ್ವಾಗತಿಸಿದ್ದಾರೆ. ಏನಿಲ್ಲ ಚಿಕಿತ್ಸೆ ನಡೆಯಿತು ಎಲ್ಲಿಗೆ ಟ್ರಿಪ್ ಹೋಗಿದ್ದೀರಿ ಎಂಬುದರ ಬಗ್ಗೆ ಆದ್ಯ ವಿಚಾರಿಸುತ್ತ ಇದ್ದಾಳೆ. ಅವರಿಗೆ ಆರತಿಯ ಮುಖವನ್ನ ನೋಡಿಕೊಂಡು ಬಂದ ಮೇಲೆ ಚಿಂತೆ ಶುರುವಾಗಿದೆ. ನನ್ನ ಅಕ್ಕನ ಪರಿಸ್ಥಿತಿ ಈಗಾಗಿ ಹೋಯಿತಲ್ಲ ಎಂಬುದು ಆದ್ಯಾಳಿಗೆ ಕಣ್ಣಲ್ಲಿ ನೀರನ್ನು ತರಿಸಿದೆ.
ಕಾಂತ ಆರತಿ ಮಗುವನ್ನ ನೋಡಲು ಮನೆಗೆ ಹೋಗಿದ್ದಾನೆ. ಮಗುವನ್ನು ನೋಡಿ ಕಣ್ಣೀರನ್ನು ಹಾಕಿದ್ದಾನೆ ನಮ್ಮ ಚೋಟಾ ಬಾಸ್ ನಮ್ಮ ಜೊತೆಯಲ್ಲಿ ಇರಬೇಕಾಗಿತ್ತು . ಈ ಸಂತೋಷದ ಕ್ಷಣವನ್ನು ಅನುಭವಿಸಬೇಕಾಗಿತ್ತು, ಆದರೆ ವಿಧಿ ಬೇರೆ ಆಟವನ್ನು ಆಡಿತು ಎಂದು ಕಣ್ಣೀರನ್ನು ಸುರಿಸುತ್ತಾ ಇದ್ದಾನೆ. ನಮ್ಮ ಚೋಟ ಬಾಸ್ ಗೆ ನಾನು ಏನಿಲ್ಲ ಮಾಡುತ್ತಿದ್ದೆ ಅದನ್ನ ನಿಮಗೂ ಸಹ ಮಾಡುತ್ತೇನೆ ಎಂದು ಮಗುವಿನ ಮುಖ ನೋಡಿಕೊಂಡು ಕಣ್ಣೀರು ಹಾಕುತ್ತಿದ್ದಾನೆ. ಆರತಿ ಕಾಂತ ಆಳುತ್ತಿರುವುದನ್ನು ನೋಡಿ ಸಮಾಧಾನ ಮಾಡಲು ಪ್ರಯತ್ನಿಸಿದ್ದಾಳೆ.

ಈ ಕಡೆ ವೇದಾಂತ್ ಹೇಗಾದರೂ ಮಾಡಿ ತನ್ನ ತಂದೆಯನ್ನ ಮನೆಗೆ ಕರೆದುಕೊಂಡು ಬರಬೇಕು ಎಂದು ಹಲವಾರು ಯೋಜನೆಗಳನ್ನ ರೂಪಿಸಿದ್ದಾರೆ. ಅಮೂಲ್ಯ ತನ್ನ ಗಂಡನ ಪ್ರತಿಯೊಂದು ಸಹ ಸಾಥ್ ನೀಡುತ್ತಿದ್ದು, ಖಂಡಿತವಾಗಿಯೂ ಅಪ್ಪನನ್ನ ಮನೆಯಿಂದ ಹೊರಗೆ ಕರೆದುಕೊಂಡು ಬರೋಣ ಎಂದು ಹೇಳಿದ್ದಾಳೆ. ನಿಮ್ಮ ಫ್ಯಾಮಿಲಿಯನ್ನು ಕಂಪ್ಲೀಟ್ ಮಾಡಿಸುವ ಜವಾಬ್ದಾರಿ ನನ್ನದು ಎಂದು ಅಮೂಲ್ಯ ವೇದಾಂತ್ ಬಳಿಯಲ್ಲಿ ಹೇಳಿದ್ದಾಳೆ.
ಈಗ ವೇದಾಂತ್‌ಗೆ ತಂದೆ ಬೇಕಾಗಿದೆ ಇದಕ್ಕಾಗಿ ಅವನು ಏನು ಬೇಕಾದರೂ ಮಾಡಲು ರೆಡಿಯಾಗಿ ಇದ್ದಾನೆ. ಮೊದಲು ಅಗ್ನಿಯ ಸಾಮ್ರಾಜ್ಯವನ್ನೆಲ್ಲ ವಶಕ್ಕೆ ಪಡೆದುಕೊಂಡು ಅವನನ್ನ ಅಲ್ಲಿಂದ ಓಡಿಸಬೇಕು ಎಂದುಕೊಂಡಿದ್ದಾನೆ. ಅಗ್ನಿ ವೇದಾಂತ್‌ಗೆ ಸಾಕಷ್ಟು ಕೋಪವನ್ನ ಬರಿಸಿದ್ದಾನೆ. ಎಲ್ಲದಕ್ಕೂ ಸಹ ಹಣವನ್ನ ಸುರಿದು ಎಲ್ಲರನ್ನೂ ತನಗೆ ಬೇಕಾದವರಂತೆ ಅಗ್ನಿ ಮಾಡಿಕೊಂಡಿದ್ದಾನೆ. ವೇದಾಂತ್ ತಂದೆಗೆ ಹಳೆಯದು ಯಾವುದು ನೆನಪಿಲ್ಲದೆ ಇರುವುದರಿಂದ ಅವರನ್ನೇ ತನ್ನ ಆಟಕ್ಕೆ ದಾಳವಾಗಿ ಬಳಸಿಕೊಳ್ಳುತ್ತಾ ಇದ್ದಾನೆ.
ವೇದಾಂತ್ ನನ್ನ ತಂದೆಯ ಬಳಿ ಮಾತನಾಡಬೇಕು ಫೋನ್ ಕೊಡು ಎಂದಾಗಲು ಸಹ ನಾರಾಯಣಾರೆ ನಿಮ್ಮ ಮಗ ಎಂದು ಹೇಳಿಕೊಳ್ಳುವವನು ಫೋನ್ ಮಾಡಿದ್ದಾನೆ. ಅವನು ಮಾತನಾಡಿದರೆ ನನಗೆ ಮೂಡ್ ಅಪ್ಸೆಟ್ ಹಾಳಾಗುತ್ತದೆ ದಯವಿಟ್ಟು ಅವನಿಗೆ ನನಗೆ ಫೋನ್ ಮಾಡಬೇಡಿ ಎಂದು ಹೇಳಿ ಎಂದಿದ್ದಾರೆ. ಅಪ್ಪನ ಧ್ವನಿಯನ್ನ ಕೇಳಿದ ವೇದಾಂತ್‌ಗೆ ಒಂದೇ ಸಲ ಸಾವಿರಾ ವೋಲ್ಟೇಜ್ ವಿದ್ಯುತ್ ಶಕ್ತಿ ಮೈಯಲ್ಲಿ ಸಂಚಾರವಾದಂತೆ ಆಗಿದೆ. ಅಪ್ಪ ನಾನು ನಿಮ್ಮ ಮಗ ಸಂಪಿಗೆ ಪುರದಲ್ಲಿ ಸಿಕ್ಕಿದ್ದವನು ನನ್ನ ಎದೆಯನ್ನ ನೀವು ನನಗೆ ಸಹಾಯವನ್ನು ಮಾಡಿದಿರಿ ಎಂದೆಲ್ಲಾ ಹೇಳುತ್ತಾ ಇದ್ದಾನೆ ವೇದಾಂತ್
ಅಗ್ನಿ ತನ್ನ ಜೀವನದಲ್ಲಿ ಬಹಳ ಆಟವನ್ನ ಆಡುತ್ತಿದ್ದಾನೆ ಈ ಕಡೆ ನನ್ನ ತಂದೆಯನ್ನ ಮನೆಗೆ ಕಳಿಸಿಲ್ಲ. ನನ್ನ ತಂದೆ ನೋಡಿದರೆ ಅವನ ಜೊತೆ ಇದ್ದಾರೆ. ನಾಳೆ ನನ್ನ ತಂದೆಗೆ ಏನಾದರೂ ಹೆಚ್ಚು ಕಮ್ಮಿ ಮಾಡಿದರೆ ಯಾರು ಹೊಣೆ ಎಂದುಕೊಂಡು ವೇದಾಂತ್ ಯೋಚನೆ ಮಾಡುತ್ತಾ ಇದ್ದಾನೆ. ಅಗ್ನಿಗೆ ಕರೆ ಮಾಡಿ ನಿನ್ನನ್ನ ಮಾತ್ರ ನಾನು ಸುಮ್ಮನೆ ಬಿಡೋದಿಲ್ಲ ಎಂದು ಹೇಳುತ್ತಾ ಇದ್ದಾನೆ ವೇದಾಂತ್. .
ಈ ಎಲ್ಲಾ ಮಾತುಗಳನ್ನು ಕೇಳಿಸಿಕೊಳ್ಳುತ್ತಿರುವ ಅಗ್ನಿಗೆ ತುಂಬಾನೇ ಖುಷಿಯಾಗಿದೆ ಯಾಕೆಂದರೆ ವೇದಾಂತ್ ಸಂಕಷ್ಟಗಳನ್ನ ನೋಡುತ್ತಾ ತಾನು ನೆಮ್ಮದಿಯಾಗಿ ಇರಬೇಕು ಎಂದು ಆಸೆ ಪಟ್ಟಿದ್ದನು. ನನ್ನ ಎಲ್ಲಾ ಕನಸು ಆಸೆಗಳಿಗೆ ತಣ್ಣೀರು ಎರಚುತ್ತಿರುವ ಅಗ್ನಿಯನ್ನು ನಾನು ಮಾತ್ರ ಸುಮ್ಮನೆ ಬಿಡುವುದಿಲ್ಲ ಎಂದು ವೇದಾಂತ್ ಗನ್ ತೆಗೆದುಕೊಂಡು ನಿಂತಿದ್ದಾನೆ. ಅಮೂಲ್ಯ ಕೋಪದ ಕೈಗೆ ಬುದ್ಧಿಯನ್ನ ಕೊಡಬೇಡ ಎಂದು ಹೇಳುತ್ತಾ ಗನ್ ಕಿತ್ತುಕೊಂಡಿದ್ದಾಳೆ.


Click it and Unblock the Notifications











