Gattimela: ಸೂರ್ಯನಾರಾಯಣರನ್ನು ಭೇಟಿ ಮಾಡಲು ಅವಕಾಶ ಮಾಡಿಕೊಟ್ಟ ಅಗ್ನಿ: ಪ್ಲ್ಯಾನ್ ಚೇಂಜ್ ಆಗಿದ್ಯಾಕೆ?
ಆದ್ಯಾ ಹಾಗೂ ಧ್ರುವ ವಿಕಿರಣ ನೆನಪಿಸಿಕೊಂಡು ಜೋರಾಗಿ ಅಳುತ್ತಾ ಇದ್ದಾರೆ ಸಮರ್ಥ್ ಧ್ರುವನನ್ನು ಸಮಾಧಾನ ಮಾಡುತ್ತಿದ್ದಾನೆ. ದಯವಿಟ್ಟು ನೀನು ಅಳಬೇಡ ಈಗ ತಾನೇ ಹುಷಾರಾಗಿ ಬಂದಿದ್ದೀಯಾ ನಿನ್ನ ಹಾಗೂ ವಿಕ್ಕಿಯ ನಡುವೆ ಯಾವ ರೀತಿ ಸಂಬಂಧ ಇತ್ತು ಎಂಬುವುದು ನಮಗೂ ಗೊತ್ತಿದೆ. ನೀನು ಅವನನ್ನ ಅತಿ ಹೆಚ್ಚಾಗಿ ಹಚ್ಚಿಕೊಂಡಿದ್ದೆ ಈಗ ವಿಧಿಯ ಆಟದ ಮುಂದೆ ನಮ್ಮದು ಏನು ನಡೆಯುವುದಿಲ್ಲ ಎಂದು ಧ್ರುವನನ್ನು ಸಮರ್ಥ್ ಸಮಾಧಾನ ಮಾಡುತ್ತಾ ಇದ್ದಾನೆ. ಆದ್ಯ ಧ್ರುವ ಹಾಗೂ ಆದಿತಿ ಮೂವರು ವಿಕ್ಕಿಯನ್ನು ನೆನಪಿಸಿಕೊಂಡು ಜೋರಾಗಿ ಅಳುತ್ತಾ ಇದ್ದಾರೆ.
ಈ ಕಡೆ ವೇದಾಂತ ಅಮೂಲ್ಯ ಬಳಿ ನನ್ನ ತಂದೆಯನ್ನ ವಾಪಾಸ್ ಮನೆಗೆ ಕರೆದುಕೊಂಡು ಬರುವುದು ಯಾವಾಗ ಎಂದು ಹೇಳುತ್ತಾ ಇದ್ದಾನೆ. ಅಮೂಲ್ಯ ರೀವಲ್ ವಾರ್ ಕಿತ್ತುಕೊಂಡು ನೀನು ನಿನ್ನ ತಂದೆಯನ್ನ ಮನೆಗೆ ಕರೆದುಕೊಂಡು ಬರಬೇಕಾದರೆ ಅಲ್ಲಿ ಪ್ರೀತಿ ವಾತ್ಸಲ್ಯ ತುಂಬಿರಬೇಕು. ಆಗ ಮಾತ್ರ ಅವರು ನಿನ್ನ ಜೊತೆ ಮನೆಗೆ ಬರುತ್ತಾರೆ. ಅದನ್ನ ಬಿಟ್ಟು ಗನ್ ತೋರಿಸಿ ಅಗ್ನಿಗೆ ಎದುರಿಸಿ ಬೆದರಿಸಿ ನಿಮ್ಮ ತಂದೆಯನ್ನ ಈ ಮನೆಗೆ ಕರೆದುಕೊಂಡು ಬರಲು ಸಾಧ್ಯವಿಲ್ಲ ಕೋಪದ ಕೈಗೆ ನೀನು ಬುದ್ಧಿಯನ್ನು ಕೊಡಬೇಡ ಎಂದು ಉಪದೇಶವನ್ನು ಮಾಡಿದ್ದಾಳೆ.

ಅಮೂಲ್ಯ ಹಾಗೂ ವೇದಾಂತ್ ಮಾತುಗಳನ್ನು ಮರೆಯಲ್ಲಿ ನಿಂತು ಸುಹಾಸಿನಿ ಕೇಳಿಸಿಕೊಳ್ಳುತ್ತಾ ಇದ್ದಾಳೆ. ಆರತಿ ಮಗುವಿನ ಲಾಲನೆ ಪಾಲನೆಯಲ್ಲಿ ತೊಡಗಿಸಿಕೊಂಡಿದ್ದಾಳೆ. ಮಗುವನ್ನ ನೋಡಲು ಹೋದ ಕಾಂತ ಕಣ್ಣೀರನ್ನು ಹಾಕಿದ್ದಾನೆ. ಇದಕ್ಕೆ ಆರತಿ ನಿಮಗೆ ಕಣ್ಣೀರಲ್ಲ ಸೂಟ್ ಆಗುವುದಿಲ್ಲ ಎಂದು ಹೇಳಿದ್ದಾಳೆ. ನಂತರ ಹೋಗುತ್ತೇನೆ ಎಂದವನು ವಾಪಸ್ ಮತ್ತೆ ಬಂದು ಮತ್ತೊಮ್ಮೆ ಯಾಕೋ ಚಿಕ್ಕ ಚೋಟ ಬಾಸ್ ನನ್ನು ನೋಡಬೇಕು ಎನಿಸಿತು ಅದಕ್ಕೆ ಬಂದೆ ಎಂದು ಹೇಳಿದ್ದಾನೆ. ನಂತರ ಮಗುವಿನ ಮುಂದೆ ಸುಮ್ಮನೆ ಆಟವನ್ನ ಆಡುತ್ತಾ ಆರತಿ ಕೈಯಲ್ಲಿ ಬೈಸಿಕೊಂಡಿದ್ದಾನೆ.
ವೈದೇಹಿ ತನ್ನ ಮಗನನ್ನು ಕಳೆದುಕೊಂಡ ಮೇಲೆ ತುಂಬಾ ಬೇಸರದಲ್ಲಿ ಇದ್ದಾಳೆ. ಯೋಚನೆ ಮಾಡುತ್ತಾ ಮನೆಯ ಮೆಟ್ಟಿಲುಗಳನ್ನು ಇಳಿದುಕೊಂಡು ಬರುವಾಗ ನಾನು ಹೇಗಾದರೂ ಮಾಡಿ ವೇದಾಂತ್‌ಗೆ ವಿಷಯವನ್ನು ತಿಳಿಸಬೇಕು ಎಂದುಕೊಂಡಿದ್ದಾಳೆ. ಸುಹಾಸಿನಿ ನನಗೆ ಎಷ್ಟೆಲ್ಲ ಟಾರ್ಚರ್ ಕೊಟ್ಟಿದ್ದಾಳೆ ನನ್ನನ್ನ ಮನೆಯ ಒಳಗೆ ಕೂಡಿ ಹಾಕಿದ್ದಳು. ನಂತರ ಈ ಮನೆಗೆ ಕರೆದುಕೊಂಡು ಬಂದು ನನ್ನನ್ನೇ ಮನೆಯಾಳನ್ನಾಗಿ ಮಾಡಿಕೊಂಡಿದ್ದಾಳೆ.
ಇದೆಲ್ಲವನ್ನು ನಾನು ಸಹಿಸಿಕೊಂಡೆ ಆದರೆ ಇನ್ನು ಮುಂದೆ ನಾನು ಸಹಿಸಿಕೊಳ್ಳೋಕೆ ಸಾಧ್ಯವೇ ಇಲ್ಲ ಎಂದು ನಿರ್ಧಾರ ಮಾಡಿದ್ದಾಳೆ. ವೈದೇಹಿ ಈ ರೀತಿ ಮಾತನಾಡಿಕೊಂಡಿದ್ದನ್ನೆಲ್ಲಾ ಸುಹಾಸಿನಿ ಕೇಳಿಸಿಕೊಂಡಿದ್ದಾಳೆ. ಏನಾದರೂ ವೇದಾಂತ್‌ಗೆ ವಿಕ್ರಂನನ್ನು ಸಾಯಿಸಿದ್ದು ನಾನೇ ಎಂದು ಗೊತ್ತಾದರೆ ಸುಮ್ಮನೆ ಅವನು ಬಿಡುವುದಿಲ್ಲ ಇದಕ್ಕೆ ಏನಾದರೂ ಒಂದು ಮಾಡಲೇಬೇಕು ಎಂದುಕೊಂಡಿದ್ದಾಳೆ. ಅಗ್ನಿ ಜೊತೆಗೆ ನಾನು ಮಾತನಾಡಿದ್ದ ವಿಡಿಯೋವನ್ನೇ ನೋಡಿ ಕೋಪ ಮಾಡಿಕೊಂಡಿದ್ದನು ಎಂದು ಯೋಚನೆ ಮಾಡಿದ್ದಾಳೆ.
ಅಗ್ನಿಗೆ ಸುಹಾಸಿನಿ ಫೋನ್ ಮಾಡಿ ಸೂರ್ಯನಾರಾಯಣ್ ಭೇಟಿಗೆ ವೇದಾಂತ್‌ನನ್ನು ಬರಲು ಹೇಳು ಎಂದು ಹೇಳಿದ್ದಾಳೆ. ಇದಕ್ಕೆ ಅಗ್ನಿ ಏನು ಪ್ಲಾನ್ ಹಾಳು ಮಾಡಬೇಕು ಎಂದುಕೊಂಡಿದ್ದೀಯಾ ಎಂದಿದ್ದಾನೆ. ಬೇಡ ನನ್ನ ಬಳಿ ಬೇರೆ ಪ್ಲಾನ್ ಇದೆ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆಯೋಣ ಎಂದು ಸುಹಾಸಿನಿ ಅಗ್ನಿಗೆ ಬೇರೆದೆ ಪ್ಲಾನ್ ಅನ್ನು ಹೇಳಿದ್ದಾಳೆ.
ಕೂಡಲೇ ಅಗ್ನಿ ವೇದಾಂತ್‌ಗೆ ಫೋನ್ ಮಾಡಿದ್ದಾನೆ ಈ ವೇಳೆ ವೇದಾಂತ್ ನನ್ನ ತಂದೆಯ ಭೇಟಿಗೆ ಅವಕಾಶ ಮಾಡಿಕೊಡು ಎಂದು ಕೇಳಿದ್ದಾನೆ. ಇದಕ್ಕೆ ಜೋರಾಗಿ ನಕ್ಕ ಅಗ್ನಿ ಒಳ್ಳೇ ಅಪ್ಪ ಬೇಕು ಅಪ್ಪ ಬೇಕು ಎಂದು ಕೇಳುತ್ತಾ ಇದ್ದೀಯಲ್ಲ ನನಗೆ ಟಾರ್ಚರ್ ಕೊಡುವಾಗ ಇದ್ದ ಆತ್ಮವಿಶ್ವಾಸ ಈಗ ಎಲ್ಲಿ ಹೋಯಿತು ಎಂದು ಪ್ರಶ್ನೆಯನ್ನು ಮಾಡಿದ್ದಾನೆ. ನೀನು ನಿನ್ನ ತಂದೆಯನ್ನ ಭೇಟಿ ಮಾಡಬೇಕು ಎಂದರೆ ನೆನ್ನೆ ಬಂದಿದ್ಯಲ್ಲಾ ಆ ಜಾಗಕ್ಕೆ ಬಾ ಎಂದು ಹೇಳಿದ್ದಾನೆ.


Click it and Unblock the Notifications











