Gattimela: ವೇದಾಂತ್ ಜೊತೆ ಬರಲು ಒಪ್ಪಿಕೊಂಡ ಸೂರ್ಯನಾರಾಯಣ; ಕಂಡಿಷನ್ಸ್ ಅಪ್ಲೈಯಂತೆ!
ತಂದೆಯನ್ನ ಭೇಟಿಯಾಗಲು ಅಗ್ನಿ ಮನೆಗೆ ಬಂದಿದ್ದಾನೆ. ಇದೆ ವೇಳೆ ಅಗ್ನಿ ವೇದಾಂತನನ್ನು ಕುಳಿತುಕೊಳ್ಳುವಂತೆ ಹೇಳಿದ್ದಾನೆ. ಇದಕ್ಕಾಗಿ ಅಗ್ನಿ ಹೇಳಿದಂತೆ ಕೇಳುವುದನ್ನು ಬಿಟ್ಟು ಬೇರೆ ಯಾವುದೇ ದಾರಿ ಇಲ್ಲ. ಇದಕ್ಕಾಗಿ ವೇದಾಂತ್ ಅಗ್ನಿ ಹೇಳಿದಂತೆ ಕೇಳುತ್ತಾ ಇದ್ದಾನೆ. ಇದೇ ವೇಳೆ ಅಗ್ನಿ ವೇದಾಂತ್‌ಗೆ ಈಗ ನಿನ್ನಲ್ಲಿ ಕೋಪ ಕಡಿಮೆಯಾದಂತೆ ಕಾಣಿಸುತ್ತಿದೆ ಎಂದು ಹೇಳಿದ್ದಾನೆ. ವೇದಾಂತ್ ಅಗ್ನಿ ಬಳಿ ನಾನು ನನ್ನ ತಂದೆಯನ್ನ ನೋಡಬೇಕು ಎಂದು ಹೇಳಿದ್ದಾನೆ. ಇದೇ ಒಳ್ಳೆಯ ಸಮಯ ಅಂದುಕೊಂಡ ಅಗ್ನಿ ವೇದಾಂತ್‌ಗೆ ಮರ್ಯಾದೆಯನ್ನು ಕೊಟ್ಟು ಮಾತನಾಡುವುದನ್ನು ಕಲಿ ಎಂದೆಲ್ಲಾ ಹೇಳಿದ್ದಾನೆ.
ಅಮೂಲ್ಯಗೆ ಹೇಗಾದರೂ ಮಾಡಿ ಸೂರ್ಯನಾರಾಯಣರ ಬಗ್ಗೆ ತಿಳಿದುಕೊಳ್ಳಬೇಕು ಎಂದು ವೈದೇಹಿಯ ಬಳಿ ಪ್ರಶ್ನೆ ಮಾಡಿದ್ದಾಳೆ ನಿಮಗೆ ಸೂರ್ಯನಾರಾಯಣರ ಬಗ್ಗೆ ಗೊತ್ತಾ ಎಂದು ಕೇಳಿದಾಗ ಅವಳು ಏನನ್ನು ಮಾತನಾಡಿಲ್ಲ. ಪ್ಲೀಸ್ ಅವರನ್ನು ಮನೆಗೆ ಕರೆದುಕೊಂಡು ಬರಬೇಕು ನಂತರ ವೈದೇಹಿ ಅಮ್ಮನನ್ನ ಹುಡುಕಬೇಕು ಎಂದೆಲ್ಲ ವೈದೇಹಿ ಮುಂದೆ ಹೇಳಿದ್ದಾಳೆ. ಇದರಿಂದ ವೈದೇಹಿ ಕೊಂಚ ಗಲಿಬಿಲಿಯಾಗಿದ್ದಾಳೆ. ಅಯ್ಯೋ ಎಂದುಕೊಂಡು ಅಮೂಲ್ಯ ಕೇಳುವ ಯಾವ ಪ್ರಶ್ನೆಗೂ ಸಹ ಉತ್ತರವನ್ನು ನೀಡುತ್ತಿಲ್ಲ.

ಧ್ರುವನಿಗೆ ವೈದೇಹಿ ಹಾಲು ಕೊಡಲು ಹೋದಾಗ ಅದಿತಿ ಅಮ್ಮ ನಿಮ್ಮನ್ನು ಧ್ರುವ ತುಂಬಾ ನೆನಪಿಸಿಕೊಳ್ಳುತ್ತಿದ್ದ ಎಂದಿದ್ದಾಳೆ. ಈ ವೇಳೆ ವಿಕ್ಕಿ ಬಗ್ಗೆ ಮಾತಾಡುವಾಗ ನಂಗೆ ನನ್ನ ಮಗನನ್ನೇ ಕಳೆದುಕೊಂಡಷ್ಟೇ ದುಃಖವಾಗಿದೆ ಎಂದು ಕಣ್ಣೀರು ಹಾಕಿದ್ದಾಳೆ. ಧ್ರುವ ವೈದೇಹಿ ಅಳುತ್ತಿರುವುದನ್ನು ನೋಡಿ ಬೇಸರವನ್ನು ಮಾಡಿಕೊಂಡಿದ್ದಾನೆ. ನಂತರ ಅದಿತಿ ಕೈಗೆ ಹಾಲನ್ನು ಕೊಟ್ಟು ಧ್ರುವನಿಗೆ ಕುಡಿಸು ಎಂದು ಅಲ್ಲಿಂದ ವೈದೇಹಿ ಹೋಗಿದ್ದಾಳೆ. ಧ್ರುವ ವೈದೇಹಿ ಆಡಿದ ಮಾತುಗಳ ಬಗ್ಗೆಯೇ ಯೋಚನೆಯನ್ನು ಮಾಡುತ್ತಾ ಇದ್ದಾನೆ.
ಅಗ್ನಿ ವೇದಾಂತ್‌ಗೆ ಸಿಕ್ಕಾಪಟ್ಟೆ ಕಾಟ ಕೊಡುತ್ತಿದ್ದಾನೆ ನನಗೆ ಮರ್ಯಾದೆಯನ್ನ ಕೊಟ್ಟು ಮಾತನಾಡುತ್ತಾರೆ. ಆದರೆ ನೀನು ನನ್ನನ್ನು ಅಗ್ನಿ ಎಂದೂ ಕರೆಯುತ್ತೀಯಾ ಅಗ್ನಿ ಅವರೇ ಎಂದು ಇನ್ಮುಂದೆ ನೀನು ನನ್ನನ್ನ ಕರೆಯಬೇಕು ಎಂದೆಲ್ಲಾ ಅನ್ನುತ್ತಿದ್ದಾನೆ. ವೇಳೆ ವೇದಾಂತ್ ಅಗ್ನಿಯವರೆ ನನ್ನ ತಂದೆಯನ್ನು ನೋಡಬೇಕು ಮೊದಲು ಅವರು ಎಲ್ಲಿದ್ದಾರೆ ಹೇಳು ಎಂದು ಕೇಳಿದಾಗ.
ನಮ್ಮಲ್ಲಿ ರಿಕ್ವೆಸ್ಟ್ ಮಾಡುವುದಕ್ಕೆ ಪ್ಲೀಸ್ ಎನ್ನುತ್ತಾರೆ ನೀನು ನನ್ನನ್ನ ರಿಕ್ವೆಸ್ಟ್ ಮಾಡಿಕೊಂಡರೆ ಮಾತ್ರ ನಿನ್ನ ತಂದೆಯನ್ನ ಭೇಟಿ ಮಾಡಿಸುತ್ತೇನೆ ಎಂದು ಅಗ್ನಿ ವೇದಾಂತ್‌ಗೆ ಹೇಳಿದ್ದಾನೆ. ಈ ವೇಳೆ ವೇದಾಂತ್ ಅಗ್ನಿಗೆ ಪ್ಲೀಸ್ ಮೊದಲು ನನ್ನ ತಂದೆ ಎಲ್ಲಿದ್ದಾರೆ ಅದನ್ನ ಹೇಳು ಎಂದು ಅಂದಿದಿದ್ದಾನೆ. ಇದನ್ನು ಕೇಳಿಸಿಕೊಂಡ ಅಗ್ನಿಗೆ ತುಂಬಾ ಖುಷಿಯಾಗಿದ್ದು ರಾಯರೇ ಬನ್ನಿ ನಿಮ್ಮ ಜೊತೆ ಮಾತನಾಡಲು ವೇದಾಂತ್ ಬಂದಿದ್ದಾನೆ ಎಂದು ತಿಳಿಸಿದ್ದಾನೆ.
ವೇದಾಂತ್ ತನ್ನ ತಂದೆ ಸೂರ್ಯನಾರಾಯಣರನ್ನು ಅಪ್ಪಾ ದಯವಿಟ್ಟು ಮನೆಗೆ ಬನ್ನಿ ಎಂದು ರಿಕ್ವೆಸ್ಟ್
ಮಾಡಿಕೊಳ್ಳುತ್ತಿದ್ದಾನೆ. ಆದರೆ ಸೂರ್ಯನಾರಾಯಣರು ನಾನು ಮನೆಗೆ ಬರುತ್ತೇನೆ ಆದರೆ ನನ್ನದು ಕಂಡಿಷನ್ಸ್ ಇದೆ ಅದಕ್ಕೆ ಒಪ್ಪಿಕೊಂಡರೆ ಮಾತ್ರ ಮನೆಗೆ ಬರೋದು ಎಂದು ಹೇಳಿದ್ದಾರೆ. ಇದಕ್ಕೆ ವೇದಾಂತ್ ನಿಮ್ಮ ಕಂಡೀಶನ್ ಏನು ಎಂದು ಕೇಳಿದಾಗ ನಿಮ್ಮ ಮನೆಯಲ್ಲಿ ಇರುವ ವೈಜಯಂತಿಯನ್ನು ಮನೆಯಿಂದ ಹೊರಗಡೆ ಹಾಕಿದರೆ ಮಾತ್ರ ನಾನು ಆ ಮನೆಗೆ ಬರೋದು ಎಂದು ಹೇಳಿದ್ದಾರೆ.
ತನ್ನ ತಂದೆಯ ಮಾತನ್ನ ಕೇಳಿದ ವೇದಾಂತ್ ಒಮ್ಮೆಲೇ ಶಾಕ್ ಆಗಿದೆ. ಸುಹಾಸಿನಿ ಒಂದೇ ಕಲ್ಲಿನಲ್ಲಿ ಎರಡು ಅಕ್ಕಿಯನ್ನ ಒಡೆಯಲು ಈ ರೀತಿಯಾಗಿ ಪ್ಲಾನ್ ಮಾಡಿದ್ದಾಳೆ ಅದನ್ನು ಅಗ್ನಿಯ ಮುಖಾಂತರ ಈಡೇರಿಸಿಕೊಳ್ಳುತ್ತಿದ್ದಾಳೆ. ವೈ ಜಯಂತಿ ಎಲ್ಲಾ ವಿಷಯವನ್ನು ವೇದಾಂತ್ ಬಳಿ ಹೇಳಿದರೆ ನನಗೆ ಕಷ್ಟ ಎಂದು ವೈಜಯಂತಿಯನ್ನ ಈ ಮೂಲಕ ಮನೆಯಿಂದ ಹೊರಗೆ ಹಾಕಲು ಪ್ಲಾನ್ ಮಾಡಿದ್ದಾಳೆ.


Click it and Unblock the Notifications











