Don't Miss!
- News
ಡಿಕೆಶಿ ಪತ್ನಿ ನನಗೆ ಕಾಂಗ್ರೆಸ್ ತೊರೆಯದಂತೆ ಕೋರಿದ್ದರು: ರಮೇಶ್ ಜಾರಕಿಹೊಳಿ
- Technology
MusicLM :ಗೂಗಲ್ನಿಂದ ಹೊಸ ಟೂಲ್; ಇದು ಪಠ್ಯವನ್ನು ಸಂಗೀತವಾಗಿ ಪರಿವರ್ತಿಸಲಿದೆ!
- Finance
ಅದಾನಿ ಗ್ರೂಪ್ನ 413 ಪುಟಗಳ ಪ್ರತಿಕ್ರಿಯೆ: ಹಿಂಡನ್ಬರ್ಗ್ ಹೇಳುವುದೇನು?
- Automobiles
ಬಹುನೀರಿಕ್ಷಿತ 'ಅಲ್ಟ್ರಾವೈಲೆಟ್ F77' ಬೈಕ್ ಹೇಗಿದೆ ಗೋತ್ತಾ.. ಇಲ್ಲಿದೆ ವಿಮರ್ಶೆ
- Lifestyle
ಫೆಬ್ರವರಿ ತಿಂಗಳಿನಲ್ಲಿ ಜನಿಸಿದವರ ಕುರಿತ ಆಸಕ್ತಿಕರ ಸಂಗತಿಗಳಿವು
- Sports
ನೀವೇ ನಮಗೆ ಸ್ಪೂರ್ತಿ: ಕಿರಿಯರ ಸಾಧನೆಗೆ ಹರ್ಮನ್ಪ್ರೀತ್ ಕೌರ್ ಮುಕ್ತಕಂಠದ ಶ್ಲಾಘನೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮನೆಗೆ ಬಂದ ವೇದಾಂತ್: ಎಲ್ಲಾ ಸತ್ಯ ಹೇಳುತ್ತಾಳಾ ಸುಹಾಸಿನಿ?
ಗಟ್ಟಿಮೇಳ ಧಾರಾವಾಹಿಯಲ್ಲಿ ತೇಜಸ್ ಮತ್ತು ಅಗ್ನಿ ವೇದಾಂತ್‌ನನ್ನು ಕಿಡ್ನ್ಯಾಪ್ ಮಾಡಿರುತ್ತಾರೆ. ಇದರಿಂದ ಅಮೂಲ್ಯ ಕಂಗಾಲಾಗಿರುತ್ತಾಳೆ. ವೇದಾಂತ್ ನನ್ನು ತೇಜಸ್ ಅಪಹರಿಸಿರಬೇಕು ಎಂದು ಅನುಮಾನವನ್ನೂ ವ್ಯಕ್ತಪಡಿಸುತ್ತಾಳೆ.
ಸುಹಾಸಿನಿ ಕಡೆಯವರೇ ವೇದಾಂತ್ ನನ್ನು ಕಿಡ್ನ್ಯಾಪ್ ಮಾಡಿರುವುದು ಎಂಬುದು ಅಜ್ಜಿಗೆ ಗೊತ್ತಿರುತ್ತದೆ. ಆದರೆ, ಕಣ್ಣು ಕಾಣಿಸುತ್ತಿದ್ದರೂ ಇಲ್ಲ ಎಂಬಂತೆ ನಟಿಸುತ್ತಿರುವ ಅಜ್ಜಿ ಈಗ ಈ ವಿಚಾರದಲ್ಲೂ ಮೌನವಾಗಿದ್ದಾಳೆ. ಸಂದರ್ಭಕ್ಕಾಗಿ ಕಾಯುತ್ತಿದ್ದಾಳೆ.
ವೈದೇಹಿ ಮಾತ್ರ ಸುಹಾಸಿನಿ ಬಳಿ ಜಗಳ ಕೂಡ ಮಾಡಿರುತ್ತಾಳೆ. ನನ್ನ ಮಗನಿಗೆ ಏನಾದರೂ ಆದರೆ ನಾನು ಸುಮ್ಮನಿರುವುದಿಲ್ಲ ಎಂದು ವಾರ್ನಿಂಗ್ ಕೊಟ್ಟಿರುತ್ತಾಳೆ. ಆದರೆ, ಈಗ ಪರಿಸ್ಥಿತಿ ಸುಹಾಸಿನಿ ಕೈ ಮೀರಿ ಹೋಗಿದೆ. ತೇಜಸ್, ಚಂದ್ರ ಮತ್ತು ಅಗ್ನಿ ಸೇರಿಕೊಂಡು ಈ ಪ್ಲಾನ್ ಮಾಡಿರುತ್ತಾರೆ.

ಎಲ್ಲಾ ಗೊತ್ತಿದ್ದು ಸುಮ್ಮನಿರುವ ಅಜ್ಜಿ
ವೈದೇಹಿ ತನ್ನ ಮಗನಿಗಾಗಿ ದೇವಸ್ಥಾನದಲ್ಲಿ ಬೇಡಿಕೊಳ್ಳುತ್ತಾಳೆ. ವೇದಾಂತ್ ಕ್ಷೇಮವಾಗಿ ಬರಲಿ ಎಂದು ಮಂಡಿ ಪ್ರದಕ್ಷಿಣೆಯನ್ನೂ ಹಾಕುತ್ತಾಳೆ. ಇದನ್ನೆಲ್ಲಾ ನೋಡಿದ ಅಮೂಲ್ಯ, ವೇದಾಂತ್ ತಾಯಿ ಸುಮ್ಮನಿದ್ದಾರೆ. ಅವರಿಗೆ ಮಗನ ನಕ್ಷತ್ರ ರಾಶಿ ಗೊತ್ತಿಲ್ಲ. ಆದರೆ, ನಿನ್ನೆ ಮೊನ್ನೆ ಬಂದ ವೈಜಯಂತಿ ಅಮ್ಮನಿಗೆ ವೇದಾಂತ್ ಮೇಲೆ ಎಷ್ಟೋಂದು ಕಾಳಜಿ ಇದೆ ಎಂದು ಅಂದುಕೊಳ್ಳುತ್ತಾಳೆ. ಆದರೆ ಅಜ್ಜಿಗೆ ವೈದೇಹಿ ಯಾರು ಮತ್ತು ಸುಳ್ಳು ಹೇಳಿಕೊಂಡು ಮನೆಯಲ್ಲಿ ಇರುವ ಚಂದ್ರ ಯಾರು ಎಂಬುದು ತಿಳಿದಿರುತ್ತದೆ. ಧೃವನಿಗೂ ಕೂಡ ಅವರ ತಾಯಿ ಯಾರು ಎಂದು ಗೊತ್ತಿರುತ್ತದೆ. ಆದರೆ ಅವನಿಗೆ ಸ್ವಾಧೀನವಿಲ್ಲದ ಕಾರಣ ಎಲ್ಲವನ್ನೂ ನೋಡಿಕೊಂಡು ಸುಮ್ಮನಿರುತ್ತಾನೆ.

ಅಗ್ನಿ ಪ್ಲಾನ್ ಸೋತೋಯ್ತಾ?
ಇತ್ತ ವೇದಾಂತ್ ನನ್ನು ಹುಡುಕಲು ಪೊಲೀಸರು ಹರಸಾಹಸ ಪಡುತ್ತಿರುತ್ತಾರೆ. ಅಗ್ನಿ ವೇದಾಂತ್ ನನ್ನು ಅವರ ತಂದೆ ತಾಯಿ ಅವರಿಗೆ ತೋರಿಸಿ ಸಾಯಿಸಬೇಕು ಎಂದು ಪ್ಲಾನ್ ಮಾಡಿರುತ್ತಾನೆ. ಆದರೆ, ಪ್ರಜ್ವಲ್ ವೇದಾಂತ್ ಎಲ್ಲಿದ್ದಾನೆ ಎಂದು ತಿಳಿಯಲು ತನ್ನ ಕಡೆಯವರನ್ನು ಕಳಿಸಿರುತ್ತಾನೆ. ವಿಕ್ರಮ್, ಸಾರ್ಥಕ್ ಜೊತೆಗೆ ಪ್ರಜ್ವಲ್ ಹೋಗುತ್ತಾನೆ. ಆದರೆ ಇವರಿಗೆ ಆ ಸ್ಥಳ ತಿಳಿಯುವ ವೇಳೆಗೆ ತೇಜಸ್ ವೇದಾಂತ್ ನನ್ನು ಅಡಗಿಸಿಟ್ಟಿದ್ದ ಸ್ಥಳವನ್ನೇ ಬದಲಿಸಿ ಬಿಡುತ್ತಾನೆ. ಇದರಿಂದ ವಿಕ್ರಮ್ ಗೆ ತನ್ನ ಅಣ್ಣ ಸಿಗುವುದಿಲ್ಲ.

ಪೋಲೀಸರಿಂದ ತೇಜಸ್ ಎಸ್ಕೇಪ್
ಆದರೆ ಸುಮ್ಮನೇ ಕೈ ಕಟ್ಟಿ ಕೂರದ ಅಮೂಲ್ಯ, ವೈದೇಹಿ ವೇದಾಂತ್ ಇರುವ ಸ್ಥಳವನ್ನು ಪತ್ತೆ ಹಚ್ಚುತ್ತಾರೆ. ಪೊಲೀಸರನ್ನು ಕರೆದುಕೊಂಡು ಅದೇ ಜಾಗಕ್ಕೆ ಹೋಗುತ್ತಾರೆ. ಅಮೂಲ್ಯ ತನ್ನನ್ನು ಹುಡುಕಿಕೊಂಡು ಬಂದಿದ್ದಕ್ಕೆ ವೇದಾಂತ್ ಖುಷಿಪಡುತ್ತಾನೆ. ಇನ್ನು ತೇಜಸ್ ಗೆ ಬೈದ ವೈದೇಹಿ ಪೊಲೀಸರನ್ನು ಕರೆಯುತ್ತಾಳೆ. ಆದರೆ ತೇಜಸ್ ತಪ್ಪಿಸಿಕೊಳ್ಳುತ್ತಾನೆ. ಬೇರೆ ಹುಡುಗರನ್ನು ಪೊಲೀಸರು ಹಿಡಿದು ಸ್ಟೇಷನ್ ಗೆ ಕರೆದುಕೊಂಡು ಹೋಗುತ್ತಾರೆ. ವೇದಾಂತ್ ನನ್ನು ಮನೆಗೆ ಕರೆದುಕೊಂಡು ಹೋಗುತ್ತಾರೆ.

ಸುಹಾಸಿನಿ ಸತ್ಯ ಬಾಯಿ ಬಿಡುತ್ತಾಳಾ..?
ವೇದಾಂತ್ ಮನೆಗೆ ಬರುತ್ತಿದ್ದಂತೆ ಚಂದ್ರ ಮತ್ತು ಸುಹಾಸಿನಿ ನಾಟಕವಾಡುತ್ತಾರೆ. ವೈದೇಹಿ ವೇದಾಂತ್ ಗೆ ದೃಷ್ಟಿ ತೆಗೆದು ರೆಸ್ಟ್ ಮಾಡಲು ಹೇಳುತ್ತಾಳೆ. ಇನ್ನು ಸುಹಾಸಿನಿಗೆ ಚಂದ್ರಾಳ ಕಾಟ ಹೆಚ್ಚಾಗಿರುತ್ತದೆ. ಇದರಿಂದ ಬೇಸತ್ತ ಸುಹಾಸಿನಿ, ನೀವೆಲ್ಲಾ ಹೀಗೆ ಮಾಡುತ್ತಿದ್ದರೆ, ನಾನು ವೇದಾಂತ್ ಗೆ ಎಲ್ಲಾ ಸತ್ಯವನ್ನು ಹೇಳಿ ಬಿಡುತ್ತೇನೆ ಎಂದು ಹೇಳುತ್ತಾಳೆ. ಈಗ ವೇದಾಂತ್ ಬಂದಿದ್ದು, ಸುಹಾಸಿನಿ 25 ವರ್ಷದ ಎಲ್ಲಾ ಸತ್ಯವನ್ನೂ ಹೇಳುತ್ತಾಳಾ?