Gattimela: ವೈದೇಹಿಯನ್ನು ಮನೆಯಿಂದ ಹೊರಗಡೆ ಹಾಕ್ತಾನಾ ವೇದಾಂತ್?
ವೇದಾಂತ್ ಅಗ್ನಿ ಮನೆಯಿಂದ ಹೊರಗೆ ಬರುವಾಗ ವೈದೇಹಿ ಅವರಿಗೆ ಸಿಕ್ಕಿ ಬನ್ನಿ ನಾವೇ ಆಶ್ರಯ ನೀಡುತ್ತೇವೆ ಎಂದು ಕರೆದುಕೊಂಡು ಬಂದಿದ್ದರ ಬಗ್ಗೆ ನೆನಪಿಸಿಕೊಳ್ಳುತ್ತಾ ಇದ್ದಾನೆ. ನಮಗೆ ವೈಜಯಂತಿ ಅಮ್ಮ ತಾಯಿ ಪ್ರೀತಿಯನ್ನ ಕೊಟ್ಟಿದ್ದಾರೆ ಅವರನ್ನ ಮನೆಯಿಂದ ಹೊರಗಡೆ ಕಳಿಸುವುದು ಹೇಗೆ? ನನಗೆ ಬಂದಿರುವ ಪರಿಸ್ಥಿತಿ ಬೇರೆ ಯಾರಿಗೂ ಬರುವುದು ಬೇಡ ಎಂದು ವೇದಾಂತ್ ಕಣ್ಣೀರು ಹಾಕಿದ್ದಾನೆ. ವೈದೇಹಿ ಮನೆಗೆ ಬಂದ ನಂತರ ಎಲ್ಲರ ಆರೈಕೆಯಲ್ಲಿ ತೊಡಗಿಸಿಕೊಂಡಿದ್ದರು ನಮ್ಮನ್ನ ಮಕ್ಕಳ ರೀತಿ ನೋಡಿಕೊಂಡಿದ್ದಾರೆ ಎಂದು ವೇದಾಂತ್ ಯೋಚಿಸುತ್ತಿದ್ದಾನೆ.
ಸುಹಾಸಿನಿ ಹಾಗೂ ಅಗ್ನಿ ಇಬ್ಬರು ಸಹ ಮಾತನಾಡುತ್ತಾ ಇದ್ದಾರೆ ಆ ವೇದಂತ್ ಪರಿಸ್ಥಿತಿಯನ್ನ ನಾನು ನೋಡಬೇಕಾಗಿತ್ತು ಯಾವ ರೀತಿ ಇರುತ್ತದೆ ಎಂದು ಸುಹಾಸಿನಿ ಅಗ್ನಿಯ ಬಳಿಯಲ್ಲಿ ಹೇಳಿದ್ದಾಳೆ. ಇದಕ್ಕೆ ಅಗ್ನಿ ನಮ್ಮ ಬಳಿ ಇರುವ ಅಸ್ತ್ರ ಸೂರ್ಯನಾರಾಯಣ್ ಅವರನ್ನ ಇಟ್ಟುಕೊಂಡು ವೇದಾಂತ್‌ಗೆ ಯಾವ ರೀತಿಯಲ್ಲಿ ನಾನು ಆಟವಾಡಿಸುತ್ತೇನೆ ನೋಡುತ್ತಾ ಇರು ಎಂದು ಸುಹಾಸನಿಗೆ ಹೇಳಿದ್ದಾನೆ. ನಾನು ಹೇಳಿದಂತೆ ಈಗ ಅವನು ಮಾಡಲೇಬೇಕಾಗಿದೆ ನನಗೆ ಇದರಿಂದಾಗಿ ಸಾಕಷ್ಟು ಸಂತೋಷವಾಗುತ್ತಿದೆ ಎಂದು ಅಗ್ನಿ ಖುಷಿ ಪಡುತ್ತಾ ಇದ್ದಾನೆ.

ಸುಹಾಸಿನಿಗೆ ವೈದೇಹಿಯನ್ನು ವೇದಾಂತ್ ಹೊರಗೆ ಹಾಕುತ್ತಾನೆ ಎಂಬುದರ ಮೇಲೆ ನಂಬಿಕೆ ಇಲ್ಲ ಇದಕ್ಕಾಗಿ ಅಗ್ನಿ ಬಳಿ ಮತ್ತೆ ಪ್ರಶ್ನೆ ಮಾಡಿದ್ದಾಳೆ. ನಿಜವಾಗಿಯೂ ವೈದೇಹಿಯನ್ನ ವೇದಾಂತ್ ಹೊರಗಡೆ ಹಾಕುತ್ತಾನಾ ಎಂದಿದ್ದಾಳೆ. ಅವನಿಗೆ ಈಗ ತನ್ನ ತಂದೆಯ ಪ್ರೀತಿ ಬೇಕಾಗಿದೆ ಅದಕ್ಕಾಗಿ ಅವನು ಏನು ಮಾಡಲು ಸಿದ್ಧನಿದ್ದಾನೆ ಎಂದು ಅಗ್ನಿ ಸುಹಾಸಿನಿಗೆ ಹೇಳಿದ್ದಾನೆ. ಸೂರ್ಯನಾರಾಯಣ ಹೇಳಿದರೆ ನಿನ್ನನ್ನು ಬೇಕಾದರೆ ಹೊರಗೆ ಹಾಕುತ್ತಾನೆ. ಫ್ಯಾಮಿಲಿಯ ಬಗ್ಗೆ ನಿನಗೆ ಏನು ಗೊತ್ತು, ನಿನಗೆ ಫ್ಯಾಮಿಲಿ ಇದ್ದಿದ್ದರೆ ಇದೆಲ್ಲವೂ ಸಹ ಅರ್ಥವಾಗುತ್ತಿತ್ತು ಎಂದು ಅಗ್ನಿ ಬೈದಿದ್ದಾನೆ.
ವೇದಾಂತ್ ಸೂರ್ಯನಾರಾಯಣರನ್ನ ಭೇಟಿ ಮಾಡಿಕೊಂಡು ಮನೆಗೆ ಬಂದಿದ್ದಾನೆ ರೂಮಿನಲ್ಲಿ ಕುಳಿತುಕೊಂಡು ಸೂರ್ಯನಾರಾಯಣ್ ಹೇಳಿದ ಬಗ್ಗೆ ಯೋಚನೆ ಮಾಡುತ್ತಾ ಇದ್ದಾನೆ. ಅಷ್ಟರಲ್ಲಿ ಅಲ್ಲಿಗೆ ಅಮೂಲ್ಯ ಬಂದಿದ್ದು ನಾನು ನಿನ್ನನ್ನ ಎಷ್ಟು ಕಡೆ ಹುಡುಕಿದೆ ಆದರೆ ನೀನು ಎಲ್ಲೂ ಸಿಗಲಿಲ್ಲ ಇಲ್ಲಿ ಬಂದು ಕುಳಿತ್ತೀದಿಯಾ ಎಂದು ಪ್ರಶ್ನೆ ಮಾಡಿದ್ದಾಳೆ. ನಿಮ್ಮ ತಂದೆ ಸಿಕ್ಕಿದ್ರ ಮಾತನಾಡಿದ್ಯಾ? ಎಂದಿಲ್ಲ ಕೇಳುತ್ತಿದ್ದಾಳೆ, ವೇದಾಂತ್ ಏನನ್ನೋ ಹೇಳಲು ಬಂದು ಅರ್ಧಕ್ಕೆ ನಿಲ್ಲಿಸಿದ್ದಾನೆ.
ಕೊನೆಗೆ ತಾನೇ ಮನಸ್ಸಿನಲ್ಲಿ ಯೋಚನೆ ಮಾಡುತ್ತಾ ಅಪ್ಪಾಜಿ ಹೇಳಿದ ರೀತಿ, ವೈದೇಹಿ ಅಮ್ಮನನ್ನ ಹೊರಗಡೆ ಹಾಕಬೇಕು ಎಂದು ಹೇಳಿದರೆ ಅದನ್ನು ಅಮೂಲ್ಯ ಯಾವ ರೀತಿ ತೆಗೆದುಕೊಳ್ಳುತ್ತಾಳೆ ಎಂಬುವುದು ನನಗೆ ಗೊತ್ತಿಲ್ಲ. ಇದಕ್ಕೆ ನಾನು ಏನಾದರೂ ಒಂದು ಪರಿಹಾರವನ್ನು ಹುಡುಕಿದ ನಂತರ ಅದನ್ನು ಅಮೂಲ್ಯ ಬಳಿಯಲ್ಲಿ ಚರ್ಚೆ ಮಾಡುವುದೇ ಒಳ್ಳೆಯದು ಎಂದು ಸುಮ್ಮನೆ ಆಗಿ ಹೋಗಿದ್ದಾನೆ. ಇದಕ್ಕೆ ಅಮೂಲ್ಯ ಗೆ ಕೋಪ ಬಂದಿದೆ, ಏನೋ ಒಂದು ಹೇಳಲು ಬಂದು ಏನನ್ನು ನನ್ನ ಬಳಿ ಈಗಂತೂ ಹೇಳಿಕೊಳ್ಳುವುದೇ ಇಲ್ಲ ಎಂದು ಅಲ್ಲಿಂದ ಎದ್ದು ಕಾಫಿ ತರುತ್ತೇನೆ ಎಂದು ಹೋಗಿದ್ದಾಳೆ.
ವೇದಾಂತ್ ತುಂಬಾ ಯೋಚನೆ ಮಾಡುತ್ತಾ ಕುಳಿತಿದ್ದಾನೆ. ವೈದೇಹಿ ಅಮ್ಮ ನಮಗೆ ತಾಯಿಯಂತೆ ಪ್ರೀತಿಯನ್ನ ತೋರಿಸಿದ್ದಾರೆ. ಅವರನ್ನ ಹೊರಗಡೆ ಹಾಕಿದರೆ ನಾವು ಅವರಿಗೆ ದ್ರೋಹ ಮಾಡಿದಂತೆ ಆಗುತ್ತದೆ. ನನಗೆ ನನ್ನ ತಂದೆಯು ಬೇಕು ವೈದೇಹಿ ಅಮ್ಮನು ಬೇಕು ಎಂದು ಯೋಚಿಸುತ್ತಿರುವಾಗ ಅಲ್ಲಿಗೆ ವೈದೇಹಿ ಕಾಫಿ ತಂದಿದ್ದಾಳೆ. ಈ ವೇಳೆ ಮಗನನ್ನ ಯಾಕೆ ತುಂಬಾ ಧರ್ಮಸಂಕಟಕ್ಕೆ ಸಿಲುಕಿಕೊಂಡಿದ್ದಿಯಾ ಎಂದು ಕೇಳಿದ್ದಾಳೆ.
ಇದೇ ವೇಳೆ ವೈದೇಹಿ ಬಳಿಯೇ ವೇದಾಂತ್ ತನ್ನ ಪ್ರಶ್ನೆಗಳಿಗೆ ಉತ್ತರವನ್ನು ಕೇಳಿದ್ದಾನೆ. ನಮ್ಮಲ್ಲಿ ಎರಡು ವಸ್ತುಗಳು ಇರುತ್ತವೆ ಎರಡು ಬೇಕು ಅದರಲ್ಲಿ ಯಾವುದಕ್ಕೆ ಪ್ರಾಮುಖ್ಯತೆ ಕೊಡಬೇಕು ಎಂದು ಕೇಳಿದ್ದಾನೆ. ಈ ವೇಳೆ ವೈದೇಹಿ ಪರಿಸ್ಥಿತಿ ಹಾಗೂ ಮನಸ್ಥಿತಿಗೆ ಅನುಗುಣವಾಗಿ ಯಾವುದು ನಮಗೆ ಹೆಚ್ಚು ಬೇಕು ಎನಿಸುತ್ತದೆ ಅದಕ್ಕೆ ಪ್ರಾಮುಖ್ಯತೆ ಕೊಡಬೇಕು ಎಂದು ಹೇಳಿದ್ದಾಳೆ. ಯೋಚನೆ ಮಾಡಬೇಡ ನಿನ್ನ ತಂದೆ ತಾಯಿ ಇಬ್ಬರು ಸಹ ನಿನಗೆ ಸಿಗುತ್ತಾರೆ ಎಂದು ವೇದಾಂತಿಯ ಸಮಾಧಾನವನ್ನು ಮಾಡಿದ್ದಾಳೆ.


Click it and Unblock the Notifications











