Gattimela: ಭಾರವಾದ ಮನಸ್ಸಿನಿಂದ ಮನೆ ಬಿಟ್ಟು ಹೋಗಲು ನಿರ್ಧರಿಸಿದ ವೈದೇಹಿ; ಸಂಕಟದಲ್ಲಿ ವೇದಾಂತ್
ಅಗ್ನಿ ಹಾಗೂ ಸುಹಾಸಿನಿ ಇಬ್ಬರೂ ವೇದಾಂತ್‌ಗೆ ನೋವು ಕೊಡಬೇಕು ಎಂದುಕೊಂಡು ಪ್ಲ್ಯಾನ್ ಮಾಡಿದ್ದರು. ಪ್ಲ್ಯಾನ್ ಪ್ರಕಾರ ಈಗ ವೈದೇಹಿಯನ್ನ ವೇದಾಂತ್ ತುಂಬಾ ನೋವಿನಿಂದ ಮನೆಯಿಂದ ಹೊರಗೆ ಹೋಗಿ ಎಂದು ಹೇಳಿದ್ದಾನೆ. ವೈದೇಹಿ ಯಾವುದೇ ಸತ್ಯವನ್ನು ಹೇಳದೆ ವೇದಾಂತ್ ಹೇಳಿದಂತೆ ಮಾಡಲು ಒಪ್ಪಿಕೊಂಡಿದ್ದಾಳೆ.
ಸುಹಾಸಿನಿ ತೊಟ್ಟಿಲನ್ನು ತೂಗಿ ಮಗುವನ್ನು ಚಿವುಟುವ ಕೆಲಸವನ್ನ ಮಾಡಿದ್ದಾಳೆ. ವೇದಾಂತ್ ಮುಂದೆ ಯಾಕೆ ವೈದೇಹಿಯನ್ನ ಹೊರಗಡೆ ಕಳಿಸುತ್ತಿದ್ದೀಯ ಎಂದು ಕೇಳಿ ನಂತರ ತುಂಬಾನೇ ಖುಷಿಯಿಂದ ನಗುತ್ತಾ ಇದ್ದಾಳೆ. ವೇದಾಂತ್‌ಗೆ ತೊಂದರೆಯನ್ನು ಕೊಡುತ್ತಿರುವುದು ಅಗ್ನಿಗಂತು ತುಂಬಾನೇ ಖುಷಿ ನೀಡಿದೆ. ವೇದಾಂತ್ ಈ ಹಿಂದೆ ಅಗ್ನಿಯನ್ನು ಸಾಯಿಸಲು ಹೋಗಿ ತುಂಬಾನೇ ತೊಂದರೆ ಕೊಟ್ಟಿದ್ದನು. ಅಂದು ಸೂರ್ಯನಾರಾಯಣ ಅಡ್ಡ ಬಂದು ವೇದಾಂತ್ ಕೈನಿಂದ ಅಗ್ನಿಯನ್ನು ರಕ್ಷಿಸಿದ್ದರು.

ಈಗ ಅದೇ ಸೂರ್ಯನಾರಾಯಣರನ್ನು ಮುಂದಿಟ್ಟುಕೊಂಡು ಅಗ್ನಿ ವೇದಾಂತ್ ಲೈಫ್ ಗೆ ಎಂಟ್ರಿ ಕೊಟ್ಟು ತೊಂದರೆಯನ್ನು ನೀಡುತ್ತಿದ್ದಾನೆ. ನಿನಗೆ ನಿನ್ನ ತಂದೆ ಬೇಕಾದರೆ ಆ ವೈದೇಹಿಯನ್ನು ಮನೆಯಿಂದ ಹೊರಗೆ ಕಳುಹಿಸು ಎಂದು ವೇದಾಂತ್‌ಗೆ ಅಗ್ನಿ ಷರತ್ತನ್ನು ಹಾಕಿದ್ದಾನೆ.
ತನ್ನ ತಂದೆ ಬೇಕು ಎಂದು ಅಮ್ಮನ ಪ್ರೀತಿ ನೀಡುತ್ತಿದ್ದ ವೈದೇಹಿಯನ್ನ ವೇದಾಂತ್ ಹೊರಗೆ ಹೋಗಿ ಎಂದಿದ್ದಾನೆ. ವೇದಾಂತ್‌ಗೆ ವೈದೇಹಿಗೆ ಹೊರಗೆ ಹೋಗಿ ಎಂದಿದ್ದಕ್ಕೆ ಬಹಳಷ್ಟು ನೋವಾಗುತ್ತಿದೆ. ತನ್ನ ಒಳಗಡೆ ಆ ನೋವನ್ನ ಅನುಭವಿಸುತ್ತಿದ್ದಾನೆ. ಅಮೂಲ್ಯ ಬೇರೆ ತನ್ನ ತವರುಮನೆಗೆ ಹೋಗಿದ್ದಾಳೆ. ಈಗ ಅಮೂಲ್ಯ ಇದ್ದಿದ್ದರೆ ವೈದೇಹಿಯನ್ನು ಮನೆಯಿಂದ ಹೊರಗಡೆ ಕಳುಹಿಸಲು ಬಿಡುತ್ತಿರಲಿಲ್ಲ. ಆದರೆ ವೇದಾಂತ್ ತನ್ನ ತಂದೆ ಬೇಕು ಎಂದು ವೈದೇಹಿಯನ್ನು ಅಮೂಲ್ಯ ಇಲ್ಲದ ಸಮಯದಲ್ಲಿ ಮನೆಯಿಂದ ಹೊರಗೆ ಕಳುಹಿಸುತ್ತಿದ್ದಾನೆ.

ವೈದೇಹಿ ಕಾಲಿಗೆ ಬಿದ್ದು ವೇದಾಂತ್ ಕಣ್ಣೀರು!
ವೇದಾಂತ್ ಈಗಲೂ ಸಹ ತುಂಬಾನೇ ಯೋಚನೆ ಮಾಡುತ್ತಿದ್ದಾನೆ. ನಾನು ವೈದೇಹಿ ಅಮ್ಮನನ್ನು ಮನೆಯಿಂದ ಹೊರಗೆ ಹೋಗಿ ಎಂದು ತಪ್ಪು ಮಾಡಿದೇನಾ ಎಂದು ಸಾವಿರ ಸಲ ಯೋಚನೆ ಮಾಡುತ್ತಿದ್ದಾನೆ. ಆದರೂ ಸಹ ನನಗೆ ಬೇರೆ ದಾರಿ ಇರಲಿಲ್ಲ ನನ್ನ ತಂದೆ ಈ ಮನೆಗೆ ಬರಬೇಕು ಎಂದರೆ ವೈದೇಹಿ ಅಮ್ಮ ಹೊರಗೆ ಹೋಗಬೇಕು ಎಂದು ಹೇಳಿದ್ದಾರೆ. ಅದಕ್ಕಾಗಿ ನಾನು ಹೀಗೇ ಮಾಡಿದ್ದೇನೆ ಎಂದು ತನಗೆ ತಾನೇ ಸಮಾಧಾನ ಮಾಡಿಕೊಳ್ಳುತ್ತಿದ್ದಾನೆ.
ಆದರೂ ಸಹ ಅವನಿಗೆ ಅಮ್ಮನ ಪ್ರೀತಿ ಕೊಟ್ಟ ವೈದೇಹಿಯನ್ನ ಮನೆಯಿಂದ ಹೊರಗೆ ಕಳುಹಿಸಲು ಸಾಧ್ಯವಾಗುತ್ತಿಲ್ಲ. ವೈದೇಹಿ ಬಂದ ತಕ್ಷಣ ವೈದೇಹಿ ಕಾಲಿಗೆ ಬಿದ್ದು ನಮಸ್ಕಾರವನ್ನು ಮಾಡಿಕೊಂಡಿದ್ದಾನೆ. ಅಮ್ಮ ದಯವಿಟ್ಟು ನನ್ನನ್ನು ಕ್ಷಮಿಸಿಬಿಡಿ ನನಗೆ ನಿಮ್ಮನ್ನ ಹೊರಗೆ ಕಳಿಸಿದ ಹೊರತು ಬೇರೆ ಯಾವುದೇ ಆಪ್ಷನ್ ಇಲ್ಲ. ಅದಕ್ಕಾಗಿ ನಿಮ್ಮನ್ನ ಹೊರಗೆ ಹೋಗಿ ಎನ್ನುತ್ತಿದ್ದೇನೆ . ನನಗೆ ನನ್ನ ತಂದೆ ಬೇಕಾಗಿದೆ ಎಂದು ಮನಸ್ಸಿನಲ್ಲಿ ಅಂದುಕೊಂಡಿದ್ದಾನೆ.
ಕಣ್ಣೀರು ಹಾಕಿದ ವೈದೇಹಿ, ಮತ್ತೆ ಯಾವತ್ತೂ ಬರಲ್ಲ ಎಂದಿದ್ಯಾಕೆ..!?
ವೈದೇಹಿ ತನ್ನ ಬಟ್ಟೆಗಳನ್ನೆಲ್ಲ ತೆಗೆದುಕೊಂಡು ಬಂದು ವೇದಾಂತ್ ಮುಂದೆ ನಿಂತಿದ್ದಾಳೆ. ವೇದಾಂತ್ ಯಾವುದೇ ಒಂದು ನಿರ್ಧಾರವನ್ನ ತೆಗೆದುಕೊಂಡರೆ ಅದರ ಹಿಂದೆ ಒಂದು ಸರಿಯಾದ ಉದ್ದೇಶವಿರುತ್ತದೆ ಎಂಬುವುದು ವೈದೇಹಿಯ ಅನಿಸಿಕೆಯಾಗಿದೆ. ಇದರಿಂದಾಗಿ ಮನೆಯಿಂದ ಹೋಗಲು ನಿರ್ಧಾರವನ್ನು ಮಾಡಿದ್ದಾಳೆ. ಮನೆಯಿಂದ ಕಣ್ಣೀರು ಹಾಕಿಕೊಂಡು ಹೋದರೆ ಮನೆಗೆ ಶ್ರೇಯಸ್ಸು ಅಲ್ಲವಂತೆ. ಈ ಮನೆ ನನಗೆ ಆಶ್ರಯವನ್ನ ಕೊಟ್ಟಿದೆ. ಹಾಗಾಗಿ ನಾನು ಖುಷಿಯಿಂದ ಹೋಗುತ್ತೇನೆ ಎಂದು ವೈದೇಹಿ ವೇದಾಂತ್ ಬಳಿ ಹೇಳಿದ್ದಾಳೆ.
ನನ್ನೊಳಗೆ ಅದೆಷ್ಟೋ ಸತ್ಯಗಳು ಅಡಗಿವೆ ಅದ್ಯಾವುದನ್ನು ಸಹ ಹೇಳದೆ ನಾನು ಈ ಮನೆಯಿಂದ ಹೊರಗೆ ಹೋಗುತ್ತಿದ್ದೇನೆ ಎಂದು ವೈದೇಹಿ ವೇದಾಂತ್ ಬಳಿಯಲ್ಲಿ ಹೇಳಿದ್ದಾಳೆ. ನಾನು ಹೋಗಿ ಬರ್ತೀನಿ ಎಂದು ಹೇಳಿ ಕಣ್ಣೀರು ಹಾಕಿದ್ದಾಳೆ. ತಪ್ಪು ತಿಳಿಯಬೇಡಿ ಹೋಗಿ ಬರ್ತೀನಿ ಎಂದು ಹೇಳೋದು ವಾಡಿಕೆ ಹಾಗಾಗಿ ಆ ರೀತಿ ಹೇಳಿದೆ. ನಾನೆಂದು ಸಹ ಈ ಮನೆಗೆ ಬರೋದಿಲ್ಲ ಎಂದು ವೈದೇಹಿ ಮನೆಯಲ್ಲೇ ಒಮ್ಮೆ ನೋಡಿ ನೋವಿನಿಂದ ಈ ಮಾತುಗಳನ್ನ ಹೇಳಿದ್ದಾಳೆ.


Click it and Unblock the Notifications











