ಅಗ್ನಿಯನ್ನು ವೈದೇಹಿ ಜೊತೆ ನೋಡಿ ಶಾಕ್ ಆದ ವೈಜಯಂತಿ
'ಗಟ್ಟಿಮೇಳ' ಧಾರಾವಾಹಿಯಲ್ಲಿ ವೈದೇಹಿ ಹೆಸರೇಳಿಕೊಂಡು ಚಂದ್ರಕಲಾ, ವೇದಾಂತ್ ಮನೆಯಲ್ಲಿ ನೆಲೆಸಿದ್ದಾಗಿದೆ. ಸುಹಾಸಿನಿಯಿಂದಾಗಿ ತನ್ನ ಅಸ್ತಿತ್ವವೇ ಇಲ್ಲದಂತಾಗಿದೆ. ನನ್ನ ಹೆಸರು ಹೇಳಿಕೊಂಡು ಬಂದಿರುವ ಹೆಂಗಸು ಯಾರು ಎಂದು ವೈಜಯಂತಿ ಯೋಚಿಸುತ್ತಿದ್ದಾಳೆ.
ವೈದೇಹಿ ಬಂದ ಮೇಲೆ ವೈಜಯಂತಿ ಸ್ವಲ್ಪ ಮೂಲೆ ಗುಂಪಾಗಿದ್ದಾಳೆ. ವೈಜಯಂತಿ ಒಬ್ಬಳೇ ಇದ್ದಾಗ ವೈದೇಹಿ ಕೊಂಚ ಜೋರು ಮಾಡುತ್ತಿದ್ದಾಳೆ. ಇದರಿಂದ ವೈಜಯಂತಿ ತನ್ನ ಮುಂದಿನ ಬದುಕು ಹೇಗೆ..? ಮಕ್ಕಳಿಗೆ ನಾನೇ ತಾಯಿ ಎಂಬುದು ಗೊತ್ತಾಗುತ್ತದೆಯೋ ಇಲ್ಲವೋ ಎಂದು ಯೋಚಿಸುತ್ತಿರುತ್ತಾಳೆ.
ಇನ್ನು ವೇದಾಂತ್ ಜೊತೆಗೆ ತೇಜಸ್ ಮತ್ತು ಅಗ್ನಿ ಕಡೆಯವರು ಫೈಟಿಂಗ್ ಮಾಡಿದ್ದಾರೆ. ವೇದಾಂತ್ ಎಲ್ಲರ ಜೊತೆಗೂ ಹೊಡೆದಾಡಿದ್ದಾನೆ. ಅಗ್ನಿ, ವೇದಾಂತ್ ಬಳಿ ಬಂದು ಈ ಜಾಗ ಸರಿಯಿಲ್ಲ. ಮೊದಲು ಇಲ್ಲಿಂದ ಹೊರಟು ಬಿಡು ಎಂದು ವಾರ್ನಿಂಗ್ ಕೊಟ್ಟಿದ್ದಾನೆ. ಆದರೆ ವೇದಾಂತ್‌ಗೆ ಅಗ್ನಿ ಬಗ್ಗೆ ಏನೂ ಗೊತ್ತಿರುವುದಿಲ್ಲ.

ಅಜ್ಜಿಗೆ ಮಂಪರು ಮಂಪರಾಗಿ ಕಣ್ಣು ಕಾಣುತ್ತಿದೆ
ವಿಜಯದಶಮಿ ಹಿನ್ನೆಲೆ ವೇದಾಂತ್ ಮನೆಯಲ್ಲಿ ಗೊಂಬೆಗಳಿಗೆ ಪೂಜೆ ಮಾಡಲು ಸಿದ್ಧತೆ ನಡೆದಿರುತ್ತದೆ. ಈ ಅಜ್ಜಿ, ವೈದೇಹಿ, ವೇದಾಂತ್, ಸುಹಾಸ್, ಅಮೂಲ್ಯ ಎಲ್ಲರೂ ಬಂದಿರುತ್ತಾರೆ. ಈ ವೇಳೆ ವೈಜಯಂತಿ ಪ್ರಸಾದವನ್ನು ಇಟ್ಟು ಹೊರಡುತ್ತಾಳೆ. ಆಗ ಸುಹಾಸ್ ಮತ್ತು ವೇದಾಂತ್ ಇಬ್ಬರೂ ಮನೆಯವರೆಲ್ಲಾ ಒಟ್ಟಿಗೆ ಪೂಜೆ ಮಾಡುವಾಗ ನೀವೂ ಇಲ್ಲೆ ಇರಬೇಕು ಎನ್ನುತ್ತಾನೆ. ಇನ್ನು ಅಂಬಾರಿ ಹೊತ್ತಿದ್ದ ಆನೆ ಗೊಂಬೆ ಸೊಟ್ಟಗೆ ಇಟ್ಟಿರುತ್ತಾರೆ. ಇದನ್ನು ಅಜ್ಜಿ ಕಂಡು ಸರಿ ಮಾಡುವಂತೆ ಹೇಳುತ್ತಾರೆ. ಆಗ ಎಲ್ಲರೂ ಅಜ್ಜಿಗೆ ಕಣ್ಣು ಕಾಣಿಸುತ್ತಿದೆಯಲ್ಲ ಎಂದು ಖುಷಿ ಪಡುತ್ತಾರೆ. ಮಂಪರು ಮಂಪರಾಗಿ ಕಾಣುತ್ತಿದೆ ಎಂದು ಅಜ್ಜಿ ಹೇಳುತ್ತಾರೆ. ಬಳಿಕ ವೇದಾಂತ್ ಇವತ್ತು ನಮಗೆ ನಿಜಕ್ಕೂ ದೊಡ್ಡ ಹಬ್ಬ, ಅಜ್ಜಿಗೆ ಕಣ್ಣು ಬಂದರೆ ಸಾಕು ಎಂದು ಖುಷಿ ಪಡುತ್ತಾರೆ.

ಜಾಹೀರಾತಿನಲ್ಲಿ ನಟಿಸಿದ ಪರಿಮಳ ಮಕ್ಕಳು
ಪರಿಮಳ ಮಕ್ಕಳೆಲ್ಲರೂ ಗೆಳತಿ ಎಂಬ ಆಪ್ ಬಗ್ಗೆ ಜಾಹೀರಾತನ್ನು ನೀಡಿದ್ದಾರೆ. ಇದರ ಶೂಟಿಂಗ್ ಅನ್ನು ವೇದಾಂತ್ ಮನೆಯಲ್ಲೇ ಮಾಡಲಾಗಿದೆ. ತುಂಬಾ ಸರ್ಕಸ್ ಹೊಡೆದು ಜಾಹೀರಾತು ಶೂಟ್ ಮಾಡಿದ್ದು, ಪ್ರಸಾರವಾಗುವುದು ಒಂದೇ ಬಾಕಿ ಇದೆ. ಇನ್ನು ಪರಿಮಳ ಮನೆಯಲ್ಲಿ ಕೂತು ತನ್ನ ಸ್ನೇಹಿತರು ಹಾಗೂ ಸಂಬಂಧಿಕರಿಗೆ ಈ ವಿಚಾರವನ್ನು ಫೋನ್ ಮಾಡಿ ಹೇಳುತ್ತಿದ್ದಾರೆ. ಎಲ್ಲರೂ ಜಾಹೀರಾತನ್ನು ತಪ್ಪದೇ ನೋಡಿ, ಅದರಲ್ಲಿ ನನ್ನ ಮಕ್ಕಳು ಬರುತ್ತಾರೆ ಎಂದು ಹೇಳಿದ್ದಾಳೆ. ಈ ಬಗ್ಗೆ ಪತಿ ಮಂಜು ಬಳಿಯೂ ಹೇಳಿಕೊಂಡು ಖುಷಿ ಪಟ್ಟಿದ್ದಾಳೆ.

ಅಗ್ನಿಯನ್ನು ನೋಡಿದ ವೈಜಯಂತಿ
ವೇದಾಂತ್ ಜೊತೆಗೆ ಗುದ್ದಾಡಿದ ತೇಜಸ್ ಕೈಗೆ ಏಟಾಗಿರುತ್ತದೆ. ಚಂದ್ರಕಲಾಳನ್ನು ನೋಡಲು ತೇಜಸ್ ಹಾಗೂ ಅಗ್ನಿ ಬಂದಿರುತ್ತಾರೆ. ವೇದಾಂತ್ ಮನೆಯಲ್ಲಿ ಎಲ್ಲರೂ ಮಲಗಿದ ಮೇಲೆ ಚಂದ್ರಕಲಾ ಮನೆಯಿಂದ ಮೆಲ್ಲಗೆ ಹೊರಗೆ ಹೋಗುತ್ತಾಳೆ. ಅಗ್ನಿ ಮತ್ತು ತೇಜಸ್ ಜೊತೆಗೆ ಮಾತನಾಡುತ್ತಿರುತ್ತಾಳೆ. ಇದೇ ವೇಳೆಗೆ ವೈಜಯಂತಿ ಬಾಟಲಿಗಳಿಗೆ ನೀರು ತುಂಬುತ್ತಿರುತ್ತಾಳೆ. ಒಬ್ಬಳೇ ಮಾತನಾಡಿಕೊಂಡಿರುವಾಗ ಆಚೆಯಿಂದ ಶಬ್ಧವಾದಂತಾಗಿ ಹೊರಗೆ ಹೋಗಿ ನೋಡುತ್ತಾಳೆ. ಆಗ ಅಲ್ಲಿ ವೈದೇಹಿ ಯಾರ ಬಳಿಯೋ ಮಾತನಾಡುತ್ತಿರುವುದನ್ನು ಹಾಗೆ ನಿಂತು ಗಮನಿಸುತ್ತಾಳೆ. ಅದು ತೇಜಸ್ ಮತ್ತು ಅಗ್ನಿ ಎಂದು ಗೊತ್ತಾಗುತ್ತದೆ. ಅಗ್ನಿಯನ್ನು ನೋಡುತ್ತಿದ್ದಂತೆ ಹೆದರಿಕೊಳ್ಳುವ ವೈಜಯಂತಿ ಗಾಬರಿ ಆಗಿ ಮನೆಯೊಳಗೆ ಬಂದು ಬಿಡುತ್ತಾಳೆ. ಇದೇ ವೇಳೆಗೆ ವೇದಾಂತ್ ಏನು ಎಂದು ಕೇಳುತ್ತಾನೆ. ಆದರೆ ವೈಜಯಂತಿ ಮಾತು ಅರ್ಥವಾಗುವುದಿಲ್ಲ.

ಸುಹಾಸಿನಿ ಬಗ್ಗೆ ವೇದಾಂತ್‌ಗೆ ಗೊತ್ತಾಯ್ತಾ..?
ಇನ್ನು ವಿಕ್ರಾಂತ್ ಹಾಗೂ ವೇದಾಂತ್ ಮಾತನಾಡುವಾಗ, ಅಧಿತಿ ಎಂಗೇಜ್ಮೆಂಟ್ ಕ್ಯಾನ್ಸಲ್ ಆದ ವಿಚಾರ ಬರುತ್ತದೆ. ಆಗ ವಿಕ್ಕಿ ನಾನು ಅವತ್ತು ನಿನಗೆ ಫೋನ್ ಮಾಡಿ ಹೇಳಿದೆ. ಅದಕ್ಕೆ ನೀನು ಎಂಗೇಜ್ಮೆಂಟ್ ಕ್ಯಾನ್ಸಲ್ ಮಾಡಿದ್ದು ಅಲ್ವೇ ಎಂದು ಹೇಳುತ್ತಾನೆ. ಆಗ ವೇದಾಂತ್ ನಾನು ಫೋನ್ ರಿಸೀವ್ ಮಾಡಿಲ್ಲ. ಕಾಲ್ ರಿಸೀವ್ ಮಾಡಿದ್ಯಾರು ಎಂದು ಯೋಚಿಸುತ್ತಿದ್ದು, ಸುಹಾಸಿನಿ ಸಿಕ್ಕಿ ಬೀಳುತ್ತಾಳಾ ಕಾದು ನೋಡಬೇಕಿದೆ.


Click it and Unblock the Notifications











