Gattimela: ಹುಡುಗಿಯರ ಮೆಚ್ಚಿನ ನಟ ರಂಜನ್ ಸನತ್, ಇವರ ಹಿನ್ನೆಲೆಯೇನು?

By ಪೂರ್ವ

'ಗಟ್ಟಿ ಮೇಳ' ಖ್ಯಾತಿಯ ಧ್ರುವ ಇವರ ನಿಜವಾದ ಹೆಸರು ರಂಜನ್ ಸನತ್. ಹುಟ್ಟಿ ಬೆಳೆದಿದ್ದು ಮಂಡ್ಯದಲ್ಲಿಯೇ, ಇವರಿಗೆ ನಟನಾಗಬೇಕು ಎಂಬ ಬಯಕೆ ಇತ್ತಂತೆ. ನೋಡಲು ಕೂಡ ಹ್ಯಾಂಡ್ಸಮ್ ಆಗಿರುವ ರಂಜನ್ ಅವರು ಚಿತ್ರರಂಗಕ್ಕೆ ಕಾಲಿಡಲು ಸಾಕಷ್ಟು ತಯಾರಿಗಳನ್ನು ಮಾಡಿಕೊಂಡಿದ್ದಾರೆ. 2017ರಲ್ಲಿ ನಾಗಭರಣ ಅವರು ನಡೆಸುತ್ತಿದ್ದ ಅಭಿನಯ ತರಬೇತಿ ಶಾಲೆಯಲ್ಲಿ ನಟನೆಯನ್ನು ಅಭ್ಯಾಸ ಮಾಡಿದ್ದಾರೆ. ನಟನೆಯನ್ನು ಕಲಿಯುತ್ತಿದ್ದ ಹಾಗೆಯೇ ಚಿಕ್ಕ ಪುಟ್ಟ ರೋಲ್‌ಗಳು ಇವರಿಗೆ ಸಿಗಲು ಶುರುವಾಗಿವೆ. ಇದಾದ ಬಳಿಕ ಇಷ್ಟ ದೇವತೆ ಸೀರಿಯಲ್ ನಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲು ಅವಕಾಶ ದೊರೆತಿದೆ.

ರಂಜನ್‌, 'ಗಟ್ಟಿಮೇಳ' ಧಾರವಾಹಿಯಲ್ಲಿ ಉತ್ತಮ ಅಭಿನಯ ನೀಡಿದ್ದಾರೆ. ಈ ಧಾರವಾಹಿಯಿಂದ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಬಳಿಕ ಗಟ್ಟಿಮೇಳ ಧಾರವಾಹಿಯಲ್ಲಿ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ. ಇವರ ಲೈಫ್‌ಗೆ ಟರ್ನ್ ಸಿಕ್ಕಿದ್ದು ಗಟ್ಟಿಮೇಳ ಧಾರವಾಹಿಯಿಂದಲೇ ಎನ್ನಬಹುದು.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಖ್ಯಾತ ಧಾರಾವಾಹಿ 'ಗಟ್ಟಿಮೇಳ' ಮೊದಲ ದಿನದಂದಲೂ ಟಿಆರ್‌ಪಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಧಾರಾವಾಹಿಯಲ್ಲಿ ಎಲ್ಲರ ಗಮನ ಸೆಳೆದ ಪಾತ್ರವೇ ಧ್ರುವ ಅಲಿಯಾಸ್ ರಂಜನ್.

ಜೂನಿಯರ್ ಆರ್ಟಿಸ್ಟ್ ಆಗಿ ಕೆಲಸ

ಜೂನಿಯರ್ ಆರ್ಟಿಸ್ಟ್ ಆಗಿ ಕೆಲಸ

2018ರಲ್ಲಿ ಅನೇಕ ಸಿನಿಮಾಗಳಲ್ಲಿ ಜೂನಿಯರ್ ಆರ್ಟಿಸ್ಟ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಧ್ರುವ ಪಾತ್ರದಿಂದಾಗಿ ರಂಜನ್‌ಗೆ ಈಗಾಗಲೇ ಹಲವು ಸಿನಿಮಾ ಆಫರ್‌ಗಳು ಬಂದಿವೆ. ಸಿನಿಮಾ ಇಂಡಸ್ಟ್ರಿಯಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಅಭಿನಯದಿಂದ ಪ್ರೇರಣೆ ಪಡೆದಿದ್ದಾರೆ ಧ್ರುವ. ಈ ಹಿಂದೆ ಇಷ್ಟದೇವತೆ ಧಾರಾವಾಹಿಯಲ್ಲಿ ಲೀಡ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ವಸಿಷ್ಠ ದೇಶಾದ್ರಿ ಪಾತ್ರವೂ ಹೆಚ್ಚಿನ ಫೇಮ್ ತಂದುಕೊಟ್ಟಿತ್ತು ಈ ನಟನಿಗೆ. ಗಟ್ಟಿಮೇಳ ಧಾರಾವಾಹಿ ವೃತ್ತಿ ಜೀವನದಲ್ಲಿ ಬಿಗ್ ಬ್ರೇಕ್ ನೀಡಿದಂತಾಗಿದೆ.

ರಂಜನ್ ಸನತ್ ಇನ್‌ಸ್ಟಾಗ್ರಾಂನಲ್ಲಿ ಫೋಟೋಗಳು ವೈರಲ್

ರಂಜನ್ ಸನತ್ ಇನ್‌ಸ್ಟಾಗ್ರಾಂನಲ್ಲಿ ಫೋಟೋಗಳು ವೈರಲ್

ರಂಜನ್ ಸನತ್ ಇನ್‌ಸ್ಟಾಗ್ರಾಂನಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ರಂಜನ್ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಮನೆ ಮಂದಿಗೆಲ್ಲಾ ಇಷ್ಟ ಆಗಬೇಕು ಎನ್ನುವ ದೃಷ್ಟಿಯಲ್ಲಿ ಹಾಗೆಯೆ ಒಳ್ಳೆಯ ಆಕ್ಟರ್ ಆಗಬೇಕು ಎಂಬ ಹಂಬಲದಿಂದ ಬೆಳೆದ ಹಳ್ಳಿ ಹುಡುಗ ರಂಜನ್ ಸನತ್. ನಾಚಿಗೆ ಸ್ವಭಾವದವರಾದ ರಂಜನ್ ಆಡಿಷನ್‌ಗಳನ್ನು ಎದುರಿಸಲು ಸ್ವಲ್ಪ ಕಷ್ಟ ಪಡಬೇಕಾಯಿತಂತೆ.

ಗಟ್ಟಿಮೇಳ ಧಾರವಾಹಿ, ಧ್ರುವ ಅವರಿಗೆ ಒಂದೊಳ್ಳೆ ವೇದಿಕೆ

ಗಟ್ಟಿಮೇಳ ಧಾರವಾಹಿ, ಧ್ರುವ ಅವರಿಗೆ ಒಂದೊಳ್ಳೆ ವೇದಿಕೆ

'ಗಟ್ಟಿಮೇಳ' ಧಾರವಾಹಿ ಧ್ರುವ ಅವರಿಗೆ ಒಂದೊಳ್ಳೆ ವೇದಿಕೆಯ ಹಾಗೆ ಧ್ರುವ ಅವರಿಗೆ ಒದಗಿಬಂದಿತ್ತು. ಇದೀಗ ಧ್ರುವ ಅವರಿಗೆ ಹುಡುಗಿಯರು ಫಿಧಾ ಆಗಿದ್ದಾರೆ. ಧ್ರುವ ಅವರ ಹೈಟ್ ಪರ್ಸನಾಲಿಟಿಗೆ ವಾರೆ ವಾ.. ಅಂತಿದ್ದಾರೆ. ಧ್ರುವ ಅಪ್ಪಟ ಪುನಿತ್ ರಾಜ್‌ಕುಮಾರ್ ಅಭಿಮಾನಿಯಾಗಿದ್ದಾರೆ. ಧ್ರುವ ಅವರಿಗೆ ಕಾಲೇಜ್ ವಿದ್ಯಾಭ್ಯಾಸ ಮುಗಿದ ಬಳಿಕ ಕ್ರಶ್ ಅನ್ನೋ ಪದದ ಅರ್ಥ ಗೊತ್ತಾಗಿದ್ದಂತೆ.

ಅವಕಾಶಗಳು ಗಟ್ಟಿಮೇಳ ಧ್ರುವನಿಗೆ ಒದಗಿ ಬರಲಿ

ಅವಕಾಶಗಳು ಗಟ್ಟಿಮೇಳ ಧ್ರುವನಿಗೆ ಒದಗಿ ಬರಲಿ

ವೇದಾಂತ್‌ನ್ನು ನೋಡಿದಾಗ ತುಂಬಾ ಆಟಿಟ್ಯುಡ್ ಇರುವ ವ್ಯಕ್ತಿ ಎಂದು ಅಂದುಕೊಂಡಿದ್ರಂತೆ ಧ್ರುವ. ಆದರೆ ವೇದಾಂತ್ ಬಹಳ ಜೆನ್ಯುನ್ ಆದ ವ್ಯಕ್ತಿಯಂತೆ, ತುಂಬಾ ಫ್ರೆಂಡ್ಲಿ ಆಗಿರುತ್ತಾರೆ, ಸೆಟ್‌ಲ್ಲಿ ಹೇಗಿರಬೇಕು ಹಾಗೆಯೇ ಇರುತ್ತಾರಂತೆ. ಹೊರಗಡೆ ಉತ್ತಮ ವ್ಯಕ್ತಿ ಎಂದು ಕಾರ್ಯಕ್ರಮವೊಂದರಲ್ಲಿ ರಂಜನ್ ಹೇಳೀಕೊಂಡಿದ್ದಾರೆ. ಮುಂಚೆ ಎಲ್ಲಿ ಹೋದರು ತಾನಾಯಿತು ಎಂದು ಇರುತ್ತಿದ್ದ ಧ್ರುವ ಇದೀಗ ಹತ್ತು ಜನರ ಎದುರಿಗೆ ಮಾತನಾಡುತ್ತಿದ್ದಾರೆ ಎಂದರೆ ಅದಕ್ಕೆ ಅವರು ಸೇರಿದ ಅಭಿನಯದ ಇನ್ಸಿಟ್ಯೂಟೆ ಕಾರಣವಂತೆ. ಇನ್ನಾದರೂ ಉತ್ತಮ ಅವಕಾಶಗಳು ಗಟ್ಟಿಮೇಳ ಧ್ರುವನಿಗೆ ಒದಗಿ ಬರಲಿ ಎನ್ನುವುದೇ ಆಶಯ.

More from Filmibeat

English summary
Gattimela serial Ranjan Sanath real life. Hear is more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X