'ಗಟ್ಟಿಮೇಳ' ನಟ ರಕ್ಷ್ ಹಾಕಿದ ಒಂದೇ ಒಂದು ಫೋಟೊಗೆ ಮಹಿಳಾ ಮಣಿಯರ ತಲೆ ಗಿರಗಿರ !

By ಎಸ್ ಸುಮಂತ್

ಸದ್ಯ 'ಗಟ್ಟಿಮೇಳ' ಧಾರಾವಾಹಿ ಎಲ್ಲರಿಗೂ ಅಚ್ಚುಮೆಚ್ಚಾಗಿ ಉಳಿದೆ. 'ಗಟ್ಟಿಮೇಳ' ಶುರುವಾಗಿ ವರ್ಷಗಳೇ ಕಳೆದರು ಆ ಧಾರಾವಾಹಿಗಿರುವ ಫ್ಯಾನ್ ಫಾಲೋವರ್ಸ್ ಕಡಿಮೆ ಆಗಿಯೇ ಇಲ್ಲ. ಹಾಗೇ ಆ ಧಾರಾವಾಹಿ ಪ್ರಿಯರು ಒಂದೇ ಒಂದು ದಿನವೂ ಬಿಡದಂತೆ ನೋಡುತ್ತಾರೆ. ಈಗಾಗಲೇ ವಸಿಷ್ಠ ಮನೆಯಲ್ಲಿ ಇಬ್ಬರು ಸೊಸೆಯಂದಿರಿದ್ದಾರೆ. ಆದರೂ ವೇದಾಂತ್ ಮತ್ತು ಅಮೂಲ್ಯ ಬಗೆಗಿನ ಕ್ರೇಜ್ ಇಂದಿಗೂ ಕಡಿಮೆಯಾಗಿಲ್ಲ.

ವೇದಾಂತ್ ಮತ್ತು ಅಮೂಲ್ಯ ಮೊದ ಮೊದಲಿಗೆ ಜಗಳವಾಡುತ್ತಿದ್ದವರು. ಜಗಳದಿಂದ ಶುರುವಾದ ಕ್ರೇಜ್ ಅವರು ಮದುವೆಯಾದರೂ ಮುಂದುವರೆದಿದೆ. ವೇದಾಂತ್ ಮತ್ತು ಅಮೂಲ್ಯ ಹೆಸರಿನಲ್ಲಿ ಅದೆಷ್ಟು ಫ್ಯಾನ್ ಪೇಜ್‌ಗಳಿವೆಯೋ ಲೆಕ್ಕಕ್ಕೆವೇ ಇಲ್ಲ. ಅದರಲ್ಲೂ ವೇದಾಂತ್ ಅಲಿಯಾಸ್ ರಕ್ಷ್‌ಗೆ ಮಹಿಳಾ ಮಣಿಗಳೇ ಹೆಚ್ಚು ಅಭಿಮಾನಿಗಳಾಗಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ರಕ್ಷ್ ಫಾಲೋವರ್ಸ್

ಸೋಶಿಯಲ್ ಮೀಡಿಯಾದಲ್ಲಿ ರಕ್ಷ್ ಫಾಲೋವರ್ಸ್

ರಕ್ಷ್ 'ಗಟ್ಟಿಮೇಳ' ಧಾರಾವಾಹಿಗೆ ಬರುವುದಕ್ಕೂ ಮುನ್ನ 'ಪುಟ್ಟಗೌರಿ ಮದುವೆ' ಧಾರಾವಾಹಿಯಲ್ಲಿ ನಟಿಸಿದವರು. ಆ ಬಳಿಕ ಸಿನಿಮಾ ಅಂತ ಬ್ಯುಸಿ ಆಗಿ ಹೋಗಿದ್ದರು. 'ಪುಟ್ಟಗೌರಿ ಮದುವೆ'ಯಲ್ಲೂ ರಕ್ಷ್‌ಗೆ ಸಿಕ್ಕ ಗೌರವ, ಖ್ಯಾತಿ ಅಷ್ಟಿಷ್ಟಲ್ಲ. ಇದೀಗ ಮತ್ತೆ ಧಾರಾವಾಹಿಗೆ ಬಂದು ವರ್ಷಗಳೇ ಕಳೆದರು ಅವರನ್ನು ಇಷ್ಟಪಡುವವರ ಸಂಖ್ಯೆ ಏನು ಕಡಿಮೆಯಾಗಿಲ್ಲ. ಅವರನ್ನು ಅವರ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಫಾಲೋ ಮಾಡುತ್ತಾರೆ. ಹೀಗಾಗಿಯೇ ರಕ್ಷ್‌ಗೆ 250 ಸಾವಿರ ಫಾಲೋವರ್‌ಗಳಿದ್ದಾರೆ. ಈ ಮೂಲಕ ಅವರ ಫೋಟೊ, ಅವರ ಲೈಫ್ ಸ್ಟೈಲ್ ಬಗ್ಗೆ ಫ್ಯಾನ್ಸ್ ತಿಳಿದುಕೊಳ್ಳುತ್ತಿರುತ್ತಾರೆ.

ವೀಕೆಂಡ್‌ನಲ್ಲಿ ಎಜೆ ಜೊತೆ ಮಸ್ತಿ

ವೀಕೆಂಡ್‌ನಲ್ಲಿ ಎಜೆ ಜೊತೆ ಮಸ್ತಿ


ಒಂದೇ ವಾಹಿನಿಯಲ್ಲಿ ಧಾರಾವಾಹಿಗಳು ಬರುತ್ತಿದ್ದಾಗ, ಆ ಧಾರಾವಾಹಿ ನಟ - ನಟಿಯರು ಒಂದುಗೂಡುವುದು ಸಾಮಾನ್ಯ. ಒಮ್ಮೊಮ್ಮೆ 'ಗಟ್ಟಿಮೇಳ' ಧಾರಾವಾಹಿಯಲ್ಲಿ ಏನಾದರೂ ಸ್ಪೆಷಲ್ ಮೂಮೆಂಟ್ ಇದ್ದಾಗ ಅಥವಾ ಸಮಸ್ಯೆಯಲ್ಲಿ ಸಿಲುಕಿದಾಗ 'ಪಾರು' ಧಾರಾವಾಹಿಯ ನಟ ಆದಿತ್ಯ ಸಹಾಯಕ್ಕೆ ಬಂದಿದ್ದನಲ್ಲ ಆ ರೀತಿ, ಧಾರಾವಾಹಿಗಳ ನಟರು ಒಟ್ಟುಗೂಡುವುದು ಸಾಮಾನ್ಯ. ಬಾಂಧವ್ಯ ಹೆಚ್ಚು ಬೆಳೆದರೆ ವೀಕೆಂಡ್ ಪಾರ್ಟಿಗೂ ಜೊತೆಯಾಗುತ್ತಾರೆ. ಇದೀಗ ರಕ್ಷ್ ಹಂಚಿಕೊಂಡಿರುವ ಫೋಟೊದಲ್ಲಿ ಅಂತದ್ದೊಂದು ಸ್ನೇಹ ಎದ್ದು ಕಾಣುತ್ತಿದೆ. ಎಜೆ ಮತ್ತು ವೇದಾಂತ್ ಔಟಿಂಗ್ ಹೋಗಿದ್ದು, ಸ್ವಿಮ್ಮಿಂಗ್ ಪೂಲ್‌ನಲ್ಲಿ ಬಿಯರ್ ಮಗ್ ಹಿಡಿದುಕೊಂಡಿರುವ ಫೋಟೊ ಹಂಚಿಕೊಂಡಿದ್ದಾರೆ‌

ಮಹಿಳೆಯರ ಮನೆ ಸೆಳೆದ ಫೋಟೊ

ಮಹಿಳೆಯರ ಮನೆ ಸೆಳೆದ ಫೋಟೊ

ಮೊದಲೇ ಹೇಳಿದ ಹಾಗೇ ರಕ್ಷ್ ಗೆ ಅಭಿಮಾನಿಗಳ ಸಂಖ್ಯೆ ಏನು ಕಡಿಮೆ ಇಲ್ಲ. ಅದರಲ್ಲೂ ಮಹಿಳಾ ಮಣಿಗಳ ಸಂಖ್ಯೆ ಎಂದೇ ಹೇಳಬಹುದು. ರಕ್ಷ್ ಹಾಕಿರುವ ಫೋಟೊ ನೋಡಿ ಕಳೆದೇ ಹೋಗಿದ್ದಾರೆ. ಅದಕ್ಕೆ ಸಿಕ್ಕಾಪಟ್ಟೆ ಕಮೆಂಟ್ಸ್ ಹಾಕುತ್ತಿದ್ದಾರೆ. ಏನ್ ಬಾಸು ನಮ್ ಕಥೆ. ನೀವು ಈ ರೀತಿ ಪೋಸ್ಟ್ ಹಾಕಿದ್ರೆ. ಹೆಣ್ಣು ಮಕ್ಕಳು ಫಿದಾ ಆಗ್ತಾರೆ ಎಂದು ಹಲವರು ಕಮೆಂಟ್ ಹಾಕಿದ್ದಾರೆ. ಇನ್ನು ಹಲವರು ಹಾರ್ಟ್ ಸಿಂಬಲ್ ಕೊಟ್ಟು ಖುಷಿ ವ್ಯಕ್ತಪಡಿಸಿದ್ದಾರೆ.

ವೇದಾಂತ್ ಆಗಿ ಮನಸೆಳೆದ ರಕ್ಷ್

ಹೆಣ್ಣು ಮಕ್ಕಳೆಂದರೆ ದೂರ ಓಡುತ್ತಿದ್ದ ವೇದಾಂತ್ ಸದ್ಯ ಅಮೂಲ್ಯಾಳನ್ನೇ ಮದುವೆಯಾಗಿದ್ದಾನೆ. ಇಂದಿಗೂ ಈ ಜೋಡಿಯ ಕಿತ್ತಾಟ ನೋಡುವುದಕ್ಕೆ ಫ್ಯಾನ್ಸ್ ತುದಿಗಾಲಿನಲ್ಲಿ ನಿಂತಿರುತ್ತಾರೆ. ಅಮೂಲ್ಯ ಮತ್ತು ವೇದಾಂತ್ ಜೀವನದಲ್ಲಿ ಏನಿರಬೇಕು ಎಂದು ಪ್ರಶ್ನೆ ಕೇಳಿದರೆ ಅವರಿಬ್ಬರು ಯಾವಾಗಲೂ ಕಿತ್ತಾಡುತ್ತಾ, ತುಂಟಾಟ ಮಾಡುತ್ತಾ ಇರಬೇಕು ಆಗಲೇ ನೋಡುವುದಕ್ಕೆ ಚೆಂದ ಎನ್ನುತ್ತಾರೆ. ಸದ್ಯ ಫ್ಯಾಮಿಲಿ ಮ್ಯಾನ್ ಆಗಿ, ಸಕ್ಸಸ್ ಫುಲ್ ಬಿಸಿನೆಸ್ ಮ್ಯಾನ್ ಆಗಿ ವೇದಾಂತ್ ಹಲವರಿಗೆ ಸ್ಪೂರ್ತಿಯ ಸೆಲೆಯಾಗಿದ್ದಾರೆ.

More from Filmibeat

English summary
Gattimela Serial Actor Raskh Photo Story Grabs Womens Eyes. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X