Gattimela Serial: ವಿಕ್ರಾಂತ್ ಸಾವಿನ ಹಿಂದೆ ಆರತಿ.. ಪ್ರೇಕ್ಷಕರ ಅನುಮಾನಕ್ಕೆ ಕಾರಣವಾಯ್ತು ಈ ವಿಡಿಯೋ..!

By ಎಸ್ ಸುಮಂತ್

ಕಲೆ ಯಾರ ಸ್ವತ್ತು ಅಲ್ಲ ಅನ್ನೋ ಮಾತಿದೆ. ಹಾಗೇ ಯಾರಲ್ಲಿ ಯಾವ ರೀತಿಯ ಕಲೆ ಅಡಗಿರುತ್ತೆ ಎನ್ನುವುದೇ ಆರಂಭದಲ್ಲಿ ಗೊತ್ತಾಗುವುದಿಲ್ಲ. ಕೆಲವೊಂದು ವ್ಯಕ್ತಿಗಳನ್ನು ನೋಡಿದಾಗಲೂ ಹಾಗೆ ಅನ್ನಿಸುವುದೇ ಇಲ್ಲ. ನಮ್ಮ ಮುಂದೆ ಬೇರೆಯದ್ದೇ ವ್ಯಕ್ತಿತ್ವ ಕಂಡರೆ, ಅವರೊಳಗೆ ಇನ್ನೊಂದು ವ್ಯಕ್ತಿತ್ವ ಅಡಗಿರುತ್ತೆ. ಏನು ಕಲೆ ಬಗ್ಹೆ ಇಷ್ಟೆಲ್ಲ ಪೀಠಿಕೆ ಅಂತ ಯೋಚನೆ ಬರುವುದು ಸಹಜ. ಆದರೆ ಆ ಒಂದು ವಿಡಿಯೋ ನೋಡಿದ ನೆಟ್ಟಿಗರೇ ವಾವ್ ಎನ್ನುತ್ತಿದ್ದಾರೆ.

'ಗಟ್ಟಿಮೇಳ' ಧಾರಾವಾಹಿ ಆರಂಭವಾಗಿ ಎಷ್ಟೋ ವರ್ಷಗಳೆ ಕಳೆದಿದೆ. ಇಂದಿಗೂ ಪ್ರೇಕ್ಷಕರ ಮನಸ್ಸಲ್ಲಿ ಸ್ಥಾನ ಮಾತ್ರ ಮಿಸ್ ಮಾಡಿಕೊಂಡಿಲ್ಲ. ವರ್ಷಗಳು ಕಳೆದಂತೆ ಧಾರಾವಾಹಿಯಲ್ಲಿ ಟ್ವಿಸ್ಟ್ ಅಂಡ್ ಟರ್ನಿಂಗ್ ಪಾಯಿಂಟ್‌ಗಳು ಬೇರೆ ರೀತಿಯಾಗಿ ಜನರನ್ನು ಹಿಡಿದಿಟ್ಟುಕೊಂಡಿದೆ. ಅದರಲ್ಲಿ ಅಗ್ನಿ ಕೂಡ ಒಬ್ಬರು.

gattimela-serial-actors-arathi-agni-dance

ಆರತಿ‌ ಜೊತೆಗೆ ಹೆಜ್ಜೆ ಹಾಕಿದ ಅಗ್ನಿ

'ಗಟ್ಟಿಮೇಳ' ಧಾರಾವಾಹಿಯಲ್ಲಿ ವಿಕ್ರಾಂತ್ ಮತ್ತು ಆರತಿ‌ ಜೋಡಿಯೂ ಎಲ್ಲರ ಗಮನ ಸೆಳೆದಿದೆ. ಸದ್ಯಕ್ಕೆ ವಿಕ್ರಾಂತ್ ಪಾತ್ರ ಸತ್ತು ಹೋಗಿದೆ. ಇದು ತೆರೆ ಮೇಲಿನ ಕಥೆ. ಆದರೆ ಆರತಿ ತೆರೆ ಹಿಂದೆ ತುಂಬಾ ಆಕ್ಟೀವ್ ಆಗಿರುತ್ತಾರೆ. ಸೆಟ್ ನಲ್ಲೂ ಆಗಾಗ ರೀಲ್ಸ್ ಅನ್ನು ಮಾಡುತ್ತಿರುತ್ತಾರೆ. ಆದರೆ, ಆರತಿ ಅವರ ರೀಲ್ಸ್ ನಲ್ಲಿ ಒಂದು ರೀಲ್ಸ್ ಹಲ್‌ಚಲ್ ಕ್ರಿಯೇಟ್ ಮಾಡಿದೆ. ಅದು ಡ್ಯಾನ್ಸ್ ವಿಡಿಯೋ. ಅಗ್ನಿ ಜೊತೆಗೆ ಆ ಡ್ಯಾನ್ಸ್ ಮಾಡಿರುವುದೇ ಟಾಕ್ ಕ್ರಿಯೇಟ್ ಆಗುವುದಕ್ಕೆ ಕಾರಣವಾಗಿದೆ.

ಅಗ್ನಿಯ ಡ್ಯಾನ್ಸ್ ಸ್ಟೈಲ್‌ಗೆ ಮಂದಿ ಫಿದಾ

'ಗಟ್ಟಿಮೇಳ' ಧಾರಾವಾಹಿಯಲ್ಲಿ ಅಗ್ನಿಯಿಂದಾನೇ ಎಲ್ಲಾ ಕೆಟ್ಟದ್ದು ಆಗುತ್ತಿರುವುದು. ಖಡಕ್ ವಿಲನ್. ಆಕ್ರೋಶದ ಮುಖ, ನಗುವನ್ನಂತು ಒಮ್ಮೆಯೂ ನೋಡಿರುವುದಕ್ಕೆ ಸಾಧ್ಯವೇ ಇಲ್ಲ. ಆದರೆ, ಅಷ್ಟು ರಗಡ್ ವ್ಯಕ್ತಿಯ ಡ್ಯಾನ್ಸ್ ಅದೆಷ್ಟು ಕ್ಯೂಟ್ ಗೊತ್ತಾ. ಒಮ್ಮೆ ಈ ಡ್ಯಾನ್ಸ್ ನೋಡಿದವರಿಗೆ ಮತ್ತೆ ಮತ್ತೆ ನೋಡಬೇಕು ಎನಿಸದೆ ಇರುವುದಕ್ಕೆ ಸಾಧ್ಯವೇ ಇಲ್ಲ. ಆರತಿಗಿಂತ ಚೆಂದವಾಗಿ ಅಗ್ನಿ ಸ್ಟೆಪ್ ಹಾಕಿದ್ದಾರೆ. ಜೊತೆ ಆ ನಗು ಮುಖದಲ್ಲಂತೂ ಹೀರೋ ಥರ ಕಾಣುತ್ತಿದ್ದಾರೆ. ಆದರೆ ವಿಲನ್ ಆಗಿ ಮಾಡಿಟ್ಟಿದ್ದಾರೆ.

ಆರತಿ ಮೇಲೆಯೇ ಅನುಮಾನ ಪಟ್ಟ ನೆಟ್ಟಿಗರು

ಅಗ್ನಿಯ ಡ್ಯಾನ್ಸ್ ಗಂತು ಜನ ಫುಲ್ ಫಿದಾ ಆಗಿದ್ದಾರೆ. ಎಷ್ಟು ವಿಭಿನ್ನವಾಗಿ ಕಮೆಂಟ್ಸ್ ಹಾಕಿದ್ದಾರೆ ಗೊತ್ತ. 'ಬ್ರೇಕಿಂಗ್ ನ್ಯೂಸ್. ವಿಕ್ರಾಂತ್ ಕೊಲೆ ಹಿಂದೆ ಇದೆಯಾ ಆರತಿ ಕೈವಾಡ..? ಅಗ್ನಿ ಜೊತೆಗೆ ಆರತಿ ಶಾಮೀಲು, ಅಗ್ನಿ ಡ್ಯಾನ್ಸ್ ಮಾಡಿದ್ದು ನೋಡಿ ನಾನಂತು ಶಾಕ್ ಆದೆ, ಗಂಡನ ಕೊಲೆಗಾರನ ಜೊತೆಗೆ ಡ್ಯಾನ್ಸ್ ಮಾಡುತ್ತಿರುವ ಆರತಿ' ಅಬ್ಬಬ್ಬಾ ಕಮೆಂಟ್‌ಗಳೇ ಒಂದಷ್ಡು ನಗು ತರಿಸುತ್ತದೆ.

ಅಗ್ನಿಯ ಖಡಕ್ ಲುಕ್ ಇಲ್ಲಿ ಸಾಫ್ಟ್

ವಸಿಷ್ಠ ಫ್ಯಾಮಿಲಿಗೆ ಪಕ್ಕ ವೈರಿ ಅಂದ್ರೆ ಅದು ಅಗ್ನಿ. ಸಂಸಾರವನ್ನೇ ಸರ್ವನಾಶ ಮಾಡುವುದಕ್ಕೆ ಹೊರಟಿದ್ದ. ಆದರೆ, ಈಗ ಅಪ್ಪ ಕಣ್ಣ ಮುಂದೆ ಇದ್ದಾರೆ. ಅಮ್ಮ ಇನ್ನೇನು ಗೊತ್ತಾಗುವ ಸಮಯ. ತಮ್ಮನನ್ನು ಕೊಂದೇ ಬಿಟ್ಟಿದ್ದಾನೆ. ಈಗ ಅಗ್ನಿ ತನ್ನ ತಮ್ಮ ತೇಜಸ್ ಹುಡುಕಾಟದಲ್ಲಿದ್ದಾನೆ. ಮಂಜುನಾಥ್ ಮನೆಗೂ ಹೋಗಿ ಸತ್ಯ ತಿಳಿಯಲು ಯತ್ನಿಸಿದ್ದಾನೆ. ಇದೇ ಸಮಯದಲ್ಲಿಯೇ ಆ ಸುಂದರ ಡ್ಯಾನ್ಸ್‌ನ ವಿಡಿಯೋ ಮಾಡಲಾಗಿದೆ.

More from Filmibeat

English summary
Gattimela serial actors Arathi and Agni dance video goes viral on social media
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X