ಮತ್ತೆ SDM ಕಾಲೇಜು ವಿದ್ಯಾರ್ಥಿಯಾದ ಅನ್ವಿತಾ ಸಾಗರ್: ಕಾಲೇಜು ದಿನಗಳ ಮೆಲುಕು!

By ಎಸ್ ಸುಮಂತ್

ಸದ್ಯ 'ಗಟ್ಟಿಮೇಳ' ಧಾರಾವಾಹಿಯಲ್ಲಿ ಎಲ್ಲರನ್ನು ತನ್ನ ಕಣ್ಣುಗಳಿಂದಲೇ ಸೆಳೆಯುವ ಸುಂದರಿ ಅನ್ವಿತಾ ಸಾಗರ್. ಮೂಲತಃ ಸಾಗರದವರೇ ಆದ ಆದ್ಯಾ ಮಂಗಳೂರಿನಲ್ಲಿ ಹೆಚ್ಚು ಆಕ್ಟಿವ್ ಆಗಿದ್ದಾರೆ. ತುಳುನಾಡಿನಲ್ಲಿಯೇ ಹೆಚ್ಚು ಗುರುತಿಸಿಕೊಂಡಿದ್ದಾರೆ. ಡ್ಯಾನ್ಸ್ ಎಂದರೆ ತುಂಬಾನೇ ಇಷ್ಟಪಡುವ ಆದ್ಯಾ, ಡ್ಯಾನ್ಸಿಂಗ್ ಚಾಂಪಿಯನ್ ಶೋನಲ್ಲಿಯೂ ಭಾಗವಹಿಸಿದ್ದಾರೆ. ಅಷ್ಟೇ ಅಲ್ಲ ತುಳುನಾಡಿನ ಟಿವಿಗಳಲ್ಲಿಯೂ ಡ್ಯಾನ್ಸಿಂಗ್ ಶೋ ನೀಡುತ್ತಿದ್ದಾರೆ.

ಸದಾ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುತ್ತಾರೆ. ಒಳ್ಳೊಳ್ಳೆ ವಿಡಿಯೋಗಳನ್ನು ಮಾಡುತ್ತಾ, ತಮ್ಮ ಫಾಲೋವರ್ಸ್ ಜೊತೆ ಸಂವಹನ ಮಾಡುತ್ತಾ ಆರಾಮಾಗಿ ಇರುತ್ತಾರೆ. ಹೊಸ ಹೊಸ ಫೊಟೋಶೂಟ್‌ಗಳನ್ನು ಹಂಚಿಕೊಳ್ಳುವ ಮೂಲಕ ಸದಾ ಚಟುವಟಿಕೆಯಿಂದ ಇರುತ್ತಾರೆ. ಇದೀಗ ತಮ್ಮ ಕಾಲೇಜು ದಿನಗಳನ್ನು ನೆನೆದಿದ್ದಾರೆ. ಮತ್ತೆ ಕಾಲೇಜು ವಿದ್ಯಾರ್ಥಿನಿಯಾಗಿ ಹಳೆ ದಿನಗಳನ್ನು ಮೆಲುಕು ಹಾಕಿದ್ದಾರೆ.

ರಿಯಲ್ ಲೈಫ್‌ನಲ್ಲಿ ಆದ್ಯಾ ರೀತಿಯೇ ಬೇರೆ

ರಿಯಲ್ ಲೈಫ್‌ನಲ್ಲಿ ಆದ್ಯಾ ರೀತಿಯೇ ಬೇರೆ

'ಗಟ್ಟಿಮೇಳ' ಧಾರಾವಾಹಿಯಲ್ಲಿ ಅನ್ವಿತಾ ಸಾಗರ್, ಆದ್ಯಾಳ ಪಾತ್ರ ನಿರ್ವಹಿಸಿದ್ದಾರೆ. ಮನೆಯಲ್ಲಿ ಮುದ್ದಿನ ಮಗಳಾಗಿ, ಅಣ್ಣಂದಿರ ತಂಗಿಯಾಗಿ, ಸಾರ್ಥಕ್ ಪ್ರೀತಿಯ ಮಡದಿಯಾಗಿ ಎಲ್ಲರ ಮನಸ್ಸು ಕದ್ದಿದ್ದಾರೆ. ಧಾರಾವಾಹಿಯಲ್ಲಿ ಸದಾ ಸೀರೆಯುಡುವ ಆದ್ಯಾ ರಿಯಲ್ ಲೈಫ್‌ನಲ್ಲಿ ಫ್ಯಾಷನ್ ಐಕಾನ್ ಎಂದೇ ಹೇಳಬಹುದು. ಸಿಕ್ಕಾಪಟ್ಟೆ ಮಾಡರ್ನ್ ಕೂಡ ಹೌದು. ಅವರ ಸೋಶಿಯಲ್ ಮೀಡಿಯಾ ನೋಡಿದರೇನೆ ಅರ್ಥವಾಗುತ್ತೆ.

ವಾಚ್, ಸೀರೆ ಇಷ್ಟಪಡುವ ಅನ್ವಿತಾ

ವಾಚ್, ಸೀರೆ ಇಷ್ಟಪಡುವ ಅನ್ವಿತಾ

ಸೆಲೆಬ್ರೆಟಿಗಳು ಎಂದರೆ ಎಲ್ಲರ ಕಣ್ಣು ಅವರ ಮೇಲಿರುತ್ತೆ. ಅವರು ಹಾಕುವ ಡ್ರೆಸ್, ಅವರು ಉಪಯೋಗಿಸುವ ವಸ್ತುಗಳ ಮೇಲೆ ಒಂದಷ್ಟು ಕುತೂಹಲವಿರುತ್ತದೆ. ಅದು ಯಾವ ಬ್ರಾಂಡ್, ಎಷ್ಟು ರೇಟ್ ಎಂಬೆಲ್ಲಾ ಪ್ರಶ್ನೆಗಳು ಮನಸ್ಸಿನಲ್ಲಿ ಓಡುತ್ತಾ ಇರುತ್ತದೆ. ಅಷ್ಟೇ ಯಾಕೆ ಅವರಿಗೆ ಯಾವ ಕಲೆಕ್ಷನ್ ಮಾಡುವುದು ಇಷ್ಟ ಎಂಬುದರ ಕುತೂಹಲವೂ ಸಹಜವಾಗಿರುತ್ತದೆ. ಇದೀಗ 'ಗಟ್ಟಿಮೇಳ' ಆದ್ಯಾ ಅಲಿಯಾಸ್ ಅನ್ವಿತಾ ಸಾಗರ್ ತಮ್ಮಿಷ್ಟದ ವಿಚಾರವನ್ನು ಬಿಟ್ಟುಕೊಟ್ಟಿದ್ದಾರೆ. ಅನ್ವಿತಾ ಸಾಗರ್‌ಗೆ ವಾಚ್ ಕಲೆಕ್ಷನ್ ಎಂದರೆ ಸಿಕ್ಕಾಪಟ್ಟೆ ಇಷ್ಟವಂತೆ. ಅಷ್ಟೇ ಅಲ್ಲ ಗಟ್ಟಿಮೇಳ ಧಾರಾವಾಹಿಗೆ ಬಂದ ಮೇಲೆ ಸೀರೆ ಕಲೆಕ್ಷನ್ ಕೂಡ ಜೋರಾಗಿದೆ.

ಶ್ವಾನ ಪ್ರೇಮಿ ಅನ್ವಿತಾ

ಶ್ವಾನ ಪ್ರೇಮಿ ಅನ್ವಿತಾ

ಇತ್ತೀಚಿನ ದಿನಗಳಲ್ಲಿ ಡಾಗ್ ಲವ್ವರ್ಸ್ ಹೆಚ್ಚಾಗಿದ್ದಾರೆ. ಅನ್ವಿತಾ ಸಾಗರ್‌ಗೆ ಕೂಡ ಶ್ವಾನ ಕಂಡರೆ ತುಂಬಾ ಇಷ್ಟವಂತೆ. ಅವರ ಮನೆಯಲ್ಲೂ ಒಂದು ನಾಯಿ ಮರಿ ಇದ್ದು, ಅದನ್ನು ಮುದ್ದಾಡುವುದೇ ಅನ್ವಿತಾ ಸಾಗರ್‌ಗೆ ಬಲು ಇಷ್ಟವಂತೆ. ಅವರ ಅಣ್ಣ ಆ ನಾಯಿಮರಿಯನ್ನು ಗಿಫ್ಟ್ ಮಾಡಿದ್ದಾರಂತೆ.

ಆದ್ಯಾ ಓದಿದ ಕಾಲೇಜು ಯಾವುದು ?

ಆದ್ಯಾ ಓದಿದ ಕಾಲೇಜು ಯಾವುದು ?

ಆದ್ಯಾ ಓದಿದ್ದು ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ. ಇದೀಗ ಮತ್ತೆ ಕಾಲೇಜು ದಿನಗಳನ್ನು ಮೆಲುಕು ಹಾಕಿದ್ದಾರೆ. ತಾನು ಓದಿದ ಕಾಲೇಜಿಗೆ ಒಮ್ಮೆ ವಿಸಿಟ್ ಹಾಕಿದ್ದಾರೆ. ಕಾಲೇಜಿನಲ್ಲೆಲ್ಲಾ ರೌಂಡ್ ಹಾಕಿ, ತಾನು ಕಲಿತ ಕ್ಲಾಸ್ ರೂಮಿನಲ್ಲಿ ಕುಳಿತು, ಆ ಬೇಂಚಿನ ಫೀಲ್ ಅನುಭವಿಸಿ, ಸಂತಸ ಪಟ್ಟಿದ್ದಾರೆ. ಆ ವಿಡಿಯೋವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕಾಲೇಜಿನ ಒಳಗೆ ಹೋಗುವಾಗ ಅವರ ಮುಖದಲ್ಲಿದ್ದ ಖುಷಿಯೇ ಎಲ್ಲದ್ದನ್ನು ಹೇಳುತ್ತಿದೆ. ಕಾಲೇಜಿನ ದಿನಗಳನ್ನು ನೆನಪು ಮಾಡಿದೆ. ಬಹಳ ಸಂತಸದಿಂದಲೇ ಆದ್ಯಾ ಕಾಲೇಜಿನಲ್ಲೆಲ್ಲಾ ಓಡಾಡಿ ಬಂದಿದ್ದಾರೆ.

More from Filmibeat

English summary
Gattimela Serial Actress Aadya Aka Anvitha Sagar In SDM College In Managalore. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X