'ಗಟ್ಟಿಮೇಳ'ದ ಈ ನಟಿ ಈಗ ನಟನೆಯಿಂದ ದೂರ; ಉದ್ಯಮಿಯಾಗಿ ಗೆದ್ದ ಅಶ್ವಿನಿಯ ಬ್ಯುಸಿನೆಸ್ ಏನು?

By ಅನಿತಾ ಬನಾರಿ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ 'ಗಟ್ಟಿಮೇಳ'ವೂ ಒಂದು. 'ಗಟ್ಟಿಮೇಳ' ಧಾರಾವಾಹಿಯಲ್ಲಿ ನಾಯಕಿ ಅಮೂಲ್ಯ ಅಕ್ಕ ಆರತಿ ಆಗಿ ಅಭಿನಯಿಸಿದ್ದ ಅಶ್ವಿನಿ ಸಹಜ ನಟನೆಯ ಮೂಲಕ ವೀಕ್ಷಕರ ಮನ ಸೆಳೆದ ಬೆಡಗಿ.

ಮುಂದೆ ಕಾರಣಾಂತರಗಳಿಂದ ಆರತಿ ಪಾತ್ರದಿಂದ ಹೊರಬಂದ ಅಶ್ವಿನಿ ನಂತರ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದು ಕಡಿಮೆಯೇ. ಸದ್ಯ ನಟನೆಯಿಂದ ದೂರವಿರುವ ಗಟ್ಟಿಮೇಳದ ನಟಿ ಅಶ್ವಿನಿ ಇದೀಗ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಅಶ್ವಿನಿ ವಿಧ ವಿಧವಾದ ಕಾಳುಗಳು ಅರ್ಥತ್ ಸಿರಿ ಧಾನ್ಯಗಳನ್ನು ಉಪಯೋಗಿಸಿ ಮಾಲ್ಟ್ ತಯಾರಿಸಿ ಅದನ್ನು ಮಾರಾಟ ಮಾಡುತ್ತಿದ್ದಾರೆ.

Gattimela serial actress Ashwini moved away from acting and become a businesswoman

ಮಹಿಳಾ ದಿನಾಚರಣೆಯ ಅಂಗವಾಗಿ ಕೆಲವು ಫೋಟೊಗಳನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ತನ್ನ ಕಚೇರಿಯಲ್ಲಿ ಉತ್ಪನ್ನಗಳ ಬ್ಯಾಕ್‌ಗ್ರೌಂಡ್‌ನಲ್ಲಿ ಕಾಣಿಸಿಕೊಂಡಿದ್ದು, "ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಎಷ್ಟೇ ನೋವುಗಳಿದ್ದರೂ ಬಾಳು ಒಂದು ಗೋಳು ಎಂದು ಓಡಿ ಹೋಗದೆ ಎಲ್ಲವನ್ನು ಧೈರ್ಯ,ಸಹನೆ,ತಾಳ್ಮೆಯಿಂದ ಸರಿದೂಗಿಸಿಕೊಂಡು ಹೋಗುತ್ತಿರುವ ನಮ್ಮ ಹೆಮ್ಮೆಯ ಹೆಣ್ಣು ಮಕ್ಕಳೇ ನಮ್ಮ ಪ್ರತಿ ಕನಸು ನನಸಾಗೋ ಒಳ್ಳೆ ಕಾಲವು ಮುಂದೆ ಇದೆ.. happy women's day.we are strong women's" ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

ಇನ್ನು ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟಿರುವ ಅಶ್ವಿನಿ ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಅನ್ನು ಹೊಂದಿದ್ದಾರೆ. ತಮ್ಮ ನಟನೆ ಬಗ್ಗೆ ಮಾತ್ರವಲ್ಲ, ಉದ್ಯಮದ ಕುರಿತು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಶ್ವಿನಿ ಅವರೇ ಈ ಹಿಂದೆ ಹೇಳಿಕೊಂಡಿದ್ದರು. ಇದೀಗ 'ಗಟ್ಟಿಮೇಳ'ದ ನಟಿ ಅಶ್ವಿನಿಯವರ ಯೂಟ್ಯೂಬ್ ಚಾನೆಲ್‌ಗೆ ಮೂರು ಲಕ್ಷಕ್ಕೂ ಅಧಿಕ ಸಬ್‌ಸ್ಕ್ರೈಬರ್ ಅನ್ನು ಹೊಂದಿದ್ದು, ಇಲ್ಲಿಯ ತನಕ ಇನ್ನೂರಕ್ಕೂ ಹೆಚ್ಚು ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಇವರು ಶೇರ್ ಮಾಡಿರುವ ಹೆಚ್ಚಿನ ವಿಡಿಯೋಗಳಿಗೆ ಮಿಲಿಯನ್ ಲೆಕ್ಕದಲ್ಲಿ ವೀವ್ಸ್ ಬಂದಿದೆ.

"ನಾನು ಎಲ್ಲೇ ಹೋದರೂ ಬಂದರೂ ಇದೇ ರೀತಿ ಪ್ರೀತಿ ತೋರಿಸುತ್ತೀರ, ನಿಮ್ಮ ಪ್ರೀತಿಗೆ ನಾನು ಎಂದು ಚಿರಋಣಿ A Nimma Ashwini youtube channel ಈಗ 1 ಲಕ್ಷ ಜನರ ಪ್ರೀತಿ ಗಳಿಸಿದೆ. ಖಂಡಿತ ಮುಂದಿನ ದಿನಗಳಲ್ಲಿ ನಿಮ್ಮೆಲ್ಲರಿಗೂ ಉಪಯುಕ್ತವಾಗುವ ಅನೇಕ ಒಳ್ಳೆಯ ವಿಷಯಗಳು ಹಾಗೂ ಉಪಯುಕ್ತ ಮಾಹಿತಿಗಳನ್ನು ನೀಡುವ ಮೂಲಕ ನಿಮ್ಮೆಲ್ಲರಿಗೂ ಧನ್ಯವಾದಗಳನ್ನು ತಿಳಿಸುತ್ತೇನೆ. ನಿಮ್ಮೆಲ್ಲರ ಈ ಪ್ರೀತಿ ಹಾಗೂ ಪ್ರೋತ್ಸಾಹಕ್ಕೆ ತುಂಬು ಹೃದಯದ ಧನ್ಯವಾದಗಳು" ಎಂದು ಒಂದು ಲಕ್ಷ ಸಬ್‌ಸ್ಕ್ರೈಬರ್ ಆದಾಗ ಇನ್‌ಸ್ಟಾಗ್ರಾಂನಲ್ಲಿ ಫೋಸ್ಟ್ ಹಾಕಿದ್ದರು.

Gattimela serial actress Ashwini moved away from acting and become a businesswoman

ಅಂದ ಹಾಗೇ ಅಶ್ವಿನಿ ಅವರು ಅವನಿಯಾಗಿ ಕಿರುತೆರೆಗೆ ಕಾಲಿಟ್ಟ ಬೆಡಗಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಾಧಾ ರಮಣ' ಧಾರಾವಾಹಿಯಲ್ಲಿ ಅವನಿಯಾಗಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆಯ ನಂಟು ಬೆಳೆಸಿಕೊಂಡರು ಅಶ್ವಿನಿ. ತದ ನಂತರ 'ಗಟ್ಟಿಮೇಳ' ಧಾರಾವಾಹಿಯಲ್ಲಿ ಆರತಿಯಾಗಿ ಅಭಿನಯಿಸಿದ್ದ ಅಶ್ವಿನಿ ತೆಲುಗು ಕಿರುತೆರೆಯಲ್ಲಿ ಮೋಡಿ ಮಾಡಿದರು.

ತೆಲುಗಿನ 'ನಾಗಭೈರವಿ' ಧಾರಾವಾಹಿಯಲ್ಲಿ ನಾಗಿಣಿಯಾಗಿ ಬಣ್ಣ ಹಚ್ಚಿದ್ದ ಈಕೆ ದ್ವಿಪಾತ್ರದ ಮೂಲಕ ತೆಲುಗು ಕಿರುತೆರೆ ವೀಕ್ಷಕರನ್ನು ರಂಜಿಸಿದ್ದರು. ಕೊವಿಡ್ ಸಮಯದಲ್ಲಿ ಅನಿವಾರ್ಯ ಕಾರಣಗಳಿಂದ ನಾಗಭೈರವಿ ಧಾರಾವಾಹಿಯಿಂದ ಹೊರಬಂದಿದ್ದ ಅಶ್ವಿನಿ ಮುಂದೆ ನಟನೆಯಲ್ಲಿ ಕಾಣಿಸಿಕೊಂಡಿದ್ದು ಕಡಿಮೆ. ಇದೀಗ ಪೂರ್ಣ ಪ್ರಮಾಣದಲ್ಲಿ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಅಶ್ವಿನಿ ಮತ್ತೆ ನಟನೆಗೆ ಮರಳುತ್ತಾರಾ ಎಂದು ಮುಂದಿನ ದಿನಗಳಲ್ಲಿ ನೋಡಬೇಕಿದೆ.

More from Filmibeat

English summary
Gattimela serial actress Ashwini moved away from acting and became a businesswoman:
Read more about: actress serial business
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X