ಹಾಸನ ಮೂಲದ 'ಗಟ್ಟಿಮೇಳ' ನಟಿ ನಿಶಾ ರವಿಕೃಷ್ಣನ್ ಸಕಲಕಲಾ ವಲ್ಲಭೆ!

By ಪ್ರಿಯಾ ದೊರೆ

ಇಂದು 'ಗಟ್ಟಿಮೇಳ' ಧಾರಾವಾಹಿ ರೌಡಿ ಬೇಬಿಯ ಹುಟ್ಟುಹಬ್ಬ. ಈ ಖುಷಿಗೆ ಅಭಿಮಾನಿಗಳು ನಿಶಾ ರವಿ ಕೃಷ್ಣನ್ ಅವರ ಬರ್ತ್‌ಡೇಗೆ ವಿಶ್ ಮಾಡಿದ್ದಾರೆ. ಈ ನಿಶಾ ರವಿ ಕೃಷ್ಣನ್ ಯಾರು ಎನ್ನುವ ಬಗ್ಗೆ ಮಾಹಿತಿ ಮುಂದೆ ಇದೆ ನೋಡಿ.

ಕನ್ನಡ ಕಿರುತೆರೆಯಲ್ಲಿ ಟಾಪ್ ಒನ್ ಸೀರಿಯಲ್ ಆಗಿರುವ 'ಗಟ್ಟಿಮೇಳ' ಧಾರಾವಾಹಿ ಯಾರಿಗೂ ಬೋರ್ ಹೊಡೆಸಿಲ್ಲ. ಈ ಧಾರಾವಾಹಿಯಲ್ಲಿ ನಾಯಕಿ ಅಮೂಲ್ಯ ಪಾತ್ರದ ನಟಿಯ ನಿಜವಾದ ಹೆಸರು ನಿಶಾ ರವಿಕೃಷ್ಣನ್. ರೌಡಿ ಬೇಬಿ ಎಂದೇ ಖ್ಯಾತಿ ಗಳಿಸಿರುವ ನಿಶಾ, ಸಿಂಗರ್ ಹಾಗೂ ಡ್ಯಾನ್ಸರ್ ಕೂಡ ಹೌದು.

ಖಾಸಗಿ ಚಾನೆಲ್ ನಲ್ಲಿ 12ನೇ ವಯಸ್ಸಿನಲ್ಲೇ ಆಂಕರ್ ಆಗಿದ್ದವರು. ಸತತವಾಗಿ ನಾಲ್ಕು ವರ್ಷಗಳ ಕಾಲ ನಿರೂಪಕಿಯಾಗಿದ್ದರು. ಸದ್ಯ ಕನ್ನಡ ಹಾಗೂ ತೆಲುಗು ಧಾರಾವಾಹಿಗಳಲ್ಲಿ ನಟಿಸುತ್ತಿರುವ ನಿಶಾ ಅವರಿಗೆ ಎರಡೂ ರಾಜ್ಯಗಳಲ್ಲೂ ಅಭಿಮಾನಿಗಳಿದ್ದಾರೆ.

ನಿಶಾ ರವಿಕೃಷ್ಣನ್ ಮೂಲತಃ ಹಾಸನದವರು!

ನಿಶಾ ರವಿಕೃಷ್ಣನ್ ಅವರು 2000 ಜೂನ್ 9 ರಂದು ಜನಿಸಿದರು. ಮೂಲತಃ ಹಾಸನದ ಸಕಲೇಶಪುರದವರು. ನಿಶಾ ಅವರ ತಂದೆ ರವಿಕೃಷ್ಣನ್ ಅವರು ಮಂಡ್ಯ ರಮೇಶ್ ತಂಡದಲ್ಲಿ ನಾಟಕಗಳಲ್ಲಿ ಭಾಗವಹಿಸುತ್ತಿದ್ದರು. ಚಿಂಟು ಟಿವಿಯ ಕಾರ್ಯಕ್ರಮದ ಮೂಲಕ ಕಿರುತೆರೆ ಪಯಣ ಆರಂಭಿಸಿದ ನಿಶಾ, ಸುಮಾರು ನಾಲ್ಕು ವರ್ಷಗಳ ಕಾಲ ಆಂಕರಿಂಗ್ ಮಾಡಿದ್ದರು. ಅದೂ ಕೂಡ ಅವರ ಕಾರ್ಯಕ್ರಮವನ್ನು ಅವರೇ ಸ್ವತಃ ಪ್ಲಾನ್ ಮಾಡುತ್ತಿದ್ದರಂತೆ.

ಚಿಂಟು ಟಿಯಲ್ಲಿ ನಿರೂಪಕಿ ಆಗಿದ್ದ ನಿಶಾ!

ಇನ್ನು ಚಿಂಟು ಟಿಯಲ್ಲಿ ಆಂಕರಿಂಗ್ ಮಾಡಿದ ಬಳಿಕ ನಿಶಾ ಅವರು ಧಾರಾವಾಹಿಗಳಲ್ಲಿ ಕಾಣಿಸಿಕೊಂಡರು. ಸರ್ವ ಮಂಗಳ ಮಾಂಗಲ್ಯೇ ಎಂಬ ಸೀರಿಯಲ್ ನಲ್ಲಿ ತಂಗಿಯ ಪಾತ್ರದಲ್ಲಿ ನಟಿಸುತ್ತಿದ್ದ ನಿಶಾ ಗಟ್ಟಿಮೇಳ ಸೀರಿಯಲ್ ಮೂಲಕ ನಾಯಕಿ ಪಾತ್ರದಲ್ಲಿ ಅಭಿನಯಿಸಿದರು. ನಂತರ ಅಭಿನಯಿಸಿದ ಧಾರಾವಾಹಿಯೇ ಗಟ್ಟಿಮೇಳ. ಈ ಧಾರಾವಾಹಿಯ ಮೂಲಕ ನಾಯಕಿ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಈ ಧಾರಾವಾಹಿ ಮೂಲಕ ನಿಶಾ ಅವರು ರೌಡಿ ಬೇಬಿ ಎಂಬ ಬಿರುದನ್ನು ಕೂಡ ಪಡೆದಿದ್ದಾರೆ. ಈ ಧಾರಾವಾಹಿಯ ಅಮೂಲ್ಯಾ ಪಾತ್ರವನ್ನು ಹಲವು ಪ್ರೇಕ್ಷಕರು ಮೆಚ್ಚಿದ್ದಾರೆ.

ರೀಲ್ಸ್ ಮಾಡೋದ್ರಲ್ಲಿ ಫೇಮಸ್ ರೌಡಿ ಬೇಬಿ!

ಇನ್ನು ನಿಶಾ ರವಿಕೃಷ್ಣನ್ ಅವರು ತೆಲುಗಿನಲ್ಲೂ ಮಿಂಚುತ್ತಿದ್ದಾರೆ. 'ಮುತ್ಯಮಂತ ಮುದ್ದು' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇನ್ನು ನಿಶಾ ಅವರು ಬಯ್ಯುವ ಸ್ಟೈಲು ಹಲವರು ಇಷ್ಟಪಟ್ಟಿದ್ದಾರೆ. ನಿಶಾ ರವಿಕೃಷ್ಣನ್ ಧಾರಾವಾಹಿಯಲ್ಲಿ ಪಕ್ಕಾ ಸಾಂಪ್ರದಾಯಿಕ ಹುಡುಗಿಯಾಗಿ ಲಂಗಾ ದಾವಣಿಯಲ್ಲಿ, ಸೀರಿಯಲ್ಲಿ ಮಿಂಚುತ್ತಿದ್ದಾರೆ. ಈಗ ನಿಶಾ ಅವರಿಗೆ ಇನ್‌ಸ್ಟಾಗ್ರಾಂನಲ್ಲಿ ಲಕ್ಷ ಲಕ್ಷ ಅಭಿಮಾನಿಗಳಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಸದಾ ಆಕ್ಟೀವ್ ಆಗಿರುವ ನಿಶಾ ಅವರು ರೀಲ್ಸ್ ಗಳನ್ನು ಮಾಡುತ್ತಿರುತ್ತಾರೆ.

ಜೀ ಕನ್ನಡದ ಅತ್ಯುತ್ತಮ ನಾಯಕಿ ಪ್ರಶಸ್ತಿ ಪಡೆದ ನಟಿ!

ನಿಶಾ ರವಿಕೃಷ್ಣನ್ ಅವರು ನಟಿ ಮಾತ್ರವಲ್ಲದೇ, ಅವರು ಸಿಂಗರ್ ಕೂಡ ಹದು. ಅಲ್ಲದೇ, ಒಳ್ಳೆಯ ಡ್ಯಾನ್ಸರ್ ಕೂಡ. ಕರ್ನಾಟಕ ಮತ್ತು ಭರತನಾಟ್ಯದಲ್ಲಿ ಪರಿಣಿತಿ ಪಡೆದಿದ್ದಾರೆ. ಇನ್ನು ತಮ್ಮ ಉತ್ತಮ ಅಭಿನಯಕ್ಕಾಗಿ ಜೀ ಕನ್ನಡದ ಅತ್ಯುತ್ತಮ ನಾಯಕಿ ಪ್ರಶಸ್ತಿ ಪಡೆದಿದ್ದಾರೆ. 2019 ರಲ್ಲಿ ಬೆಂಗಳೂರು ಟೈಮ್ಸ್‌ನ ಮೋಸ್ಟ್ ಡಿಸೈರೇಬಲ್ ವಿಮೆನ್ ಲಿಸ್ಟ್ ನಲ್ಲಿ ಸ್ಥಾನ ಪಡೆದಿದ್ದರು. ಇನ್ನು ಧಾರಾವಾಹಿ ಮಾತ್ರವಲ್ಲದೇ ಸಿನಿಮಾದಲ್ಲೂ ನಿಶಾ ಬಣ್ಣ ಹಚ್ಚಿದ್ದಾರೆ. 'ಅದೊಂದಿತ್ತು ಕಾಲ' ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ಇನ್ನು 'ಇಷ್ಟಕಾಮ್ಯ' ಸಿನಿಮಾದ ಹಾಡೊಂದಕ್ಕೆ ಬ್ಯಾಕ್ ಡ್ಯಾನ್ಸರ್ ಆಗಿ ಕೂಡ ನಿಶಾ ಕಾಣಿಸಿಕೊಂಡಿದ್ದಾರೆ.

More from Filmibeat

English summary
Gattimela Serial Actress Nisha Ravikrishnan Small screen journey And Biography, Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X