ನೆಗೆಟಿವ್ ಪಾತ್ರದಲ್ಲಿ ಮಿಂಚಿದ ನಟಿ ರಶ್ಮಿತಾ ಚಂಗಪ್ಪ ಬಗ್ಗೆ ನಿಮಗೆಷ್ಟು ಗೊತ್ತು?

By ಪೂರ್ವ

ಧಾರಾವಾಹಿಗಳಲ್ಲಿ ಹೀರೋ ಹೀರೋಯಿನ್ ಪಾತ್ರ ಹೇಗೆ ಮುಖ್ಯವೊ ಹಾಗೆಯೇ ನೆಗೆಟಿವ್ ಪಾತ್ರವೂ ಅಷ್ಟೇ ಮುಖ್ಯ. ನೆಗೆಟಿವ್ ಪಾತ್ರಗಳನ್ನು ಮಾಡುತ್ತಾ ಜನರ ಮನ ಗೆಲ್ಲುತ್ತಿರುವ ನಟಿಯರಲ್ಲಿ ಗಟ್ಟಿ ಮೇಳ ಧಾರಾವಾಹಿಯಲ್ಲಿ ಸಾರಿಕಾ ಪಾತ್ರದಲ್ಲಿ ಮಿಂಚಿದ ರಶ್ಮಿತಾ ಚಂಗಪ್ಪ ಸಹ ಒಬ್ಬರು. ರಶ್ಮಿತಾ ಚಂಗಪ್ಪ ನೆಗೆಟಿವ್ ಪಾತ್ರ ಮಾಡಿ ಜನರ ನೆನಪಿನಲ್ಲಿ ಇನ್ನೂ ಇದ್ದಾರೆ.

ನೆಗೆಟಿವ್ ಪಾತ್ರಗಳು ವೀಕ್ಷಕರಲ್ಲಿ ದ್ವೇಷದ ಭಾವನೆ ಮೂಡಿಸುತ್ತವೆ. ಆದರೆ ನೆಗೆಟಿವ್ ಪಾತ್ರಗಳನ್ನು ಮಾಡಿಯೂ ಜನರ ಮನಗೆದ್ದವರು ನಟಿ ರಶ್ಮಿಕಾ ಚಂಗಪ್ಪ. ನೆಗೆಟಿವ್ ಪಾತ್ರಗಳಲ್ಲಿ ಮಿಂಚುತ್ತಿರುವ ರಶ್ಮಿತಾ ಈ ಮುನ್ನ ಒಂದು ಧಾರಾವಾಹಿಯಲ್ಲಿ ಹೀರೋಯಿನ್ ಪಾತ್ರವನ್ನು ಮಾಡಿದ್ದರು. ಆದರೆ ಆ ಧಾರವಾಹಿ ಹೆಚ್ಚು ಖ್ಯಾತಿಯನ್ನು ಗಳಿಸಲಿಲ್ಲ. ಆದರೆ ಅವರಿಗೆ ಹೆಚ್ಚು ಖ್ಯಾತಿ ಗಳಿಸಿಕೊಟ್ಟಿದ್ದು 'ಗಟ್ಟಿಮೇಳ' ಧಾರಾವಾಹಿ. ಈ ಧಾರಾವಾಹಿ ಮೂಲಕ ರಶ್ಮಿತಾ ಚಂಗಪ್ಪ ಜನ ಮನ್ನಣೆ ಪಡೆದುಕೊಂಡರು. ಅನೇಕ ಜನ ಇವರ ನಟನೆಗೆ ಫಿದಾ ಆಗಿದ್ದಾರೆ.

ರಶ್ಮಿತಾ ಚಂಗಪ್ಪ 1997 ರಂದು ಮಡಿಕೇರಿಯಲ್ಲಿ ಜನಿಸಿದರು. ಇವರು ಇದೀಗ ಬೆಂಗಳೂರಿಗರಲ್ಲಿ ನೆಲೆಸಿದ್ದಾರೆ. ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮಹಾರಾಣಿ' ಧಾರಾವಾಹಿಯಲ್ಲಿ ಇಶಾ ಅಲಿಯಾಸ್ ಅವನಿಯಾಗಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆ ಪಯಣ ಶುರು ಮಾಡಿದ್ದ ಕೊಡಗಿನ ಕುವರಿ ಮೊದ ಮೊದಲು ಹಲವು ಧಾರಾವಾಹಿಯಲ್ಲಿ ಪಾಸಿಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು, ಬಳಿಕ ನೆಗೆಟಿವ್ ಪಾತ್ರಗಳು ಇವರನ್ನು ಅರಸಿಕೊಂಡು ಬರುವಂತಾಯಿತು.

ಗಟ್ಟಿ ಮೇಳ ಧಾರಾವಾಹಿ ಮೂಲಕ ಜನರ ಮನಗೆದ್ದ ನಟಿ

ಗಟ್ಟಿ ಮೇಳ ಧಾರಾವಾಹಿ ಮೂಲಕ ಜನರ ಮನಗೆದ್ದ ನಟಿ

ನೆಗೆಟಿವ್ ಪಾತ್ರಗಳನ್ನು ಅತಿಯಾಗಿ ಪ್ರೀತಿಸುವ ರಶ್ಮಿತಾ, 'ಗಟ್ಟಿಮೇಳ' ಧಾರಾವಾಹಿಯಲ್ಲಿ ವಿಲನ್ ಸಾರಿಕಾ ಆಗಿ ನಟಿಸಿ ಜನ ಮನ ಗೆದ್ದರು. ಬಳಿಕ ಖಾಸಗಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ 'ಮೂರು ಗಂಟು' ಧಾರಾವಾಹಿಯಲ್ಲಿ ನಾಯಕ ವಿಕ್ರಮಾದಿತ್ಯನ ಪ್ರೇಯಸಿ ವೈಷ್ಣವಿಯಾಗಿ ಪರದೆ ಹಂಚಿಕೊಳ್ಳುವ ಮೂಲಕ ರಶ್ಮಿತಾ ಮತ್ತೆ ಕಿರುತೆರೆಯತ್ತ ಮುಖ ಮಾಡಿದ್ದರು. ಮೂರುಗಂಟು ಧಾರಾವಾಹಿಯಲ್ಲಿ ಕೂಡ ನೆಗೆಟಿವ್​ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಹಲವು ಧಾರಾವಾಹಿಯಲ್ಲಿ ನಟಿಸಿದ ರಶ್ಮಿತಾ

ಹಲವು ಧಾರಾವಾಹಿಯಲ್ಲಿ ನಟಿಸಿದ ರಶ್ಮಿತಾ

ರಶ್ಮಿಕಾ ಚೆಂಗಪ್ಪ ನೆಗೆಟಿವ್ ರೋಲ್​ಗೆ ಅವಕಾಶ ಜಾಸ್ತಿ ಎಂದು ನಂಬಿರುವವರು ಇದೀಗ ಮತ್ತೆ ತಮ್ಮಿಷ್ಟದ ವಿಲನ್ ಪಾತ್ರಕ್ಕೆ ಜೀವ ತುಂಬಲು ತಯಾರಿ ನಡೆಸುತ್ತಿದ್ದಾರೆ. 'ಗಟ್ಟಿಮೇಳ' ಧಾರಾವಾಹಿಯ ನಂತರ ತಮ್ಮ ಹುಟ್ಟೂರು ಕೊಡಗಿಗೆ ಹೋದ ರಶ್ಮಿತಾ, ಮನೆಯವರೊಂದಿಗೆ ಕಾಲ ಕಳೆದರು. ಆದರೆ, ಧಾರಾವಾಹಿಯ ಸೆಟ್, ಶೂಟಿಂಗ್ ಇವೆಲ್ಲವನ್ನು ಮಿಸ್ ಮಾಡಿಕೊಳ್ಳುತ್ತಿದ್ದರಂತೆ ಆದರೆ, 'ಮೂರುಗಂಟು' ಮೂಲಕ ಮತ್ತೆ ನಟನಾ ರಂಗಕ್ಕೆ ಮರಳಿದರು.

ಪರ ಭಾಷೆಯತ್ತ ಒಲವು ತೋರಿಸುತ್ತಾರ ನಟಿ?

ಪರ ಭಾಷೆಯತ್ತ ಒಲವು ತೋರಿಸುತ್ತಾರ ನಟಿ?

ಪರಭಾಷೆಯಿಂದಲೂ ಒಂದಷ್ಟು ಅವಕಾಶಗಳು ಈ ನಟಿಗೆ ಬರುತ್ತಿವೆ. ಇದೀಗ ಪ್ರಸ್ತುತ ಕನ್ನಡದ ಹಲವಾರು ಧಾರವಾಹಿಗಳಲ್ಲಿ ನೆಗೆಟಿವ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಶ್ಮಿತಾಗೆ ಬಹುತೇಕ ನೆಗೆಟಿವ್ ಪಾತ್ರಗಳೇ ಬರುತ್ತಿರುವ ಬಗ್ಗೆ ಮಾತನಾಡಿರುವ ನಟಿ, ನನಗೆ ಅಂತಹ ಪಾತ್ರಗಳನ್ನು ಮಾಡಲು ಇಷ್ಟ ಎಂದಿದ್ದಾರೆ. ಈ ರೀತಿಯ ಪಾತ್ರದಲ್ಲಿ ನನ್ನ ನಟನೆ ಹೊರ ಬರುತ್ತದೆ ಎಂದಿದ್ದಾರೆ. ಕೇವಲ ಕನ್ನಡ ಮಾತ್ರವಲ್ಲದೇ ಅವರಿಗೆ ಬೇರೆ ಭಾಷೆಯಿಂದಲೂ ಸಹ ಆಫರ್​ಗಳು ಬರುತ್ತಿದೆಯಂತೆ. ಆದರೆ ಭಾಷೆಯ ಮೇಲೆ ಹಿಡಿತ ಇರುವ ಕಾರಣ ಇಲ್ಲಿ ನಟಿಸಲು ಇಷ್ಟ ಎಂದು ಹೇಳಿಕೊಂಡಿದ್ದಾರೆ.

ರಶ್ಮಿತಾ ಫಿಟ್ ನೆಸ್ ಗುಟ್ಟೇನು?

ರಶ್ಮಿತಾ ಫಿಟ್ ನೆಸ್ ಗುಟ್ಟೇನು?

ರಶ್ಮಿತ ಫಿಟ್ ನೆಸ್ ಗುಟ್ಟು ಜಿಮ್‌ ಮತ್ತು ಯೋಗ. ದಿನಾಲೂ ಜಿಮ್ ಮಾಡುತ್ತಾರಂತೆ ಮನೆಯಲ್ಲಿ ಮಾಡಿದ ಅಡುಗೆ ತಿಂತಾರಂತೆ ಅನ್ನೋದೊಂದು ಬಿಟ್ಟರೆ ಡಯೆಟ್ ಮಾಡೋದೇ ಇಲ್ಲ ಅಂತಾರೆ ರಶ್ಮಿತಾ. ಗಟ್ಟಿಮೇಳದಿಂದ ಧಾರಾವಾಹಿ ಇವರ ಜೀವನದ ದಿಕ್ಕನ್ನೇ ಬದಲಾಯಿಸಿತು ಎಂದರೆ ತಪ್ಪಾಗದು. 'ಯಾರಿವಳು' ಧಾರಾವಾಹಿಯಲ್ಲಿ ಪ್ರಮುಖ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದಾರೆ. ಯಾರಿವಳು' ಜೊತೆಗೆ 'ಮತ್ತೆ ವಸಂತಾ' ಧಾರಾವಾಹಿಯಲ್ಲೂ ರಶ್ಮಿತಾ ಅಭಿನಯಿಸಿದ್ದಾರೆ.

More from Filmibeat

English summary
Kannada serial Gattimela negative roll actor Rasmika Changappa life style. Know more about her.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X