ಮನಸೆಲ್ಲಾ ನೀನೆ ಎನ್ನುತ್ತಿದ್ದಾರೆ ಗಟ್ಟಿಮೇಳ ಧಾರಾವಾಹಿಯ ಆದ್ಯ ಖ್ಯಾತಿಯ ಅನ್ವಿತಾ ಸಾಗರ್

By ಅನಿತಾ ಬನಾರಿ

ಕನ್ನಡ ಕಿರುತೆರೆಯ ಖ್ಯಾತ ಧಾರಾವಾಹಿಗಳಲ್ಲಿ ಒಂದಾದ 'ಮನಸೆಲ್ಲಾ ನೀನೆ' ಧಾರಾವಾಹಿಯಲ್ಲಿ ಹೊಸ ಪಾತ್ರದ ಎಂಟ್ರಿಯಾಗಿರುವುದು ವೀಕ್ಷಕರಿಗೆ ತಿಳಿದೇ ಇದೆ. ಹೊಸ ಹೊಸ ಪಾತ್ರಗಳನ್ನು ಪರಿಚಯಿಸುತ್ತಿರುವ ಈ ಧಾರಾವಾಹಿಯಲ್ಲಿ ಈಗಾಗಲೇ ಮಾಲತಿ ದೇಶಪಾಂಡೆ ಅವರು ಅನಸೂಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಅಶ್ವಿನಿ ಎಂಬ ಇನ್ನೂ ಒಂದು ಹೊಸ ಪಾತ್ರವನ್ನು ಪರಿಚಯಿಸಲಾಘಿದೆ. ಈ ಮೂಲಕ ಅನ್ವಿತಾ ಸಾಗರ್ ಅವರು ಈ ಧಾರಾವಾಹಿಗೆ ಕಾಲಿಟ್ಟಿದ್ದಾರೆ.

ಹೌದು, ಈಗಾಗಲೇ ಬಹಳಷ್ಟು ಟ್ವಿಸ್ಟ್‌ಗಳನ್ನು ಪಡೆದುಕೊಂಡು ಮುನ್ನಡೆಯುತ್ತಿರುವ ಈ ಕಥೆಯಲ್ಲಿ ಅನ್ವಿತಾ ಸಾಗರ್ ಅವರು ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡು ಕಥೆಗೆ ಇನ್ನಷ್ಟು ಕುತೂಹಲಕಾರಿ ಟ್ವಿಸ್ಟ್‌ಗಳನ್ನು ತರುತ್ತಿದ್ದಾರೆ.

Gattimela serial Adhya fame actress Anvita Sagar entered Manasella Nene

ಗಟ್ಟಿಮೇಳ ಧಾರಾವಾಹಿಯಲ್ಲಿ ಆದ್ಯ ಎನ್ನುವ ಪಾತ್ರವನ್ನು ನಿಭಾಯಿಸುತ್ತಿರುವ ನಟಿಗೆ ಇದೀಗ ಹೊಸ ಅವಕಾಶ ಸಿಕ್ಕಿದ್ದು, ಅಶ್ವಿನಿ ಎಂಬ ಪಾತ್ರದ ಮೂಲಕ ಕಿರುತೆರೆಪ್ರಿಯರನ್ನು, 'ಮನಸೆಲ್ಲಾ ನೀನೆ' ಧಾರಾವಾಹಿಯ ವೀಕ್ಷಕರನ್ನು ರಂಜಿಸಲು ಮುಂದಾಗಿದ್ದಾರೆ.

ದಕ್ಷಿಣ ಮೂರ್ತಿ ಹಾಗೂ ಅನುಸೂಯ ದಂಪತಿಗಳ ಪುತ್ರಿಯಾಗಿ ಕಾಣಿಸಿಕೊಳ್ಳುತ್ತಿರುವ ಅಶ್ವಿನಿ, ಇಡೀ ಕಥೆಗೆ ಹಾಗೂ ಕಥೆಯ ಪಾತ್ರಗಳಿಗೆ ಶಾಕ್ ತಂದಿದ್ದಾರೆ. ತನ್ನ ಪತ್ನಿ ಅನುಸೂಯ ಬದುಕಿರುವುದಾಗಿ ತಿಳಿದ ದಕ್ಷಿಣಮೂರ್ತಿಯವರು ರಾಗಳಿಗೆ ಹೇಗಾದರೂ ಮಾಡಿ ಅನುಸೂಯಾರನ್ನು ಹಿಂಬಾಲಿಸಲು ಕೇಳಿಕೊಳ್ಳುತ್ತಾರೆ.

ಅಂತೆಯೇ ರಾಗ, ಅನುಸೂಯಾ ಅವರನ್ನು ಹಿಂಬಾಲಿಸಿ ಕೊಂಡು ಹೋದಾಗ ಅನುಸೂಯಾ ಅವರು ಅವರ ಹಾಗೂ ದಕ್ಷಿಣ ಮೂರ್ತಿ ಅವರ ನಡುವಿನ ಸಂಬಂಧದ ಬಗ್ಗೆ ರಾಗಾಳಿಗೆ ಎಲ್ಲವನ್ನು ಹೇಳುತ್ತಾರೆ. ಇದರಿಂದ ಅಚ್ಚರಿಗೆ ಒಳಗಾದ ರಾಗ ವಾಪಸ್ ಬಂದು ದಕ್ಷಿಣ ಮೂರ್ತಿಯವರಿಗೆ ತಾನು ಕೇಳಿದ ಎಲ್ಲಾ ವಿಚಾರವನ್ನು ಹೇಳುತ್ತಾಳೆ.

Gattimela serial Adhya fame actress Anvita Sagar entered Manasella Nene

ದಕ್ಷಿಣ ಮೂರ್ತಿ ತಮ್ಮನ್ನು ಅನುಸೂಯ ಅವರ ಮನೆಗೆ ಕರೆದುಕೊಂಡು ಹೋಗುವುದಾಗಿ ರಾಗಳಲ್ಲಿ ಬೇಡಿಕೊಂಡಾಗ ಆದಿ ಅಲ್ಲಿಗೆ ಬರುತ್ತಾನೆ. ನಂತರ ಆತನೇ ದಕ್ಷಿಣ ಮೂರ್ತಿಯವರನ್ನು ಅನುಸೂಯ ಅವರ ಮನೆಗೆ ಕರೆದುಕೊಂಡು ಹೋಗುತ್ತಾನೆ.

ವರ್ಷಗಳ ನಂತರದ ಈ ದೊಡ್ಡ ಸಂಗಮದಿಂದ ಅಚ್ಚರಿ ಹಾಗೂ ಖುಷಿಯಲ್ಲಿ ಒಳಗಾಗುವ ದಕ್ಷಿಣ ಮೂರ್ತಿಯವರು ಆಗ ತಾನೇ ಅವರ ಮಗಳು ಅಶ್ವಿನಿಯ ಬಗ್ಗೆ ತಿಳಿದುಕೊಳ್ಳುತ್ತಾರೆ. ಆದರೆ, ಅಶ್ವಿನಿ ದಕ್ಷಿಣಮೂರ್ತಿ ಅವರನ್ನು ತನ್ನ ತಂದೆಯಾಗಿ ಒಪ್ಪಿಕೊಳ್ಳುವುದಿಲ್ಲ. ಇಷ್ಟು ವರ್ಷ ಯಾವುದೇ ಸಂಭ್ರಮ ಸಂಕಷ್ಟಗಳಿಗೂ ಇಲ್ಲದವರು ಈಗ ಒಮ್ಮೆಲೇ ಬಂದು ನಾನು ನಿನ್ನ ತಂದೆಯ ಎಂದರೆ ಹೇಗೆ ಒಪ್ಪಿಕೊಳ್ಳುವುದು ಎಂಬ ಸವಾಲನ್ನು ಹಾಕುತ್ತಾಳೆ.

ಈ ರೀತಿಯಾಗಿ ಕಥೆ ಮುಂದುವರೆದಿದ್,ದು ಅಶ್ವಿನಿ ಪಾತ್ರ ಕಥೆಗೆ ಬಹಳಷ್ಟು ಟ್ವಿಸ್ಟ್ ಗಳನ್ನು ಎಂದು ಊಹಿಸಬಹುದಾಗಿದೆ. ಅಂದ ಹಾಗೆ ನಟಿ ಅನ್ವಿತಾ ಸಾಗರ್ ಅವರು ಈಗಾಗಲೇ ಮನಸೆಲ್ಲಾ ನೀನೆ ಧಾರಾವಾಹಿ ತಂಡಕ್ಕೆ ಸೇರ್ಪಡೆಯಾಗಿದ್ದು ಶೂಟಿಂಗ್‌ನಲ್ಲಿ ಬ್ಯುಸಿ ಇದ್ದಾರೆ.

More from Filmibeat

English summary
Gattimela serial Adhya fame actress Anvita Sagar entered Manasella Nene,know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X