ಜಿಮ್ ಹೋಗಲ್ಲ, ವರ್ಕೌಟ್ ಮಾಡಲ್ಲ; ಚಬ್ಬಿ ಚಬ್ಬಿಯಾಗಿದ್ದ 'ಗಟ್ಟಿಮೇಳ' ನಟಿ ಸಣ್ಣ ಆಗಿದ್ದೇಗೆ?
ಇತ್ತೀಚಿನ ದಿನಗಳಲ್ಲಿ ಫಿಟ್ನೆಸ್ ಕಡೆಗೆ ಎಲ್ಲರೂ ಗಮನ ಕೊಡುತ್ತಿದ್ದಾರೆ. ಒಂದು ವೇಳೆ ವರ್ಕೌಟ್, ಡಯೆಟ್ ಅಂತ ಗಮನ ಕೊಡದೆ ಹೋದಲ್ಲಿ ಬೊಜ್ಜು, ದೇಹದ ತೂಕ ಹೆಚ್ಚಾಗುತ್ತದೆ. ಈಗಿನ ಜೀವನ ಶೈಲಿಯ ಜೊತೆಗೆ ಆಹಾರ ಕ್ರಮವೂ ಅದೇ ರೀತಿ ಇರುವ ಕಾರಣ ಆರೋಗ್ಯವಾಗಿ ಹಾಗೂ ಫಿಟ್ನೆಸ್ ಕಾಪಾಡಿಕೊಳ್ಳಬೇಕಾದರೆ ಖಂಡಿತ ಡಯೆಟ್ ಅಥವಾ ವರ್ಕೌಟ್ ಮಾಡಲೇಬೇಕಾಗಿದೆ.
'ಗಟ್ಟಿಮೇಳ' ಧಾರಾವಾಹಿಯಲ್ಲಿ ಆರತಿ ಪಾತ್ರವನ್ನು ಆರಂಭದಲ್ಲಿ ಅಶ್ವಿನಿ ನಿರ್ವಹಣೆ ಮಾಡುತ್ತಿದ್ದರು. ಬಳಿಕ ಅವರು ಬದಲಾದರು. ಆಗ ಅಶ್ವಿನಿ ಸ್ವಲ್ಪ ಚಬ್ಬಿ ಚಬ್ಬಿಯಾಗಿ ಕಾಣಿಸಿಕೊಂಡಿದ್ದರು. ಈಗ ಸಿಕ್ಕಾಪಟ್ಟೆ ಸ್ಲಿಮ್ ಆಗಿದ್ದಾರೆ. ಹೀಗಾಗಿ ನೋಡುಗರಿಗೆಲ್ಲಾ ಇಷ್ಟೊಂದು ಸಣ್ಣ ಆಗಿದ್ದೇಗೆ ಎಂಬ ಕುತೂಹಲ. ಅದಕ್ಕೊಂದು ವಿಡಿಯೋ ಕೂಡ ಮಾಡಿ ಬಿಟ್ಟಿದ್ದಾರೆ ಅಶ್ವಿನಿ.

ಜಿಮ್‌ಗೆ ಹೋಗದೆ ತೂಕ ಇಳಿಕೆ
ನಟಿ ಅಶ್ವಿನಿ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದಾರೆ. ತನ್ನ ದಿನಚರಿ, ಹಳ್ಳಿ ಜೀವನ ಹೀಗೆ ಹಲವು ರೀತಿಯ ವಿಡಿಯೋಗಳನ್ನು ಮಾಡಿ, ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾ ಇರುತ್ತಾರೆ. ಅದೇ ಥರ ತಾವು ಸಣ್ಣ ಆಗಿದ್ದು ಹೇಗೆ ಎಂಬ ಮಾಹಿತಿಯನ್ನು ನೀಡಿದ್ದಾರೆ. 'ಗಟ್ಟಿಮೇಳ' ಧಾರಾವಾಹಿಯಲ್ಲಿ ಇದ್ದಾಗ, 60 ಕೆಜಿ ಇದ್ದರು. ಅದೇ ಸಮಯದಲ್ಲಿ ತೆಲುಗಿನಲ್ಲಿ ನಾಗಿಣಿ ಪಾತ್ರ ಮಾಡಲು ಅವಕಾಶ ಸಿಕ್ಕಿದಾಗ, ಸಣ್ಣ ಆಗಲೇ ಬೇಕಾಯಿತು. ಅದಕ್ಕಾಗಿ ಕಡಿಮೆ ಸಮಯದಲ್ಲಿಯೇ ತೂಕ ಇಳಿಸಿಕೊಂಡಿದ್ದಾರೆ. ಅದು ಜಿಮ್‌ಗೆ ಹೋಗದೆ, ಯಾವುದೇ ರೀತಿಯ ವರ್ಕೌಟ್ ಕೂಡ ಮಾಡದೆ. ಆಹಾರ ಕ್ರಮದಲ್ಲಿಯೇ ಸಣ್ಣ ಆಗಿದ್ದಾರೆ.
ಬೆಳಗ್ಗೆ 4ಕ್ಕೆ ಏಳುವ ಅಶ್ವಿನಿ
ಈ ಬಗ್ಗೆ ವಿಡಿಯೋ ಮಾಡಿರುವ ಅಶ್ವಿನಿ, "ನಾನು ಪ್ರತಿದಿನ ಬೆಳಗಿನ ಜಾವ 4 ಗಂಟೆಗೆ ಏಳುತ್ತೇನೆ. ಬೆಳಗ್ಗೆ ಅಷ್ಟು ಬೇಗ ಏಳುವುದರಿಂದ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ದಿನವೂ ಆಕ್ಟೀವ್ ಆಗಿ ಇರುತ್ತೀವಿ. ಅದರ ಜೊತೆಗೆ ಎದ್ದ ಕೂಡಲೇ ಮನೆಯಲ್ಲಿಯೇ ಒಂದಷ್ಟು ವ್ಯಾಯಾಮ ಮಾಡುತ್ತೇನೆ. ದೇಹದ ಬೊಜ್ಜನ್ನು ಕರಗಿಸುವಂತ ವ್ಯಾಯಾಮಗಳನ್ನು ಮಾಡುತ್ತೇನೆ" ಎಂದಿದ್ದಾರೆ.
ಅಶ್ವಿನಿ ಡಯೆಟ್ ಏನು?
ಜಿಮ್ ವರ್ಕೌಟ್ ಹೋಗುವವರು ಸಾಮಾನ್ಯವಾಗಿ ಪ್ರೊಟೀನ್‌ಗಳನ್ನು ಕುಡಿಯುತ್ತಾರೆ. ಇದರಿಂದ ಅವರಿಗೆ ಎನರ್ಜಿ ಸಿಗಲಿದೆ. ಆದರೆ ಅಶ್ವಿನಿ, ಆಹಾರ ಕ್ರಮ ಆರೋಗ್ಯಕರವಾಗಿದೆ. ಎದ್ದ ಕೂಡಲೇ ಸ್ವಲ್ಪ ವ್ಯಾಯಾಮ ಮಾಡಿ, 8 ಗಂಟೆಯ ಒಳಗೆ ರಾಗಿ ಮಾಲ್ಟ್ ಮಾಡಿಕೊಂಡು ಕುಡಿಯುತ್ತಾರೆ. ಬಳಿಕ 10 ಗಂಟೆಯ ಒಳಗೆ ಸೌತೆಕಾಯಿ, ಕ್ಯಾರೆಟ್ ಮತ್ತು ಆ ಸೀಸನ್‌ನಲ್ಲಿ ಸಿಗುವಂತ ಹಣ್ಣುಗಳನ್ನು ತಿನ್ನುತ್ತಾರೆ.

ಬೇಗ ಹಸಿವಾದರೆ ಏನು ಮಾಡಬೇಕು..?
ಆರಂಭದಲ್ಲಿ ಈ ರೀತಿಯ ಡಯೆಟ್ ಮಾಡುವುದು ಬಹಳ ಕಷ್ಟವೇ ಸರಿ. ಹೀಗಾಗಿ ಮಧ್ಯದಲ್ಲಿ ಹಸಿವಾದವರಿಗೆ ಇನ್ನಷ್ಟು ಟಿಪ್ಸ್ ಅನ್ನು ನೀಡಿದ್ದಾರೆ. ಒಂದು ಗಂಟೆಯ ಒಳಗೆ ಮತ್ತೆ ಏನಾದರೂ ಹಸಿವಾದರೆ, ಒಂದು ಬಾಯಿಲ್ಡ್ ಎಗ್ ತಿನ್ನಬಹುದಂತೆ. ಅಶ್ವಿನಿ, ಆ ಮೊಟ್ಟೆಗೆ ಉಪ್ಪು, ಖಾರ, ಪೆಪ್ಪರ್ ಏನನ್ನು ಬೆರೆಸುವುದಿಲ್ಲ. ಮಧ್ಯಾಹ್ನದ ಊಟಕ್ಕೆ ಬ್ರೌನ್ ರೈಸ್ ಹಾಗೂ ಸೊಪ್ಪಿನ ಸಾರು ತಿನ್ನುತ್ತಾರೆ. ಊಟದಲ್ಲಿ ತರಕಾರಿ, ಸೊಪ್ಪು ಹೆಚ್ಚಾಗಿ ಇದ್ದರೆ ಬೆಸ್ಟ್ ಎನ್ನುತ್ತಾರೆ ಅಶ್ವಿನಿ. ನೋಡಿ ನೀವೂ ಸಣ್ಣ ಆಗಬೇಕು ಅಂದರೆ ಒಮ್ಮೆ ಈ ಡಯೆಟ್ ಪ್ಲ್ಯಾನ್ ಟ್ರೈ ಮಾಡಿ.


Click it and Unblock the Notifications











