For Quick Alerts
  ALLOW NOTIFICATIONS  
  For Daily Alerts

  ಮತ್ತೆ ಥ್ರಿಲ್ ಕೊಡುತ್ತಿದೆ ಗಟ್ಟಿಮೇಳ: ಅಂಥದ್ದೇನು ನಡೆಯುತ್ತಿದೆ ?

  By ಎಸ್ ಸುಮಂತ್
  |

  ಧಾರಾವಾಹಿಗಳ ಕಥೆ ಕಾಲ ಕಾಲಕ್ಕೆ ಬದಲಾಗುತ್ತಾ ಹೋಗುತ್ತಿರುತ್ತದೆ. ಒಂದೇ ಸಾರಿಗೆ ಪೂರ್ತಿ ಕಥೆಯನ್ನು ಬರೆಯುವುದು ಕಷ್ಟ, ಒಂದು ವೇಳೆ ಬರೆದರೂ ಅದು ಒಮ್ಮೊಮ್ಮೆ ಬದಲಾಗುತ್ತಾ ಹೋಗುತ್ತದೆ. ಯಾಕೆಂದರೆ, ಪಾತ್ರಗಳು ಆಗಾಗ ಬದಲಾಗುವ ಕಾರಣಕ್ಕೆ ಕಥೆಯಲ್ಲೂ ಬದಲಾವಣೆಯಾಗುತ್ತಿರುತ್ತದೆ. ಇದೀಗ 'ಗಟ್ಟಿಮೇಳ' ಧಾರಾವಾಹಿ ಹತ್ತಿರಹತ್ತಿರ ಸಾವಿರ ಸಂಚಿಕೆಯ ಬಳಿ ಹೋಗುತ್ತಿದೆ. ಆದರೆ ವೇದಾಂತ್‌ಗೆ ತನ್ನ ಸ್ವಂತ ತಂದೆ ತಾಯಿ ಯಾರು ಎಂಬುದು ಮಾತ್ರ ತಿಳಿದಿಲ್ಲ. ಇದೀಗ ಆ ಸಾಹಸಕ್ಕೆ ವಿಕ್ರಾಂತ್ ಮತ್ತು ಅಮೂಲ್ಯ ಕೈ ಹಾಕಿದ್ದಾರೆ.

  'ಗಟ್ಟಿಮೇಳ' ಧಾರಾವಾಹಿ ಆರಂಭವಾದಾಗಿನಿಂದ ನಂಬರ್ ಒನ್ ಸ್ಥಾನದಲ್ಲಿತ್ತು. ಆದರೆ ಬರುತ್ತಾ ಬರುತ್ತಾ ತನ್ನ ಸ್ಥಾನದಲ್ಲಿ ಏರುಪೇರಾಗಿತ್ತು. ಇಡೀ ಫ್ಯಾಮಿಲಿ ಕುಳಿತು ನೋಡುವ ಕಥೆಯಾಗಿದ್ದರಿಂದ ಬೇಸರ ಮಾಡಿಕೊಳ್ಳುವಷ್ಟು ಡೌನ್ ಆಗಿರಲಿಲ್ಲ. ಆದರೆ ಇತ್ತೀಚೆಗೆ ಬರೀ ಮಾತುಕತೆಯೇ ಕಾಣುತ್ತಿದ್ದರಿಂದ ಧಾರಾವಾಹಿ ನೋಡುಗರಿಗೆ ಸ್ವಲ್ಪ ಬೋರಿಂಗ್ ಎನಿಸಿತ್ತು. ಇದೀಗ ಕಥೆಗೆ ಮತ್ತೆ ಸ್ಟ್ರೆಂಥ್ ಕೊಡುವುದಕ್ಕೆ ಟೀಂ ರೆಡಿಯಾಗಿದೆ.

  ವೈಶು ಕುತಂತ್ರದಿಂದ ರಾಹುಲ್ ಮತ್ತು‌ ಹೂವಿ ನಡುವಿನ ಸತ್ಯ ಮಾಲಿನಿಗೆ ತಿಳಿಯುತ್ತಾ..?ವೈಶು ಕುತಂತ್ರದಿಂದ ರಾಹುಲ್ ಮತ್ತು‌ ಹೂವಿ ನಡುವಿನ ಸತ್ಯ ಮಾಲಿನಿಗೆ ತಿಳಿಯುತ್ತಾ..?

  ಈ ಬಾರಿ ಯಾವ ಅನಾಹುತವಾಗುತ್ತೆ?

  ಈ ಬಾರಿ ಯಾವ ಅನಾಹುತವಾಗುತ್ತೆ?

  ವಸಿಷ್ಠ ವಂಶದಲ್ಲಿ ದೊಡ್ಡ ಗುಟ್ಟು ರಟ್ಟಾಗಬೇಕಿದೆ. ಅದು ವೇದಾಂತ್, ವಿಕ್ರಾಂತ್, ಧ್ರುವ, ಆದ್ಯಾಳ ನಿಜವಾದ ತಂದೆ-ತಾಯಿ ಯಾರು ಎಂಬ ಗುಟ್ಟು. ಆ ಗುಟ್ಟನ್ನು ತಿಳಿಯುವುದಕ್ಕಾಗಿ ಈ ಮುಂಚೆ ಎಲ್ಲಾ ರೀತಿಯ ಫ್ಲ್ಯಾನ್ ಮಾಡಲಾಗಿತ್ತು. ಆದರೆ ಇನ್ನೇನು ಎಲ್ಲಾ ಸತ್ಯ ಗೊತ್ತಾಗಬೇಕು ಎನ್ನುವಷ್ಟರಲ್ಲಿ ದೊಡ್ಡ ಅನಾಹುತವೇ ಆಗಿ ಹೋಗಿದೆ. ಕಡೆ ಗಳಿಗೆಯಲ್ಲಿ ಸತ್ಯ ತಿಳಿದುಕೊಂಡ ಧ್ರುವನಿಗೆ ಆಕ್ಸಿಡೆಂಟ್ ಆಗಿ ಸತ್ಯವನ್ನು ಹೇಳಲಾಗದೆ ಸುಮ್ಮನೆ ಕುಳಿತು ಬಿಟ್ಟಿದ್ದಾನೆ. ವೇದಾಂತ್ ಇಷ್ಟ ಆಗಲ್ಲ ಎಂಬ ಕಾರಣಕ್ಕೆ ಆ ವಿಚಾರವನ್ನು ಅಲ್ಲಿಗೆ ಬಿಟ್ಟಿದ್ದರು. ಆದರೆ ಇದೀಗ ಮತ್ತೆ ಸತ್ಯದ ಹುಡುಕಾಟದಲ್ಲಿ ಇಡೀ ಫ್ಯಾಮಿಲಿ ತೊಡಗಿದ್ದಾರೆ. ಆದರೆ ಈ ಸಲ ಸತ್ಯ ತಿಳಿಯಲು ಹೋದಾಗ ಮತ್ತೆ ತೊಂದರೆಯಾಗುತ್ತಾ..? ಅಥವಾ ಸುಹಾಸಿನಿ ಸತ್ಯ ಬಯಲಾಗುತ್ತಾ ಎಂಬ ಪ್ರಶ್ನೆಗಳು ಎದುರಾಗಿವೆ.

  ಇಂದಿನ ಸಂಚಿಕೆಯಲ್ಲಿ ಆರ್ಯವರ್ಧನ್ ಇರೋದಿಲ್ವಾ? 'ಜೊತೆ ಜೊತೆಯಲಿ' ಕಥೆಯೇನು?ಇಂದಿನ ಸಂಚಿಕೆಯಲ್ಲಿ ಆರ್ಯವರ್ಧನ್ ಇರೋದಿಲ್ವಾ? 'ಜೊತೆ ಜೊತೆಯಲಿ' ಕಥೆಯೇನು?

  ಐಡಿಯ ಹಿಂದೆ ಹೋಗುತ್ತಾಳಾ ಅಮೂಲ್ಯ?

  ಐಡಿಯ ಹಿಂದೆ ಹೋಗುತ್ತಾಳಾ ಅಮೂಲ್ಯ?

  ನಿಜವಾದ ತಂದೆ ತಾಯಿಯನ್ನು ಹುಡುಕುವುದಕ್ಕೆ ಆಫೀಸಿನಲ್ಲಿ ಕೆಲಸ ಮಾಡುವ ಪಿಎ ಸಹಾಯ ಮಾಡುತ್ತಿದ್ದಾರೆ. ಸಾಕಷ್ಟು ವಿಚಾರಗಳನ್ನು ಈಗಾಗಲೇ ಕಲೆ ಹಾಕಿದ್ದಾರೆ. ಆ ವಿಚಾರದಲ್ಲಿ ಇದೀಗ ಸತ್ಯ ನಾರಾಯಣನ ಸುಳಿವು ಸಿಕ್ಕಿದೆ. ವಸಿಷ್ಠ ವಂಶಕ್ಕೆ ಸಂಬಂಧಿಸಿದ ಹಳೆ ಮನೆ ಬಳಿ ಹೋಗಿದ್ದಾಗ ವೋಟರ್ ಐಡಿ ಕಾರ್ಡ್ ಒಂದು ಸಿಕ್ಕಿದೆ. ಆ ಐಡಿ ಕಾರ್ಡಿನಲ್ಲಿ ಸತ್ಯನಾರಾಯಣ ಎಂಬ ಹೆಸರಿದೆ. ಆದರ ಮುಖ ಸರಿಯಾಗಿ ಕಾಣುತ್ತಿಲ್ಲ.

  ಸತ್ಯ ಬಯಲು ಮಾಡಿದ ಅಜ್ಜಿ

  ಸತ್ಯ ಬಯಲು ಮಾಡಿದ ಅಜ್ಜಿ

  ಅಮೂಲ್ಯ ಮತ್ತು ಪಿಎ ಈ ಸತ್ಯನಾರಾಯಣ್ ಬಗ್ಗೆ ಮಾತನಾಡುವಾಗ ಅಜ್ಜಿ ಇದನ್ನು ಕೇಳಿಸಿಕೊಂಡಿದ್ದಾರೆ. ಸತ್ಯನಾರಾಯಣ್ ನನ್ನ ದೊಡ್ಡ ಅಳಿಯ, ವೈದೇಹಿ ಗಂಡ ಎಂದು ಹೇಳಿದಾಗ ವೈಜಯಂತಿ ಎಂದು ಹೇಳಿಕೊಂಡಿರುವ ಮಗಳು ಮನದಲ್ಲಿಯೇ ಗಂಡನ ನೆನಪು ನೆನೆದು ಸಂತಸ ಪಡುತ್ತಿದ್ದಾಳೆ. ಅಮೂಲ್ಯಾಗೆ ಅಜ್ಜಿ ಇರುವ ಸತ್ಯವನ್ನೆಲ್ಲಾ ಹೇಳಿದ್ದಾರೆ. ಆದರೆ ಈ ಸತ್ಯ ಹೇಳಿದೆ ಅಂತ ವೇದಾಂತ್‌ಗೆ ಹೇಳಬೇಡಮ್ಮ ಎಂದಿದ್ದಾರೆ.

  ವೇದಾಂತ್‌ಗೆ ಸತ್ಯ ತಿಳಿಯುತ್ತಾ

  ವೇದಾಂತ್‌ಗೆ ಸತ್ಯ ತಿಳಿಯುತ್ತಾ

  ಅಪ್ಪ-ಅಮ್ಮ ಇಲ್ಲ ಎಂದು ಹೇಳಿದಾಗ ಮಕ್ಕಳಿನ್ನು ತೀರಾ ಚಿಕ್ಕವರು. ಅಪ್ಪ ಅಮ್ಮ ಇಲ್ಲದೆ ಹೋದರು ಸ್ವಂತ ಮಕ್ಕಳಂತೆ ಸಾಕಿದ್ದಾರೆ ಎಂದು ಸುಹಾಸಿನಿ ಮೇಲೆ ವೇದಾಂತ್‌ಗೆ ಅಪಾರವಾದ ನಂಬಿಕೆ ಇದೆ. ಹೀಗಾಗಿ ಅವಳು ಮಾಡುವ ಕುತಂತ್ರಗಳನ್ನು ವೇದಾಂತ್ ನಂಬುತ್ತಿಲ್ಲ. ಆದರೆ ವಸಿಷ್ಠ ಮನೆಯಲ್ಲಿ ಎಲ್ಲಿಯೂ ಸತ್ಯನಾರಾಯಣ್ ಹಾಗೂ ವೈದೇಹಿಯ ಫೋಟೊ ಸಿಗುತ್ತಿಲ್ಲ. ಹೀಗಾಗಿ ಸತ್ಯನಾರಾಯಣ್ ಫೋಟೊ ನೋಡಿದರೂ ಗೊತ್ತಾಗುವುದು ಕಷ್ಟ. ಆದರೆ ವೇದಾಂತ್ ಎಲ್ಲಿ ಆ ಫೋಟೊ ನೋಡಿ ಬಿಡುತ್ತಾರೋ ಎಂಬ ಆತಂಕ ಅಮೂಲ್ಯ ಮುಖದಲ್ಲಿ ಕಾಣುತ್ತಿದೆ.

  English summary
  Gattimela Serial August 22nd Episode Written Update. Here is the details.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X