Don't Miss!
- Sports
Asia Cup 2023: ಎಸಿಸಿ ಸಭೆಯಲ್ಲಿ ತೀರ್ಮಾನ: ಏಷ್ಯಾಕಪ್ ಟೂರ್ನಿ ಪಾಕಿಸ್ತಾನದಿಂದ ಸ್ಥಳಾಂತರ!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Gattimela: ವೀಕ್ಷಕರ ನೆಚ್ಚಿನ 'ಗಟ್ಟಿಮೇಳ' ಧಾರಾವಾಹಿ ಸಾವಿರ ಸಂಚಿಕೆ ಪೂರೈಸಿದ ಸಂಭ್ರಮ
ಸೀರಿಯಲ್ ಪ್ರಿಯರಿಗೆ ಇಲ್ಲಿದೆ ಒಂದು ಸಿಹಿ ಸುದ್ದಿ! ನಿಮ್ಮ ಹೆಚ್ಚಿನ ಧಾರಾವಾಹಿ ಗಟ್ಟಿಮೇಳವೂ ಯಶಸ್ವಿ ಸಾವಿರ ಸಂಚಿಕೆ ಪೂರೈಸಿ ಮುನ್ನುಗುತ್ತಿದೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕೌಟುಂಬಿಕ ಕಥಾಹಂದರವನ್ನೊಳಗೊಂಡ ಗಟ್ಟಿಮೇಳ ಧಾರಾವಾಹಿಯು ಸಾವಿರ ಸಂಚಿಕೆ ಪೂರೈಸಿದೆ.
ಬರೋಬ್ಬರಿ ನಾಲ್ಕು ವರ್ಷಗಳಿಂದ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗಟ್ಟಿಮೇಳ ಧಾರಾವಾಹಿಯು ಸದ್ಯ ಎಂಟು ಗಂಟೆಯ ಸ್ಲಾಟ್ ಕಿಂಗ್ ಆಗಿ ಮೋಡಿ ಮಾಡಿದೆ. ಧಾರಾವಾಹಿ ಆರಂಭದಿಂದ ಹಿಡಿದು ಇಲ್ಲಿಯವರೆಗೆ ಪ್ರತಿನಿತ್ಯವೂ ಕಥೆಯಲ್ಲಿ ಟ್ವಿಸ್ಟ್ ನೀಡುವ ಮೂಲಕ ವೀಕ್ಷಕರಿಗೆ ಮನರಂಜನೆಯ ಮಹಾಪೂರವನ್ನೇ ಉಣಬಡಿಸುತ್ತಿರುವ ಗಟ್ಟಿಮೇಳ ಧಾರಾವಾಹಿಯು ಪಾತ್ರವರ್ಗದ ಮೂಲಕವೂ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.
Puttakkana
Makkalu:
ಶೂಟಿಂಗ್
ಸ್ಪಾಟ್ನಲ್ಲಿ
ಜಾಸ್ತಿ
ಟೈಮ್
ಇದ್ರೆ,
ಸ್ನೇಹಾ
ತಲೆ
ಸುತ್ತಿ
ಬೀಳೋದೆ!
"ವೇದ್ಯಾ" ಎಂಬ ಹೆಸರಿನ ಮೂಲಕ ಧಾರಾವಾಹಿ ವೀಕ್ಷಕರ ಹೃದಯದಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ನಾಯಕ ವೇದಾಂತ್ ಹಾಗೂ ನಾಯಕಿ ಅಮೂಲ್ಯ ಅವರ ಅಭಿನಯಕ್ಕೆ ಮನಸೋಲದವರಿಲ್ಲ. ಈ ಧಾರಾವಾಹಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ.

'ವೇದ್ಯಾ' ಜೋಡಿ ಮೋಡಿ
ನವಿರಾದ ಪ್ರೇಮಕಥೆಯ ಜೊತೆಗೆ ಒಂಚೂರು ರೊಮ್ಯಾನ್ಸ್, ಒಂಚೂರು ಎಮೋಷನ್ ನ ಜೊತೆಗೆ ಈ ಮುದ್ದು ಜೋಡಿಗಳ ತರಲೆ ತುಂಟಾಟಗಳು ವೀಕ್ಷಕರ ಕಣ್ಮನ ಸೆಳೆಯುತ್ತದೆ. ವೇದ್ಯಾ ಜೋಡಿ ಕಂಡು ಫಿದಾ ಆಗಿರುವ ಯುವಜನರಂತೂ ತನ್ನ ಗಂಡ ಹೀಗಿರಲಿ, ತನ್ನ ಹೆಂಡತಿ ಹೀಗಿರಲಿ ಎಂದು ಬಯಸುವುದರಲ್ಲಿ ಆಶ್ಚರ್ಯವಿಲ್ಲವೆನ್ನಿ!

ವೀಕ್ಷಕರಿಗೆ ಹತ್ತಿರವಾದ ಪಾತ್ರಗಳು
ಕೇವಲ ನಾಯಕ ನಾಯಕಿ ಪಾತ್ರವಲ್ಲದೇ ಆರತಿ - ವಿಕ್ಕಿ, ಅದಿತಿ - ಧ್ರುವ, ಅಂಜಲಿ, ವೈದೇಹಿ, ವೈಜಯಂತಿ, ಸಾರ್ಥಕ್ - ಆದ್ಯಾ, ಖಳನಾಯಕಿ ಸುಹಾಸಿನಿ, ಚಂದ್ರಕಲಾ, ಪರಿಮಳಾ - ಮಂಜುನಾಥ್ ಸೇರಿದಂತೆ ಪ್ರತಿಯೊಂದು ಪಾತ್ರಗಳು ಕೂಡಾ ವೀಕ್ಷಕರಿಗೆ ತುಂಬಾ ಹತ್ತಿರ ಎಂದೆನಿಸಿಬಿಟ್ಟಿದೆ. ಇದರ ಜೊತೆಗೆ 'ಗಟ್ಟಿಮೇಳ'ದ ಕೇಂದ್ರಬಿಂದು ಎಂದರೆ ಅದು ಕಾಂತ ಪಾತ್ರ. ಪ್ರತಿ ಸಂಚಿಕೆಯಲ್ಲೂ ನವಿರಾದ ಹಾಸ್ಯದ ಮೂಲಕ ಪ್ರೇಕಕ್ಷಕರನ್ನು ನಗೆಯ ಗಡಲಲ್ಲಿ ಕಾಂತ ಪಾತ್ರಕ್ಕೂ ಕೂಡಾ ಅಭಿಮಾನಿ ವರ್ಗವಿದೆ.

1000 ಅಧಿಕ ಅಭಿಮಾನಿ ಪೇಜ್‌ಗಳು
ಪ್ರತಿ ವರ್ಷ ಜೀ ಕುಟುಂಬ ಅವಾರ್ಡ್‌ನಲ್ಲಿ ಜನ ಮೆಚ್ಚಿದ ಧಾರಾವಾಹಿ, ನಾಯಕ ನಟಿ, ನಾಯಕ ನಟ ಹಾಗೂ ಅತ್ಯುತ್ತಮ ರೇಟೆಡ್ ಸೀರಿಯಲ್ ಅವಾರ್ಡ್‌ಗಳನ್ನು ಪಡೆದುಕೊಂಡಿರುವ 'ಗಟ್ಟಿಮೇಳ' ಧಾರಾವಾಹಿಯು ಇಡೀ ಧಾರವಾಹಿಗಳ ಇತಿಹಾಸದಲ್ಲಿ ಸಾವಿರಕ್ಕೂ ಅಧಿಕ ಅಭಿಮಾನಿಗಳ ಪೇಜ್‌ಗಳನ್ನು ಹೊಂದಿದೆ. 'ದಿ ಬಿಗ್ ಫ್ಯಾನ್ ಬೇಸ್ ಸೀರಿಯಲ್ ಆಫ್ ಡಿಕೇಡ್' ಅರ್ಥಾತ್ ಈ ದಶಕದ ಅತಿ ಹೆಚ್ಚು ಫ್ಯಾನ್ ಪೇಜ್‌ಗಳನ್ನು ಹೊಂದಿರುವ ಧಾರಾವಾಹಿ ಎಂದರೆ ಅದು "ಗಟ್ಟಿಮೇಳ".

ಟಿಆರ್‌ಪಿಯಲ್ಲೂ ಮುಂದು
ಆರಂಭದ ದಿನಗಳಿಂದಲೂ ಟಿಆರ್‌ಪಿ ರೇಟಿಂಗ್‌ನಲ್ಲಿಯೂ ಮುಂದಿರುವ ಗಟ್ಟಿಮೇಳ ಧಾರಾವಾಹಿಯು ಅತಿ ಹೆಚ್ಚು ಬಾರಿ ನಂಬರ್ 1 ಪಡೆದ ಧಾರಾವಾಹಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದರ ಜೊತೆಗೆ 'ಗಟ್ಟಿಮೇಳ' ದಾಖಲೆಯ 16.8 ಟಿವಿಆರ್‌ಗಳ ಮೂಲಕ ಮತ್ತೊಂದು ಇತಿಹಾಸವನ್ನು ಕೂಡಾ ಗಟ್ಟಿಮೇಳ ಸೃಷ್ಟಿಸಿದೆ. ಇದೇ ಗುರುವಾರ ಕೊಪ್ಪಳದ ಕುಕನೂರು ಗ್ರಾಮದಲ್ಲಿ ಸಾವಿರ ಸಂಚಿಕೆಯ ವಿಶೇಷ 'ಜೀ ಕನ್ನಡ ಗಟ್ಟಿಮೇಳ ಜಾತ್ರೆ' ಅದ್ಧೂರಿಯಾಗಿ ನಡೆದಿದ್ದು ಇದೇ ಭಾನುವಾರ ಮಧ್ಯಾಹ್ನ 3.00 ಕ್ಕೆ ನಿಮ್ಮ ನೆಚ್ಚಿನ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.