ಜಾಹೀರಾತಿನಲ್ಲಿ ರಕ್ಷ್ ಜೊತೆಗೆ ನಿಶಾ ಇಲ್ಲ ಎಂದು ಬೇಸರ ಮಾಡಿಕೊಂಡ ಫಾನ್ಸ್

By ಪ್ರಿಯಾ ದೊರೆ

'ಗಟ್ಟಿಮೇಳ' ಧಾರಾವಾಹಿ ಎಲ್ಲರಿಗೂ ಅಚ್ಚುಮೆಚ್ಚು. ಈ ಧಾರಾವಾಹಿ ಶುರುವಾಗಿ ವರ್ಷಗಳೇ ಕಳೆದರೂ ಕೂಡ ಇಂದಿಗೂ ಟಾಪ್ ಸ್ಥಾನದಲ್ಲೇ ಇದೆ. ಇದರಲ್ಲಿ ವೇದಾಂತ್ ಹಾಗೂ ಅಮೂಲ್ಯ ಜೋಡಿಯನ್ನು ತೆರೆಮೇಲೆ ಒಟ್ಟಿಗೆ ನೋಡಲು ಪ್ರೇಕ್ಷಕರು ಬಯಸುತ್ತಾರೆ. ಕನ್ನಡ ಕಿರುತೆರೆಯಲ್ಲಿ ಮಿಂಚುತ್ತಿರುವ ನಟರ ಪೈಕಿ ಮುಂಚೂಣಿಯಲ್ಲಿ ನಿಲ್ಲುವುದು ನಟ ರಕ್ಷ್. ಕನ್ನಡ ಕಿರುತೆರೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಸ್ಟಾರ್ ರಕ್ಷ್.

ಹಲವು ವರ್ಷಗಳಿಂದ ಸ್ಮಾಲ್ ಸ್ಕ್ರೀನ್ ಮೂಲಕ ಕಲಾದೇವಿಯ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. 'ಪುಟ್ಟ ಗೌರಿ' ಹಾಗೂ 'ಗಟ್ಟಿಮೇಳ' ಧಾರಾವಾಹಿ ಮೂಲಕ ಹಿಟ್ ಆಗಿದ್ದಾರೆ. ನಟ ರಕ್ಷ್ 'ಗಟ್ಟಿಮೇಳ' ಸೀರಿಯಲ್ ನಲ್ಲಿ ನಟಿಸುವುದಕ್ಕೂ ಮುನ್ನ 'ಪುಟ್ಟಗೌರಿ ಮದುವೆ' ಧಾರಾವಾಹಿಯಲ್ಲಿ ನಟಿಸಿದ್ದರು. ಈ ಧಾರಾವಾಹಿಯಲ್ಲಿ ನಟಿಸಿದ ಬಳಿಕ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. 'ನನಗೂ ನಿನಗೂ', 'ರೆಡ್', 'ನರಗುಂದ ಬಂಡಾಯ' ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ನಟಿಸಬೇಕು, ಸ್ಟಾರ್ ಆಗಬೇಕು ಎಂದು ಕನಸು ಕಂಡ ರಕ್ಷ್, ಮೊದ ಮೊದಲು ಬಹಳ ಕಷ್ಟ ಪಟ್ಟರಂತೆ.

Gattimela serial Fame Actor Rakshith Gowda/Rakksh Biography and Career

ಒಂದು ಚಾನ್ಸ್ ಪಡೆಯುವುದಕ್ಕಾಗಿ ಸಾಕಷ್ಟು ಅಲೆದಾಡಬೇಕಾಯ್ತಂತೆ. ಆದರೆ, ಈಗ ರಕ್ಷ್ ಅಭಿಮಾನಿಗಳ ಸ್ಟಾರ್ ಆಗಿದ್ದು, ಅವರ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ರಕ್ಷ್‌ಗೆ ಫಾಲೋವರ್ಸ್ ಸಂಖ್ಯೆ ಹೆಚ್ಚೇ ಇದೆ. ಇನ್ ಸ್ಟಾಗ್ರಾಂನಲ್ಲಿ 2 ಲಕ್ಷದ 99 ಸಾವಿರ ಫಾಲೋವರ್ಸ್ ಇದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಫೋಟೋಗಳು, ಹಾಗೂ ತಮ್ಮ ಪ್ರವಾಸದ ಬಗೆಗಿನ ಅಪ್ ಡೇಟ್‌ ಹಂಚಿಕೊಳ್ಳುತ್ತಿರುತ್ತಾರೆ. ಮೊದಲೇ ಹೇಳಿದ ಹಾಗೇ ರಕ್ಷ್ ಗೆ ಅಭಿಮಾನಿಗಳ ಸಂಖ್ಯೆ ಏನು ಕಡಿಮೆ ಇಲ್ಲ.

ರಕ್ಷ್‌ಗೆ ಮಹಿಳಾ ಅಭಿಮಾನಿಗಳ ಸಂಖ್ಯೆ ಹೆಚ್ಚಿದೆ ಎಂದೇ ಹೇಳಬಹುದು. ರಕ್ಷ್ ಅವರ ಸ್ಟೈಲಿಶ್ ಲುಕ್‌ಗೆ ಫಿದಾ ಆಗದ ಹುಡುಗಿಯರಿಲ್ಲ. ಸೋಶಿಯಲ್ ಮೀಡಿಯಾ ಫಾಲೋವರ್ಸ್‌ನಲ್ಲೂ ಹೆಚ್ಚು ಹುಡುಗಿಯರೇ ಇದ್ದು, ಇವರ ಫೋಟೋಗಳಿಗೆ ಲೈಕ್, ಕಾಮೆಂಟ್ ಮೂಲಕ ಮೆಚ್ಚುಗೆ ಸೂಚಿಸುತ್ತಾರೆ. ಬಿಎ, ಎಲ್ ಎಲ್ ಬಿ ಓದಿರುವ ರಕ್ಷ್ ಅವರು ಬಹಕಾಲದ ಗೆಳತಿ ಅನ್ನು ವಿವಾಹವಾಗಿದ್ದಾರೆ. ಒಟ್ಟಿಗೆ ಓದಿ ಮನೆಯವರ ಒಪ್ಪಿಗೆ ಪಡೆದು ಮದುವೆಯಾದ ಈ ಜೋಡಿ, ಎಂದಿಗೂ ಲವ್, ಪ್ರೀತಿ ಎಂದು ಸುತ್ತಾಡಿದವರಲ್ಲವಂತೆ. ಇನ್ನು ರಕ್ಷ್ ಅವರಿಗೆ ಕಾರು ಎಂದರೆ ಸಕತ್ ಕ್ರೇಜ್.

ಎರಡು ವರ್ಷಗಳ ಹಿಂದೆ ದುಬಾರಿ ಆಡಿ ಎ5 ಸ್ಪೋರ್ಟ್ ಬ್ಯಾಕ್ ಕಾರು ಖರೀದಿ ಮಾಡಿದ್ದಾರೆ. ತಮ್ಮ ಸ್ವಂತ ದುಡಿಮೆಯಲ್ಲಿ ಈ ಕಾರನ್ನು ಖರೀದಿಸಿದ್ದು, ಸಿಕ್ಕಾಪಟ್ಟೆ ಖುಷಿ ಪಟ್ಟಿದ್ದರು. 'ಗಟ್ಟಿಮೇಳ' ಧಾರಾವಾಹಿಯಲ್ಲಿ ವೇದಾಂತ್ ಮತ್ತು ಅಮೂಲ್ಯ ಜೋಡಿಯನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದು, ಇವರಿಬ್ಬರನ್ನು ನಿತ್ಯ ಕಿರುತೆರೆಯಲ್ಲಿ ನೋಡುವುದಕ್ಕೆ ಇಷ್ಟ ಪಡುತ್ತಾರೆ. ಹೀಗಿರುವಾಗಲೇ ಜಾಹೀರಾತು ಒಂದರಲ್ಲಿ ರಕ್ಷ್ ಜೊತೆಗೆ ಈಗ ಮಲೈಕಾ ವಾಸುಪಾಲ್ ಅವರು ನಟಿಸಿದ್ದಾರೆ. ಆನ್ ಲೈನ್ ಬಟ್ಟೆ ಶಾಪಿಂಗ್ ಜಾಹೀರಾತಿನಲ್ಲಿ ಇವರಿಬ್ಬರು ನಟಿಸಿದ್ದು, ಪ್ರೇಕ್ಷಕರು ಅಮೂಲ್ಯ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಹೇಳಿದ್ದಾರೆ.

Gattimela serial Fame Actor Rakshith Gowda/Rakksh Biography and Career

ರಕ್ಷ್ ಹಾಗೂ ನಿಶಾ ರವಿಕೃಷ್ಣನ್ ಅವರನ್ನೇ ನೋಡಲು ಬಯಸಿದ್ದಾರೆ. ಕೆಲವರು ಇವರಿಬ್ಬರ ಜೋಡಿಯೂ ಸೂಪರ್ ಆಗಿದೆ. ರಕ್ಷ್ ಅವರ ಔಟ್ ಫಿಟ್ ಅಂತೂ ಸೂಪರ್ ಎಂದು ಹೇಳಿದ್ದಾರೆ. ಇನ್ನು ಈ ಕಮೆಂಟ್ ಗಳನ್ನು ನೋಡಿದ ಮೇಲಾದರೂ, ಮುಂದಿನ ಜಾಹೀರಾತಿಗೆ ರಕ್ಷ್ ಅವರು ನಿಶಾ ಅವರೊಂದಿಗೆ ನಟಿಸುತ್ತಾರಾ ಎಂದು ಕೂಡ ಕೆಲವರು ಯೋಚಿಸಿದ್ದಾರೆ.

More from Filmibeat

English summary
Gattimela serial Fame Actor Rakshith Gowda Biography and Career. Gattimela serial Vedanth real life and new add. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X