ಶಿವಮೊಗ್ಗ ಮೂಲದ ನಟಿ ಶರಣ್ಯಾ ಶೆಟ್ಟಿ ಲೈಫ್ ಸ್ಟೋರಿ ಇಲ್ಲಿದೆ!
ಹಿರಿತೆರೆ ಮೂಲಕ ಬಣ್ಣದ ಯಾನ ಆರಂಭಿಸಿದರೂ ನಟಿ ಶರಣ್ಯಾ ಶೆಟ್ಟಿಗೆ ಹೆಸರು ತಂದುಕೊಟ್ಟಿದ್ದು ಮಾತ್ರ ಕಿರುತೆರೆ. ಗಟ್ಟಿಮೇಳದ ಸಾಹಿತ್ಯ ಈಗ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರ ಮುಂದಿನ ಚಿತ್ರ, ಧಾರಾವಾಹಿ ಹಾಗೂ ಬಣ್ಣದ ಲೋಕದ ಜರ್ನಿ ಬಗ್ಗೆ ತಿಳಿಯೋಣ ಬನ್ನಿ..
ಎಂಜಿನಿಯರಿಂಗ್ ಓದಿರುವ ಶರಣ್ಯಾ ಶೆಟ್ಟಿ,ಈ ಚೆಲುವೆಯ ನಗು ತುಂಬಾ ಕ್ಯೂಟ್ ಆಗಿದೆ. ಕಾಲೇಜಿನಲ್ಲಿ ಫ್ಯಾಷನ್ ಟೀಂ ಸೇರಿಕೊಂಡ ಶರಣ್ಯಾ ಶೆಟ್ಟಿ ಅವರು ಹಲವು ಬಾರಿ ರ್ಯಾಂಪ್ ವಾಕ್ ಮಾಡಿದ್ದಾರೆ. ಮಾಡೆಲ್ ಆಗಿರುವ ಶರಣ್ಯಾ ಶೆಟ್ಟಿ ಅವರು ಇದೀಗ ನಟಿ ಕೂಡ ಆಗಿದ್ದಾರೆ.
ಸಿನಿಮಾ ವಿತರಕರಾಗಿರುವ ಶರಣ್ಯಾ ಶೆಟ್ಟಿ ಅವರ ತಂದೆಗೆ ಮಗಳು ನಟಿಸುವುದು ಇಷ್ಟವಿರಲಿಲ್ಲವಂತೆ. ಆದರೆ ಶರಣ್ಯಾ ಶೆಟ್ಟಿ ಅವರಿಗೆ ಮೊದಲಿನಿಂದಲೂ ತಾವೊಬ್ಬರು ನಟಿ ಆಗಬೇಕು ಎಂದು ಆಸೆ ಇತ್ತಂತೆ. ಮಾಡೆಲಿಂಗ್ ಗೆ ಎಂಟ್ರಿ ಕೊಟ್ಟ ಶರಣ್ಯಾ ಈಗ ನಟಿ ಕೂಡ ಆಗಿರುವುದು ಖುಷಿ ಇದೆ ಎನ್ನುತ್ತಾರೆ.

ಮೂಲತಃ ಶಿವಮೊಗ್ಗದವರಾದ ಶರಣ್ಯಾ ಶೆಟ್ಟಿ ಹುಟ್ಟಿ ಬೆಳೆದದ್ದೆಲ್ಲಾ ಬೆಂಗಳೂರಿನಲ್ಲಿ. ಎಂಜಿನಿಯರ್ ಓದು ಮುಗಿಸಿದ್ದು, ಶೇ.98 ಪಡೆದಿದ್ದಾರೆ. ಶರಣ್ಯಾ ಪೋಷಕರಿಗೆ ಮಗಳು ಡಾಕ್ಟರ್ ಅಥವಾ ಎಂಜಿನಿಯರ್ ಆಗಬೇಕು ಎಂಬ ಆಸೆ ಇತ್ತಂತೆ. ಆದರೆ ಶರಣ್ಯಾ ಆ್ಯಕ್ಟರ್ ಆಗಿದ್ದಾರೆ. ಇನ್ನು ಶರಣ್ಯಾ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದು, ಸದಾ ಫೋಟೋಶೂಟ್ ಮಾಡಿಸುತ್ತಿರುತ್ತಾರೆ. ಈ ಫೋಟೋಗಳನ್ನು ಅಪ್ ಲೋಡ್ ಮಾಡುತ್ತಲೇ ಇರುತ್ತಾರೆ.
ಕಾಲೇಜು ದಿನಗಳಲ್ಲೇ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟ ಶರಣ್ಯಾ ಶೆಟ್ಟಿ ಕ್ಯಾಟ್ ವಾಕ್ ಸೇರಿದಂತೆ ಎಲ್ಲವನ್ನೂ ಕಲಿತಿದ್ದರು. ಮಿಸ್ ಬೆಂಗಳೂರು ಸ್ಪರ್ಧೆಗೆ ಆಯ್ಕೆಯಾಗಿದ್ದರು. ನಂತರ ಮಿಸ್ ಇಂಡಿಯಾ 2018ರ ಫೈನಲ್‌ವರೆಗೂ ಶರಣ್ಯಾ ಸ್ಫರ್ಧೆ ಮಾಡಿದ್ದರು. ಬಳಿಕ 2019ರ ಮಿಸ್‌ಸೌತ್ ಇಂಡಿಯಾ ಕಿರೀಟವನ್ನು ಮುಡಿಗೇರಿಸಿಕೊಂಡರು. ಜೊತೆಗೆ ಮಿಸ್ ಕ್ವೀನ್ ಆಫ್ ಇಂಡಿಯಾ ಫೈನಲಿಸ್ಟ್ ಕೂಡಾ ಆಗಿದ್ದರು. ಮಾಡೆಲಿಂಗ್ ಕ್ಷೇತ್ರದಲ್ಲಿ ನನಗೆ ಭರವಸೆ ಬಂದ ಮೇಲೆ ಚಿತ್ರರಂಗದಲ್ಲಿ ನಟಿಸಿದರು.
ಶರಣ್ಯಾ ಶೆಟ್ಟಿ ಸಿನಿಮಾಗಳಲ್ಲಿ ನಟಿಸಿದ್ದರೂ ಅವರಿಗೆ ಹೆಸರುತಂದು ಕೊಟ್ಟಿದ್ದು ಮಾತ್ರ ಕಿರುತೆರೆ. ಗಟ್ಟಿಮೇಳ ಧಾರಾವಾಹಿಯಲ್ಲಿ ಸಾಹಿತ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ವಿಲನ್ ಪಾತ್ರಕ್ಕೆ ಬಣ್ಣ ಹಚ್ಚಿದ್ದ ಶರಣ್ಯಾರನ್ನು ಇಂದಿಗೂ ಸಾಹಿತ್ಯ ಹೆಸರಿನಲ್ಲೇ ಗುರುತಿಸುತ್ತಾರೆ. ಇನ್ನು ಶರಣ್ಯ ಅವರು ಗಟ್ಟಿಮೇಳ ಧಾರಾವಾಹಿ ಹೊರತು ಪಡಿಸಿ, ಮುದ್ದು ಲಕ್ಷ್ಮೀ, ಆಕಾಶ ದೀಪ ಸೇರಿದಂತೆ ಕೆಲ ಸೀರಿಯಲ್ ಗಳಲ್ಲಿ ನಟಿಸಿದ್ದಾರೆ. ಕಿರುತೆರೆಯಲ್ಲಿ ಹೆಚ್ಚು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ನಟಿ ಶರಣ್ಯಾ ಶೆಟ್ಟಿ ಅವರು ಕೇವಲ ಸಿನಿಮಾ, ಧಾರಾವಾಹಿಗಳಲ್ಲಿ ಅಷ್ಟೇ ಅಲ್ಲದೇ, ಆಲ್ಬಂ ಸಾಂಗ್ ಗಳಲ್ಲೂ ಬಣ್ಣ ಹಚ್ಚಿದ್ದಾರೆ. ಫ್ರೆಂಡ್ ಝೋನ್ಡ್ ಎಂಬ ಆಲ್ಬಂ ಸಾಂಗ್ ನಲ್ಲೂ ಕೂಡ ಕಾಣಿಸಿಕೊಂಡಿದ್ದಾರೆ. ಸದ್ಯ ಹಲವು ಸಿನಿಮಾಗಳಲ್ಲಿ ಬಣ್ಣ ಹಚ್ಚಿರುವ ಶರಣ್ಯ ಶೆಟ್ಟಿ ಅವರು ಪ್ಯಾರಲಲ್ ಯುನಿವರ್ಸ್ ಸೇರಿದಂತೆ ಇನ್ನೂ ಐದಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಶರಣ್ಯ ಅವರು ಅಭಿನಯಿಸಿರುವ ನಾಲ್ಕು ಚಿತ್ರಗಳು ರಿಲೀಸ್ ಗೆ ಸಜ್ಜಾಗಿವೆ. ಸ್ಫೂಕಿ ಕಾಲೇಜ್, ರವಿ ಬೋಪಣ್ಣ, ಪೆಂಟಗಾನ್ ಮತ್ತು ನಗುವಿನ ಹೂಗಳ ಮೇಲೆ ಚಿತ್ರಗಳು ಬಿಡುಗಡೆಯಾಗಬೇಕಿದೆ. ಈ ಚಿತ್ರಗಳ ಪೈಕಿ ರವಿ ಬೋಪಣ್ಣ ಚಿತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮಗಳ ಪಾತ್ರಕ್ಕೆ ಶರಣ್ಯ ಶೆಟ್ಟಿ ಬಣ್ಣ ಹಚ್ಚಿದ್ದಾರೆ.


Click it and Unblock the Notifications











