Raksh Gowda: ರಕ್ಷ್ ಗೌಡ ಬಳಿ ಇರುವ ಕಾರು, ಮನೆ ಎಲ್ಲವೂ ತುಂಬಾ ಸ್ಪೆಷಲ್!

By ಪೂರ್ವ

ರಕ್ಷ್ 'ಗಟ್ಟಿಮೇಳ' ಧಾರಾವಾಹಿಯ ಮೂಲಕ ಕಿರುತೆರೆಗೆ ಮರಳಿದರು. ರಕ್ಷ್ 'ಪುಟ್ಟಗೌರಿ ಮದುವೆ' ಸೀರಿಯಲ್ ಮೂಲಕ ಎಲ್ಲರ ಗಮನ ಸೆಳೆಯುವಂತೆ ಮಾಡಿದ್ದರು. ಈ ಸೀರಿಯಲ್ ಇವರಿಗೆ ಸಾಕಷ್ಟು ನೇಮು ಫೇಮು ತಂದುಕೊಟ್ಟಿದೆ.

ಈ ಧಾರಾವಾಹಿ ಕನ್ನಡ ಕಿರುತೆರೆ ವೀಕ್ಷಕರ ಹೃದಯದಲ್ಲಿ ಅವರಿಗೊಂದು ಭದ್ರ ಸ್ಥಾನ ಒದಗಿಸಿಕೊಟ್ಟಿದೆ. 'ಪುಟ್ಟಗೌರಿ ಮದುವೆ' ಸೀರಿಯಲ್ ಬಳಿಕ 'ಗಟ್ಟಿಮೇಳ' ದಲ್ಲಿ ಗುರುತಿಸಿಕೊಂಡ ಇವರು ನಿಜ ಜೀವನದಲ್ಲಿ ಹೇಗಿರುತ್ತಾರೆ ಅನ್ನೋದು ಹೆಚ್ಚಾಗಿ ಯಾರಿಗೂ ಗೊತ್ತಿಲ್ಲಾ.

ಇನ್ನು ರಕ್ಷ್ ಗೌಡ ಕಿರುತೆರೆ ಲೋಕದ ಅತ್ಯಂತ ಜನಮೆಚ್ಚಿದ ಪುರುಷರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದರು. ಇವರು ರೀಲ್ ಲೈಫ್‌ನಲ್ಲಿ ಹೇಗೋ, ರಿಯಲ್ ಲೈಫ್‌ನಲ್ಲೂ ಸಖತ್ ಲಕ್ಷುರಿ.

ವೇದಾಂತ್ ಅವರ ದುಬಾರಿ ಮನೆ ಹೇಗಿದೆ ಗೊತ್ತಾ?

ವೇದಾಂತ್ ಅವರ ದುಬಾರಿ ಮನೆ ಹೇಗಿದೆ ಗೊತ್ತಾ?

ಕನ್ನಡ ಕಿರುತೆರೆಯಲ್ಲಿ ಮಿಂಚುತ್ತಿರುವ ನಟರ ಪೈಕಿ ಹಲವಾರು ಕಿರುತೆರೆಗಳಿಂದಲೇ ತಮ್ಮ ಕಲಾ ಸೇವೆಯನ್ನು ಆರಂಭಿಸಿದವರಾಗಿದ್ದಾರೆ. ಅಂತೆಯೇ ಇಂದು ಕನ್ನಡ ಕಿರುತೆರೆಯಲ್ಲಿ ಮಿಂಚುವ ಸಾಮರ್ಥ್ಯವಿರುವ ಅನೇಕ ಸ್ಟಾರ್ ನಟರಿದ್ದು ಅಂತಹವರ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುವ ನಟ ರಕ್ಷ್. ರಕ್ಷ್ ಕನ್ನಡ ಕಿರುತೆರೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಸ್ಟಾರ್ ನಟನಾಗಿದ್ದು, ಹಲವಾರು ವರ್ಷಗಳಿಂದ ಸ್ಮಾಲ್ ಸ್ಕ್ರೀನ್ ಮೂಲಕ ಕಲಾದೇವಿಯ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಹುಡುಗಿಯರ ಹೃದಯ ಕದ್ದ ವಸಿಷ್ಠ

ಹುಡುಗಿಯರ ಹೃದಯ ಕದ್ದ ವಸಿಷ್ಠ

'ಗಟ್ಟಿಮೇಳ' ಧಾರಾವಾಹಿ ಮೂಲಕ ವಸಿಷ್ಠ ಹುಡುಗಿಯರ ಹೃದಯ ಕದ್ದಿದ್ದಾರೆ . ಕಳೆದ ಹತ್ತು ವರ್ಷಗಳಿಂದ ಕಿರುತೆರೆಯಲ್ಲಿ ನಂಬರ್ 1 ಸ್ಥಾನ ಗಿಟ್ಟಿಸಿಕೊಂಡಿದ್ದ 'ಪುಟ್ಟ ಗೌರಿ ಮದುವೆ' ಈ ಧಾರಾವಾಹಿಯಿಂದ 'ಗಟ್ಟಿಮೇಳ' ಧಾರಾವಾಹಿಯವರೆಗೂ ತಮ್ಮ ವರ್ಚಸ್ಸನ್ನು ಉಳಿಸಿಕೊಂಡು ಬಂದಿದ್ದಾರೆ. ಕಿರುತೆರೆಯಲ್ಲಿ ಜನಮೆಚ್ಚಿದ ನಾಯಕನ ಪಟ್ಟವನ್ನು ಪ್ರತಿವರ್ಷ ಮುಡಿಗೇರಿಸುತ್ತಾ ಬಂದಿರುವ ರಕ್ಷ್, ಬೆಳ್ಳಿತೆರೆಯಲ್ಲಿ ಅಭಿನಯದ ಛಾಪನ್ನು ಮೂಡಿಸಿದ್ದಾರೆ. ನವ ನಟರು ಕಮರ್ಷಿಯಲ್ ಸಿನಿಮಾಗಳಿಂದಲೇ ತಮ್ಮ ಸಿನಿ ಜರ್ನಿಯನ್ನು ಆರಂಭಿಸುತ್ತಿರುವ ಸಮಯದಲ್ಲಿ ಕನ್ನಡ ಮಣ್ಣು ನೀರಿನ ಹೋರಾಟಕ್ಕೆ ಸಂಬಂಧಿಸಿದ 'ನರಗುಂದ ಬಂಡಾಯ' ಎಂಬ ಸಿನಿಮಾದಲ್ಲಿ ಅಭಿನಯಿಸಿದ್ದರು. ನಟ ರಕ್ಷ್ ಅವರ ಸ್ವಂತ ಮನೆ ಬೆಂಗಳೂರಿನ ಟಾಪ್ ಏರಿಯಾದಲ್ಲಿ ವಾಸವಿದ್ದಾರೆ. ರಕ್ಷ್ ಈ ಮಟ್ಟಕ್ಕೆ ಜನಪ್ರಿಯತೆ ಗಳಿಸಿದ ಹಾದಿ ಸುಗಮವಾಗಿ ಇರಲಿಲ್ಲ.

ಟಿ.ಆರ್.ಪಿ ಯಲ್ಲೂ ನಂಬರ್ ಒನ್ ಸ್ಥಾನ

ಟಿ.ಆರ್.ಪಿ ಯಲ್ಲೂ ನಂಬರ್ ಒನ್ ಸ್ಥಾನ

ಒಂದು ಟೈಮ್ ನಲ್ಲಿ ಬಹಳ ಕಷ್ಟ ಪಡುತ್ತಿದ್ದರು ರಕ್ಷ್. ಒಂದೇ ಒಂದು ಚಾನ್ಸ್‌ಗಾಗಿ ಸಾಕಷ್ಟು ನಿರ್ಮಾಪಕರ ಬಳಿ ನಿರ್ದೇಶಕರ ಬಳಿ ಹೋಗಿ ಅವಮಾನ ಎದುರಿಸಿದ್ದಾರೆ. ಕಿರುತೆರೆಯಲ್ಲಿ ಹೀರೋ ಆಗುವ ಮೊದಲು ಸಾಕಷ್ಟು ಅವಮಾನಗಳನ್ನು ಅನುಭವಿಸಿದ್ದರು ರಕ್ಷ್. ಬಣ್ಣದ ಲೋಕದ ಮೇಲಿದ್ದ ಆಸೆಯಿಂದ ಎಲ್ಲಾ ಅವಮಾನಗಳನ್ನು ಸಹಿಸಿಕೊಂಡು ಇಂದು ಕಿರುತೆರೆಯ ಟಾಪ್ ನಟನ ಸ್ಥಾನದಲ್ಲಿದ್ದಾರೆ ರಕ್ಷ್. ನಟ ರಕ್ಷ್ ಹಾಗೂ ಹೊಸ ನಟಿ ನಿಶಾರಾ ಅಭಿನಯ ಎಲ್ಲರಿಗೂ ಬಹಳ ಇಷ್ಟವಾಗಿದೆ. ವೇದಾಂತ್ ಅಮೂಲ್ಯ ಜಗಳ, ಈಗ ಶುರುವಾಗಿರುವ ಅವರ ನಡುವಿನ ಪ್ರೀತಿ, ಅಕ್ಕ ತಂಗಿಯರ ಬಾಂಧವ್ಯ, ಅಮೂಲ್ಯರ ತಾಯಿ ಪಾತ್ರದಲ್ಲಿ ನಟಿಸಿರುವ ಸುಧಾ ನರಸಿಂಹರಾಜು ಅಭಿನಯ ಎಲ್ಲವನ್ನೂ ಜನರು ಪ್ರೀತಿಯಿಂದ ಒಪ್ಪಿಕೊಂಡಿದ್ದಾರೆ. ಜನಪ್ರಿಯತೆ ಮಾತ್ರವಲ್ಲದೆ ಟಿ.ಆರ್.ಪಿ ಯಲ್ಲೂ 'ಗಟ್ಟಿಮೇಳ' ಟಾಪ್‌ನಲ್ಲಿದೆ. 'ಗಟ್ಟಿಮೇಳ' ಧಾರಾವಾಹಿಯಲ್ಲಿ ಈಗ ವೇದಾಂತ್ ಅಮೂಲ್ಯ ನಡುವೆ ಪ್ರೀತಿ ಚಿಗುರಿದ್ದು, ಇಬ್ಬರ ನಡುವಿನ ಕ್ಯೂಟ್ ರೊಮ್ಯಾನ್ಸ್ ಅನ್ನು ಕಿರುತೆರೆ ವೀಕ್ಷಕರು ಬಹಳ ಎಂಜಾಯ್ ಮಾಡುತ್ತಿದ್ದಾರೆ

ಬಿ.ಎ ಎಲ್.ಎಲ್.ಬಿ ಓದಿರುವ ರಕ್ಷ್

ಬಿ.ಎ ಎಲ್.ಎಲ್.ಬಿ ಓದಿರುವ ರಕ್ಷ್

ವೇದಾಂತ್ ಪಾತ್ರ ಮಾಡುತ್ತಿರುವ ನಟನ ನಿಜವಾದ ಹೆಸರು ರಕ್ಷಿತ್ ಗೌಡ. ಇವರ ಮತ್ತೊಂದು ಹೆಸರು ರಕ್ಷ್. ಪ್ರಸ್ತುತ ಇವರು 'ಗಟ್ಟಿಮೇಳ' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಇದಕ್ಕೂ ಮೊದಲು 'ಪುಟ್ಟಗೌರಿ ಮದುವೆ' ಧಾರಾವಾಹಿಯಲ್ಲಿ ನಟಿಸುತ್ತಿದ್ದರು. 'ನರಗುಂದ ಬಂಡಾಯ' ಎಂಬ ಸಿನಿಮಾದಲ್ಲಿ ಕೂಡ ನಟಿಸಿದ್ದಾರೆ ರಕ್ಷ್. ಇವರು ಹುಟ್ಟಿದ್ದು 1992 ರ ಜನವರಿ 2ರಂದು. ಇವರ ಹೈಟ್ 5 ಅಡಿ 6 ಅಂಗುಲ, ಇವರು ಹುಟ್ಟಿದ್ದು ಮಾಗಡಿಯಲ್ಲಿ. ಇವರ ವಯಸ್ಸು 28. ಇವರು ಬಿಎ ಎಲ್.ಎಲ್.ಬಿ ಓದಿದ್ದಾರೆ. ಬೆಂಗಳೂರು ಯೂನಿವರ್ಸಿಟಿಯಲ್ಲಿ ರಕ್ಷ್ ವಿದ್ಯಾಭ್ಯಾಸ ಮುಗಿಸಿದ್ದಾರೆ.

ಒಂದು ಎಪಿಸೋಡ್‌ಗೆ ಪಡೆಯುವ ಸಂಭಾವನೆ 28,000?

ಒಂದು ಎಪಿಸೋಡ್‌ಗೆ ಪಡೆಯುವ ಸಂಭಾವನೆ 28,000?

ಇನ್ನು ಇತ್ತೀಚೆಗಷ್ಟೆ ಬಹುಕಾಲದ ಗೆಳತಿ ಅನುಷಾ ಅವರೊಡನೆ ದಾಂಪತ್ಯ ಜೀವನಕ್ಕೆ ರಕ್ಷ್ ಕಾಲಿಟ್ಟಿದ್ದಾರೆ . ಇವರು ಬಹಳ ಇಷ್ಟಪಡುವ ತಿಂಡಿ ಮಟನ್ ಬಿರಿಯಾನಿ ಮತ್ತು ಬಾರ್ಬಿಕ್ಯೂ ಚಿಕನ್. ಇವರ ಫೇವರಿಟ್ ಪ್ಲೇಸ್ ಚಿಕ್ಕಮಗಳೂರು. ಇವರ ಫೇವರಿಟ್ ಕಲರ್ ಕಪ್ಪು. ಇವರು ಒಂದು ಎಪಿಸೋಡ್‌ಗೆ ಪಡೆಯುವ ಸಂಭಾವನೆ 28,000 ರೂಪಾಯಿ ಎನ್ನಲಾಗುತ್ತಿದೆ. ಇವರ ಒಟ್ಟು ಆಸ್ತಿ 1 ರಿಂದ 2 ಕೋಟಿ ರೂಪಾಯಿಗಳು ಎಂದು ಹೇಳಲಾಗಿದೆ. ಇವರ ಬಳಿ ಆಡಿ ಎ 5 ಮತ್ತು ಇನೋವಾ ಕಾರ್‌ಗಳಿವೆ. 'ಪುಟ್ಟಗೌರಿ ಮದುವೆ' ಧಾರಾವಾಹಿಯಿಂದ ಹೆಸರು ಪಡೆದಿದ್ದ ನಟ ರಕ್ಷ್, 'ಗಟ್ಟಿಮೇಳ' ಧಾರಾವಾಹಿಯಿಂದ ಇನ್ನು ಹೆಚ್ಚಿನ ಜನಪ್ರಿಯತೆ ಪಡೆದರು. 'ಗಟ್ಟಿಮೇಳ' ಧಾರಾವಾಹಿಯ ವೇದಾಂತ್ ಪಾತ್ರದ ಮೂಲಕ ಕರ್ನಾಟಕದ ಮನೆ ಮಾತಾಗಿದ್ದಾರೆ.

More from Filmibeat

English summary
Gattimela serial fame Raksh Gowda real life. Hear is more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X