Gattimela: ತಂದೆಯ ಹುಡುಕಾಟದಲ್ಲಿರುವ ವೇದಾಂತ್: ಸುಹಾಸಿನಿಗೆ ಶುರುವಾಯಿತಾ ಕಂಟಕ?

By Shruthi Harish Gowda

ವೇದಾಂತ್ ಮನೆಯಲ್ಲಿ ಎಲ್ಲರೂ ಸಹ ತುಂಬಾ ಖುಷಿಯಾಗಿ ಇದ್ದಾರೆ ಸೂರ್ಯನಾರಾಯಣ್ ಅಗ್ನಿ ದುರಂತದಲ್ಲಿ ಸಾವನ್ನಪ್ಪಿಲ್ಲ ಎಂದು ತಿಳಿದು ಎಲ್ಲರೂ ಸಂತಸದಿಂದ ಇದ್ದಾರೆ. ಆಧ್ಯಾ ಸಹ ತನ್ನ ಅಣ್ಣನ ಬಳಿ ನೀವು ಅದಕ್ಕೆ ಅಂದು ಸುಹಾಸಿನಿ ಅಮ್ಮ ಫೋಟೋಗೆ ಹಾರ ಹಾಕಲು ಹೋದಾಗ ನೀವು ಹಾಕಿಸಲಿಲ್ಲ ಎಂದು ಕೇಳಿದ್ದಾಳೆ. ಇದೇ ವೇಳೆ ವೇದಾಂತ್ ವೈದೇಹಿ ಬಳಿಯಲ್ಲಿ ನನ್ನ ತಂದೆಯನ್ನು ಹುಡುಕಲು ಹೋದಾಗ ನೀವು ಸಹ ನನ್ನ ಜೊತೆಗೆ ಇರಬೇಕು ಎಂದು ಹೇಳಿದ್ದಾನೆ.

ಸುಹಾಸಿನಿ ಮಾತ್ರ ವೈದೇಹಿ ಏನಾದರೂ ಸೂರ್ಯನಾರಾಯಣನ ಮುಂದೆ ಹೋದರೆ. ಅವರು ಎಲ್ಲವನ್ನು ನೆನಪಿಸಿಕೊಳ್ಳುತ್ತಾರೆ ಅಲ್ಲಿಗೆ ನನ್ನ ಕಥೆ ಮುಗಿಯುತ್ತದೆ. ಇವಳು ಮಾತ್ರ ಅವರ ಮುಂದೆ ಹೋಗಬಾರದು ಎಂದುಕೊಂಡಿದ್ದಾಳೆ. ವೈದೇಹಿಗೆ ಸೂರ್ಯನಾರಾಯಣರನ್ನ ವೇದಾಂತ್ ಕರೆದುಕೊಂಡು ಬರುತ್ತೇನೆ ಎಂದಿದ್ದು ಬಹಳ ಖುಷಿಯಾಗಿದೆ. ವೈಜಯಂತಿ ಅಮ್ಮ ಮಗಳನ್ನ ನೋಡಿ ಖುಷಿಯನ್ನ ಪಟ್ಟಿದ್ದಾರೆ. ವೇದಾಂತ್ ಇದೇ ವೇಳೆ ನನ್ನ ತಂದೆಯನ್ನ ಹುಡುಕಲು ನಾನು ಸಾಕಷ್ಟು ಕಷ್ಟಪಟ್ಟಿದ್ದೇನೆ ಎಂದು ತಿಳಿಸಿದ್ದಾನೆ.

gattimela-serial

ವಿಕ್ಕಿ ಡೈರಿಯಲ್ಲಿ ನನ್ನ ತಂದೆಯ ಬಗ್ಗೆ ಒಂದು ಸಣ್ಣ ಸುಳಿವು ಸಿಕ್ಕಿತು. ತದನಂತರ ನಾನು ಅದರ ಜಾಡನ್ನು ಹಿಡಿದು ಸಂಪಿಗೆಪುರಕ್ಕೆ ಹೋದೆ. ಸಂಪಿಗೆಪುರಕ್ಕೆ ಹೋದಾಗ ಸೂರ್ಯನಾರಾಯಣ ಎಂಬ ವ್ಯಕ್ತಿ ಸಿಕ್ಕಿದ್ದರು. ಇದೇ ವೇಳೆ ನನಗೆ ಇವರೇ ಏಕೆ ನನ್ನ ತಂದೆಯಾಗಿರಬಾರದು ಎಂದು ಒಮ್ಮೆ ಅನಿಸಿತು. ತದನಂತರ ಅವರೇ ನಮ್ಮ ತಂದೆ ಎಂದು ತಿಳಿಯಿತು. ಅಷ್ಟರಲ್ಲಿ ಆ ಅಗ್ನಿ ನಮ್ಮನ್ನ ಹುಡುಕಿಕೊಂಡು ಅಲ್ಲಿಗೂ ಸಹ ಬಂದಿದ್ದನು. ಅವನನ್ನ ನಾನು ಕೊಲೆ ಮಾಡಬೇಕು ಎಂದುಕೊಂಡಿದ್ದೆ ಆದರೆ ನನ್ನ ತಂದೆ ಸೂರ್ಯನಾರಾಯಣ್ ತಡೆದರು. ಅದಕ್ಕಾಗಿ ಆ ಅಗ್ನಿ ಬದುಕುಳಿದ ಎಂದು ತಿಳಿಸಿದ್ದಾನೆ.

ತಂದೆಯನ್ನು ಹುಡುಕಿ ಹೊರಟ ವೇದಾಂತ್, ಸತ್ಯವನ್ನ ಹೇಳಿಬಿಡ್ತಾಳಾ ವೈದೇಹಿ?

ವೇದಾಂತ್ ತನ್ನ ತಂದೆಯನ್ನ ಹುಡುಕಿಕೊಂಡು ನಾನು ಮನೆಗೆ ಬರುತ್ತೇನೆ ಎಂದು ಅಮೂಲ್ಯ ಬಳಿಯಲ್ಲಿ ಹೇಳಿದ್ದಾನೆ. ಅಮೂಲ್ಯ ಆ ಅಗ್ನಿ ಅಪ್ಪಾಜಿಗೆ ಏನಾದರೂ ತೊಂದರೆ ಮಾಡುವ ಮೊದಲೇ ಹುಡುಕಬೇಕು ಎಂದು ಹೇಳಿದ್ದಾಳೆ. ಪೇಪರ್‌ನಲ್ಲಿ ಜಾಹೀರಾತು ಕೊಟ್ಟಿರುವುದರಿಂದ ನನ್ನ ತಂದೆ ನನಗೆ ಸಿಗುತ್ತಾರೆ ಎಂಬ ನಂಬಿಕೆ ಇದೆ ಎಂದು ಅಮೂಲ್ಯ ಬಳಿ ವೇದಾಂತ್ ಹೇಳಿದ್ದಾನೆ. ಅಮೂಲ್ಯ ಸಹ ಇಷ್ಟು ಬೇಗ ಅಪ್ಪಾಜಿ ಸಿಗಲಿ ಎಂದು ವೇದಾಂತ್ ಬಳಿ ಹೇಳಿದ್ದಾಳೆ.

gattimela-serial

ವೈದೇಹಿ ಅಮೂಲ್ಯ ಬಳಿ ಬಂದವಳೇ ವೇದಾಂತ್ ಎಲ್ಲಿಗೆ ಹೋದ ಎಂದು ಕೇಳಿದ್ದಾಳೆ. ಅಮೂಲ್ಯ ಅಪ್ಪಾಜಿಯನ್ನ ಹುಡುಕಿಕೊಂಡು ಬರಲು ವೇದಂತ್ ಹೋಗಿದ್ದಾನೆ ಎಂದು ಹೇಳಿದೆ ತಡ. ವೇದಾಂತ್ ಒಂದು ಫೋನ್ ಮಾಡಿ ಕೊಡು ನಾನು ಅವರ ಬಳಿಯಲ್ಲಿ ಮಾತನಾಡಬೇಕು ಎಂದು ಕೇಳಿದ್ದಾಳೆ. ಅಷ್ಟರಲ್ಲಿ ಅಮೂಲ್ಯ ಅದು ಏನಾದರೂ ಇದ್ದರೆ ನನ್ನ ಬಳಿಯೇ ಹೇಳಿ ಎಂದು ಕೇಳಿದ್ದಾಳೆ ಆದರೆ ವೈದೇಹಿ ಏನು ಮಾತನಾಡಲಿಲ್ಲ. ನಾರಾಯಣರ ಹೆಸರು ಹೇಳಿದಾಗ ಅಮೂಲ್ಯ ಅವರು ನಿಮಗೆ ಗೊತ್ತಾ ಎಂದು ಕೇಳಿದ್ದಕ್ಕೆ ವೈದೇಹಿ ಸುಮ್ಮನೆ ಆಗಿದ್ದು ಅಮೂಲ್ಯಾಗೆ ವೈದೇಹಿ ಹಾಗೂ ಸೂರ್ಯನಾರಾಯಣರಿಗೆ ಏನಾದರೂ ಸಂಬಂಧ ಇದೆಯಾ ಎಂದು ಅಂದುಕೊಂಡಿದ್ದಾಳೆ.

ಅಗ್ನಿಗೆ ಕರೆ ಮಾಡಿ ಬೈಸಿಕೊಂಡ ಸುಹಾಸಿನಿ!

ಸುಹಾಸಿನಿ ಅಗ್ನಿಗೆ ಕರೆ ಮಾಡಿ ಎಲ್ಲವೂ ಮುಗಿದು ಹೋಯಿತು‌. ವೇದಾಂತ್ ತಂದೆಯ ಬಗ್ಗೆ ಪ್ರೆಸ್ ಮೀಟ್ ಮಾಡಿ ತಿಳಿಸಿದ್ದಾನೆ. ಅವರನ್ನು ಹುಡುಕುವ ಪ್ರಯತ್ನವನ್ನು ಮಾಡುತ್ತಿದ್ದಾನೆ ಎಂದು ಹೇಳಿದ್ದಾಳೆ. ಸೂರ್ಯನಾರಾಯಣ ಏನಾದರೂ ವೇದಾಂತ್‌ಗೆ ಸಿಕ್ಕಿದರೆ ವೈದೇಹಿ ಅವನನ್ನು ನೋಡುತ್ತಾಳೆ. ಆಗ ನನ್ನ ಕಥೆ ಸಂಪೂರ್ಣವಾಗಿ ಮುಗಿದಂತೆ ಎಂದು ಹೇಳುತ್ತಿದ್ದಾಳೆ. ಸೂರ್ಯನಾರಾಯಣರನ್ನ ಸರಿಯಾದ ರೀತಿ ನೀವು ನೋಡಿಕೊಳ್ಳಲಿಲ್ಲ. ಹಾಗಾಗಿ ಎಸ್ಕೇಪ್ ಆಗಿದ್ದಾರೆ ನನಗೆ ಏನಾದರೂ ತೊಂದರೆ ಆದರೆ ಅದಕ್ಕೆ ನೀವೇ ಹೊಣೆ ಎಂದು ಸುಹಾಸಿನಿ ಹೇಳುತ್ತಿದ್ದಾಳೆ.

'ನಾನು ಸೂರ್ಯನಾರಾಯಣನನ್ನ ಕೊಲೆ ಮಾಡುತ್ತೇನೆ ಎಂದು ಹೇಳಿದ್ದೆ. ಆದರೆ ನೀನು ಅವನನ್ನು ಇಟ್ಟುಕೊಂಡು ಆಟವಾಡುತ್ತೇನೆ ಎಂದೇ ಅದಕ್ಕಾಗಿ ನಾನು ಬಿಟ್ಟೆ ಎಂದಿದ್ದಾನೆ. ಕೊನೆಗೆ ನನ್ನ ತಲೆಗೆ ಕಟ್ಟಲು ಬರಬೇಡ .ನಾನು ಯಾವುದಕ್ಕೂ ಹೊಣೆಗಾರನಲ್ಲ ಮೊದಲು ವಸಿಷ್ಟ ಫ್ಯಾಮಿಲಿ ಅವರನ್ನೆಲ್ಲ ಕೊಲೆ ಮಾಡಿದ ಮೇಲೆ ನಿನ್ನನ್ನ ವಿಚಾರಿಸಿಕೊಳ್ಳುತ್ತೇನೆ' ಎಂದು ಅಗ್ನಿ ಕೋಪ ಮಾಡಿಕೊಂಡಿದ್ದಾನೆ.

More from Filmibeat

English summary
Zee Kannada serial Gattimela October 10th episode details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X