Gattimela: ವೈದೇಹಿ ಹೆಸರು ಹೇಳಿದರು ಮರುಕಳಿಸದ ಸೂರ್ಯನಾರಾಯಣರ ನೆನಪು..!?
ಗಟ್ಟಿಮೇಳ ಧಾರಾವಾಹಿ ದಿನಕ್ಕೊಂದು ತಿರುವನ್ನು ಕೊಡುತ್ತಾ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಟ್ಟು ಪ್ರೇಕ್ಷಕರ ಮನಸ್ಸು ಸೆಳೆಯುವಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ. ಈಗ ಮತ್ತೆ ಸೂರ್ಯನಾರಾಯಣರು ಅಗ್ನಿಯ ವಶದಲ್ಲಿದ್ದು, ಅಗ್ನಿ ಟಾರ್ಚರನ್ನು ಕೊಡುತ್ತಿದ್ದಾನೆ. ನಿನ್ನನ್ನು ನಾನು ಅಂದೇ ಸಾಯಿಸಬೇಕಾಗಿತ್ತು. ಆದರೆ ನಿನಗೆ ನಿನ್ನ ಫ್ಯಾಮಿಲಿಯ ಪರಿಚಯವನ್ನ ಮಾಡಿಸಿದ ನಂತರ ಒಂದು ಗತಿ ಕಾಣಿಸುತ್ತೇನೆ ಎಂದು ಹೇಳುತ್ತಿದ್ದಾನೆ. ಈಗ ನಿನ್ನ ಫ್ಯಾಮಿಲಿಯಿಂದ ನಿನ್ನನ್ನ ನೋಡಲು ಒಬ್ಬರು ಬಂದಿದ್ದಾರೆ ಎಂದು ಹೇಳಿದ್ದಾನೆ. ಸೂರ್ಯನಾರಾಯಣರಿಗೆ ತಮ್ಮ ಫ್ಯಾಮಿಲಿಯವರನ್ನು ನೋಡುವ ಕಾತುರ ಹೆಚ್ಚಾಗಿದೆ.
ಅಮೂಲ್ಯ ಅಜ್ಜಿಯ ಬಳಿ ಬಂದವಳೇ ವೈದೇಹಿ ಅಮ್ಮನಿಗೂ ಈ ಮನೆಗೆ ಏನು ಸಂಬಂಧವಿದೆ ಎಂದು ಕೇಳುತ್ತಾ ಇದ್ದಾಳೆ. ಅವರು ಈ ಮನೆಯವರನ್ನೆಲ್ಲಾ ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಾರೆ ಅಷ್ಟೇ ಅಲ್ಲದೆ ಪ್ರೀತಿಯನ್ನ ತೋರುತ್ತಾರೆ. ನಾವು ಅಷ್ಟೇ ಅವರನ್ನ ನಮ್ಮ ಮನೆಯವರಂತೆ ಹೇಗೆ ಕಾಣುತ್ತಾ ಇದ್ದೇವೆ ಎಂದು ಹೇಳಿದ್ದಾಳೆ. ಈ ಮನೆಯವರಿಗೆ ಏನಾದರೂ ಆದರೆ ತಮ್ಮವರಿಗೆ ಆದಂತೆ ಸಂಕಟವನ್ನು ಪಡುತ್ತಾರೆ. ನಿಮಗೆ ಏನಾದರೂ ಗೊತ್ತಾ ಅಜ್ಜಿ ಅವರು ಈ ಮನೆಗೆ ಏನಾಗಬೇಕು ಅವರಿಗೂ ಈ ಮನೆಗೂ ಇರುವ ಸಂಬಂಧ ಏನು ಎಂದು ಕೇಳಿದ್ದಾಳೆ. ಅಪ್ಪಾಜಿ ಎಲ್ಲೋ ಕಾಣೆಯಾದರು ಎಂದಾಗಲು ಸಹ ಅವರು ತುಂಬಾ ಸಂಕಟವನ್ನ ಪಟ್ಟರು ಎಂದು ಹೇಳಿದ್ದಾಳೆ.

ಅಮೂಲ್ಯ ಅಜ್ಜಿ ಬಳಿ ವೈದೇಹಿ ಅಮ್ಮ ಈ ಮನೆಗೆ ಏನಾಗಬೇಕು ಎಂಬುದನ್ನು ನಾನು ಕಂಡು ಹಿಡಿದೆ ಹಿಡಿಯುತ್ತೇನೆ ಎಂದು ಹೇಳಿದ್ದಾಳೆ. ಇನ್ನು ಅಜ್ಜಿ ತುಂಬಾ ಸಂಕಟ ಪಡುತ್ತಿದ್ದಾರೆ. ಸತ್ಯವನ್ನ ಹೇಳಲು ಆಗುತ್ತಿಲ್ಲ ಎಂದು ನೊಂದುಕೊಳ್ಳುತ್ತಾ ಇದ್ದಾರೆ. ವೈದೇಹಿ ಸಹ ಒಳಗೊಳಗೆ ಸಂಕಟಪಡುತ್ತಾ ದೇವರ ಬಳಿ ಬೇಡಿಕೊಳ್ಳುತ್ತಿದ್ದಾಳೆ ದೇವರೇ ಯಾಕೆ ಒಳ್ಳೆಯವರಿಗೆ ಈ ರೀತಿಯ ಅಗ್ನಿ ಪರೀಕ್ಷೆಯನ್ನು ಸೂರ್ಯ ಎಲ್ಲೇ ಇದ್ದರೂ ಸಹ ಚೆನ್ನಾಗಿ ಇರಲಿ ಎಂದು ಪ್ರಾರ್ಥನೆಯನ್ನು ಮಾಡುತ್ತಿದ್ದಾಳೆ.
ಸೂರ್ಯನಾರಾಯಣರನ್ನು ಭೇಟಿಯಾದ ಸುಹಾಸಿನಿ, ವೈದೇಹಿ ಹೆಸರು ಕೇಳಿ ಖುಷಿಪಟ್ಟ ರಾಯರು
ಅಗ್ನಿ ಮನೆಯಲ್ಲಿ ಸೂರ್ಯನಾರಾಯಣರು ಮತ್ತೆ ಲಾಕ್ ಆಗಿದ್ದಾರೆ. ಇದೇ ವೇಳೆ ಅಗ್ನಿ ನಿಮ್ಮನ್ನ ಸಾಯಿಸದೆ ಯಾಕೆ ಬಿಟ್ಟೆ ಗೊತ್ತಾ ನಿಮ್ಮ ಫ್ಯಾಮಿಲಿ ಅವರನ್ನೆಲ್ಲ ಒಮ್ಮೆ ತೋರಿಸಬೇಕು ಎಂದು. ಇವತ್ತು ನಿಮ್ಮ ಫ್ಯಾಮಿಲಿಯಿಂದ ಒಬ್ಬರು ಬಂದಿದ್ದಾರೆ ಅವರನ್ನು ನೋಡಿ ನಿಮಗೆ ನೆನಪು ಮರುಕಳಿಸುತ್ತಾ ಎಂದು ಕೇಳಿದ್ದಾರೆ. ಸುಹಾಸಿನಿ ಸೂರ್ಯನಾರಾಯಣರ ಮುಂದೆ ಬಂದು ಹೇಗಿದ್ದೀರಾ ಬಾವ ಎಂದು ವ್ಯಂಗ್ಯವಾಡಿದ್ದಾಳೆ. ಆದರೂ ಸಹ ಸೂರ್ಯನಾರಾಯಣರಿಗೆ ಸುಹಾಸಿನಿಯ ನೆನಪು ಆಗಲಿಲ್ಲ.
ನಂತರ ಸುಹಾಸಿನಿ ತಮ್ಮ ಹೆಂಡತಿ ವೈದೇಹಿಯ ಬಗ್ಗೆ ನೆನಪಿಲ್ವಾ ಎಂದಾಗ ಸೂರ್ಯನಾರಾಯಣರು ತಮ್ಮ ಹೆಂಡತಿಯ ಬಗ್ಗೆ ನೆನಪಿಸಿಕೊಂಡಿದ್ದಾರೆ. ನಂತರ ನಿಮ್ಮ ಹೆಂಡತಿ ಮಕ್ಕಳು ನನ್ನ ಜೊತೆಯಲ್ಲೇ ಇದ್ದಾರೆ ಎಂದು ಹೇಳಿದ್ದಾಳೆ. ಈ ವೇಳೆ ವೇದಾಂತ್ ಫೋಟೋವನ್ನು ತೋರಿಸಿ ಇವರೇ ನಿನ್ನ ಮಗ ವೇದಾಂತಿ ಎಂದು ಹೇಳಿದ್ದಾಳೆ ಇದೆ ವೇಳೆ ಸೂರ್ಯನಾರಾಯಣ್ ವೇದಾಂತ್ ಭೇಟಿ ಮಾಡಿದ್ದು ಹಾಗೂ ವೇದಾಂತ್ ಮನೆಗೆ ಕರೆದಿದ್ದನ್ನ ನೆನಪಿಸಿಕೊಂಡಿದ್ದಾರೆ. ನಿನ್ನ ಹೆಂಡತಿ ವೈದೇಹಿ ನನ್ನ ಮನೆಯಲ್ಲಿ ಕೆಲಸದ ಅಳಿನಂತೆ ಇದ್ದಾಳೆ ಎಂದು ಸೂರ್ಯನಾರಾಯಣರ ಕಣ್ಣಿನಲ್ಲಿ ಕಣ್ಣೀರನ್ನು ಹಾಕಿಸಿದ್ದಾಳೆ. ಈ ರೀತಿ ನಿಮ್ಮನ್ನ ನೋಡಲು ನನಗೆ ತುಂಬಾ ಖುಷಿಯಾಗುತ್ತಿದೆ ಎಂದು ವ್ಯಂಗ್ಯವಾಡಿದ್ದಾಳೆ.

ವೈದೇಹಿ ಬಳಿ ಧಿಮಾಕು ತೋರಿಸಿದ ಸುಹಾಸಿನಿ, ವಿಡಿಯೋ ತೋರಿಸಲು ಹೋದರು ಭಯವಿಲ್ಲ!
ಸುಹಾಸಿನಿ ಸೂರ್ಯನಾರಾಯಣರನ್ನು ಭೇಟಿ ಮಾಡಿಕೊಂಡು ಬಂದಿದ್ದಾಳೆ .ಇದೇ ವೇಳೆ ವೈದೇಹಿ ಸಿಕ್ಕಿದ್ದು ಜೋರಾಗಿ ನಗುತ್ತಾ ಇದ್ದಾಳೆ. ಏನು ಗಂಡ ಸಿಗಲಿಲ್ಲ ಎಂದು ಬೇಸರ ಮಾಡಿಕೊಂಡಿದ್ದೀಯಾ ಸಿಕ್ಕೇ ಬಿಟ್ಟನು ಎಂದುಕೊಂಡು ಓಡಾಡಿ ನೋಡಲು ಹೋದೆ. ನಿನ್ನ ಖುಷಿಗೆ ಪಾರವೇ ಇರಲಿಲ್ಲ ಈಗ ನೋಡು ಮುಖವೆಲ್ಲ ಬಾಡಿ ಹೋಗಿದೆ ಎಂದು ಹೇಳಿದ್ದಾಳೆ.
ಇಷ್ಟು ದಿನ ಬಾಯಿ ಮುಚ್ಚಿಕೊಂಡು ಇದ್ದ ನೀನು ಇವತ್ತು ಹಾರಾಡುತ್ತಿದ್ದೀಯಾ ಎಂದು ಸುಹಾಸಿನಿಗೆ ವೈದೇಹಿ ಕೇಳಿದ್ದಾಳೆ. ಇದಕ್ಕೆ ಸುಹಾಸಿನಿ ಜೋರಾಗಿ ನಗುತ್ತಿದ್ದಾಳೆ ನಿನ್ನ ಬಾಯಿ ಮುಚ್ಚಿಸುವ ಅಸ್ತ್ರ ನನ್ನ ಬಳಿ ಇದೆ ಎಂದಾಗ ಸುಹಾಸಿನಿ ಉಯ್ಯಾಲೆಯ ಮೇಲೆ ಕುಳಿತು ತನ್ನ ಧಿಮಾಕು ತೋರಿಸಿದ್ದಾಳೆ. ಈ ವೇಳೆ ವೈದೇಹಿಗೆ ಶಾಕ್ ಆಗಿದೆ.


Click it and Unblock the Notifications











