Gattimela: ಸೂರ್ಯನಾರಾಯಣರ ಬಗ್ಗೆ ಎಲ್ಲರಿಗೂ ತಿಳಿಸಿದ ವೇದಾಂತ್..!: ಶಾಕ್ ಆದ ಸುಹಾಸಿನಿ

By Shruthi Harish Gowda

ಗಟ್ಟಿಮೇಳ ಧಾರಾವಾಹಿ ಈಗ ಹೊಸದೊಂದು ತಿರುವನ್ನು ಪಡೆದುಕೊಂಡು ಮುಂದೆ ಸಾಗುತ್ತಿದೆ. ವೇದಾಂತ್ ಒಂದು ಪ್ರೆಸ್ ಮೀಟ್ ಇಟ್ಟಿದ್ದು ಎಲ್ಲರ ಚಿತ್ತ ಈಗ ಪ್ರೆಸ್ ಮೀಟ್‌ನತ್ತ ನೆಟ್ಟಿದೆ. ಸೂರ್ಯನಾರಾಯಣ ಅವರನ್ನು ಹುಡುಕಿಕೊಂಡು ಮಂಜುನಾಥ್ ಅವರ ಮನೆಗೆ ರೌಡಿಗಳು ಬಂದಿದ್ದಾರೆ. ಇದೇ ವೇಳೆ ಸೂರ್ಯನಾರಾಯಣ್ ಅವರು ನಮಗೆ ಗೊತ್ತಿಲ್ಲ ಅವರು ನಮ್ಮ ಮನೆಯಲ್ಲಿ ಇಲ್ಲ ಎಂದು ರೌಡಿಗಳನ್ನು ಸಾಗಿ ಹಾಕಿದ್ದರು. ಇನ್ನು ಪರಿಮಳ ಸೂರ್ಯನಾರಾಯಣರು ಇದ್ದ ರೂಮಿಗೆ ಬಂದು ರೌಡಿಗಳೆಲ್ಲರೂ ಹೋದರು ನೀವು ನಿಶ್ಚಿಂತೆಯಿಂದ ಇರಿ ಎಂದಿದ್ದಾರೆ.

ಅವರು ನಿಮ್ಮನ್ನ ಹೆದುರಿಸಿದ ರೀತಿ ಕಾಣುತ್ತಿದೆ ಎಂದು ಸೂರ್ಯನಾರಾಯಣ್ ಪರಿಮಳ ಅವರನ್ನ ಕೇಳಿದ್ದಾರೆ. ಇದಕ್ಕೆ ಆ ರೀತಿ ಏನು ಇಲ್ಲ ಅಣ್ಣ ನೀವು ನಿಶ್ಚಿಂತೆಯಿಂದ ಇರಿ ಅವರು ಈ ಮನೆಗೆ ಬರೋದಿಲ್ಲ ಎಂದು ಹೇಳಿದ್ದಾರೆ. ಈ ಕಡೆ ವೈದೇಹಿಗೆ ಸೂರ್ಯನಾರಾಯಣರನ್ನು ನೋಡುವ ಚಿಂತೆಯಾಗಿದೆ. ಇದಕ್ಕಾಗಿ ಪರಿಮಳ ಬಳಿ ಇಂದು ಬಂದಿದ್ದವರು ಯಾರು ಎಂಬುದನ್ನು ವಿಚಾರಿಸಿದ್ದಾಳೆ. ಪರಿಮಳ ಅವರು ಅಗ್ನಿ ಆ ಕಡೆಯವರು ಇಲ್ಲಿ ನಾರಾಯಣ್ ಎಂದು ಇದ್ದಾರಲ್ಲ ಅವರನ್ನ ಹುಡುಕಿಕೊಂಡು ಬಂದಿದ್ದಾರೆ ಎಂದು ಹೇಳಿದ್ದಾರೆ ಇದಕ್ಕೆ ವೈದೇಹಿ ನಾನು ಈ ಮನೆಯಲ್ಲಿ ಇದ್ದಾಗ ಬಂದಿದ್ದು ಸೂರ್ಯ ಎಂದು ಅಂದುಕೊಂಡಿದ್ದಾರೆ.

Gattimela serial October 9th episode update

ಅಮೂಲ್ಯ ಹಾಗೂ ಆದ್ಯಾ ವೇದಾಂತ್ ಯಾವುದರ ಬಗ್ಗೆ ಪ್ರೆಸ್ ಮೀಟ್ ಮಾಡುತ್ತಿರಬಹುದು ಎಂಬ ಕುತೂಹಲ ಸಹಜವಾಗಿ ಕಾಡುತ್ತಿದೆ. ಇದಕ್ಕಾಗಿ ಆಧ್ಯಾತ್ಮಿಕ ಸಾರ್ಥಕ್ ಬಳಿ ಅಣ್ಣ ಯಾವುದಕ್ಕೆ ಪ್ರೆಸ್ ಮೀಟ್ ಮಾಡುತ್ತಿದ್ದಾನೆ ಎಂದು ಕೇಳಿದ್ದಾಳೆ. ಸಾರ್ಥಕ್ ಯೋಚನೆ ಮಾಡಿ ಹೊಸದಾಗಿ ಮಗು ಬಂದಿದೆಯಲ್ಲ ಅದರ ಅನೌನ್ಸ್ಮೆಂಟ್ ಇರಬೇಕು ಎಂದು ಹೇಳಿದ್ದಾನೆ. ಅಮೂಲ್ಯ ಸಹ ವೇದಾಂತ್ ಬಳಿ ಹೋಗಿ ಯಾವುದರ ಬಗ್ಗೆ ಪ್ರಶ್ನೆ ಮಾಡುತ್ತಿರುವುದು ಎಂದು ಕೇಳಿದ್ದಕ್ಕೆ ಅದೆಲ್ಲವೂ ಸಹ ಸರ್ಪ್ರೈಸ್ ನೀನು ಕಾಯಬೇಕು ಎಂದು ಹೇಳಿದ್ದಾನೆ.

ಭೇಟಿಯಾಗಲು ಒಪ್ಪದ ಸೂರ್ಯನಾರಾಯಣ್, ಬೇಸರದಲ್ಲಿ ಮನೆಯಿಂದ ಹೊರಗೆ ಹೋದ ವೈದೇಹಿ

ಸೂರ್ಯನಾರಾಯಣನ ನೋಡಲು ಬಹಳಷ್ಟು ಸಂತೋಷದಿಂದ ವೈದೇಹಿ ಬಂದಿದ್ದಳು. ಆದರೆ ಸೂರ್ಯನಾರಾಯಣ್ ವೈದೇಹಿಯನ್ನು ನೋಡಲು ಒಪ್ಪಿಗೆ ಕೊಡಲಿಲ್ಲ. ನನ್ನ ಮನಸ್ಸು ಯಾಕೋ ಸರಿ ಇಲ್ಲ ನಾನು ಯಾರನ್ನು ನೋಡೋದಿಲ್ಲ ಎಂದು ಹೇಳಿ ಕಳುಹಿಸಿದ್ದಾರೆ. ಪರಿಮಳ ಅಣ್ಣ ಅವರು ನಮ್ಮ ಮನೆಯವರೇ ದಯವಿಟ್ಟು ಮಾತನಾಡಿ ಕಳುಹಿಸಿ ಎಂದಿದ್ದಾರೆ. ಆದರೂ ಸಹ ಸೂರ್ಯನಾರಾಯಣ್ ನನ್ನನ್ನು ಬಲವಂತ ಮಾಡಬೇಡಿ ಎಂದು ಹೇಳಿದ್ದಾರೆ.

ಪರಿಮಳ ಅವರಿಗೆ ನೀವು ಮತ್ತೊಮ್ಮೆ ಬಂದಾಗ ಅವರನ್ನು ನೋಡುವಿರಂತೆ ಎಂದು ಹೇಳಿ ಅಲ್ಲಿಂದ ಕಳುಹಿಸಿದ್ದಾರೆ. ಇನ್ನು ಮನೆಯಲ್ಲಿ ವೈದೇಹಿ ತಂದಿದ್ದ ಕಜ್ಜಾಯವನ್ನು ಸೂರ್ಯನಾರಾಯಣ್ ತಿನ್ನುತ್ತಾ ಇದ್ದಾರೆ. ಇದೇ ವೇಳೆ ಅವರಿಗೆ ಅವರ ಅಮ್ಮ ಹಾಗೂ ಹೆಂಡತಿಯ ನೆನಪು ಬಂದಿದೆ. ಈ ವಿಷಯವಾಗಿ ಪರಿಮಳ ಬಳಿ ಹೇಳಿಕೊಂಡಿದ್ದಾರೆ. ನನ್ನ ಅಮ್ಮ ಹಾಗೂ ಹೆಂಡತಿ ಇಷ್ಟೇ ರುಚಿಯಾಗಿ ಕಜ್ಜಾಯವನ್ನು ಮಾಡುತ್ತಿದ್ದರು, ಕಜ್ಜಾಯವಂತೂ ಬಹಳ ರುಚಿಯಾಗಿದೆ ಎಂದು ಹೇಳಿದ್ದಾರೆ.

Gattimela serial October 9th episode update

ತಂದೆಯ ಬಗ್ಗೆ ರಿವೀಲ್ ಮಾಡಿದ ವೇದಾಂತ್, ಶಾಕ್‌ಗೆ ಒಳಗಾದ ಸುಹಾಸಿನಿ

ವೇದಾಂತ್ ಪ್ರೆಸ್ ಮೀಟ್ ಅನ್ನು ಏರ್ಪಾಟು ಮಾಡಿದ್ದು ಅಲ್ಲಿಗೆ ಬಂದಿರುವ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ನಮ್ಮ ತಂದೆ ಸೂರ್ಯನಾರಾಯಣ್ ಅಗ್ನಿ ಅವಘಡದಲ್ಲಿ ಸಾವನ್ನಪ್ಪಿಲ್ಲ ಬದುಕಿದ್ದಾರೆ ಅವರನ್ನು ಹುಡುಕಲು ನನಗೆ ನಿಮ್ಮೆಲ್ಲರ ನೆರವು ಅಗತ್ಯವಾಗಿದೆ ಎಂದು ಕೇಳಿಕೊಂಡಿದ್ದಾರೆ. ಇದೇ ವೇಳೆ ಸುಹಾಸಿನಿ ಇವನು ಈ ಬಾರಿ ಏನೋ ಒಂದು ಪ್ಲ್ಯಾನ್ ಮಾಡಿದ್ದಾನೆ. ನಾನು ಆದಷ್ಟು ಹುಷಾರಾಗಿ ಇರಬೇಕು ಎಂದು ಯೋಚನೆ ಮಾಡಿದ್ದಾಳೆ.

ಆದ್ಯಾ ಹಾಗೂ ಎಲ್ಲರೂ ಸಹ ತುಂಬಾ ಸಂಭ್ರಮಪಟ್ಟಿದ್ದಾರೆ. ನನ್ನ ತಂದೆ ಬದುಕಿದ್ದಾರೆ ಎಂದು ಆದ್ಯಾಗೆ ಬಹಳ ಸಂತೋಷವಾಗಿದೆ. ವೈದೇಹಿಗೆ ನನ್ನ ಗಂಡ ನನಗೆ ಸಿಕ್ಕರೆ ಸಾಕು ಎಂದು ಖುಷಿಯಾಗಿ ಇದ್ದಾಳೆ.

More from Filmibeat

English summary
Zee Kannada serial Gattimela October 9th episode update here .
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X