Gattimela: ಮಂಜುನಾಥ್‌ಗೆ ಧಮ್ಕಿ ಹಾಕಿದ ಅಗ್ನಿ: ಮಗುವಿನ ಪ್ರಾಣ ತೆಗೆಯುವ ಎಚ್ಚರಿಕೆ..!

By Shruthi Harish Gowda

ಸೂರ್ಯನಾರಾಯಣ ಅವರು ಮಂಜುನಾಥ್ ಬಳಿ ಬಂದು ತೇಜಸ್ ಎಲ್ಲಿ ಎಂದು ಕೇಳುತ್ತಾ ಇದ್ದಾರೆ. ಇದಕ್ಕೆ ಮಂಜುನಾಥ್ ನನಗೆ ತೇಜಸ್ ಬಗ್ಗೆ ಗೊತ್ತಿಲ್ಲ ನಮಗೆ ಸುಮ್ಮನೆ ತೊಂದರೆಯನ್ನು ಕೊಡಬೇಡಿ ಎಂದು ಹೇಳಿದ್ದಾರೆ. ಆದರೂ ಸಹ ಸೂರ್ಯನಾರಾಯಣರು ನಿಮಗೆ ಸಂಬಂಧದ ಬಗ್ಗೆ ಗೊತ್ತಿಲ್ಲ ಸಂಬಂಧಗಳು ಹಳಸಿಕೊಂಡರೆ ಚೆನ್ನಾಗಿ ಇರೋದಿಲ್ಲ ದಯವಿಟ್ಟು ತೇಜಸ್ ಎಲ್ಲಿ ಹೋದ ಅವನನ್ನ ಏನು ಮಾಡಿದಿರಿ ಹೇಳಿ ಎಂದು ಮತ್ತೇ ಮಂಜುನಾಥ್ ಅವರನ್ನ ಕೇಳಿದ್ದಾರೆ.

ನಾವು ಪೊಲೀಸ್ ಸ್ಟೇಷನಲ್ಲು ಹೇಳಿದ್ದು ಇದೆ. ಅವನ ಬಗ್ಗೆ ನಮಗೆ ಗೊತ್ತಿಲ್ಲ ಅವನು ಎಲ್ಲಿ ಹೋದ ಎಂದು ನಮಗೆ ತಿಳಿದಿಲ್ಲ. ನನ್ನ ಮಗಳನ್ನು ಹಾಗೂ ನಮ್ಮನ್ನ ನೆಮ್ಮದಿಯಾಗಿ ಇರಲು ಬಿಡಿ ಎಂದು ಮಂಜುನಾಥ್ ಸೂರ್ಯನಾರಾಯಣರ ಬಳಿ ಹೇಳಿದ್ದಾರೆ. ನೀವು ಸುಸಂಸ್ಕೃತ ಕುಟುಂಬದವರಂತೆ ಕಾಣುತ್ತಿದ್ದೀರಿ, ಸುಳ್ಳನ್ನ ಹೇಳಬೇಡಿ ತೇಜಸ್ ಎಲ್ಲಿ ಎಂದು ಹೇಳಿ ಎಂದು ಸೂರ್ಯನಾರಾಯಣರು ಮತ್ತೆ ಮಂಜುನಾಥ್‌ರನ್ನು ಒತ್ತಾಯಿಸಿದ್ದಾರೆ. ನಮಗೆ ಅವನು ಎಲ್ಲಿಗೆ ಹೋದ ಎಂಬುದು ತಿಳಿದಿಲ್ಲ ದಯವಿಟ್ಟು ನಮ್ಮನ್ನು ಬಿಟ್ಟು ಬಿಡಿ ಎಂದಿದ್ದಾರೆ.

Gattimela serial september 12th episode update

ಇನ್ನು ವೈದೇಹಿಗೆ ಇಲ್ಲಿ ಸೂರಿ ಬಂದಿದ್ದಾನೆ ಎಂದು ಅನಿಸುತ್ತಿದೆ ನನ್ನ ಕಿವಿಗಳು ನನಗೆ ಮೋಸ ಮಾಡೋದಿಲ್ಲ ಚೆನ್ನಾಗಿ ಸೂರಿಯ ವಾಯ್ಸ್ ಕೇಳಿದೆ ಎಂದುಕೊಂಡಿದ್ದಾಳೆ. ಆರತಿಯ ಬಳಿ ಬಂದು ಯಾರು ಎಂದು ಕೇಳಿದ್ದಾರೆ. ಇದಕ್ಕೆ ಆರತಿ ನನಗೆ ಅವರು ಯಾರೋ ಗೊತ್ತಿಲ್ಲ ಅಮ್ಮ ಎಂದು ಹೇಳಿದ್ದಾಳೆ. ವೈದೇಹಿಗೆ ಸರಿಯಾದ ರೀತಿಯಲ್ಲಿಯೇ ಗಂಡ ಈ ಮನೆಗೆ ಬಂದಿದ್ದಾರೆ ಎಂದು ಅನಿಸುತ್ತಿದೆ. ಆದರೆ ಸೂರ್ಯನ ನೋಡಲು ಮಾತ್ರ ವೈದೇಹಿ ಕೈಯಲ್ಲಿ ಆಗುತ್ತಿಲ್ಲ ಈ ವಿಷಯವನ್ನು ಮನೆಯವರ ಬಳಿ ಹೇಗೆ ಹೇಳಲಿ ಎಂದು ವೈದೇಹಿ ಅಂದುಕೊಂಡಿದ್ದಾರೆ.

ಮಂಜುನಾಥ್‌ಗೆ ಧಮ್ಕಿ ಹಾಕಿದ ಅಗ್ನಿ, ಮಗು‌ವನ್ನು ಕೊಲ್ಲುವ ಮಾತು..!

ಸೂರ್ಯನಾರಾಯಣರು ಮಂಜುನಾಥ್ ಬಳಿ ಇನ್ನೇನು ಕ್ಷಮೆ ಕೇಳಬೇಕು ಎನ್ನುವಷ್ಟರಲ್ಲಿ ಮನೆಯೊಳಗೆ ಬಂದ ಅಗ್ನಿ, 'ರಾಯರೇ ನೀವೇಕೆ ಕ್ಷಮೆಯನ್ನು ಕೇಳುತ್ತಾ ಇದ್ದೀರಾ' ಎಂದಿದ್ದಾನೆ. ನಂತರ ಮಂಜುನಾಥ್ ಬನಿಯನ್ ಹಿಡಿದುಕೊಂಡು ಎಲ್ಲಿ ನನ್ನ ತಮ್ಮ ಅವನನ್ನ ಏನು ಮಾಡಿದೆ ಎಂಬುದನ್ನು ಮೊದಲು ಹೇಳು ಎಂದಿದ್ದಾನೆ. ಇದಕ್ಕೆ ಮಂಜುನಾಥ್ ನಾನು ಪೊಲೀಸ್ ಠಾಣೆಯಲ್ಲಿ ಎಲ್ಲವನ್ನ ಹೇಳಿದ್ದೇನೆ. ನನಗೂ ಈ ತೇಜಸ್‌ಗೂ ಯಾವುದೇ ಸಂಬಂಧವಿಲ್ಲವೆಂದು. ಪದೇಪದೇ ಬಂದು ಯಾಕೆ ನಮಗೆ ತೊಂದರೆಯನ್ನು ಕೊಡುತ್ತೀಯಾ ಎಂದು ಕೇಳಿದ್ದಾರೆ.

ಇನ್ನು ಇದೇ ವೇಳೆ ಆರತಿ ಅಲ್ಲಿಗೆ ಬಂದಿದ್ದು ಆರತಿಯನ್ನು ನೋಡಿದಾಗ ನಿಮ್ಮ ಮನೆಗೆ ಈಗ ತಾನೇ ಒಂದು ಮಗು ಬಂದಿದೆ. ನನ್ನ ಮನೆಯಲ್ಲಿ ಸೂತಕವನ್ನ ತಂದು ನೀನು ಸಂಭ್ರಮ ಪಡುತ್ತಿದ್ದೀಯ ನಿನ್ನನ್ನು ಸುಮ್ಮನೆ ನಾನು ಬಿಡುವುದಿಲ್ಲ. ಆ ಮಗುವಿಗೆ ಏನಾದರೂ ಮಾಡುವ ಮುನ್ನ ನನ್ನ ತಮ್ಮ ಎಲ್ಲಿ ಎಂದು ಹೇಳು ಎಂದು ಕೇಳಿದ್ದಾನೆ. ಅಷ್ಟರಲ್ಲಿ ಆರತಿಗೆ ತುಂಬಾ ಭಯವಾಗಿ ಒಳಗೆ ಓಡಿ ಹೋಗಿದ್ದಾಳೆ. ಅಗ್ನಿ ಮಂಜುನಾಥ್‌ಗೆ ಬೆದರಿಕೆ ಹಾಕಿದ್ದು ರಾಯರಿಗೆ ಇಷ್ಟವಾಗಲಿಲ್ಲ.

Gattimela serial september 12th episode update

ಗಂಡನನ್ನು ಹುಡುಕಿ‌ ಬಂದ ವೈದೇಹಿ, ಅಪ್ಪನಿಗಾಗಿ ಪಣತೊಟ್ಟ ವೇದಾಂತ್

ವೈದೇಹಿ ಸೂರ್ಯನಾರಾಯಣರನ್ನು ನೋಡಬೇಕು ಎಂದುಕೊಂಡು ಬಂದಿದ್ದಾರೆ. ಆದರೆ ವೈದೇಹಿ ಬರುವಷ್ಟರಲ್ಲಿ ಸೂರ್ಯನಾರಾಯಣ ಅಗ್ನಿ ಜೊತೆ ಕಾರಿನಲ್ಲಿ ಹೊರಟಿದ್ದಾರೆ. ಹೊರಗಡೆ ಓಡಿ ಬಂದರೂ ಸಹ ಸೂರ್ಯನಾರಾಯಣರನ್ನ ನೋಡಲು ಆಗದೆ ಜಗಲಿಯ ಮೇಲೆ ವೈದೇಹಿ ಯೋಚನೆ ಮಾಡುತ್ತಾ ಕುಳಿತಿದ್ದಾರೆ. ಅಲ್ಲಿಗೆ ಬಂದ ಮಂಜುನಾಥ್ ಯಾಕೆ ಯೋಚನೆ ಮಾಡುತ್ತಾ ಕುಳಿತಿದ್ದೀರಾ ಎಂದಾಗ ಸೂರ್ಯನಾರಾಯಣರ ಬಗ್ಗೆ ವಿಚಾರಿಸಿದ್ದಾರೆ. ಆದರೆ ಮಂಜುನಾಥ್ ರವರು ಅವರು ರೌಡಿಯ ಜೊತೆ ಬಂದವರು ಆಗಿರುತ್ತಾರೆ ಎಂದು ಹೇಳಿದ್ದಾರೆ.

ಈ ಕಡೆ ವೇದಾಂತ್ ಕಾಂತನನ್ನು ಮನೆಗೆ ಕಳುಹಿಸಲು ಎಲ್ಲಾ ತಯಾರಿಯನ್ನ ನಡೆಸಿದ್ದಾರೆ. ದಯವಿಟ್ಟು ನನಗೆ ನೀನು ಈ ಕೆಲಸವನ್ನ ಮಾಡಿ ಕೊಡಲೇಬೇಕು ಎಂದು ಕಾಂತನ ಬಳಿ ಕೇಳಿಕೊಂಡಿದ್ದಾರೆ. ನನ್ನ ತಂದೆಗೆ ಹಳೆಯದೆಲ್ಲಾ ನೆನಪು ಬರುವಂತೆ ಅಲ್ಲಿಂದುಕೊಂಡು ನೀನು ಮಾಡಬೇಕು ಎಂದು ಕೇಳಿಕೊಳ್ಳುತ್ತಾ ಇದ್ದಾರೆ. ಇದಕ್ಕೆ ಕಾಂತನಿಗೆ ತುಂಬಾ ಭಯವಾಗಿದೆ .ಆ ರೌಡಿ ಆ ಮನೆಗೆ ನಾನು ಹೋದರೆ ಬದುಕಿ ಬರಲು ಸಾಧ್ಯಾನ ಎಂದು ಕೇಳುತ್ತಾ ಇದ್ದಾನೆ.

More from Filmibeat

English summary
Zee Kannada serial gattimela 12th episode update
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X