ಗಟ್ಟಿಮೇಳ: ಅಮ್ಮನ ಸಿಡಿ ಕೈಸೇರುವ ಮುನ್ನ ವಸಿಷ್ಠ ಕುಟುಂಬದಲ್ಲಿ ಮತ್ತೆ ಪ್ರಾಣಾಪಾಯವಾಗುತ್ತಾ..?
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಗಟ್ಟಿಮೇಳ' ಧಾರಾವಾಹಿಯಲ್ಲಿ ಸದ್ಯ ಅಮ್ಮನ ಹುಡುಕಾಟದಲ್ಲಿ ಮೂವರು ಮಕ್ಕಳು ತೊಡಗಿದ್ದಾರೆ. ಅದಕ್ಕೆ ಸಖತ್ ಪ್ರೂಫ್ ಒದಗಿಸಿಕೊಡುತ್ತಿರುವುದು ಪ್ರಜ್ವಲ್. ಆಫೀಸಿನಲ್ಲಿ ಅಷ್ಟೇ ಕೆಲಸ ಮಾಡುವುದಿಲ್ಲ. ಪ್ರಜ್ವಲ್ ಇಲ್ಲದೆ ಹೋಗಿದ್ದರೆ ವೇದಾಂತ್ ಅವರ ತಾಯಿಯನ್ನು ಹುಡುಕುವುದಕ್ಕೆಇಷ್ಟು ಸುಲಭವಾಗುತ್ತಿರಲಿಲ್ಲ. ಪ್ರಜ್ವಲ್ ಎಲ್ಲಾ ರೀತಿಯಿಂದಲೂ ವಸಿಷ್ಠ ಸಿಂಹನ ಮನೆತನಕ್ಕೆ ಸಹಾಯ ಮಾಡುತ್ತಿದ್ದಾನೆ.
ತನ್ನ ತಾಯಿ ಸತ್ತೆ ಹೋಗಿದ್ದಾಳೆ ಎಂದುಕೊಂಡಿದ್ದ ವೇದಾಂತ್ ಗೆ ತನ್ನ ತಾಯಿ ಬದುಕಿದ್ದಾರೆ ಎಂಬ ಭರವಸೆ ಬಂದಿದೆ. ತಾಯಿಯನ್ನು ಹುಡುಕಲು ಹೊರಟಿದ್ದಾನೆ. ಆದರೆ ಹುಟ್ಟೂರಿಗೆ ಹೋಗುವುದಕ್ಕೂ ಮುನ್ನವೇ ತಾಯಿಗೆ ಸಂಬಂಧಿಸಿದ ಮುಖ್ಯವಾದ ವಿಡಿಯೋವೊಂದು ವೇದಾಂತ್‌ಗೆ ಸಿಗುವ ಸೂಚನೆ ಸಿಕ್ಕಿದೆ. ಆದರೆ ಇದು ಸುಹಾಸಿನಿಗೆ ಗೊತ್ತಾದರೆ ಮತ್ಯಾರ ಪ್ರಾಣ ಹೋಗುತ್ತೋ ಎಂಬ ಆತಂಕ ನೋಡುಗರಿಗೆ ಕಾಡುತ್ತಿದೆ.

ಧ್ರುವ ಸಾವೇ ಟಾರ್ಗೆಟ್?
ಸುಹಾಸಿನಿಗೆ ಮೊದಲು ಧ್ರುವ ಸಾಯಬೇಕು. ಅದಕ್ಕಾಗಿಯೇ ಅವನ ಮೇಲೆ ಅಟ್ಯಾಕ್ ಮಾಡಿಸಿದ್ದಳು. ಆದರೆ ಧ್ರುವ ಪ್ರಾಣ ಕಳೆದುಕೊಳ್ಳದೆ ಬಚಾವ್ ಆಗಿದ್ದಾನೆ. ಆದರೆ ಧ್ರುವ ಸ್ಥಿತಿ ಗೊತ್ತಿರುವ ಯಾವ ಸತ್ಯವನ್ನು ಹೇಳುವುದಕ್ಕೆ ಆಗದಂತ ಸ್ಥಿತಿ. ಇಂಥ ಸ್ಥಿತಿಯಲ್ಲೂ ಮೊದಲು ಧ್ರುವನನ್ನು ಸಾಯಿಸಬೇಕು ಎಂಬ ಫ್ಲ್ಯಾನ್ ಮಾಡುತ್ತಿದ್ದಾಳೆ. ಅದರಲ್ಲೂ ಸುಹಾಸಿನಿ ನಂಬಿರುವ ಆ ದೊಡ್ಡೋರು ಕೂಡ ಅದನ್ನೇ ಹೇಳುತ್ತಿದ್ದಾರೆ. ಆದಷ್ಟು ಬೇಗ ಅವನನ್ನು ಸಾಯಿಸು ಎಂದೇ ಹೇಳುತ್ತಿದ್ದಾರೆ. ಹೀಗಾಗಿ ಸುಹಾಸಿನಿಯ ಗಮನವೆಲ್ಲಾ ಈಗ ಧೃವನನ್ನು ಹೇಗೆ ಸಾಯಿಸುವುದು ಎಂದು ಓಡಾಡುತ್ತಿದೆ.

ಅರ್ಧದಿಂದಲೇ ವಾಪಾಸ್ಸಾದ ವೇದಾಂತ್
ಸುಹಾಸಿನಿ ಯಾವುದೇ ಕಾರಣಕ್ಕೂ ವೇದಾಂತ್ ಮುಂದೆ ತನ್ನ ಬಾಲ ಬಿಚ್ಚಲ್ಲ. ವೇದಾಂತ್, ತನ್ನ ತಾಯಿಯನ್ನು ಹುಡುಕಿಕೊಂಡು ಬರುತ್ತೀನಿ ಅಂತ ಹೊರಟಾಗಲೂ ಸರಿ ಎಂದು ತಲೆಯಲ್ಲಾಡಿಸಿ ಕಳುಹಿಸಿದ್ದಾಳೆ. ಆದರೆ ಆಕೆಯ ಮನಸ್ಸಲ್ಲಿ ವೇದಾಂತ್ ಆ ಕಡೆ ಹೋದರೆ ಈ ಕಡೆ ಹೇಗಾದರೂ ಮಾಡಿ ಧ್ರುವನನ್ನು ಮುಗಿಸಬಹುದು ಎಂದೇ ಇದೆ. ಈ ಎಲ್ಲದರ ನಡುವೆ ಮನೆಯಲ್ಲಿರುವ ವೈದೇಹಿ ಸಿಗುವುದಾದರೂ ಎಲ್ಲಿ ಎಂಬ ನಂಬಿಕೆ. ಆದರೆ ತಾಯಿಯನ್ನು ಹುಡುಕಲು ಹುಟ್ಟೂರಿಗೆ ಹೊರಟ ನಂತರ ಮುಖ್ಯವಾದ ಸಾಕ್ಷಿಯೊಂದು ಸಿಕ್ಕಿದೆ. ಆ ಕಾರಣಕ್ಕೆ ಮನೆಗೆ ವಾಪಾಸ್ ಆಗಿದ್ದಾನೆ.

ವೇದಾಂತ್‌ಗೆ ಸಿಕ್ಕ ಸಾಕ್ಷಿ ಯಾವುದು?
ವೇದಾಂತ್ ತಾಯಿಯನ್ನು ಹುಡುಕುತ್ತೀನಿ ಅಂತ ಹೇಳಿರುವುದೇ ಒಂದು ಖುಷಿಯ ವಿಚಾರ. ಮನೆಯ ಮಕ್ಕಳೆಲ್ಲಾ ಸೇರಿ ಹುಡುಕುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಆದರೆ ವೇದಾಂತ್, ತಮ್ಮ ಹುಟ್ಟೂರಿಗೆ ಹೋಗಿ ಅಲ್ಲಿಯೇ ಹುಡುಕುವ ತೀರ್ಮಾನಕ್ಕೆ ಬಂದಿದ್ದಾನೆ. ಅದೇ ಕಾರಣಕ್ಕೆ ಇದೀಗ ಪ್ರಜ್ವಲ್‌ನನ್ನು ಕರೆದುಕೊಂಡು ಹೊರಟಿದ್ದಾನೆ. ಆದರೆ ದಾರಿ ನಡುವೆಯೇ ಪ್ರಜ್ವಲ್‌ಗೆ ಒಂದು ಫೋನ್ ಕರೆ ಬಂದಿದೆ. ಅವರ ತಾಯಿಯಿದ್ದ ಸಿಡಿ ಕಳೆದು ಹೋಗಿತ್ತು. ಇದೀಗ ಅದರ ನಕಲಿ ಕಾಪಿ ರೆಡಿಯಾಗಿದೆ ಎಂದಾಗ ಮನೆ ಕಡೆಗೆ ಹೊರಟಿದ್ದಾರೆ.

ಸುಹಾಸಿನಿಗೆ ವಿಚಾರ ಗೊತ್ತಾಗುತ್ತಾ?
ಇಲ್ಲಿ ಮೈನ್ ಆಗಿ ಇರುವ ವಿಲನ್ ಎಂದರೆ ಅದು ಸುಹಾಸಿನಿಯೇ. ಈಗ ತಾಯಿ ಇರುವ ಸಿಡಿ ಸಿಕ್ಕಿದೆ ಎಂದರೆ ಅಲ್ಲಿಗೆ ಸುಹಾಸಿನಿ ತಾನು ಸಿಕ್ಕಿ ಬೀಳುತ್ತೀನಿ ಎಂಬುದು ಪಕ್ಕಾ ಆಗುತ್ತದೆ. ತನ್ನನ್ನು ತಾನು ಕಾಪಾಡಿಕೊಳ್ಳುವುದಕ್ಕೆ ಯಾರ ಪ್ರಾಣವನ್ನು ಬೇಕಾದರೂ ತೆಗೆದು ಬಿಡುತ್ತಾಳೆ. ಈಗ ಆ ಸಿಡಿ ತೆಗೆದುಕೊಂಡು ಬರುವುದು ಪ್ರಜ್ವಲ್ ಎಂದು ಗೊತ್ತಾದರೆ ಆತನ ಪ್ರಾಣಕ್ಕೂ ಅಪಾಯವಿದೆ. ಒಂದು ವೇಳೆ ಯಾಕಪ್ಪಾ ವಾಪಸ್ ಬಂದೆ ಅಂತ ವೇದಾಂತ್ ನನ್ನು ಸುಹಾಸಿನಿ ಕೇಳಿದರೆ ಸತ್ಯ ಬಾಯಿಬಿಡುತ್ತಾನೆ. ಧ್ರುವನಿಗೆ ಆದ ಗತಿ ಪ್ರಜ್ವಲ್ ಆಗಿಬಿಟ್ಟರೆ..?


Click it and Unblock the Notifications











