Gattimela: ಸೂರ್ಯನಾರಾಯಣರಿಗೆ ಅಗ್ನಿ ಬ್ಲಾಕ್ ಮೇಲ್: ಯೋಚನೆಯಲ್ಲಿ ಮುಳುಗಿರುವ ವೇದಾಂತ್, ಅಮೂಲ್ಯ!
ವೇದಾಂತ್ ಹೇಳಿದಂತೆ ಕಾಂತ ಅಗ್ನಿ ಮನೆಯಲ್ಲಿ ಅಡುಗೆ ಭಟ್ಟನ ಕೆಲಸಕ್ಕೆ ಸೇರಿಕೊಂಡಿದ್ದಾನೆ. ಇನ್ನು ಇದೇ ವೇಳೆ ಸೂರ್ಯ ನಾರಾಯಣ ನಾನು ರಸಂ ಅನ್ನ ತಿನ್ನಬೇಕು ಎಂಬುದಕ್ಕೆ ಕಾಂತ ರಸಂ ಹಾಗೂ ಅನ್ನ ಮಾಡಿ ಸೂರ್ಯನಾರಾಯಣರನ್ನ ಊಟಕ್ಕೆ ಕರೆಯಲು ಬಂದಿದ್ದಾನೆ. ಇದೇ ಸಂದರ್ಭದಲ್ಲಿ ಸೂರ್ಯನಾರಾಯಣರು ಅಗ್ನಿ ಜೊತೆಗೆ ಮನಸ್ತಾಪ ಮಾಡಿಕೊಂಡು ಮನೆ ಬಿಟ್ಟು ಸಂಪಿಗೆಪುರಕ್ಕೆ ಹೊರಡಲು ಸಿದ್ದರಾಗಿದ್ದಾರೆ. ಕಾಂತ ನೀವು ಊಟ ಮಾಡಿಕೊಂಡು ಹೋಗಲೇಬೇಕು. ಹಾಗೆಯೇ ಮನೆಯಿಂದ ಹೊರಗೆ ನೀವು ಹೋಗಬಾರದು ಎಂದು ಹೇಳಿದ್ದಾನೆ.
ಅಷ್ಟರಲ್ಲಿ ಅಲ್ಲಿಗೆ ಬಂದ ಅಗ್ನಿ ನೀವು ಮನೆಯಿಂದ ಹೊರಗೆ ಯಾವುದೇ ಕಾರಣಕ್ಕೂ ಹೋಗಬಾರದು ಎಂದು ಹೇಳಿದ್ದಾನೆ. ಇದೇ ವೇಳೆ ಅಗ್ನಿ ಸೂರ್ಯನಾರಾಯಣರನ್ನು ಯಾವ ರೀತಿ ಕನ್ವಿನ್ಸ್ ಮಾಡಿ ತನ್ನ ಜೊತೆಗೆ ಕರೆದುಕೊಂಡು ಬಂದ ಎಂಬುದು ಸದ್ಯಕ್ಕೆ ರಿವಿಲ್ಲಾಗಿದೆ. ಸಂಪಿಗೆಪುರಕ್ಕೆ ಹೋಗಿದ್ದ ಅಗ್ನಿ ಸೂರ್ಯನಾರಾಯಣರನ್ನ ಭೇಟಿ ಮಾಡಿದ್ದನು. ಇದೇ ವೇಳೆ ನಿಮ್ಮಿಂದ ನನಗೆ ಏನೂ ಸಹಾಯವಾಗಬೇಕಿಲ್ಲ. ಆದರೆ ನಮ್ಮಿಂದ ನಿಮಗೆ ಸಹಾಯವಾಗಬೇಕಿದೆ ಎಂದು ಹೇಳಿದ್ದನು. ಸೂರ್ಯನಾರಾಯಣರು ಅಗ್ನಿ ಹೇಳಿದ ಮಾತುಗಳಿಂದ ಕನ್ಫ್ಯೂಸ್ ಆಗಿ ನಿಮ್ಮಿಂದ ಸಹಾಯನ ಏನು ಹೇಳುತ್ತಾ ಇದ್ದೀರಾ ಎಂದು ಕೇಳಿದ್ದಾರೆ.

25 ವರ್ಷಗಳ ಹಿಂದೆ ನಿಮಗೆ ನಿಮ್ಮದೇ ಆದಂತಹ ಫ್ಯಾಮಿಲಿ ಇತ್ತು, ನೀವು ಇಲ್ಲಿ ನಾರಾಯಣ ರಾವ್ ಆಗಿ ಇದ್ದೀರಾ ಆದರೆ ನಿಮ್ಮ ಹೆಸರು ಅದಲ್ಲ ಎಂದೆಲ್ಲ ಹೇಳಿದ್ದಾನೆ. ಅಗ್ನಿಯ ಮಾತು ಕೇಳಿದ ಸೂರ್ಯನಾರಾಯಣರಿಗೆ ನಾನು ಮೊದಲು ನನ್ನ ಹೆಂಡತಿಯನ್ನ ನೋಡಬೇಕು. ಆನಂತರ ನನ್ನ ಮಕ್ಕಳು ಸಿಗುತ್ತಾರೆ ಎಂದು ಹೇಳಿದಾಗ ನಿಮ್ಮ ಫ್ಯಾಮಿಲಿಯನ್ನ ಹುಡುಕಿ ಕೊಡುವುದು ನನ್ನ ಕರ್ತವ್ಯ .ನೀವು ನನ್ನ ಜೊತೆ ಮನೆಗೆ ಬರಬೇಕು ಎಂದು ಹೇಳಿದ್ದಾನೆ. ಅಗ್ನಿ ಹೇಳಿದ ಮಾತಿನಂತೆ ಸೂರ್ಯನಾರಾಯಣರು ಅಗ್ನಿಯ ಜೊತೆ ಬೆಂಗಳೂರಿಗೆ ಸಂಪಿಗೆಪುರದಿಂದ ಬಂದಿದ್ದಾರೆ.
ಯೋಚನೆಗೆ ಬಿದ್ದ ವೇದಾಂತ್ ಅಮೂಲ್ಯ, ಅಗ್ನಿಯ ನಡೆಯ ಬಗ್ಗೆ ಅನುಮಾನ
ಅಮೂಲ್ಯ ಹಾಗೂ ವೇದ ಇಬ್ಬರೂ ಸಹ ಸೂರ್ಯನಾರಾಯಣರ ಕಡೆಯಿಂದ ಅಗ್ನಿ ಏಕೆ ಅಮ್ಮನನ್ನ ಮನೆಯಿಂದ ಹೊರಗಡೆ ಕಳುಹಿಸಿದ ಎಂಬುದರ ಬಗ್ಗೆ ಯೋಚನೆಯನ್ನು ಮಾಡುತ್ತಾ ಇದ್ದಾರೆ. ಅಮೂಲ್ಯ ವೇದಾಂತ್ ಬಳಿ ನಮ್ಮ ಕುಟುಂಬದ ಚೈನ್ ಬ್ರೇಕ್ ಮಾಡುವುದಕ್ಕೆ ಅಗ್ನಿ ಈ ರೀತಿ ಮಾಡಿದ್ದಾನಾ ಎಂದು ಕೇಳಿದ್ದಾಳೆ.

ಇದಕ್ಕೆ ವೇದಾಂತ್ ಅದು ಆ ರೀತಿ ಮಾಡಲು ಸಾಧ್ಯವೇ ಇರೋದಿಲ್ಲ ಆ ರೀತಿ ಅವನು ಮಾಡಬೇಕು ಎಂದಿದ್ದರೆ, ಮನೆಯಲ್ಲಿ ಯಾರಾದರೂ ಒಬ್ಬರಿಗೆ ಆ ರೀತಿ ಮಾಡಬಹುದಿತ್ತು.ಅದು ಬಿಟ್ಟು ವೈದೇಹಿ ಅಮ್ಮನನ್ನೇ ಮನೆಯಿಂದ ಹೊರಗೆ ಕಳುಹಿಸಿದ್ದಾನೆ. ಇದರ ಹಿಂದೆ ಬೇರೆ ಯಾವುದೋ ಕಾರಣ ಇದ್ದಂತೆ ಇದೆ ಎಂದಿದ್ದಾನೆ. ಎಷ್ಟೇ ಯೋಚನೆ ಮಾಡಿದರು ಸಹ ಅಗ್ನಿ ಈ ರೀತಿ ಯಾಕೆ ಮಾಡಿದ ಎಂಬುದಕ್ಕೆ ಉತ್ತರವೇ ಸಿಗುತ್ತಿಲ್ಲ.
ಸೂರ್ಯನಾರಾಯಣರನ್ನು ನಂಬಿಸಿದ ಅಗ್ನಿ
ನೀನು ನನ್ನ ಕೈಯಲ್ಲಿ ಪಾಪದ ಕೆಲಸಗಳನ್ನೆಲ್ಲ ಮಾಡಿಸುತ್ತಾ ಇದ್ದೀಯ ಜೊತೆಗೆ ನನ್ನ ಫ್ಯಾಮಿಲಿಯನ್ನ ಹುಡುಕುವ ಕೆಲಸವನ್ನ ಮಾಡಿಲ್ಲ ಎಂದು ಸೂರ್ಯನಾರಾಯಣರು ಅಗ್ನಿಯನ್ನ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಯಾವುದೋ ಒಂದು ಪೇಪರ್ ಸ್ಟೇಟ್ ಮೆಂಟ್ ತೋರಿಸಿದ ಅಗ್ನಿ ನಾನು ಸದ್ದಿಲ್ಲದೇ ಕೆಲಸವನ್ನು ಮಾಡುತ್ತಾ ಇದ್ದೇನೆ ಎಂದು ರಾಯರನ್ನ ನಂಬಿಸಿದ್ದಾನೆ. ನಾವು ಮಾಡುವ ಕೆಲಸ ಯಾರಿಗೂ ಸಹ ಗೊತ್ತಾಗೋದಿಲ್ಲ ಈಗಾಗಲೇ ನಿಮ್ಮ ಫ್ಯಾಮಿಲಿಯ ಬಗ್ಗೆ ಸಣ್ಣದೊಂದು ಸುಳಿವು ಸಿಕ್ಕಿದೆ.
ಇನ್ನು ಸ್ವಲ್ಪ ದಿನದಲ್ಲಿ ನಾನು ನಿಮ್ಮ ಫ್ಯಾಮಿಲಿ ಗೆ ನಿಮ್ಮನ್ನ ಸೇರಿಸುತ್ತೇನೆ ಅಲ್ಲಿಯ ತನಕ ನೀವು ಇಲ್ಲಿಯೇ ಇರಿ ಎಂದು ಸೂರ್ಯನಾರಾಯಣರ ಬಳಿ ಅಗ್ನಿ ಹೇಳಿದ್ದಾನೆ. ಅಗ್ನಿ ಹೇಳಿದ ಮಾತಿನಿಂದ ಸೂರ್ಯನಾರಾಯಣರಿಗೆ ಒಂದು ರೀತಿಯ ನಂಬಿಕೆ ಬಂದಿದೆ. ಇದರಿಂದಾಗಿ ನಾನು ಸಂಪಿಗೆಪುರಕ್ಕೆ ಹೋಗೋದಿಲ್ಲ. ನನ್ನ ಫ್ಯಾಮಿಲಿಯನ್ನ ನಾನು ಸೇರಬೇಕು ಎಂದು ಹೇಳಿದ್ದಾರೆ. ಅಗ್ನಿ ಪ್ರತಿಕ್ಷಣವೂ ಸಹ ಸೂರ್ಯನಾರಾಯಣರನ್ನು ನಂಬಿಸುವ ಪ್ರಯತ್ನದಲ್ಲಿ ಇದ್ದಾನೆ. ಇದರಿಂದ ವೇದಾಂತ್‌ಗೆ ತೊಂದರೆ ಕೊಡಬಹುದು ಎಂಬುವುದೇ ಅಗ್ನಿ ಉದ್ದೇಶ.


Click it and Unblock the Notifications











