Gattimela: ಬದಲಾದ ವೈದೇಹಿ ಕಂಡು ಭಯದಲ್ಲಿ ಸುಹಾಸಿನಿ, ಇತ್ತ ರೌಡಿಗಳ ಕೈಗೆ ಸಿಕ್ಕಿಬಿದ್ದ ಕಾಂತ!

By Shruthi Harish Gowda

ಸುಹಾಸಿನಿ ವೈದೇಹಿಯನ್ನ ಕೊಲೆ ಮಾಡುವಂತೆ ಯಾರ ಬಳಿಯಲ್ಲಿ ಫೋನ್ನಲ್ಲಿ ಮಾತನಾಡುತ್ತಾ ಇದ್ದಾಳೆ. ಫೋನ್ ಕಟ್ ಮಾಡುವಷ್ಟರಲ್ಲಿ ಮನೆಗೆ ವೈದೇಹಿಯೇ ಬಂದಿದ್ದಾಳೆ. ನೀನು ಏಕೆ ಮನೆಗೆ ಬಂದೆ ಎಂದೆಲ್ಲಾ ವೈದೇಹಿಯನ್ನ ಸುಹಾಸಿನಿ ಪ್ರಶ್ನೆಯ ಮೇಲೆ ಪ್ರಶ್ನೆಯನ್ನು ಕೇಳುತ್ತಾ ಇದ್ದಾಳೆ. ಇದೇ ಸಂದರ್ಭದಲ್ಲಿ ವೈದೇಹಿ ಉಯ್ಯಾಲೆಯ ಮೇಲೆ ಕುಳಿತುಕೊಂಡು ಕಾಲು ಮೇಲೆ ಕಾಲು ಹಾಕಿ ಸುಹಾಸಿನಿ ಕಡೆ ನೋಡುತ್ತಾ ಇದ್ದಾಳೆ. ಸುಹಾಸಿನಿಗೆ ವೈದೇಹಿಯ ನಡವಳಿಕೆ ಭಯ ತರಿಸಿದೆ.

ವೇದಾಂತ್ ಹಾಗೂ ಅಮೂಲ್ಯ ಇಬ್ಬರೂ ಸಹ ಹೋಗಿ ವೈದೇಹಿ ಅಮ್ಮನನ್ನ ಕರೆದುಕೊಂಡು ಬರಲು ಸಿದ್ಧತೆಯನ್ನು ನಡೆಸಿದ್ದಾರೆ. ಅಮೂಲ್ಯ ಬೆಳಗ್ಗೆ ಹೋಗಿ ವೈದೇಹಿ ಅಮ್ಮನನ್ನ ಕರೆದುಕೊಂಡು ಮನೆಗೆ ಬರೋಣ ಎಂದು ಹೇಳಿದ್ದಾಳೆ. ಆದರೆ ವೇದಾಂತ್ ಮನಸ್ಸಿಗೆ ತುಂಬಾ ಬೇಸರವಾಗಿದ್ದು ನಾವು ಈಗಿಂದ ಈಗಲೇ ಹೋಗಿ ವೈದೇಹಿ ಅಮ್ಮನನ್ನ ಈ ಮನೆಗೆ ಕರೆದುಕೊಂಡು ಬರೋಣ ಎಂದು ಅಮೂಲ್ಯ ಬಳಿಯಲ್ಲಿ ಹೇಳಿದ್ದಾನೆ. ಅಷ್ಟರಲ್ಲಿ ರೂಮಿಂದ ಹೊರಗಡೆ ಬಂದಾಗ ವೈದೇಹಿ ಅಮ್ಮನೇ ಕಣ್ಮುಂದೆ ಬಂದಿದ್ದು ವೇದಾಂತ್ ಜೋರಾಗಿ ವೈದೇಹಿಯನ್ನ ತಬ್ಬಿಕೊಂಡಿದ್ದಾನೆ.

gattimela-serial

ಅಮ್ಮ ನನ್ನಿಂದ ತಪ್ಪಾಗಿ ಹೋಯಿತು. ಇನ್ಮುಂದೆ ಯಾವುದೇ ಪರಿಸ್ಥಿತಿ ಬಂದರೂ ಸರಿಯೇ ನಾನು ನಿಮ್ಮನ್ನ ಮನೆ ಬಿಟ್ಟು ಹೋಗಿ ಎಂದು ಹೇಳೋದಿಲ್ಲ ಎಂದು ಕಣ್ಣೀರು ಹಾಕಿದ್ದಾನೆ. ನಾನು ಈಗ ನಿಮ್ಮನ್ನ ಕರೆದುಕೊಂಡು ಬರಲು ಹೊರಟಿದ್ದೆ ಅಷ್ಟರಲ್ಲಿ ನೀವೇ ಬಂದಿದ್ದೀರಾ ಎಂದು ವೇದಾಂತ್ ಹೇಳಿದ್ದಾನೆ. ಇನ್ನು ವೈದೇಹಿ ವೇದಾಂತ್ ಬಳಿ ನನಗೆ ಈ ಮನೆಯ ಸೆಳೆತವನ್ನು ಬಿಟ್ಟಿರಲು ಆಗಲಿಲ್ಲ. ಅದಕ್ಕಾಗಿ ನೀವು ಸೇರಿಸಿಕೊಳ್ಳುತ್ತೀರಾ ಎಂಬ ನಂಬಿಕೆಯ ಮೇಲೆ ವಾಪಸ್ ಬಂದುಬಿಟ್ಟೆ ಎಂದು ಹೇಳಿದ್ದಾರೆ. ಅಮ್ಮ ಇನ್ಮುಂದೆ ನಾನು ನಿಮ್ಮನ್ನ ಎಲ್ಲಿಗೂ ಸಹ ಕಳಿಸುವುದಿಲ್ಲ ನೀವು ಇಲ್ಲಿಯೇ ಇರಬಹುದು ಎಂದು ವೇದಾಂತ್ ಹೇಳಿದ್ದಾನೆ.

ವೈದೇಹಿ ಬದಲಾವಣೆ ಕಂಡು ಗಾಬರಿ

ಸುಹಾಸಿನಿಗೆ ವೈದೇಹಿ ಎಚ್ಚರಿಕೆ ನೀಡಿದ್ದಾರೆ. ಬಹಳ ಕಾನ್ಫಿಡೆಂಟಾಗಿ ಸುಹಾಸಿನಿಯ ಮುಂದೆ ಮಾತನಾಡಿದ್ದಾರೆ. ನೀನು ಇಷ್ಟು ದಿನ ಮಾಡಿರುವ ಅನ್ಯಾಯ ಸಾಕು ನಾನು ಇನ್ಮುಂದೆ ಬದಲಾಗುತ್ತಿದ್ದೇನೆ. ನೀನು ನಿನ್ನನ್ನ ಬದಲಾಯಿಸಿಕೊಳ್ಳುತ್ತೀಯಾ ಎಂದು ನಾನು ಇಷ್ಟು ದಿನ ಕಾದೆ. ಆದರೆ ನೀನು ನಿನ್ನನ್ನ ಬದಲಾಯಿಸಿಕೊಂಡಿಲ್ಲ ಎಂದು ಸುಹಾಸಿನಿಯ ಮುಂದೆ ವೈದೇಹಿ ಹೇಳಿದ್ದಾರೆ. ನೀನು ಮಾಡಿರುವ ಅನ್ಯಾಯವನ್ನ ಒಂದೊಂದೇ ಹೊರಗೆ ತೆಗೆಯುತ್ತೇನೆ ನೋಡುತ್ತಾ ಇರು ಎಂದು ಎಚ್ಚರಿಕೆ ನೀಡಿದ್ದಾರೆ.

gattimela-serial

ಇದೇ ವೇಳೆ ಸುಹಾಸನಿಗೆ ವೈದೇಹಿಯಲ್ಲಿ ಆಗಿರುವ ಬದಲಾವಣೆಯನ್ನು ಕಂಡು ಗಾಬರಿಯಾಗಿದೆ. ನನ್ನ ಮುಂದೆ ಮಾತನಾಡಲು ಹೆದರುತ್ತ ವೈದೇಹಿ ಈಗ ಕಾಲು ಮೇಲೆ ಕಾಲು ಹಾಕಿಕೊಂಡು ಕುಳಿತು ಮಾತನಾಡುವ ಮಟ್ಟಕ್ಕೆ ಬೆಳೆದಿದ್ದಾಳೆ. ಇವಳಿಗೆ ಈ ಧೈರ್ಯ ಎಲ್ಲಿಂದ ಬಂತು ಎಂದು ಯೋಚನೆಯನ್ನು ಮಾಡುತ್ತಾ ಇದ್ದಾಳೆ. ನಾನು ಇವಳನ್ನ ಕೊಲೆ ಮಾಡಲು ಹೇಳಿದರೆ ಇವಳು ಇಲ್ಲೇ ಪ್ರತ್ಯಕ್ಷವಾಗಿದ್ದಾಳೆ ಎಂದು ಭಯ ಭೀತಳಾಗಿದ್ದಾಳೆ.

ರೌಡಿಗಳ ಕೈಗೆ ಸಿಕ್ಕಿ ಬಿದ್ದ ಕಾಂತನಿಗೆ ಕೈಕಾಲು ಕಟ್ಟಿಹಾಕಿ ಟಾರ್ಚರ್

ಸೂರ್ಯನಾರಾಯಣರ ಬಳಿಯಲ್ಲಿ ಕುಳಿತುಕೊಂಡು ನಿಮಗೆ ಮಕ್ಕಳಿದ್ದಾರಾ?? ಮದುವೆ ಆಗಿತ್ತು ತಾನೇ ಎಂಬುದನ್ನೆಲ್ಲ ಕಾಂತ ಕೇಳುತ್ತಾ ಇದ್ದನು. ಹೌದು ನನಗೆ ನನ್ನ ಅಮ್ಮ ಮಾಡುವ ದೋಸೆ ತುಂಬಾ ಇಷ್ಟ ಎಂದು ತನ್ನ ಹಳೆಯ ನೆನಪುಗಳನ್ನು ಸೂರ್ಯನಾರಾಯಣರು ಕಾಂತನ ಬಳಿ ಹೇಳುತ್ತಿದ್ದರು. ಕಾಂತ ಮೇಲೆ ರೌಡಿಗಳಿಗೆ ಅನುಮಾನ ಬಂದಿದೆ.

ಕಾಂತ ಸೂರ್ಯನಾರಾಯಣರ ಬಳಿ ಪೂರ್ವಾಪರ ವಿಚಾರ ಮಾಡುತ್ತಿದ್ದುದನ್ನು ರೌಡಿಗಳು ಕೇಳಿಸಿಕೊಂಡಿದ್ದು, ಕಾಂತನನ್ನ ಕೈಕಾಲು ಕಟ್ಟಿ ಹಾಕಿ ಟಾರ್ಚರ್ ನೀಡಿದ್ದಾರೆ. ನೀನು ಯಾರ ರಾಯಭಾರಿಯಾಗಿ ಇಲ್ಲಿಗೆ ಬಂದಿದ್ದೀಯಾ? ಮೊದಲು ಅದನ್ನ ಹೇಳು ಎಂದು ಕೇಳುತ್ತಾ ಇದ್ದಾರೆ‌. ಫೋನ್ ಕಟ್ ಆಗದೆ ಇದ್ದಿದ್ದರಿಂದ ಅಮೂಲ್ಯಗೂ ಸಹ ರೌಡಿಗಳ ಕೈಗೆ ಕಾಂತ ಸಿಲುಕಿದ್ದಾನೆ ಎಂಬುವುದು ತಿಳಿದುಬಂದಿದೆ. ಆದರೆ ಅಮೂಲ್ಯಗೆ ಏನು ಮಾಡಬೇಕು ಎಂಬುದು ಮಾತ್ರ ತಿಳಿಯುತ್ತಿಲ್ಲ.

More from Filmibeat

English summary
Zee Kannada serial gattimela serial september 20th episode update.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X