Gattimela: ವೈದೇಹಿಗೆ ಅಮ್ಮನ ಪ್ರೀತಿ ನೀಡುತ್ತಿರುವ ವೇದಾಂತ್: ಸಹಿಸದ ಸುಹಾಸಿನಿ..!
ಗಟ್ಟಿಮೇಳ ಧಾರಾವಾಹಿಯಲ್ಲಿ ಗಣೇಶೋತ್ಸವ ಸಂಭ್ರಮ ಮನೆ ಮಾಡಿದೆ. ಈಗಾಗಲೇ ಮನೆಯೆಲ್ಲ ಕಾಂತಾ ಡೆಕೋರೇಷನ್ ಮಾಡಿದ್ದು ಮನೆಗೆ ಗಣಪತಿ ಬರುವುದೊಂದೇ ಬಾಕಿ ಇದೆ. ಇದೇ ವೇಳೆ ಅಜ್ಜಿ ಸಹ ಗಣಪತಿಯನ್ನು ತಂದಿದ್ದಾರಾ ಎಂದು ಕಾಂತನ ಬಳಿ ಕೇಳಿದ್ದಾರೆ. ಇದಕ್ಕೆ ಕಾಂತಾ ಇಲ್ಲ ಅಮ್ಮಮ್ಮ, ಗಣಪತಿಯನ್ನು ತರಬೇಕು ಎಂದು ಹೇಳಿದ್ದಾನೆ. ಅಷ್ಟರಲ್ಲಿ ಕಾರ್ ಸೌಂಡ್ ಆಗಿದ್ದು ಗಣಪತಿ, ಜೊತೆಗೆ ಆಧ್ಯಾ ಹಾಗೂ ಸಾರ್ಥಕ್ ಇಬ್ಬರೂ ಸಹ ಹೋಗಿ ಆರತಿ ಹಾಗೂ ಮಗುವನ್ನು ಮನೆಗೆ ಕರೆದುಕೊಂಡು ಬಂದಿದ್ದಾರೆ.
ಗಣೇಶನ ಒಟ್ಟಿಗೆ ಆರತಿ ಹಾಗೂ ಮಗುವನ್ನ ನೋಡಿದ ಮನೆಯವರೆಲ್ಲರೂ ತುಂಬಾ ಖುಷಿಯಿಂದ ಇದ್ದಾರೆ. ಆದರೆ ಸುಹಾಸಿನಿ ಮಾತ್ರ ಬೇಸರದಲ್ಲೇ ಇದ್ದಾಳೆ. ಇದೇ ವೇಳೆ ವೈದೇಹಿ ಆಧ್ಯಾಗೆ ಆ ದೇವರ ಕೋಣೆಗೆ ಹೋಗಿ ಕೆಂಪು ಆರತಿ ಮಾಡಿಕೊಂಡು ಬನ್ನಿ ಗಣೇಶ ಹಾಗೂ ಬಂದಿರುವ ಪುಟ್ಟ ಗಣೇಶನಿಗೆ ಆರತಿಯನ್ನ ಮಾಡಿ ಮನೆ ಒಳಗಡೆ ಕರೆದುಕೊಳ್ಳೋಣ ಎಂದು ಹೇಳಿದ್ದಾರೆ. ಆಧ್ಯಾ ಹೋಗಿ ಆರತಿ ತಂದಿದ್ದು ಗಣೇಶನಿಗೂ ಹಾಗೂ ಆರತಿ ಮಗುವಿಗೂ ಆರತಿಯನ್ನು ಬೆಳಗಿ ಮನೆಯ ಒಳಗಡೆ ಕರೆದುಕೊಂಡು ಹೋಗಲಾಗಿದೆ ಮನೆಯ ತುಂಬೆಲ್ಲ ಸಂಭ್ರಮ ಮನೆ ಮಾಡಿದೆ.

ವೈದೇಹಿ ವೈಜಯಂತಿ ಅಮ್ಮನ ಬಳಿ ಬಂದು ಅಮ್ಮ ನಿಮಗೆ ಕಣ್ಣು ಕಾಣುತ್ತಿದೆ ಎಂಬ ಸತ್ಯವನ್ನ ಮನೆಯವರ ಮುಂದೆ ಇಂದು ಹೇಳಿಬಿಡಿ ಇಂದು ಹಬ್ಬ ಬೇರೆ ಇದೆ ಎಲ್ಲರಿಗೂ ಸತ್ಯ ತಿಳಿದು ಹೋಗಲಿ ಎಂದು ಹೇಳಿದ್ದಾರೆ. ಇದಕ್ಕೆ ವೈಜಯಂತಿ ಅಮ್ಮ ನಾನು ಆ ರೀತಿ ಹೇಳಿದರೆ ಸತ್ಯ ಹೇಳಬೇಕಾಗುತ್ತದೆ. ನೀನೆ ವೇದಾಂತ್, ವಿಕ್ರಾಂತ್, ಆದ್ಯಾ ತಾಯಿ ಎಂಬುದನ್ನು ಈ ಮನೆಯವರಿಗೆ ತಿಳಿಸಬೇಕಾಗುತ್ತದೆ. ಆಗ ಏನು ಮಾಡೋದು ಎಂದು ಪ್ರಶ್ನೆಯನ್ನ ಮಾಡಿದ್ದಾರೆ. ಸತ್ಯ ಒಂದಲ್ಲ ಒಂದು ದಿನ ಹೊರಗಡೆ ಬರಬೇಕು ನೀವು ಅದರ ಬಗ್ಗೆ ಚಿಂತೆ ಮಾಡಬೇಡಿ ನಿಮಗೆ ಕಣ್ಣು ಕಾಣಿಸುತ್ತದೆ ಎಂಬ ವಿಚಾರವನ್ನು ಅಷ್ಟೇ ಹೇಳಿ ಎಂದು ವೈದೇಹಿ ಹೇಳಿದ್ದಾರೆ.
ವೈದೇಹಿಗೆ ಅಮ್ಮನ ಪ್ರೀತಿ ತೋರಿಸುತ್ತಿರುವ ವೇದಾಂತ್, ಸುಹಾಸಿನಿಗೆ ಕೋಪ
ವೈದೇಹಿ ಬಳಿ ಬಂದ ವೇದಾಂತ್ ಅಮ್ಮ ದಯವಿಟ್ಟು ನಿಮ್ಮನ್ನ ಮನೆಯಿಂದ ಹೊರಗೆ ಕಳುಹಿಸಿದ್ದಕ್ಕೆ ಮೊದಲು ನನ್ನನ್ನ ಕ್ಷಮಿಸಿಬಿಡಿ ಎಂದು ಹೇಳಿದ್ದಾನೆ. ಇದಕ್ಕೆ ವೈದೇಹಿ ಅದೆಲ್ಲ ಒಂದು ಕೆಟ್ಟ ಗಳಿಗೆ ಯಾರಾದರೂ ಮಕ್ಕಳು ತಪ್ಪು ಮಾಡಿದರೆ ತಾಯಿ ಆದವಳು ಕ್ಷಮಿಸುತ್ತಾಳೆ ಎಂದು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ವೈದೇಹಿಗೆ ಒಂದು ಸೀರೆಯನ್ನ ತಂದಿದ್ದು ಅದನ್ನು ವೈದೇಹಿಗೆ ಕೊಡಲು ಹೋದಾಗ ಇದೆಲ್ಲ ಯಾವುದು ಬೇಕಾಗಿರಲಿಲ್ಲ ಎಂದು ತಿರಸ್ಕರಿಸಿದ್ದಾರೆ. ಆದರೆ ವೇದಾಂತ್ ನಾನು ನಿಮ್ಮನ್ನ ತಾಯಿ ಎಂದು ಕರೆಯುತ್ತೇನೆ. ನೀವು ನನ್ನನ್ನ ಮಗ ಎಂದು ಒಪ್ಪಿಕೊಂಡಿದ್ದೀರಾ. ಮಗ ಗಿಫ್ಟ್ ಕೊಟ್ಟರೆ ಬೇಡ ಅನ್ನಬಾರದು ಎಂದು ಸೀರೆ ಹಾಗೂ ಒಡವೆಯನ್ನ ಕೊಟ್ಟಿದ್ದಾನೆ.

ಅಮೂಲ್ಯ ಒಂದು ಹೆಜ್ಜೆ ಮುಂದೆ ಹೋಗಿ ನೀವು ಸಹ ನಮ್ಮ ಅತ್ತೆ ಸುಹಾಸಿನಿಯಾ ರೀತಿ ರೆಡಿಯಾಗಿ. ನೀವು ಈಗ ವೇದಾಂತ್ ಅಮ್ಮ ಚೆನ್ನಾಗಿ ರೆಡಿಯಾಗಿ ಬನ್ನಿ ಎಂದು ಹೇಳಿದ್ದಾಳೆ. ಇದೆಲ್ಲವನ್ನು ಕೇಳಿಸಿಕೊಂಡ ಸುಹಾಸಿನಿಗೆ ಕೋಪ ಬಂದಿದೆ. ಮನೆ ಕೆಲಸದವಳನ್ನ ನನ್ನಂತೆ ರೆಡಿಯಾಗು ಎಂದು ಹೇಳುತ್ತಿದ್ದಾರೆ. ನನಗೆ ಇದೆಲ್ಲವನ್ನ ನೋಡುತ್ತಿದ್ದರೆ ಇವರೆಲ್ಲರಿಗೂ ಏನಾದರೂ ಮಾಡಬೇಕು ಎನಿಸುತ್ತಿದೆ ಎಂದು ಕಿಡಿ ಕಾರಿದ್ದಾಳೆ.
ಕಣ್ಣು ಕಾಣುವ ವಿಷಯ ಹೇಳಲು ಸರ್ಕಸ್, ರೂಮ್‌ನಲ್ಲಿ ಅಜ್ಜಿ ಪ್ರಾಕ್ಟೀಸ್
ನನಗೆ ಕಣ್ಣು ಕಾಣಿಸುತ್ತಿದೆ ಎಂಬ ವಿಷಯವನ್ನು ವೈಜಯಂತಿ ಅಮ್ಮ ಎಲ್ಲರ ಮುಂದೆ ಹೇಳಲು ಬಹಳಷ್ಟು ಸರ್ಕಸ್ ಮಾಡುತ್ತಿದ್ದಾರೆ. ಜೊತೆಗೆ ಪ್ರಾಕ್ಟೀಸ್ ಮಾಡುತ್ತಿದ್ದಾರೆ. ನನಗೆ ಕಣ್ಣು ಕಾಣುತ್ತಿದೆ ಎಂದು ರೂಮಿನ ತುಂಬೆಲ್ಲ ಹೇಳುತ್ತಾ ಇದ್ದಾರೆ. ಇದನ್ನು ಕಾಂತ ಕೇಳಿಸಿಕೊಂಡು ಪಾಪ ಅಮ್ಮಮ್ಮಗೆ ಕಣ್ಣು ಕಾಣುವುದಿಲ್ಲ ನನಗೆ ಕಣ್ಣು ಕಾಣಿಸುತ್ತಿದೆ ಎಂದು ಭ್ರಮಿಸುತ್ತಾ ಇದ್ದಾರೆ ಎಂದುಕೊಂಡಿದ್ದಾನೆ. ಆದರೆ ವೈಜಯಂತಿ ಅಮ್ಮ ಮಾತ್ರ ತಮಗೆ ಕಣ್ಣು ಕಾಣಿಸುತ್ತದೆ ಎಂಬ ವಿಚಾರವನ್ನು ಎಲ್ಲರ ಮುಂದೆ ಹೇಗೆ ಹೇಳಬೇಕು ಎಂಬುದೇ ತಿಳಿಯುತ್ತಿಲ್ಲ ಎಂದುಕೊಂಡಿದ್ದಾರೆ.h


Click it and Unblock the Notifications











