Gattimela: ವೈದೇಹಿ ಪೂಜೆ ಮಾಡುವ ವೇಳೆ ನಾಟಕವಾಡಿದ ಸುಹಾಸಿನಿ: ವೈದೇಹಿ ಮಾಡಿದ್ದೇನು.?
ಗಟ್ಟಿಮೇಳ ಧಾರಾವಾಹಿಯಲ್ಲಿ ಗಣೇಶೋತ್ಸವ ಸಂಭ್ರಮ ಮನೆ ಮಾಡಿದೆ. ಗಣೇಶ ಮೂರ್ತಿಯನ್ನು ಕೂರಿಸಿ ಪೂಜೆ ಮಾಡಲು ತಯಾರಿಯನ್ನ ಮಾಡಿಕೊಳ್ಳಲಾಗಿದೆ. ಆರತಿಗೆ ವಿಕ್ರಾಂತಿ ನೆನಪು ತುಂಬಾ ಕಾಡುತ್ತಿದೆ. ರೂಮಿಗೆ ಬಂದವಳೇ ಹಾಸಿಗೆ ಮೇಲೆ ಕುಳಿತುಕೊಂಡು ವಿಕ್ಕಿ ಜೊತೆ ಕಳೆದ ಸುಮಧುರ ಕ್ಷಣಗಳನ್ನೆಲ್ಲಾ ಮೆಲುಕುತ್ತಿದ್ದಾಳೆ. ಆರತಿಯ ಸೀಮಂತ ಕಾರ್ಯಕ್ರಮದಲ್ಲಿ ವಿಕ್ಕಿ ಡ್ಯಾನ್ಸ್ ಮಾಡಿದ್ದನ್ನು ನೆನಪಿಸಿಕೊಂಡು ವಿಕ್ಕಿ ಅವರು ಈಗ ಇರಬೇಕಾಗಿತ್ತು ಎಂದು ಕಣ್ಣೀರನ್ನು ಹಾಕುತ್ತಿದ್ದಾಳೆ.
ಅಷ್ಟರಲ್ಲಿ ಅಮೂಲ್ಯ ಅಲ್ಲಿಗೆ ಬಂದಿದ್ದು ಅಕ್ಕ ನೀನು ಇನ್ನು ಪೂಜೆಗೆ ರೆಡಿಯಾಗಿಲ್ಲ ಎಂದು ಕೇಳಿದ್ದಾಳೆ. ಇದಕ್ಕೆ ಆರತಿ ನಾನು ಇಷ್ಟೇ ಸಿಂಪಲ್ ಆಗಿ ರೆಡಿಯಾಗುವುದು ಎಂದು ಹೇಳಿದ್ದಾಳೆ. ಅಕ್ಕ ಯಾಕೆ ಈ ರೀತಿ ಮಾತನಾಡುತ್ತಿದ್ದೀಯ ಎಂದು ಹೇಳಿದ್ದಕ್ಕೆ, ಆರತಿ ನಾನು ಯಾರಿಗೋಸ್ಕರ ರೆಡಿಯಾಗಬೇಕು ಹೇಳು ಎಂದು ಅಮೂಲ್ಯಳನ್ನು ಕೇಳಿದ್ದಾಳೆ. ನಂತರ ಅಮೂಲ್ಯ ವಿಕ್ಕಿ ಬಾವ ಎಲ್ಲು ಹೋಗಿಲ್ಲ ಅವರು ನಿನ್ನ ಜೊತೆಗೆ ಇದ್ದಾರೆ ನೀನು ಖುಷಿಯಾಗಿ ಇದ್ದರೇ ಮಾತ್ರ ವಿಕ್ಕಿ ಭಾವನಿಗೆ ಖುಷಿ ಎಂದು ಹೇಳಿದ್ದಾಳೆ.

ನಂತರ ತಾನೇ ಹೋಗಿ ಸೀರೆ ತೆಗೆದುಕೊಂಡು ಬಂದು ಆರತಿಯನ್ನು ರೆಡಿ ಮಾಡಿದ್ದಾಳೆ. ಆದರೂ ಸಹ ಆರತಿ ಕಣ್ತುಂಬಿಕೊಂಡು ವಿಕ್ಕಿ ಇರಬೇಕಾಗಿತ್ತು ನಾನು ಚೆನ್ನಾಗಿ ರೆಡಿಯಾದಾಗ ನನ್ನ ಕಣ್ಣಿನ ಬಳಿ ಇರುವ ಕಾಡಿಗೆಯನ್ನು ತಂದು ಗಲ್ಲದ ಮೇಲೆ ಇಡುತ್ತಿದ್ದರು ಎಂದು ಭಾವುಕಳಾಗಿದ್ದಾಳೆ. ನಂತರ ಅಮೂಲ್ಯ ಅಕ್ಕನ ಮುಖದಲ್ಲಿ ನಗು ತರಿಸುವ ಕೆಲಸ ಮಾಡಿದ್ದು ಪೂಜೆ ಮಾಡುವ ಜಾಗಕ್ಕೆ ಕರೆದುಕೊಂಡು ಬಂದಿದ್ದಾಳೆ.
ವೈದೇಹಿ ಕಂಡು ಮನೆಯವರ ಖುಷಿ, ಸುಹಾಸಿನಿಗೆ ಬಂತು ಕೆಂಡಂತಹ ಕೋಪ!
ಪೂಜೆ ಮಾಡಲು ಎಲ್ಲರೂ ವೈದೇಹಿಗೋಸ್ಕರ ಕಾಯುತ್ತಾ ಇದ್ದಾರೆ. ಆದರೆ ಸುಹಾಸನಿಗೆ ಬೇಸರವಾಗುತ್ತಿದೆ. ಯಾವಳಿಗೋಸ್ಕರವೋ ಪೂಜೆಯನ್ನು ತಡ ಮಾಡುತ್ತಿದ್ದಾರೆ. ನನ್ನ ಅಸ್ತಿತ್ವ ಎಲ್ಲಿ ಹೋಯಿತು ನಾನು ಈ ಮನೆಯ ಯಜಮಾನಿ ತರ ಇದ್ದವಳು ಈಗ ಬೇರೆಯವರಿಗೋಸ್ಕರ ಕಾಯುವ ಪರಿಸ್ಥಿತಿ ನನಗೆ ಬಂದಿದೆ ಎಂದು ಬೇಸರ ಮಾಡಿಕೊಂಡಿದ್ದಾಳೆ.
ವೈದೇಹಿ ಚೆನ್ನಾಗಿ ಸೀರೆಯನ್ನ ಉಟ್ಟುಕೊಂಡು ಒಡವೆ ಹಾಕಿಕೊಂಡು ಪೂಜೆ ಮಾಡುವ ಜಾಗಕ್ಕೆ ಬಂದಿದ್ದಾಳೆ. ವೈದೇಹಿಯನ್ನ ನೋಡಿದ ವೇದಾಂತ್ ನನ್ನ ಅಮ್ಮ ಸಹ ನಿಮ್ಮಂತೆಯೇ ಇರಬಹುದೇನೋ ಎಂದು ಊಹೆ ಮಾಡಿಕೊಂಡಿದೆ. ಅದೇ ರೀತಿ ನೀವು ಇದ್ದೀರಾ ಎಂದುಕೊಂಡಿದ್ದಾನೆ. ಅಷ್ಟೇ ಅಲ್ಲದೆ ಆದ್ಯಾ ಸಹ ಸುಹಾಸಿನಿಯಾ ಬಳಿ ನನ್ನ ಅಮ್ಮ ಇವರಂತೆ ಇದ್ರಾ ಎಂದು ಪ್ರಶ್ನೆ ಮಾಡಿದ್ದಾಳೆ. ಸುಹಾಸಿನಿ ಮೊದಲು ಪೂಜೆ ಮುಗಿಸಿ ನಂತರ ಮಾತನಾಡೋಣ ಎಂದು ವಿಷಯವನ್ನೇ ಮರೆಸುವ ಪ್ರಯತ್ನ ಮಾಡಿದ್ದಾಳೆ.

ಪೂಜೆ ಸಮಯದಲ್ಲಿ ನಾಟಕವಾಡಿದ ಸುಹಾಸಿನಿ!
ಮನೆಯಲ್ಲಿ ಎಲ್ಲರೂ ವೈದೇಹಿಯನ್ನೇ ಪೂಜೆ ಮಾಡಿ ಎಂದು ಹೇಳಿದ್ದಾರೆ ಇದು ಸುಹಾಸನಿಗೆ ಮಾತ್ರ ಇಷ್ಟವಾಗಲಿಲ್ಲ. ಇದಕ್ಕಾಗಿ ಏನಾದರೂ ಮಾಡಬೇಕು ಎಂದುಕೊಂಡು ತಲೆ ಸುತ್ತುತ್ತಿದೆ ಎಂಬ ನಾಟಕ ಆಡಿದ್ದಾಳೆ. ಇದೆ ವೇಳೆ ವೇದಾಂತ್ ವೈದೇಹಿಯನ್ನ ರೂಮಿಗೆ ಕರೆದುಕೊಂಡು ಹೋಗಿ ಮಲಗಿಸಿದ್ದಾನೆ. ನಂತರ ಸುಹಾಸಿನಿ ಅಮ್ಮ ಬಂದ ಮೇಲೆ ಪೂಜೆ ಮಾಡೋಣ ಎಂದು ಹೇಳಿದ್ದಾನೆ.
ವೈದೇಹಿ ನಾನು ಸುಹಾಸಿನಿ ಅವರನ್ನ ಕರೆದುಕೊಂಡು ಬರುತ್ತೇನೆ ಎಂದು ಹೇಳಿದ್ದಾರೆ. ರೂಮಿಗೆ ಹೋಗಿ ಸುಹಾಸಿನಿಗೆ ಬುದ್ಧಿ ಮಾತನ್ನ ಹೇಳಿದ್ದಾರೆ. ಆದರೆ ಸುಹಾಸಿನಿ ಅದನ್ನು ಕೇಳುವ ಸ್ಥಿತಿಯಲ್ಲಿ ಇಲ್ಲ. ನಾನೇ ಈ ಮನೆಯ ಯಜಮಾನಿ ನಾನೇ ಪೂಜೆಯನ್ನ ಮಾಡಬೇಕು ಆ ರೀತಿ ಮಾಡುತ್ತೇನೆ ಎಂದು ಹೇಳಿದ್ದಾಳೆ. ಆಗ ವೈದೇಹಿ ತಮ್ಮ ಬಳಿ ಇರುವ ವಿಡಿಯೋವನ್ನು ತೋರಿಸಿ ಸುಹಾಸಿನಿ ಪೂಜೆಗೆ ಬರುವಂತೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಮಾಡಿ ಎಂದು ಸುಹಾಸಿನಿ ಬಾಯಲ್ಲೇ ಹೇಳಿಸಿದ್ದಾರೆ.


Click it and Unblock the Notifications











