Gattimela: ಕಣ್ಣು ಕಾಣುವ ಸತ್ಯ ಹೇಳಿದ ಅಜ್ಜಿ: ಭಯ ಭೀತಳಾದ ಸುಹಾಸಿನಿಗೆ ಮಾಡಿದ್ದೇನು ಗೊತ್ತಾ?

By Shruthi Harish Gowda

ವೇದಾಂತ್ ಮನೆಯಲ್ಲಿ ಗಣೇಶೋತ್ಸವ ಸಂಭ್ರಮ ಮನೆ ಮಾಡಿದೆ. ಮತ್ತೊಂದು ಕಡೆ ಸೂರ್ಯನಾರಾಯಣರ ಕೃಪೆಯಿಂದ ಅಗ್ನಿ ಮನೆಯಲ್ಲೂ ಹಬ್ಬ ನಡೀತಿದೆ. ಸುಹಾಸಿನಿಯನ್ನ ವೈದೇಹಿ ಪೂಜೆ ಮಾಡುವ ಸ್ಥಳಕ್ಕೆ ಕರೆದುಕೊಂಡು ಬಂದಿದ್ದಾಳೆ. ಸುಹಾಸಿನಿ, ವೈದೇಹಿಗೆ ಪೂಜೆ ನೀವೇ ಮಾಡಿ ಎಂದಿದ್ದಾಳೆ. ಇದೇ ವೇಳೆ ಸುಹಾಸಿನಿ ಇಲ್ಲ ನೀವೇ ಮಾಡಿ ಎಂದಾಗ ವೈದೇಹಿ ಪೂಜೆ ನೆರವೇರಿಸಿದ್ದಾಳೆ.

ಈ ಕಡೆ ವೈದೇಹಿ ಪೂಜೆ ಸಲ್ಲಿಸುತ್ತಿದ್ದರೆ ಆ ಕಡೆ ಸೂರ್ಯನಾರಾಯಣರು ಅಗ್ನಿಯ ಮನೆಯಲ್ಲಿ ಪೂಜೆ ಮಾಡುತ್ತಿದ್ದಾರೆ. ಗಣೇಶ ಮೂರ್ತಿಗೆ ಬೇಕಾದ ಎಲ್ಲಾ ತಿಂಡಿಗಳನ್ನ ಇಟ್ಟು ಪೂಜೆ ಸಲ್ಲಿಸಲಾಗಿದೆ. ಜೊತೆಯಲ್ಲಿರುವವರಿಗೆ ಒಳ್ಳೆಯದಾಗಲಿ ಇನ್ಮುಂದೆ ನಮಗೆ ಒಳ್ಳೆಯ ಬುದ್ದಿಯನ್ನು ದಯಪಾಲಿಸು ಎಂದು ಬೇಡಿಕೊಳ್ಳಿ ಎಂದು ಸೂರ್ಯನಾರಾಯಣರು ಹೇಳಿದ್ದಾನೆ. ವೇದಾಂತ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದ್ದು ಎಲ್ಲರೂ ಸಹ ಭಕ್ತಿಯಿಂದ ದೇವರ ಬಳಿ ಬೇಡಿಕೊಳ್ಳುತ್ತಾ ಇದ್ದಾರೆ. ವೈದೇಹಿ ಪೂಜೆ ಸಲ್ಲಿಸಿದ ಬಳಿಕ ಎಲ್ಲರಿಗೂ ಮಂಗಳಾರತಿಯನ್ನು ನೀಡಿ ಮಂತ್ರಾಕ್ಷತೆಯನ್ನು ಕೊಟ್ಟಿದ್ದಾಳೆ.

Gattimela-kannada-serial

ವೇದಾಂತ್ ಹಣೆಗೆ ಕುಂಕುಮ ಇಟ್ಟಿದ್ದಾಳೆ. ಇದೇ ವೇಳೆ ವೇದಾಂತ್‌ಗೆ ತನ್ನ ತಾಯಿ ಕುಂಕುಮ ಇಡುತ್ತಿದ್ದಾರೆ ಎಂಬಂತೆ ಫೀಲ್ ಆಗಿದೆ. ಅಲ್ಲಿ ಅಗ್ನಿ ಆ ಮನೆಯವರೆಲ್ಲರಿಗೂ ಸಹ ಸೂರ್ಯನಾರಾಯಣರು ಮಂತ್ರಾಕ್ಷತೆಯನ್ನ ನೀಡಿ ದೇವರಿಗೆ ಹಾಕಿ ನಂತರ ತಮಗೆ ಏನು ಬೇಕೋ ಅದನ್ನ ಬೇಡಿಕೊಳ್ಳಿ ಗಣಪತಿ ಸಕಲ ಇಷ್ಟಾರ್ಥಗಳನ್ನು ನೆರವೇರಿಸುತ್ತಾನೆ ಎಂದಿದ್ದಾನೆ. ಇನ್ನು ಇದೇ ವೇಳೆ ವೈದೇಹಿ ಈ ಮನೆಯಲ್ಲಿ ಸಂತೋಷ ಸಂಭ್ರಮ ತುಂಬಿರಲಿ ನನ್ನ ಗಂಡ ಸೂರಿ ಈ ಮನೆಗೆ ಬರಲಿ ಎಂದು ಗಣೇಶನ ಬೇಡಿಕೊಂಡಿದ್ದಾಳೆ. ಆ ಕಡೆ ಸೂರ್ಯನಾರಾಯಣರು ನನ್ನ ಹೆಂಡತಿ ಮಕ್ಕಳ ಜೊತೆ ನನ್ನನ್ನ ಸೇರಿಸು ಎಂದು ಗಣಪತಿಯ ಬಳಿ ಬೇಡಿಕೊಂಡಿದ್ದು ಗಣಪತಿ ಇಬ್ಬರ ಇಷ್ಟಾರ್ಥಕ್ಕೂ ಅಸ್ತು ಎಂದಿದ್ದಾನೆ.

ಸತ್ಯ ಹೇಳಿದ ವೈಜಯಂತಿ ಅಮ್ಮ

ವೈದೇಹಿ ಅಮ್ಮನ ಬಳಿ ಆರತಿ ತೆಗೆದುಕೊಂಡು ಹೋದಾಗ ವೈಜಯಂತಿ ನನಗೆ ಕಣ್ಣೆಲ್ಲ ಉರಿಯುತ್ತಿದೆ ಎಂದು ಹೇಳಿದ್ದಾರೆ. ಇದಕ್ಕೆ ವೇದಾಂತ್ ಆಸ್ಪತ್ರೆಗೆ ಹೋಗೋಣ ಬನ್ನಿ ಅಜ್ಜಿ ಎಂದು ಕರೆದಿದ್ದಾನೆ. ಈ ವೇಳೆ ಅಮ್ಮ ಇಲ್ಲ ನಾನು ಬರೋದಿಲ್ಲ ನನಗೆ ಮಂಜು ಮಂಜಾಗಿ ಕಣ್ಣು ಕಾಣಿಸುತ್ತಿದೆ ಎಂದು ಹೇಳಿ ಎಲ್ಲರಲ್ಲೂ ಸಂತೋಷ ತಂದಿದ್ದಾಳೆ. ಇನ್ನು ಇದೇ ವೇಳೆ ವೇದಾಂತ್ ,ಆದ್ಯಾ, ಅಮೂಲ್ಯ ಹಾಗೂ ಆರತಿಯನ್ನು ಗುರುತು ಹಿಡಿದು ಎಲ್ಲರನ್ನು ಚೆನ್ನಾಗಿ ಮಾತನಾಡಿಸಿದ್ದಾಳೆ.

ಸುಹಾಸಿನಿಗೆ ಮಾತ್ರ ಬೇಸರ

ತನ್ನ ಅಮ್ಮನಿಗೆ ಕಣ್ಣು ಬಂದಿದೆ ಎಂಬ ಸಂತೋಷಕ್ಕಿಂತ ಸುಹಾಸನಿಗೆ ದುಃಖವೇ ಹೆಚ್ಚಾಗಿದೆ. ಯಾಕೆಂದರೆ ಮುಂದೆ ತನ್ನ ಆಟ ಏನೂ ನಡೆಯಲ್ಲ, ಸತ್ಯವನ್ನು ಅಮ್ಮ ಹೊರಗೆ ಹೇಳುತ್ತಾರೆ ಎಂದು ಕೊಂಡಿದ್ದಾಳೆ. ಈ ವೇಳೆ ತನ್ನ ಅಮ್ಮ ಒಂಟಿಯಾಗಿ ಸಿಗಲಿ ಎಂದು ಕಾದಿದ್ದಾಳೆ. ಅಮ್ಮ ಸಿಕ್ಕ ಕೂಡಲೇ ತಮ್ಮ ರೂಮ್‌ಗೆ ಕರೆದುಕೊಂಡು ಹೋಗಿ ಬಾಗಿಲನ್ನು ಹಾಕಿದ್ದಾಳೆ.

Gattimela-kannada-serial

ಅಮ್ಮನಿಗೆ ಎದುರಿಸಿದ ಸುಹಾಸಿನಿ

ಈಗ ಅಮ್ಮನ ಬಳಿ ಸುಹಾಸಿನಿ ಚೆನ್ನಾಗಿ ನಾಟಕ ಮಾಡಿದ್ದಾಳೆ. ಅವಳು ವೈದೇಹಿ ಅಲ್ವಾ ನಿಮ್ಮ ಅಕ್ಕ ಎಂದು ಕೇಳಿದ್ದಕ್ಕೆ ಹೌದು ಅವಳು ನಿನ್ನ ಮಗಳು ಎಂದಿದ್ದಾಳೆ. ಏನು ನಿನ್ನ ಮಗಳನ್ನು ನೋಡಿದಾ ತಕ್ಷಣ ಓಡೋಡಿ ಹೋಗಿ ತಬ್ಬಿಕೊಂಡು ಅಳಬೇಕು ಎನಿಸುತ್ತಾ? ಮನೆಯಲ್ಲಿ ಯಾರು ಇಲ್ಲದ ವೇಳೆ ಇಬ್ಬರು ಡ್ರಾಮಾ ಮಾಡಿ ಎಂದು ಹೇಳಿದ್ದಾಳೆ. ಸುವಾಸಿನಿಗೆ ಕೋಪ ಬಂದು ಜೋರಾಗಿ ವೈಜಯಂತಿ ಎಂದು ಕರೆದಿದ್ದಾಳೆ.

ಯಾರನ್ನು ಬಿಡೊಲ್ಲ ಎಂದು ಅವಾಜ್

ಅಪ್ಪಿತಪ್ಪಿ ಏನಾದರೂ ಸತ್ಯ ಹೇಳಿದರೆ ಧ್ರುವ ಹಾಗೂ ವಿಕ್ರಾಂತ್‌‌ಗೆ ಆದಂತಹ ಅಪಘಾತ ಮತ್ತೊಮ್ಮೆ ಆಗುತ್ತದೆ ಎಂದು ಅಮ್ಮನಿಗೆ ಬ್ಲಾಕ್ ಮೇಲ್ ಮಾಡಿದ್ದಾಳೆ‌. ನಿನ್ನ ಕಣ್ಣು ಹೇಗೆ ಹೋಯಿತು ಎಂಬುವುದು ನಿನಗೆ ಗೊತ್ತಿದೆ ತಾನೇ. ಮತ್ತೊಮ್ಮೆ ಆ ರೀತಿ ಮಾಡಿಕೊಳ್ಳಬೇಡ. ನೀನು ಸುಮ್ಮನೆ ಇದ್ದರೆ ಎಲ್ಲರಿಗೂ ಕ್ಷೇಮ ಇಲ್ಲದಿದ್ದರೆ ಮನೆಯಲ್ಲಿರುವ ಎಲ್ಲರಿಗೂ ಏನಾದರೂ ಒಂದು ನಾನು ಮಾಡುತ್ತೇನೆ ಎಂದು ಅಮ್ಮನಿಗೆ ಬೆದರಿಕೆ ಹಾಕಿದ್ದಾಳೆ.

More from Filmibeat

English summary
Gattimela Kannada serial today episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X