Gattimela: ಮನೆಗೆ ಬರೋದಿಲ್ಲ ಎಂದ ಸೂರ್ಯನಾರಾಯಣ: ವೇದಾಂತ್ ಜೊತೆ ಅಮೂಲ್ಯ ಜಗಳ

By ಶೃತಿ‌ಹರೀಶ್ ಗೌಡ

ವೇದಾಂತ್ ಒಲ್ಲದ ಮನಸ್ಸಿನಿಂದಲೇ ವೈದೇಹಿಯನ್ನು ಮನೆ ಬಿಟ್ಟು ಹೋಗಿ ಎಂದಿದ್ದಾನೆ. ಇನ್ನು ವೇದಾಂತ್ ಮಾತಿಗೆ ಏನನ್ನು ಮಾತನಾಡದೆ ವೈದೇಹಿ ತನ್ನ ಬಟ್ಟೆಗಳನ್ನೆಲ್ಲ ತೆಗೆದುಕೊಂಡು ಆ ಮನೆಯಿಂದ ಹೊರಗೆ ಬಂದಿದ್ದಾಳೆ. ರಸ್ತೆಯಲ್ಲಿ ನಡೆದುಕೊಂಡು ಕಣ್ಣೀರು ಹಾಕುತ್ತಾ ವೈದೇಹಿ ಬರುತ್ತಾ ಇದ್ದಾಳೆ. ಅಮೂಲ್ಯ ತನ್ನ ಮನೆಗೆ ರಕ್ಷಾಬಂಧನ ಆಚರಿಸಲು ತೆರಳಿದ್ದಳು. ಬರುವ ವೇಳೆ ತರಕಾರಿ ತೆಗೆದುಕೊಳ್ಳಬೇಕು ಎಂಬುದು ನೆನಪಾಗಿದೆ. ಇದಕ್ಕಾಗಿ ವೈದೇಹಿಗೆ ಕರೆ ಮಾಡಿದ್ದಾಳೆ. ಆದರೆ ವೈದೇಹಿ ಕರೆಯನ್ನ ಸ್ವೀಕರಿಸಲಿಲ್ಲ ನಂತರ ಯಾರಿಗಾದರೂ ಕರೆ ಮಾಡಬೇಕು ಎಂದು ನೆನಪಿಸಿಕೊಂಡಿದ್ದಾಳೆ.

ಅಮೂಲ್ಯ ಸುಹಾಸನಿಗೆ ಫೋನ್ ಮಾಡಿ ವೈದೇಹಿ ಅಮ್ಮ ಫೋನ್ ಎತ್ತುತ್ತಿಲ್ಲ ಅವರಿಗೆ ಫೋನ್ ಕೊಡಿ ನಾನು ಮಾರ್ಕೆಟ್‌ಗೆ ಬಂದಿದ್ದೆ. ತರಕಾರಿಯನ್ನು ತೆಗೆದುಕೊಳ್ಳಬೇಕು ಎಂದು ಕೇಳಿದ್ದಾಳೆ. ಇದಕ್ಕೆ ಸುಹಾಸಿನಿ ಮನೆಯಲ್ಲಿ ಇಲ್ಲ ಅವಳು ಮನೆ ಬಿಟ್ಟು ಹೋಗಿದ್ದಾಳೆ ಎಂಬ ಸತ್ಯವನ್ನ ತಿಳಿಸಿದ್ದಾಳೆ. ಸುಹಾಸಿನಿ ಮಾತನ್ನ ಕೇಳಿದ ಅಮೂಲ್ಯಗೆ ಆಕಾಶವೇ ತಲೆಯ ಮೇಲೆ ಬಿದ್ದಂತೆ ಆಗಿದೆ. ಅಮೂಲ್ಯಗೆ ವಿಷಯವನ್ನು ತಿಳಿಸಿದ ಸುಹಾಸನಿಗೆ ತುಂಬಾ ಖುಷಿಯಾಗಿದೆ. ಹೇಗಿದ್ದರೂ ನಾನೇ ಅಮೂಲ್ಯ ಹಾಗೂ ವೇದಾಂತ ಇಬ್ಬರನ್ನು ದೂರ ಮಾಡಬೇಕು ಎಂದುಕೊಂಡಿದ್ದೆ. ವೈದೇಹಿ ವಿಷಯಕ್ಕೆ ಈಗ ಇಬ್ಬರು ಕಚ್ಚಾಡಿ ಕೊಳ್ಳುತ್ತಾರೆ ಎಂದು ಸಂತಸಗೊಂಡಿದ್ದಾಳೆ.

Gattimela serial september 6th episode update

ಮನೆಯಲ್ಲಿ ಆದ್ಯ ರಕ್ಷಾಬಂಧನವನ್ನು ಆಚರಣೆ ಮಾಡದೇ ಬೇಸರದಲ್ಲಿ ಇದ್ದಾಳೆ. ವಿಕ್ಕಿ ಫೋಟೋ ಮುಂದೆ ರಾಖಿ ಇಟ್ಟು ಕಣ್ಣೀರನ್ನ ಹಾಕಿದ್ದಾಳೆ. ನಂತರ ಧ್ರುವ ಹಾಗೂ ವೇದಾಂತ್ ಇಬ್ಬರಿಗೂ ರಾಖಿ ಕಟ್ಟಿದ್ದಾಳೆ. ಆದರೆ ವೇದಾಂತ್‌ನಿಂದ ಗಿಫ್ಟ್ ಪಡೆದುಕೊಂಡಿಲ್ಲ. ಈ ಕಡೆ ಪರಿಮಳ ಮಾರ್ಕೆಟ್ ನಿಂದ ಬರುವ ವೇಳೆ ವೈದೇಹಿ ಪರಿಮಳ ಕೈಗೆ ಸಿಕ್ಕಿದ್ದು ಅವರು ಮನೆಯಿಂದ ಹೊರಗೆ ಬಂದಿದ್ದಾರೆ ಎಂಬುದು ಪರಿಮಳಗೆ ಗೊತ್ತಾಗಿದೆ.

ಮನೆಗೆ ಬಾರದ ಸೂರ್ಯನಾರಾಯಣ, ಬೇಸರದಲ್ಲಿ ಬಂದ ವೇದಾಂತ್

ವೇದಾಂತ್ ಅಗ್ನಿ ಮನೆಗೆ ಹೋಗಿದ್ದಾನೆ. ಈ ವೇಳೆ ವೈಜಯಂತಿ ಅಮ್ಮನನ್ನ ನಾನು ಮನೆಯಿಂದ ಹೊರಗಡೆ ಕಳಿಸಿದ್ದೇ.ನೆ ಈಗಲಾದರೂ ದಯವಿಟ್ಟು ಮನೆಗೆ ಬನ್ನಿ ಎಂದು ಸೂರ್ಯನಾರಾಯಣರ ಬಳಿ ಮನವಿಯನ್ನ ಮಾಡಿಕೊಂಡಿದ್ದಾನೆ. ಆದರೆ ಸೂರ್ಯನಾರಾಯಣರು ವೇದಾಂತ್‌ಗೆ ನಾನು ನಿನ್ನ ಜೊತೆ ಬರೋದಿಲ್ಲ ಎಂದು ಹೇಳಿದ್ದಾರೆ. ನೀನು ನನ್ನನ್ನ ಫೋರ್ಸ್ ಮಾಡಿ ಕರೆದುಕೊಂಡು ಹೋದರೆ ನನ್ನ ದೇಹ ಮಾತ್ರ ನಿನ್ನ ಜೊತೆಗೆ ಬರುತ್ತದೆ ಮನಸ್ಸಲ್ಲ ಎಂದು ಹೇಳಿದ್ದಾರೆ. ವೇದಾಂತ್‌ಗೆ ತನ್ನ ತಂದೆ ಈ ರೀತಿ ಮಾತನಾಡುತ್ತಿರುವುದು ತುಂಬಾನೇ ಬೇಸರವನ್ನ ತರಿಸಿದೆ.

Gattimela serial september 6th episode update

ಅಗ್ನಿ ವೇದಾಂತ್ ಮುಂದೆ ಗಹಗಹಿಸಿ ನಕ್ಕಿದ್ದಾನೆ ನಿನ್ನ ತಂದೆ ಬರೋದಿಲ್ಲ ಎನ್ನುತ್ತಿದ್ದಾರೆ ತಾನೇ ನೀನು ಹೋಗು ಎಂದು ಹೇಳಿದ್ದಾರೆ. ವೇದಾಂತ್ ನಾನು ನನ್ನ ತಂದೆಯ ಬಳಿ ಮಾತನಾಡಬೇಕು ಎಂದರೂ ಸಹ ಅಗ್ನಿ ಬಿಡುತ್ತಿಲ್ಲ. ನಿನ್ನ ತಂದೆ ನಾನು ಬರೋದಿಲ್ಲ ಎಂದರಲ್ಲ ಅಲ್ಲಿಗೆ ಎಲ್ಲವೂ ಮುಗಿಯಿತು. ಸುಮ್ಮನೆ ನೀನು ಹೋಗು ಎಂದು ಅಗ್ನಿ ವೇದಾಂತ್‌ಗೆ ಹೇಳಿದ್ದಾನೆ. ಈ ಕಡೆ ವೈದೇಹಿಯನ್ನ ಮನೆಯಿಂದ ವಾಪಸ್ ಕಳಿಸಿರುವ ವೇದಾಂತ್‌ಗೆ ತುಂಬಾನೇ ಬೇಸರವಾಗಿದೆ.

ಸುಹಾಸಿನಿ ಮೇಲೆ ಅಮೂಲ್ಯಾಗೆ ಅನುಮಾನ, ವೇದಾಂತ್ ಜೊತೆ ಜಗಳ

ಅಮೂಲ್ಯ ಮನೆಗೆ ಬಂದ ತಕ್ಷಣವೇ ಸುಹಾಸಿನಿಯನ್ನ ಪ್ರಶ್ನೆ ಮಾಡುತ್ತಿದ್ದಾಳೆ. ವೈಜಯಂತಿ ಅಮ್ಮ ಯಾಕೆ ಮನೆಯನ್ನ ಬಿಟ್ಟು ಹೋದರು. ನೀವೇನಾದರೂ ಮಾಡಿದ್ರಾ ಎಂದೆಲ್ಲಾ ಸುಹಾಸಿನಿಯ ಬಳಿ ಅಮೂಲ್ಯ ಪ್ರಶ್ನೆ ಕೇಳುತ್ತಾ ಇದ್ದಾಳೆ. ಇದಕ್ಕೆ ಸುಹಾಸಿನಿ ನಾನೇನು ಮನೆ ಬಿಟ್ಟು ಕಳಿಸಲಿಲ್ಲ. ವೇದಾಂತ್ ಮನೆ ಬಿಟ್ಟು ಹೋಗುವಂತೆ ಹೇಳಿದ ಎಂದು ಹೇಳಿದ್ದಾರೆ.

ಅಲ್ಲಿಗೆ ವೇದಾಂತ್ ಬಂದಿದ್ದು ನಾನೇ ವೈಜಯಂತಿ ಅಮ್ಮನನ್ನ ಮನೆ ಬಿಟ್ಟು ಹೋಗಿ ಎಂದು ಹೇಳಿದೆ ಎಂದು ಹೇಳಿದ್ದಾನೆ. ಯಾರದ್ದು ಮಾತನ್ನ ಕೇಳಿಕೊಂಡು ನೀನು ಈ ರೀತಿಯ ನಿರ್ಧಾರವನ್ನು ತೆಗೆದುಕೊಂಡಿದ್ದೀಯಾ. ಬಾ ವೈಜಯಂತಿ ಅಮ್ಮನನ್ನ ನಾವಿಬ್ಬರು ಹುಡುಕಿ ವಾಪಸ್ ಮನೆಗೆ ಕರೆದುಕೊಂಡು ಬರೋಣ ಎಂದು ಅಮೂಲ್ಯ ಹೇಳಿದ್ದಾಳೆ. ಅಮೂಲ್ಯ ಮಾತಿಗೆ ವೇದಾಂತ್ ಇನ್ಮುಂದೆ ಅವರನ್ನ ಈ ಮನೆಗೆ ಕರೆದುಕೊಂಡು ಬರೋದು ಬೇಡ ಎಂದಿದ್ದಾನೆ.

More from Filmibeat

English summary
Zee Kannada Gattimela serial 6th episode update.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X