twitter
    For Quick Alerts
    ALLOW NOTIFICATIONS  
    For Daily Alerts

    ವೈದೇಹಿ ಸಿಗುವ ಸಮಯ ಹತ್ತಿರ ಬಂದಿದೆ : ವೇದಾಂತ್‌ಗೆ ಕಾಡುತ್ತಿದೆ ಅಮ್ಮನ ನೆನಪುಗಳು!

    By ಎಸ್ ಸುಮಂತ್
    |

    ಮನೆಗೆ ಬೆಂಕಿ ಬಿದ್ದಾಗ ವಿಕ್ರಾಂತ್, ಆದ್ಯಾ, ಧ್ರುವ ತುಂಬಾ ಚಿಕ್ಕ ಮಕ್ಕಳು. ಅಲ್ಲಿ ಏನು ನಡೆಯುತ್ತಿದೆ ಎಂಬುದು ಯಾರಿಗೂ ಗೊತ್ತಾಗುತ್ತಿರಲಿಲ್ಲ. ಆದರೆ ದೊಡ್ಡ ಮಗ ವೇದಾಂತ್ ಗೆ ಅಲ್ಲಿ ನಡೆದ ಘಟನೆ ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಬೆಂಕಿಯಿಂದ ತಪ್ಪಿಸಿಕೊಳ್ಳಲು ಹೋಗಿ, ಮಂಚದ ಮೇಲೆ ಬಿದ್ದ ತಾಯಿಯ ದೃಶ್ಯ ಇನ್ನು ವೇದಾಂತ್ ಮನಸ್ಸಿನಿಂದ ಮಾಸಿಲ್ಲ. ಹೀಗಾಗಿಯೇ ತಾಯಿ ಎಂದಾಕ್ಷಣಾ ವೇದಾಂತ್ ಮಂಕಾಗಿ ಹೋಗುತ್ತಾನೆ. ಆ ನೋವು ಉಕ್ಕಿ ಬರುತ್ತದೆ.

    ಅಂದು ಬೆಂಕಿ ಬಿದ್ದು ತಾಯಿ ಸತ್ತೆ ಹೋದಳು ಎಂಬುದನ್ನು ಸುಹಾಸಿನಿ ಬಲವಾಗಿ ನಂಬಿಸಿದ್ದಾಳೆ. ಹತ್ತಿರದಿಂದ ಕಂಡ ಆ ದೃಶ್ಯದಿಂದ ವೇದಾಂತ್ ಕೂಡ ಅದನ್ನೇ ನಂಬಿದ್ದಾನೆ. ಹೀಗಾಗಿಯೇ ಮನೆಯವರು ಅಮ್ಮನನ್ನು ಹುಡುಕುತ್ತೀವಿ ಎಂದಾಗಲೂ ಬೇಡ ಎಂದೇ ವೇದಾಂತ್ ಹಠ ಮಾಡಿ ಕುಳಿತಿದ್ದ. ಆದರೆ ಆದ್ಯಾಳ ಕಣ್ಣೀರು, ವಿಕ್ರಾಂತ್ ತೊಳಲಾಟ, ಅಮೂಲ್ಯಾ ನೋವು, ವೇದಾಂತ್ ಮನಸ್ಸು ಬದಲಾಯಿಸಿತ್ತು. ಅಮ್ಮನನ್ನು ಹುಡುಕಲು ಗ್ರೀನ್ ಸಿಗ್ನಲ್ ಕೊಟ್ಟಿದ್ದ.

    ಗಟ್ಟಿಮೇಳ: ಮನೆಯಲ್ಲಿಯೇ ಇರುವ ಅಮ್ಮನನ್ನು ವೇದಾಂತ್ ಕಂಡು ಹಿಡಿಯುವುದಾದರೂ ಹೇಗೆ ?ಗಟ್ಟಿಮೇಳ: ಮನೆಯಲ್ಲಿಯೇ ಇರುವ ಅಮ್ಮನನ್ನು ವೇದಾಂತ್ ಕಂಡು ಹಿಡಿಯುವುದಾದರೂ ಹೇಗೆ ?

    ತಾಯಿ ಸಿಗುವ ಕಾಲ ಬಂದೇ ಬಿಡ್ತು

    ತಾಯಿ ಸಿಗುವ ಕಾಲ ಬಂದೇ ಬಿಡ್ತು

    ವಿಕ್ರಾಂತ್‌ಗೆ ಅಂದಿನಿಂದಲೂ ತನ್ನ ಹೆತ್ತ ತಾಯಿಯನ್ನು ನೋಡುವ ಕಾತುರ ಇದ್ದೇ ಇದೆ. ಆದರೆ, ಆದ್ಯಾ ತಾಯಿ ವಿಚಾರದಲ್ಲಿ ಎಮೋಷನಲ್ ಆಗಿದ್ದಾಳೆ. ಯಾವಾಗ ಹೆತ್ತಮ್ಮನನ್ನು ನೋಡುತ್ತೀವೋ, ಅವಳ ಮಡಿಲಲ್ಲಿ ಮಲಗುತ್ತೀವೋ ಎಂದು ಕಾಯುತ್ತಿದ್ದಾಳೆ. ಮನೆಯವರೆಲ್ಲರ ಆಸೆ ಈಡೇರುವ ಸಮಯ ಬಂದಿದೆ. ಪ್ರಜ್ವಲ್ ಅಂಥದ್ದೊಂದು ಪ್ರೂಫ್ ತಂದಿದ್ದಾನೆ. ಆ ಪ್ರೂಫ್ ಪ್ರಕಾರ ಹೋದರೆ ಖಂಡಿತ ವೈದೇಹಿ ಸಿಕ್ಕೆ ಸಿಗುತ್ತಾಳೆ.

    ದೇವರಾಜಪ್ಪನಿಂದ ಸಹಾಯ

    ದೇವರಾಜಪ್ಪನಿಂದ ಸಹಾಯ

    ವೈದೇಹಿ ಮುಖ ಪರಿಚಯ ಮಕ್ಕಳಿಗೆ ಇಲ್ಲ. ಇಲ್ಲ ತಾಯಿ ಕಣ್ಣು ಕಳೆದುಕೊಂಡಿದ್ದಾಳೆ. ಸತ್ಯ ಗೊತ್ತಾದ ಧ್ರುವ ಪ್ರಜ್ಞೆ ಕಳೆದುಕೊಂಡಿದ್ದಾನೆ. ಸುಹಾಸಿನಿ ಹೇಳುವುದಕ್ಕೆ ಸಾಧ್ಯವೇ ಇಲ್ಲ. ಹೀಗಿರುವಾಗ ತಾಯಿ ಹುಡುಕಲು ಸಹಾಯವಾದರೂ ಹೇಗೆ ಎಂದು ಯೋಚಿಸುತ್ತಿರುವಾಗಲೇ ಸ್ಟ್ರಾಂಗ್ ಸುಳಿವು ಸಿಕ್ಕಿದೆ. ಅದುವೇ ದೇವರಾಜಪ್ಪ. ಆ ವ್ಯಕ್ತಿಗೆ ಅಂದು ವಸಿಷ್ಠ ಮನೆಗೆ ಬೆಂಕಿ ಹಚ್ಚಿದ್ದು ಯಾರು..? ಬೆಂಕಿ ಬಿದ್ದ ಮೇಲೆ ಏನೆಲ್ಲಾ ಆಯ್ತು ಎಂಬುದು ಕೂಡ ನೆನಪಿದೆ. ಇದಕ್ಕೆ ಸಾಕ್ಷಿ ಎಂಬಂತೆ ಅಂದು ನಡೆದ ಘಟನಾವಳಿಗಳ ಸ್ಕೆಚ್ ಬಿಡಿಸಿದ್ದಾರೆ.

    ಅಮ್ಮನ ಕೊನೆ ದಿನಗಳ ನೆನಪು

    ಅಮ್ಮನ ಕೊನೆ ದಿನಗಳ ನೆನಪು

    ದೇವರಾಜಪ್ಪ ಯಾರು ಏನು ಎಂಬುದು ಗೊತ್ತಿಲ್ಲ. ಆದರೆ ಆತ ಬಿಡಿಸದ ಎಲ್ಲಾ ಸ್ಕೆಚ್‌ಗಳು ವೈದೇಹಿಯ ನೆನಪುಗಳು ವೇದಾಂತ್‌ನನ್ನು ಕಾಡುತ್ತಿದೆ. ಅಂದು ಮನೆಗೆ ಬೆಂಕಿ ಬಿದ್ದಾಗ ತಂದೆ ಅದಾಗಲೇ ಸತ್ತು ಮಂಚದ ಮೇಲೆ ಬಿದ್ದಿದ್ದರು. ಇನ್ನು ತಾಯಿ ಬೆಂಕಿಯ ಜೊತೆಗೆ ಹೋರಾಟ ನಡೆಸುತ್ತಿದ್ದರು. ವೇದಾಂತ್ ಕಿಟಕಿಯಲ್ಲಿ ನಿಂತು ಇದೆಲ್ಲವನ್ನು ನೋಡುತ್ತಿದ್ದ. ತಕ್ಷಣ ವೈದೇಹಿ ಪ್ರಜ್ಞೆತಪ್ಪಿ ಮಂಚದ ಮೇಲೆ ಬಿದ್ದಳು. ಅಷ್ಟೇ ನೆನಪಿರುವುದು. ಆ ನೆನಪುಗಳು ವೇದಾಂತ್‌ಗೆ ಕಣ್ಣೀರು ತರಿಸಿದೆ. ಪ್ರಜ್ವಲ್ ಆ ವ್ಯಕ್ತಿ ಬಗ್ಗೆ ಹೇಳುತ್ತಿದ್ದಾಗ, ವೇದಾಂತ್ ನೋವಲ್ಲಿಯೇ ಅಮ್ಮನನ್ನು ನೋಡಿದ್ರಂತೆ ಎಂದಿದ್ದಾನೆ. ಇದು ವಿಕ್ರಾಂತ್, ಅಮೂಲ್ಯ ಮನಸ್ಸನ್ನು ಕರಗಿಸಿದೆ.

    ವೈದೇಹಿ ಸ್ಕೆಚ್ ಈಗ ಸಿಗುತ್ತೆ

    ವೈದೇಹಿ ಸ್ಕೆಚ್ ಈಗ ಸಿಗುತ್ತೆ

    ಅಂದು ವಸಿಷ್ಠ ಕುಟುಂಬದಲ್ಲಿ ಏನಾಯ್ತು ಎಂಬುದೆಲ್ಲಾ ದೇವರಾಜಪ್ಪನಿಗೆ ಗೊತ್ತು ಎಂದು ಪ್ರಜ್ವಲ್ ತಿಳಿಸಿದ್ದಾರೆ. ಹಾಗೇ ಆತ ವಸಿಷ್ಠ ಕುಟುಂಬಕ್ಕೆ ಸಂಬಂಧಿಸಿದ ಚಿತ್ರ ಬಿಡಿಸಿರುವುದನ್ನು ತೋರಿಸಿದ್ದಾನೆ. ಕಳೆದ ವರ್ಷ ಅಮ್ಮನನ್ನು ಜೀವಂತವಾಗಿ ನೋಡಿದ್ದಾರೆಂದು ಕೂಡ ಹೇಳಿದ್ದಾರೆ. ಆಗ ವಿಕ್ರಾಂತ್ ಹಾಗಾದ್ರೆ ಅಮ್ಮನ ಸ್ಕೆಚ್ ಬಿಡಿಸಬಲ್ಲರು ಎಂದಾಗ ಪ್ರಜ್ವಲ್ ಹೌದು, ಅದಕ್ಕೆ ಸೇಫಾದ ಜಾಗದಲ್ಲಿ ಇರಿಸಿದ್ದೀನಿ ಎಂದಿದ್ದಾರೆ. ನಾಳೆ ಅಮ್ಮನ ಸ್ಕೆಚ್ ಬಿಡಿಸಲು ಫ್ಲ್ಯಾನ್ ನಡೆದಿದೆ. ಮುಂದೇನಾಗುತ್ತೆ ನೋಡಬೇಕು.

    English summary
    Gattimela Serial September 6th Episode Written Update. Here is the details about vedanth saw the old memories sketch.
    Tuesday, September 6, 2022, 22:52
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X