Gattimela: ಅಮೂಲ್ಯ ಮನೆಗೆ ಹೋದ ವೈದೇಹಿ..! ತಮ್ಮನ ಡೆಡ್ ಬಾಡಿ ಹುಡುಕುತ್ತಿರುವ ಅಗ್ನಿ..!

By Shruthi Harish Gowda

ವೇದಾಂತ್ ವೈದೇಹಿಯನ್ನು ಮನೆಯಿಂದ ಹೊರಗೆ ಕಳುಹಿಸಿರುವುದು ಅಮೂಲ್ಯ, ಆದ್ಯಾಗೆ ಸ್ವಲ್ಪವೂ ಇಷ್ಟವಾಗಿಲ್ಲ ಇದಕ್ಕಾಗಿ ಇಬ್ಬರು ಕೋಪ ಮಾಡಿಕೊಂಡಿದ್ದಾರೆ. ಹೇಗಾದರೂ ಮಾಡಿ ವೇದಾಂತ್ ಮೇಲೆ ಒತ್ತಡವನ್ನ ತಂದು ವಾಪಾಸ್ ವೈದೇಹಿ ಅಮ್ಮನನ್ನ ಹುಡುಕಿಕೊಂಡು ಬರುವಂತೆ ಹೇಳಬೇಕು. ಅಲ್ಲಿಯವರೆಗೂ ನಾವಿಬ್ಬರೂ ಸ್ಟ್ರೈಕ್ ಮಾಡೋಣ ಎಂದು ಅಮೂಲ್ಯ ಹಾಗೂ ಆದ್ಯಾ ಮಾತನಾಡಿಕೊಳ್ಳುತ್ತಾ ಇದ್ದಾರೆ. ಉಗ್ರವಾದ ಹೋರಾಟವನ್ನ ಮಾಡೋಣ ಎಂದು ಅಮೂಲ್ಯ ಹೇಳಿದ್ದಾಳೆ. ಇದಕ್ಕೆ ಆದ್ಯಾ ಆಯಿತು ಎಂದು ಒಪ್ಪಿಕೊಂಡಿದ್ದಾಳೆ.

ವೇದಾಂತ್ ಮನೆಗೆ ಬಂದಿದ್ದು ಅಮೂಲ್ಯಳನ್ನ ಮನೆಯಲ್ಲಿ ಹುಡುಕಿದ್ದಾನೆ. ಆದರೆ ಅಮೂಲ್ಯ ಎಲ್ಲೂ ಸಿಕ್ಕಿಲ್ಲ ಇದಕ್ಕಾಗಿ ಫೋನ್ ಮಾಡಿದಾಗ ಆದ್ಯಾ ನೀವು ಕರೆ ಮಾಡಿರುವ ಚಂದಾದಾರರು ವ್ಯಾಪ್ತಿ ಪ್ರದೇಶದ ಹೊರಗಿದ್ದಾರೆ ಎಂದು ಹೇಳಿದ್ದಾಳೆ. ಈ ವೇಳೆ ಅಮೂಲ್ಯ ವೇದಾಂತ್ ಜೊತೆಯಲ್ಲಿ ಮಾತನಾಡದೆ ಫೋನ್ ಕಟ್ ಮಾಡಿದ್ದಾಳೆ. ವೇದಾಂತ್ ಸಾರ್ಥಕ್ ಬಳಿ ಬಂದು ಅಮೂಲ್ಯ ಹಾಗೂ ಆದ್ಯಾ ಎಲ್ಲಿಗೆ ಹೋದರು ಎಂದು ಕೇಳಿದ್ದಾನೆ. ಇದಕ್ಕೆ ಅವರಿಬ್ಬರು ಅಜ್ಜಿ ಆ ರೂಮ್ ನಲ್ಲಿ ಇದ್ದಾರೆ. ನಿನ್ನ ಮೇಲೆ ಸ್ಟ್ರೈಕ್ ಮಾಡುತ್ತಿದ್ದಾರೆ ಎಂದು ಸಾರ್ಥಕ್ ಹೇಳಿದ್ದಾರೆ.

gattimela-serial

ಸಾರ್ಥಕ್ ಬಳಿ ವೇದಾಂತ್ ಬನ್ನಿ ನಾವಿಬ್ಬರು ಹೋಗಿ ಅವರಿಬ್ಬರನ್ನ ಕರೆದುಕೊಂಡು ಬರೋಣ ಎಂದು ಹೇಳಿದ್ದಾನೆ. ಆದರೆ ಸಾರ್ಥಕ್ ನಾನು ಈ ಆಟಕ್ಕೆ ಇಲ್ಲ ಅವರಿಬ್ಬರನ್ನು ಸಮಾಧಾನ ಮಾಡಿ ಕರೆದುಕೊಂಡು ಬನ್ನಿ ಎಂದು ಮೆತ್ತಗೆ ಜಾರಿಕೊಂಡಿದ್ದಾರೆ. ಇನ್ನು ಅಮೂಲ್ಯ ವೇದಾಂತ್ ಬರುವುದನ್ನೇ ಕಾಯುತ್ತಾ ಇದ್ದಾಳೆ. ವೇದಾಂತ್ ಬಂದಾಗ ನಾವಿಬ್ಬರು ಯಾವ ರೀತಿ ಕೋಪ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಅಮೂಲ್ಯ ಹಾಗೂ ಆದ್ಯಾ ಇಬ್ಬರು ಸಹ ಡಿಸ್ಕಸ್ ಮಾಡುತ್ತಾ ಇದ್ದಾರೆ. ನಾವು ಕೊಡುವ ಟಾರ್ಚರ್ ಗೆ ವೇದಾಂತ್ ಹೋಗಿ ವೈದೇಹಿ ಅಮ್ಮನನ್ನ ಕರೆದುಕೊಂಡು ಬರಬೇಕು ಎಂದು ಅಂದುಕೊಂಡಿದ್ದಾರೆ.

ಪರಿಮಳ ಮನೆಯಲ್ಲಿ ವೈದೇಹಿ, ವಿಕ್ಕಿ ಮಗು ಕಂಡು ಭಾವುಕ

ವೈದೇಹಿ ಪರಿಮಳ ಕೈಗೆ ಸಿಕ್ಕಿದ್ದಾರೆ. ಈ ವೇಳೆ ವೇದಾಂತ್ ಯಾಕೆ ನಿಮ್ಮನ್ನ ಮನೆ ಬಿಟ್ಟು ಹೋಗು ಎಂದರು ಎಂದು ಕೇಳಿದ್ದಾಳೆ. ಆದರೆ ವೈದೇಹಿ ಬಳಿ ಪರಿಮಳ ಕೇಳುತ್ತಿರುವ ಯಾವ ಪ್ರಶ್ನೆಗೂ ಉತ್ತರವಿಲ್ಲ. ನಾನು ಪಕ್ಕದಲ್ಲಿರುವ ನೆಂಟರ ಮನೆಗೆ ಹೋಗುತ್ತೇನೆ ಎಂದು ಸುಳ್ಳು ಹೇಳಿದ್ದಾರೆ. ಇದಕ್ಕೆ ಪರಿಮಳ ನಿಮಗೆ ಈ ಊರಿನಲ್ಲಿ ಯಾರ ಪರಿಚಯವು ಇಲ್ಲ ವೇದಾಂತ್ ಬಿಟ್ಟರೆ ಇನ್ನೂ ಯಾರ ಪರಿಚಯ ನಿಮಗೆ ಇಲ್ಲ. ದಯವಿಟ್ಟು ನೀವು ನಮ್ಮ ಮನೆಗೆ ಬನ್ನಿ ಎಂದು‌ ಹೇಳಿಕೊಂಡಿದ್ದಾರೆ.

gattimela-serial

ಪರಿಮಳ ಅಷ್ಟು ಹೇಳಿದರೂ ಸಹ ವೈದೇಹಿ ನಾನು ಬರುವುದಿಲ್ಲ ಎಂದೇ ಹೇಳುತ್ತಿದ್ದರು. ಕೊನೆಗೆ ಪರಿಮಳ ತಮ್ಮ ಮೇಲೆ ಆಣೆ ಮಾಡಿಕೊಂಡಿದ್ದಾರೆ. ನೀವೇನಾದರೂ ನಮ್ಮ ಮನೆಗೆ ಬಂದಿಲ್ಲ ಎಂದರೆ ನನ್ನ ಮೇಲೆ ಆಣೆ ಈ ಅಕ್ಕನಿಗೆ ಏನಾದರೂ ಆದರೆ ನಿಮಗೆ ಇಷ್ಟವಾಗುತ್ತಾ ಎಂದು ಕೇಳಿದ್ದಾರೆ. ಇದಕ್ಕೆ ವೈದೇಹಿ ಪರಿಮಳ ಮಾತಿಗೆ ಕಟ್ಟು ಬಿದ್ದು ನಾನು ಬರುತ್ತೇನೆ ಎಂದು ಹೇಳಿದ್ದಾರೆ. ನಿಮ್ಮ ಮನೆಗೆ ಬಂದು ಏನು ಮಾಡಲಿ ಎಂದಾಗ ನಮ್ಮ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ ಅವನ ಜೊತೆಯಲ್ಲಿ ನೀವು ಆಟವಾಡಿ ಎಂದಿದ್ದಾರೆ.

ತಮ್ಮನ ಡೆಡ್ ಬಾಡಿ ಹುಡುಕುತ್ತಿರುವ ಅಗ್ನಿಗೆ ಸಿಕ್ಕಿದೆ ಮಹತ್ವದ ಸುಳಿವು!

ಇಲ್ಲಿವರೆಗೂ ಅಗ್ನಿಗೆ ತನ್ನ ತಮ್ಮನ ಡೆಡ್ ಬಾಡಿ ಸಿಕ್ಕಿಲ್ಲ. ಇದಕ್ಕಾಗಿ ರೌಡಿಗಳನ್ನು ಬಿಟ್ಟು ಎಲ್ಲಾ ಕಡೆ ಹುಡುಕಿಸುವ ಪ್ರಯತ್ನವನ್ನ ಮಾಡಿದ್ದಾನೆ. ಆದರೆ ಅವರು ಯಾವುದೇ ಸುಳಿವನ್ನ ನೀಡದ ಹಿನ್ನೆಲೆಯಲ್ಲಿ ಗನ್ ತೆಗೆದುಕೊಂಡು ಶೂಟ್ ಮಾಡುವುದಾಗಿ ಅವರಿಗೆ ಹೇಳಿದ್ದಾನೆ. ಕೊನೆಗೆ ಓರ್ವ ನಿಮ್ಮ ತಮ್ಮನ ಡೆಡ್ ಬಾಡಿ ಬಗ್ಗೆ ಒಂದು ಸುಳಿವು ಸಿಕ್ಕಿದೆ ಎಂದು ಹೇಳಿದ್ದಾನೆ. ಏನಾದರೂ ಸುಳ್ಳು ಹೇಳಿದರೆ ಯಾರನ್ನು ಸುಮ್ಮನೆ ಬಿಡೋದಿಲ್ಲ ಎಂದು ಅಗ್ನಿ ಎಚ್ಚರಿಸಿದ್ದಾನೆ.

ಅಷ್ಟರಲ್ಲಿ ಜೇಬಿನಿಂದ ಒಂದು ಚಿನ್ನದ ಸರವನ್ನು ತೋರಿಸಿದಾಗ ಇದು ನಾನು ನನ್ನ ತಮ್ಮನಿಗೆ ಗಿಫ್ಟ್ ಮಾಡಿದ್ದೆ. ಇದು ಎಲ್ಲಿ ಸಿಕ್ಕಿತು ಎಮದು ಪ್ರಶ್ನಿಸಿದ್ದಾನೆ. ಆಗ ಓರ್ವ ಇದನ್ನು ಅಂಗಡಿಯಲ್ಲಿ ಗಿರವಿ ಇಡಲು ಬಂದಿದ್ದನು. ಆಗ ವಿಚಾರಿಸಿದಾಗ ಇದು ಫಾರೆಸ್ಟ್ ಬಳಿ ಸಿಕ್ಕಿತು ಎಂದು ಹೇಳಿದ ಎಂದಿದ್ದಾನೆ. ಈ ವೇಳೆ ಸೆಕ್ಯೂರಿಟಿ ಮಂಜುನಾಥ್ ನಿನ್ನ ನಾನು ಸುಮ್ಮನೆ ಬಿಡೋದಿಲ್ಲ ಎಂದು ಕಿಡಿ ಕಾರಿದ್ದಾನೆ.

More from Filmibeat

English summary
Zee Kannada serial Gattimela september 7th episode update.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X