Gattimela: ದೂರ ಮಾಡಲು ಬಂದ ಸುಹಾಸಿನಿಗೆ ಟಕ್ಕರ್ ಕೊಟ್ಟ ಅಮೂಲ್ಯ: ತಮ್ಮನಿಗಾಗಿ ಅಗ್ನಿ ಮಾಸ್ಟರ್ ಪ್ಲಾನ್!

By ಶೃತಿ ಹರೀಶ್ ಗೌಡ

ವೇದಾಂತ್ ಮನೆಗೆ ಬಂದಿದ್ದಾನೆ. ಅಜ್ಜಿಯ ರೂಮ್‌ಗೆ ಬಂದಿದ್ದು ಏನಿದು ನಾಟಕವಾಡುತ್ತಿದ್ದೀರಾ ಎಂದು ಕೇಳಿದ್ದಾನೆ. ಇದಕ್ಕೆ ಮನೆಯಲ್ಲಿ ವೇದಾಂತ್‌ಗೆ ಧಿಕ್ಕಾರ ಎಂದು ಕೂಗುತ್ತಾ ಇದ್ದಾರೆ. ಈ ನಾಟಕ ಸೂಟ್ ಆಗುವುದಿಲ್ಲ ಎಂದು ವೇದಾಂತ್ ಹೇಳಿದ್ದಾನೆ. ಈ ವೇಳೆ ಅಜ್ಜಿಯನ್ನ ಕರೆದುಕೊಂಡು ಹೋಗಿ ಏನನ್ನೋ ಹೇಳಿ ಕರೆದುಕೊಂಡು ಬಂದು ರೂಮಿನಲ್ಲಿದ್ದ ಆದ್ಯಾ ಹಾಗೂ ಅಮೂಲ್ಯ, ಕಾಂತ ಮೂರನ್ನು ಹೊರಗೆ ಹಾಕಿಸುವಂತೆ ಮಾಡಿಸಿದ್ದಾನೆ.

ಇದೇ ವೇಳೆ ಅಮೂಲ್ಯ ಅಜ್ಜಿ ಜೊತೆ ಜಗಳವಾಡಿದ್ದಾಳೆ. ಅಜ್ಜಿ ನಾವು ನಿಮಗೆ ಏನು ಹೇಳಿ ಕಳುಹಿಸಿದ್ದವು. ಆದರೆ ನೀವು ಮಾಡಿಕೊಂದು ಬಂದಿದ್ದು ಏನು ಎಂದು ಕೇಳಿದ್ದಾಳೆ. ಇದಕ್ಕೆ ಅಜ್ಜಿ ಕೂಡ ಮೂವರಿಗೂ ಬೈದಿದ್ದಾರೆ. ನಂತರ ಕಾಂತ ಅಜ್ಜಿಯನ್ನು ಕೇಳಿದ್ದಕ್ಕೆ ಕಾಂತನಿಗೂ ಸಹ ಅಜ್ಜಿ ಬೈದು ರೂಮಿನಿಂದ ಹೊರಗೆ ಕಳುಹಿಸಿದ್ದಾರೆ. ಅಮೂಲ್ಯ ವೇದಾಂತ್ ನನ್ನ ತಳ್ಳಿಕೊಂಡು ರೂಮ್‌ಗೆ ಹೋಗಿ ಬಾಗಿಲನ್ನು ಹಾಕಿಕೊಂಡಿದ್ದಾಳೆ. ಎಷ್ಟು ತೆಗೆ ಎಂದರು ಕೂಡ ತೆಗೆಯುತ್ತಿಲ್ಲ ಅಮೂಲ್ಯವಾದ ಈ ರೀತಿ ಮಾಡಿರುವುದಕ್ಕೆ ವೇದಾಂತ್ ಬಾಗಿಲ ಬಳಿ ನಿಂತಿದ್ದಾನೆ.

gattimela-serial

ವೈದೇಹಿ ಪರಿಮಳ ಮನೆಯಲ್ಲಿ ವಿಕ್ಕಿ ಮಗುವೊಂದಿಗೆ ಆಟವಾಡಿಕೊಂಡು ಸಮಯವನ್ನು ಕಳೆಯುತ್ತಾ ಇದ್ದಾಳೆ. ಪರಿಮಳ ವೈದೇಹಿಯನ್ನ ನೋಡಿ ಎಷ್ಟು ಚೆನ್ನಾಗಿ ತಮ್ಮ ಮೊಮ್ಮಗನ ಹಾರೈಕೆಯಲ್ಲಿ ತೊಡಗಿಸಿಕೊಂಡಂತೆ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಅಷ್ಟರಲ್ಲಿ ಅಲ್ಲಿಗೆ ಬಂದ ಆರತಿ ಅವರು ಹಾಗೆಯೇ ಅಮ್ಮ ನಮ್ಮ ಮನೆಯಲ್ಲೂ ಅಷ್ಟೇ ಅವರು ಯಾರನ್ನು ಸಹ ಕೀಳಾಗಿ ನೋಡಿಲ್ಲ ಎಲ್ಲರನ್ನೂ ತಮ್ಮ ಮಕ್ಕಳಂತೆ ನೋಡಿಕೊಂಡಿದ್ದಾರೆ ವಿಕ್ಕಿಗೆ ಒಂದು ಕೈ ಪ್ರೀತಿಯನ್ನು ಜಾಸ್ತಿಯೇ ತೋರಿಸಿದ್ದಾರೆ ಎಂದು ಕಣ್ತುಂಬಿಕೊಂಡಿದ್ದಾಳೆ.

ವೇದಾಂತ್‌ಗೆ ಕಿವಿ ಚುಚ್ಚಲು ಬಂದ ಸುಹಾಸಿನಿ, ಟಕ್ಕರ್ ಕೊಟ್ಟ ರೌಡಿ ಬೇಬಿ!

ರೂಮಿನ ಬಳಿ ವೇದಾಂತ್ ನಿಂತಿರುವುದನ್ನು ಕಂಡಂತಹ ಸುಹಾಸಿನಿ ಈ ರೀತಿ ಉರಿಯುವ ಬೆಂಕಿಗೆ ಮತ್ತಷ್ಟು ಪೆಟ್ರೋಲ್ ಸುರಿದರೆ ಚೆನ್ನಾಗಿರುತ್ತದೆ ಎಂದುಕೊಂಡು ವೇದಾಂತ್ ಬಳಿ ಬಂದಿದ್ದಾಳೆ. ವೇದಾಂತ್ ಪ್ರೀತಿ ಮಾಡಿದಾಗ ಎಲ್ಲವೂ ಸಹ ಚೆನ್ನಾಗಿ ಇರುತ್ತದೆ ನಂತರ ಮದುವೆ ಮಾಡಿಕೊಂಡು ಕರೆದುಕೊಂಡು ಬಂದಾಗ. ಅವರು ನಮಗೆ ಅಡ್ಜಸ್ಟ್ ಆಗದೆ ಹೋದಾಗ ಈ ರೀತಿಯೆಲ್ಲ ನಡೆಯುತ್ತದೆ. ಆದರೆ ನಿಮ್ಮಿಬ್ಬರ ಜಗಳ ಯಾಕೋ ಮುಗಿಯುವ ರೀತಿ ಕಾಣಿಸುತ್ತಿಲ್ಲ ಎಂದು ಹೇಳಿದ್ದಾಳೆ.

gattimela-serial

ಇದೆಲ್ಲವನ್ನು ಕೇಳಿಸಿಕೊಳ್ಳುತ್ತಿರುವ ಅಮೂಲ್ಯ ನಮ್ಮ ಜಗಳಕ್ಕೆ ಪೆಟ್ರೋಲ್ ಸುರಿಯಲು ಬಂದಿದ್ದೀರಾ ಇರಿ ನಿಮಗೆ ಮಾಡುತ್ತೇನೆ ಎಂದು ರೂಮ್ ನಿಂದ ಹೊರಗೆ ಬಂದಿದ್ದಾಳೆ. ಇದೆ ವೇಳೆ ಅಮೂಲ್ಯ ವೇದಾಂತ್ ಬಳಿ ನಾನು ಸುಮ್ಮನೆ ಈ ರೀತಿ ನಿಮಗೆ ಮಾಡಿದೆ ಎಂದು ಹೇಳಿದ್ದಾಳೆ. ಇನ್ನೂ ವೇದಾಂತ್ ರೂಮ್‌ನ ಒಳಗಡೆ ಹೋದಾಗ ಅತ್ತೆ ನೀವೇನು ನಮ್ಮ ಜಗಳದ ಬಗ್ಗೆ ಚಿಂತೆ ಮಾಡಬೇಡಿ. ನಾವಿಬ್ಬರು ಹೆಲ್ತಿ ಆರ್ಗ್ಯೂಮೆಂಟ್ ಮಾಡುತ್ತೇವೆ. ಕೆಲವೊಬ್ಬರು ಉರಿಯುವ ಬೆಂಕಿಗೆ ಪೆಟ್ರೋಲ್ ಸುರಿಯಲು ಬರುತ್ತಾರೆ. ಗಂಡ ಹೆಂಡತಿ ಚೆನ್ನಾಗಿ ಇರುವುದನ್ನು ಸಹಿಸುವುದಿಲ್ಲ ನೀವು ಆ ಕ್ಯಾಟಗರಿಗೆ ಸೇರುವುದಿಲ್ಲ ಅತ್ತೆ ಎಂದು ಟಕ್ಕರ್ ನೀಡಿದ್ದಾಳೆ.

ತಮ್ಮನನ್ನು ಹುಡುಕಲು ಅಗ್ನಿ ಪ್ಲ್ಯಾನ್!

ಅಗ್ನಿ ತನ್ನ ತಮ್ಮನನ್ನು ಹುಡುಕಲು ಒಂದು ಮಾಸ್ಟರ್ ಪ್ಲಾನ್ ಮಾಡಿದ್ದಾನೆ. ಅದೇನೆಂದರೆ ಸೆಕ್ಯೂರಿಟಿ ಗಾರ್ಡ್ ಮಂಜುನಾಥ್ ಗೆ ಸೂರ್ಯನಾರಾಯಣ ರಿಂದ ಫೋನ್ ಮಾಡಿಸಿ ತನ್ನ ತಮ್ಮ ಎಲ್ಲಿದ್ದಾನೆ ಎಂದು ತಿಳಿದುಕೊಳ್ಳುವುದು. ಇದಕ್ಕಾಗಿ ಸೂರ್ಯನಾರಾಯಣರಿಗೆ ನಾನು ಒಬ್ಬರ ನಂಬರ್ ಹೇಳುತ್ತೇನೆ ಅವರಿಗೆ ಫೋನ್ ಮಾಡಿ ನೀವು ನಿಧಾನವಾಗಿ ಅವಾಜ್ ಹಾಕಿ ಎಂದು ಕೇಳಿಕೊಂಡಿದ್ದಾನೆ. ಮಾತು ಕೇಳಿದವರು ಯಾರು ಹೆದರುತ್ತಾರೆ ಎಂದು ಹೇಳಿದ್ದಕ್ಕೆ ಮೊದಲು ಫೋನ್ ಮಾಡಿ ನಾನು ನಿಮ್ಮ ಬಳಿ ರಿಕ್ಷೆಸ್ಟ್ ಮಾಡಿಕೊಳ್ಳುತ್ತೇನೆ ಎಂದು ಕೇಳಿಕೊಂಡಿದ್ದಾನೆ.

More from Filmibeat

English summary
Zee Kannada serial Gattimela september 8th episode update.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X