Gattimela: ವೇದಾಂತ್‌ ಕೈಯಿಂದ ಎಸ್ಕೇಪ್ ಆದ್ನಾ ವಿಲನ್ ಅಗ್ನಿ..?

By ಪ್ರಿಯಾ ದೊರೆ

ಅಮೂಲ್ಯಳನ್ನು ಡೈವರ್ಟ್ ಮಾಡುವ ಸಲುವಾಗಿ ಪರಿಮಳ ಮನೆಯನ್ನು ಟಾರ್ಗೆಟ್ ಮಾಡಿದ್ದಾಳೆ. ಪರಿಮಳ ಮನೆಯಲ್ಲಿ ಸಮಸ್ಯೆ ಆದರೆ, ಅಮೂಲ್ಯ ವೇದಾಂತ್ ಬಗ್ಗೆ ಯೋಚಿಸುವುದಿಲ್ಲ.

ಆಗ ವೇದಾಂತ್ ಹಾಗೂ ಆ ಮನೆಯವರ ಕಥೆಯನ್ನು ಮುಗಿಸಬಹುದು ಎಂಬುದು ಸುಹಾಸಿನಿ ಪ್ಲಾನ್. ಸುಹಾಸಿನಿಯ ಪ್ಲಾನ್ ಅನ್ನು ಒಪ್ಪಿದ ಅಗ್ನಿ, ಮಂಜುನಾಥ್ ನನ್ನು ಟಾರ್ಗೆಟ್ ಮಾಡಿದ್ದಾನೆ.

ಪತಿಗಾಗಿ ಪರಿತಪಿಸುತ್ತಿರುವ ಪರಿಮಳ

ಪತಿಗಾಗಿ ಪರಿತಪಿಸುತ್ತಿರುವ ಪರಿಮಳ

ಮಂಜುನಾಥ್ ಹುಟ್ಟಿದ ಹಬ್ಬದ ದಿನ ಮನೆ ಮಕ್ಕಳೆಲ್ಲಾ ಸಂಭ್ರಮಿಸುತ್ತಿರುತ್ತಾರೆ. ಇದೇ ವೇಳೆಗೆ ಮಂಜುನಾಥ್ ಗಂಧದ ಮರಗಳನ್ನು ಸ್ಮಗ್ಲಿಂಗ್ ಮಾಡುತ್ತಿದ್ದಾನೆ ಎಂಬ ಆರೋಪದ ಮೇಲೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮಂಜುನಾಥ್, ಸ್ನೇಹಿತರ ಗಾಡಿಯನ್ನು ಮನೆಯ ಮುಂದೆ ನಿಲ್ಲಿಸಲು ಅವಕಾಶ ಮಾಡಿಕೊಟ್ಟಿರುತ್ತಾನೆ. ಆದರೆ, ಅದರಲ್ಲಿ ಗಂಧದ ಮರಗಳಿವೆ ಎಂಬುದು ಮಂಜುನಾಥ್‌ಗೆ ಗೊತ್ತಿರುವುದಿಲ್ಲ. ಪೊಲೀಸರು ಚೆಕ್ ಮಾಡಿದಾಗ ಮಂಜುನಾಥ್‌ಗೆ ತಿಳಿಯುತ್ತದೆ. ಪರಿಮಳ ಈಗ ಗಂಡನನ್ನು ಅರೆಸ್ಟ್ ಮಾಡಿದ್ದಕ್ಕೆ ಕುಗ್ಗಿ ಹೋಗಿದ್ದಾಳೆ. ಮಂಜುನಾಥ್‌ನನ್ನು ರಿಲೀಸ್ ಮಾಡುವವರೆಗೂ ಮನೆಗೆ ಹೋಗಲ್ಲ ಎಂದು ಸ್ಟೇಷನ್ ಆವರಣದಲ್ಲೇ ಕಾಲ ಕಳೆಯುತ್ತಿದ್ದಾಳೆ. ಯಾರೂ ಮಂಜುನಾಥ್ ಹೇಳುವ ಮಾತನ್ನು ಕೇಳಲು ತಯಾರಿಲ್ಲ.

ವಿಡಿಯೋ ನೋಡಿ ಅಮೂಲ್ಯ ಶಾಕ್

ವಿಡಿಯೋ ನೋಡಿ ಅಮೂಲ್ಯ ಶಾಕ್

ಅಮೂಲ್ಯಾಗೆ ಮನೆಯ ಪರಿಸ್ಥಿತಿಯಿಂದ ಆಘಾತವಾಗಿದೆ. ಅಗ್ನಿ ಸುಹಾಸಿನಿ ಹೇಳಿದಂತೆ ಪ್ಲಾನ್ ಮಾಡಿ ಅಮೂಲ್ಯಳನ್ನು ಟಾರ್ಗೆಟ್ ಮಾಡಿದ್ದಾನೆ. ಮಂಜುನಾಥ್ ಮಾತನಾಡಿದ ವಿಡಿಯೋವನ್ನು ರೆಕಾರ್ಡ್ ಮಾಡಿದ್ದ ಅಗ್ನಿ ಕಡೆಯವರು ಈಗ ವೀಡಿಯೋದಲ್ಲಿ ಆಡಿಯೋವನ್ನು ಎಡಿಟ್ ಮಾಡಿಸಿದ್ದಾರೆ. ಗಂಧದ ಮರದ ಸ್ಮಗ್ಲಿಂಗ್ ಮಾಡುವುದರಿಂದ ಸಾಕಷ್ಟು ಲಾಭವಿದೆ ಎಂದು ಹೇಳಿದಂತೆ ಆಡಿಯೋವನ್ನು ಸೇರಿಸಿದ್ದಾರೆ. ಈ ವಿಡಿಯೋವನ್ನು ಅಮೂಲ್ಯಗೆ ಕಳಿಸಿದ ಅಗ್ನಿ, ಫೋನ್ ಮಾಡಿ ಬೆದರಿಕೆ ಕೂಡ ಹಾಕಿದ್ದಾನೆ. ಈ ವಿಡಿಯೋವನ್ನು ನೋಡಿದ ಅಮೂಲ್ಯ ಶಾಕ್ ಆಗಿದ್ದಾಳೆ.

ಕೇಸ್ ತೆಗೆದುಕೊಳ್ಳದ ವಕೀಲರು

ಕೇಸ್ ತೆಗೆದುಕೊಳ್ಳದ ವಕೀಲರು

ಮಂಜುನಾಥ್‌ಗೆ ಬೇಲ್ ಕೊಡಿಸಲು ವೇದಾಂತ್, ವಿಕ್ಕಿ, ಪ್ರಜ್ವಲ್ ಹಾಗೂ ಸಾರ್ಥಕ್ ಎಷ್ಟು ಪ್ರಯತ್ನಪಟ್ಟರೂ ಸಾಧ್ಯವಾಗುತ್ತಿಲ್ಲ. ಯಾವ ವಕೀಲರೂ ಗಂಧದ ಸ್ಮಗ್ಲಿಂಗ್ ಕೇಸ್ ಅನ್ನು ತೆಗೆದುಕೊಳ್ಳಲು ತಯಾರಿಲ್ಲ. ಈಗ ವಕೀಲರಿಲ್ಲದೇ, ಮಂಜುನಾಥ್‌ಗೆ ಬೇಲ್ ಕೊಡಿಸುವುದೇ ಸಮಸ್ಯೆ ಆಗಿದೆ. ಆದ್ರೀಗ ವೇದಾಂತ್ ಕೇಸ್ ಬಗ್ಗೆ ಡೀಪ್ ಆಗಿ ಸ್ಟಡಿ ಮಾಡುತ್ತಿದ್ದಾನೆ. ವಿಡಿಯೋವನ್ನು ನೋಡಿ ಎಲ್ಲರೂ ಇದು ಎಡಿಟ್ ಮಾಡಿರುವುದು. ನನ್ನ ಹಾಗೂ ಅಮೂಲ್ಯಳನ್ನು ಟಾರ್ಗೆಟ್ ಮಾಡಿದ್ದಾರೆ. ಇದೆಲ್ಲಾ ತೇಜಸ್ ಪ್ಲಾನ್ ಇರಬಹುದು ಎಂದು ಗೆಸ್ ಮಾಡಿದ್ದಾನೆ.

ವೇದಾಂತ್ ಲಾಯರ್ ಆಗುತ್ತಾನಾ..?

ವೇದಾಂತ್ ಲಾಯರ್ ಆಗುತ್ತಾನಾ..?

ಚಂದ್ರ ಹಾಗೂ ತೇಜಸ್ ಇಬ್ಬರೂ ಸೇರಿದ್ದಾರೆ. ಇವರಿಬ್ಬರ ಹಿಂದೆ ಮಾಸ್ಟರ್ ಮೈಂಡ್ ಇದ್ದು, ಅವರೇ ಹೀಗೆ ಪ್ಲಾನ್ ಮಾಡಿದ್ದಾರೆ ಎಂದು ವೇದಾಂತ್ ಊಹಿಸಿದ್ದಾನೆ. ತೇಜಸ್ ಹಾಗೂ ಚಂದ್ರ ಸಸ್ಪೆಕ್ಟ್ಸ್ ಎಂದು ಗೆಸ್ ಮಾಡಿದ್ದಾನೆ. ಈಗ ಲಾಯರ್ ಯಾರೂ ಇಲ್ಲ ಎಂದು ಯೋಚಿಸುವ ಬದಲು ವೇದಾಂತ್ ವಾದ ಮಾಡಲು ಮುಂದಾಗುತ್ತಾನಾ ಎಂಬ ಕುತೂಹಲ ಮೂಡಿದೆ. ಕಳ್ಳರನ್ನು ಹಿಡಿದು, ಮಾವನನ್ನು ಜೈಲಿನಿಂದ ಹೊರಗೆ ತರುತ್ತಾನಾ ಎಂಬುದೇ ಈಗ ಎದ್ದಿರುವ ಪ್ರಶ್ನೆ.

More from Filmibeat

English summary
Gattimela Serial Written Update On 10th February Episode. Here is the details Of Vedanth is suspecting Tejas and Chandra in Manjunath arrest and smuggling case.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X