twitter
    For Quick Alerts
    ALLOW NOTIFICATIONS  
    For Daily Alerts

    ಗಟ್ಟಿಮೇಳ: ವೈದೇಹಿ ತಾಯಿಯ ಕರುಳು ಮಕ್ಕಳಿಗಾಗಿ ಮಿಡಿಯುತ್ತಿದೆ..!

    By ಎಸ್ ಸುಮಂತ್
    |

    ಜೊತೆಗಿಲ್ಲದೆ ಹೋದರೂ ಕರುಳ ಬಳ್ಳಿಯ ಸಂಬಂಧ ಯಾವತ್ತಿಗೂ ದೂರವಾಗುವುದಿಲ್ಲ ಎಂಬ ಮಾತಿದೆ. ಎಷ್ಟೇ ದೂರವಿದ್ದರು ಹೆತ್ತ ತಾಯಿ ಹತ್ತಿರಕ್ಕೆ ಬಂದರೆ ಕರುಳಿನ ಸಂಬಂಧದಿಂದಲೇ ಆ ಬಾಂಧವ್ಯದ ಫೀಲ್ ಮಕ್ಕಳಿಗೆ ಆಗಿಯೇ ಆಗುತ್ತೆ ಎಂಬ ಮಾತಿದೆ. 'ಗಟ್ಟಿಮೇಳ' ಧಾರಾವಾಹಿಯಲ್ಲೂ ಆಗಾಗ ಆ ಭಾವನೆ ವ್ಯಕ್ತವಾಗುತ್ತದೆ. ಆದರೆ ಅದರ ಆಳವನ್ನು ಮಕ್ಕಳು ಅರ್ಥ ಮಾಡಿಕೊಳ್ಳುವ ಉಸಾಬರಿಗೇನೆ ಹೋಗುತ್ತಿಲ್ಲ. ಸತ್ಯಾಂಶ ಗೊತ್ತಿರುವ ಧ್ರುವ ಇಂದು ಮಾತನಾಡದ ಪರಿಸ್ಥಿತಿಗೆ ಬಂದು ಕೂತಿದ್ದಾನೆ.

    ಸುಹಾಸಿನಿ ತನ್ನ ಕೆಟ್ಟತನದ ಚಾಳಿಯನ್ನು ಮುಂದುವರೆಸಿದ್ದಾಳೆ. ವೈದೇಹಿಯನ್ನು ಮಕ್ಕಳಿಗೆ ಪ್ರೀತಿ ಕೊಡದಂತೆ ನೋಡಿಕೊಳ್ಳುತ್ತಿದ್ದಾಳೆ. ಆದರೂ ಇದೆಲ್ಲವನ್ನೂ ಮೀರಿ ತಾಯಿಯ ಪ್ರೀತಿಯೊಂದು ಅನಾವರಣವಾಗುತ್ತಿದೆ. ಇದನ್ನು ಮಕ್ಕಳು ಸೂಕ್ಷ್ಮವಾಗಿ ಗಮನಿಸಿದರೆ ಹೆತ್ತ ಕರುಳಿನ ಪ್ರೀತಿ ಅರ್ಥವಾಗದೆ ಇರಲಾರದು. ಅಮೂಲ್ಯ ಮತ್ತು ವಿಕ್ರಾಂತ್‌ನ ಶ್ರಮದಿಂದ ಇದು ಸಕ್ಸಸ್ ಆದರೂ ಆಗಬಹುದು.

    ವೀಳ್ಯದೆಲೆ, ಬನಾನ, ನವಿಲು: ಅಬ್ಬಬ್ಬಾ ಶಾಲಿನಿ ಬಳಿ ಇರುವ ಬ್ಲೌಸ್ ಒಂದೊಂದ್ ಅಲ್ಲ..!ವೀಳ್ಯದೆಲೆ, ಬನಾನ, ನವಿಲು: ಅಬ್ಬಬ್ಬಾ ಶಾಲಿನಿ ಬಳಿ ಇರುವ ಬ್ಲೌಸ್ ಒಂದೊಂದ್ ಅಲ್ಲ..!

    ವೈಜಯಂತಿ, ವೈದೇಹಿಯಾಗೋದು ಯಾವಾಗ?

    ವೈಜಯಂತಿ, ವೈದೇಹಿಯಾಗೋದು ಯಾವಾಗ?

    ಹೆತ್ತ ತಾಯಿ ಸುಹಾಸಿನಿ ಅಲ್ಲ ಎಂಬುದು ಎಲ್ಲಾ ಮಕ್ಕಳಿಗೂ ಗೊತ್ತಿರುವ ವಿಚಾರ. ಹೆರದೆ ಇದ್ದರೂ, ತಮ್ಮನ್ನು ಯಾವ ಪ್ರೀತಿಗೂ ಕಡಿಮೆ ಇಲ್ಲದಂತೆ ಸಾಕಿದ್ದಾರೆ ಎಂಬ ಕೃತಜ್ಞತೆ ಮಕ್ಕಳಲ್ಲಿದೆ. ಹೀಗಾಗಿ ಸುಹಾಸಿನಿ ಕೆಟ್ಟದ್ದನ್ನು ಮಾಡುತ್ತಿದ್ದಾಳೆ ಎಂದಾಗಲೂ ಅದನ್ನು ರಿಸೀವ್ ಮಾಡಿಕೊಳ್ಳುವುದಕ್ಕೆ ಸಿದ್ಧರಿಲ್ಲ. ಇದೇ ಕಾರಣಕ್ಕೆ ನಿಜವಾದ ತಾಯಿ ಹತ್ತಿರವಿದ್ದರೂ ತಿಳಿಯುತ್ತಲೇ ಇಲ್ಲ. ವಿಕ್ರಾಂತ್ ಏನನ್ನೇ ಹೇಳಿದರೂ, ಅರ್ಥ ಮಾಡಿಸಲು ಯತ್ನಿಸಿದರು ಆ ಬಗ್ಗೆ ವೇದಾಂತ್ ಕೇಳಲು ಸಿದ್ಧವಿಲ್ಲ. ದೆವ್ವದಂತಹ ಹೆಂಗಸನ್ನು ದೇವತೆಯಂತೆ ಪೂಜಿಸುತ್ತಿರುವವರ ಮುಂದೆ ಏನೇ ಹೇಳಿದರು ಅರ್ಥವಾಗಲ್ಲ ಎಂಬುದು ಅರ್ಥವಾಗಿ ಸುಮ್ಮನೆ ಆಗಿ ಬಿಟ್ಡಿದ್ದಾನೆ ವಿಕ್ರಾಂತ್.

    ಹಿಟ್ಲರ್ ಕಲ್ಯಾಣ: ಎಜೆ-ಲೀಲಾ ಮನಸ್ಸಿನ ಪ್ರೀತಿಯನ್ನು ಹೊರ ತರುತ್ತಾ ಅಜ್ಜಿಯ ಹಠ..!ಹಿಟ್ಲರ್ ಕಲ್ಯಾಣ: ಎಜೆ-ಲೀಲಾ ಮನಸ್ಸಿನ ಪ್ರೀತಿಯನ್ನು ಹೊರ ತರುತ್ತಾ ಅಜ್ಜಿಯ ಹಠ..!

    ವೈದೇಹಿಯ ಜೀವನ ಸರಿಯಾಗೋದ್ಯಾವಾಗ?

    ವೈದೇಹಿಯ ಜೀವನ ಸರಿಯಾಗೋದ್ಯಾವಾಗ?

    ವಸಿಷ್ಠ ಮನೆಯಲ್ಲಿ ಮನೆಕೆಲಸದವಳಂತೆ ವೈದೇಹಿ ಸೇರಿಕೊಂಡಿದ್ದಾಳೆ. ಇಡೀ ಮನೆಯ ಒಡತಿಯಾಗಬೇಕಿದ್ದವಳು. ಆದರೆ ಸುಹಾಸಿನಿಯ ನೀಚ ಬುದ್ಧಿಯಿಂದ ಇಂದು ಮನೆಕೆಲಸದವಳಂತೆ ಇದ್ದಾಳೆ‌. ಮಕ್ಕಳ ಪ್ರೀತಿ ಸಿಕ್ಕಿದರೆ ಸಾಕು ಎನ್ನುವ ವೈದೇಹಿಗೆ ಸತ್ಯ ಹೇಳದಂತೆ ಸುಹಾಸಿನಿ ಬಾಯಿ‌ಮುಚ್ಚಿಸಿದ್ದಾಳೆ. ವೈದೇಹಿ ಯಾರು, ಮನೆಗೆ ಏನಾಗಬೇಕು ಎಂಬುದು ಗೊತ್ತಿರುವುದು ಇಬ್ಬರಿಗೆ ಮಾತ್ರ. ಒಂದು ಅಜ್ಜಿಗೆ, ಹೆತ್ತ ತಾಯಿಗೆ ಆಗಾಗ ಮಗಳ ಭಾವನೆ ಬರುತ್ತದೆ. ಆದರೆ ಕಣ್ಣು ಕಾಣದೆ ಇರುವುದರ ಕಾರಣ ಅದನ್ನು ಸಾಬೀತುಪಡಿಸಲು ಹೋಗುತ್ತಿಲ್ಲ. ಇನ್ನು ಧ್ರುವನಿಗೆ ತಮ್ಮ ನಿಜವಾದ ಹೆತ್ತ ತಾಯಿ ಯಾರೆಂಬುದು ತಿಳಿದಿದೆ. ಆದರೆ ಆ ಸತ್ಯ ಹೇಳುವಷ್ಟರಲ್ಲಿಯೇ ಮಾತಾಡುವ ಸ್ಥಿತಿಯನ್ನೇ ಕಳೆದುಕೊಂಡಿದ್ದಾನೆ.

    ವಿಕ್ರಾಂತ್ ಕೂಡ ಸುಮ್ಮನಾಗಿ ಬಿಟ್ಟ

    ವಿಕ್ರಾಂತ್ ಕೂಡ ಸುಮ್ಮನಾಗಿ ಬಿಟ್ಟ

    ಸುಹಾಸಿನಿ ಎಷ್ಟು ಜೆಟ್ಟ ಹೆಂಗಸು ಎಂಬುದು ವಿಕ್ರಾಂತ್ ಮತ್ತು ಅಮೂಲ್ಯಗೆ ತಿಳಿದಿದೆ. ತಮ್ಮೆಲ್ಲರನ್ನು ಹೆತ್ತವಳು ಇನ್ನು ಬದುಕಿದ್ದಾಳೆ ಎಂಬುದು ತಿಳಿದ ಕೂಡಲೇ ಸತ್ಯ ಹುಡುಕಲು ಹೊರಟರು. ವಿಕ್ರಾಂತ್, ಧ್ರುವ, ಅಮೂಲ್ಯ ಹುಡುಕುತ್ತಿದ್ದಾಗ ಮನಸ್ಸಲ್ಲದ ಮನಸ್ಸಲ್ಲಿ ವೇದಾಂತ್ ಕೂಡ ಜೊತೆಯಾದ. ಆದರೆ ಸತ್ಯ ತಿಳಿಯುವಷ್ಟರಲ್ಲಿ ಏನೇನೋ ಸಮಸ್ಯೆಗಳು ಕಾಡಿದವು. ಹೆತ್ತ ತಾಯಿ ಯಾರೆಂಬುದು ಮೂವರಲ್ಲಿ ಧ್ರುವನಿಗೆ ಮಾತ್ರ ತಿಳಿದಿತ್ತು. ಆದರೆ ವಿಕ್ರಾಂತ್, ವೇದಾಂತ್‌ಗೆ ತಿಳಿಯುವಷ್ಟರಲ್ಲಿ ಧ್ರುವನ ಆಕ್ಸಿಡೆಂಟ್ ಆಯಿತು. ಮಾತು ಬಾರದೆ, ಪ್ರಜ್ಞೆ ಇದ್ದರೂ ಇಲ್ಲದವನಂತೆ ಧ್ರುವ ಜೀವಿಸತೊಡಗಿದ. ಈ ಟೆನ್ಶನ್‌ನಲ್ಲಿಯೇ ಅಮ್ಮನ ಹುಡುಕಾಟವನ್ನು ಬಿಟ್ಟಿದ್ದಾರೆ.

    ನಯನತಾರಾ ಮದುವೆ ಕಾಸ್ಟ್ಯೂಮ್‌ನಲ್ಲಿ ಮಿಂಚಿದ ಸತ್ಯ ಧಾರಾವಾಹಿಯ ನಟಿ!ನಯನತಾರಾ ಮದುವೆ ಕಾಸ್ಟ್ಯೂಮ್‌ನಲ್ಲಿ ಮಿಂಚಿದ ಸತ್ಯ ಧಾರಾವಾಹಿಯ ನಟಿ!

    ಅಮ್ಮನ ಪ್ರೀತಿ ಅರ್ಥವಾಗುತ್ತಾ?

    ವೈದೇಹಿ ಸದ್ಯ ವೈಜಯಂತಿಯಾಗಿ ಮನೆಕೆಲಸ ಮಾಡುತ್ತಾ, ಮಕ್ಕಳನ್ನು ಹಾರೈಕೆ ಮಾಡುತ್ತಿದ್ದಾಳೆ. ಇದನ್ನು ಮಕ್ಕಳಿಗಾಗಿ ಮಾಡುತ್ತಿರುವುದು ತನ್ನ ಜವಾಬ್ದಾರಿ ಎಂದೇ ಭಾವಿಸಿದ್ದಾಳೆ. ಆದರೆ ವೇದಾಂತ್ ತಾಯಿ ಮಾಡಿದ ಕೆಲಸಕ್ಕಾಗಿ ಸಂಬಳದ ರೂಪದಲ್ಲಿ ಹಣ ನೀಡಿದ್ದಾನೆ. ಆ ಹಣವನ್ನು ಬೇಡ ಎಂದರೂ ತೆಗೆದುಕೊಳ್ಳಲೇ ಬೇಕಾದ ಸ್ಥಿತಿಯಿದ್ದ ಕಾರಣಕ್ಕೆ ಆ ಹಣ ತೆಗೆದುಕೊಂಡ ವೈದೇಹಿ ಮಕ್ಕಳಿಗಾಗಿ ಬಟ್ಟೆ ತಂದುಕೊಟ್ಟಿದ್ದಾಳೆ. ಇದು ಸಿಕ್ಕಾಪಟ್ಟೆ ಖುಷಿಕೊಟ್ಟಿದೆ.

    English summary
    Zee Kannada Gattimela Serial Written Update On July 5th Episode.
    Tuesday, July 5, 2022, 18:27
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X