ಗಟ್ಟಿಮೇಳ: ಅಮೂಲ್ಯಗೆ ಅವಮಾನ ಮಾಡಿದ ಆರತಿ, ಸುಹಾಸಿನಿ

By ಪ್ರಿಯಾ ದೊರೆ

'ಗಟ್ಟಿಮೇಳ' ಧಾರಾವಾಹಿ ದಿನದಿಂದ ದಿನಕ್ಕೆ ಕುತೂಹಲವನ್ನು ಕೆರಳಿಸುತ್ತಲೇ ಇದೆ. ಈಗೀನ ಸಂಚಿಕೆಯಲ್ಲಿ ಆರತಿ ಈಗ ಗರ್ಭಿಣಿಯಾಗಿದ್ದಾಳೆ. ಈ ಸುದ್ದಿ ಮನೆಯವರೆಲ್ಲರನ್ನೂ ಖುಷಿಯಾಗಿರುವಂತೆ ಮಾಡಿದೆ. ಆದರೆ, ಸುಹಾಸಿನಿ ಈ ಮಗುವನ್ನು ಕೊಲ್ಲಲು ಪ್ಲಾನ್ ಮೇಲೆ ಪ್ಲಾನ್ ಮಾಡುತ್ತಿದ್ದಾಳೆ. ಅದನ್ನೆಲ್ಲಾ ಅಮೂಲ್ಯ ತಲೆ ಮೇಲೆ ಹಾಕಲು ಮುಂದಾಗಿದ್ದಾಳೆ.

ಇನ್ನು ಅಮೂಲ್ಯ, ಇದೀಗ ಆರತಿ ಹಾಗೂ ಆಕೆಯ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿಗೆ ಏನೂ ಆಗದಿರಲಿ ಎಂದು ಮಂಡಿ ಸೇವೆ ಮಾಡಿದ್ದಾಳೆ. 108 ಸುತ್ತು ಮಂಡಿಯಲ್ಲಿ ಪ್ರದಕ್ಷಿಣಿ ಹಾಕಿದ್ದಾಳೆ. ಈಗ ಆರತಿಗೋಸ್ಕರ ಅರ್ಚಕರು ಕೊಟ್ಟ ಪ್ರಸಾದದಿಂದ ಪಾಯಸ ಮಾಡಲು ಅಡುಗೆ ಮನೆಗೆ ಬಂದಿದ್ದಾಳೆ.

ಇದೇ ವೇಳೆ, ಸುಹಾಸಿನಿ ಬಂದು ಅಮೂಲ್ಯಳನ್ನು ಸುಖಾ ಸುಮ್ಮನೆ ಕೆಣಕಿದ್ದಾಳೆ. ನಿನಗೆ ಆರತಿ ಎಂದರೆ ಅವಳ ಮೇಲೆ ತುಂಬಾ ಕಾಳಜಿ ಇದೆ ಅಲ್ವಾ. ಮನೆಯವರು ಎಂದರೆ ಏನಾದರೂ ಮಾಡುತ್ತೀಯಾ ಅಲ್ವಾ ಎಂದು ಕೇಳಿದ್ದಾಳೆ. ಇದಕ್ಕೆ ಅಮೂಲ್ಯ ಹೌದು, ನನ್ನ ಮನೆಯವರಿಗಾಗಿ ನಾನು ಏನೂ ಬೇಕಿದ್ದರೂ ಮಾಡುತ್ತೇನೆ. ಯಾರ ಮೇಲೆ ಬೇಕಿದ್ದರೂ ದ್ವೇಷ ಕಟ್ಟಿಕೊಳ್ಳುತ್ತೇನೆ ಎಂದು ಖಡಕ್ ಆಗಿ ಹೇಳಿದ್ದಾಳೆ.

ಆರತಿಗೆ ದ್ವೇಷ ತುಂಬಿದ ಸುಹಾಸಿನಿ

ಆರತಿಗೆ ದ್ವೇಷ ತುಂಬಿದ ಸುಹಾಸಿನಿ

ಸುಹಾಸಿನಿ ಸೀದಾ ಆರತಿ ಬಳಿ ಬಂದು, ನಿನಗೋಸ್ಕರ ಅಮೂಲ್ಯ ಮಂಡಿ ಸೇವೆ ಮಾಡಿದ್ದು ಗೊತ್ತಾಯ್ತಾ? ಎಂದು ಕೇಳುತ್ತಾಳೆ. ಅದಕ್ಕೆ ಆರತಿ ಹೌದು ಅತ್ತೆ. ನಾನೇ ಅಮೂಲ್ಯಾಳನ್ನು ತಪ್ಪಾಗಿ ತಿಳಿದುಕೊಂಡಿದ್ದೆ ಎಂದು ಹೇಳುತ್ತಾಳೆ. ಅಲ್ಲದೇ, ಅವಳು ಏನೇ ಸೇವೆ ಮಾಡಿದ್ದರೂ ನಿನಗೆ ಅದರಿಂದ ಒಳ್ಳೆಯದೇ ಆಗಬೇಕು ಎಂದೇನಿಲ್ಲ. ಹಾಗಾಗಿ ನೀನು ತುಂಬಾ ಹುಷಾರಾಗಿರಬೇಕು. ಯಾರಿಂದಲೋ ಏನೋ? ಅಮೂಲ್ಯಳಿಂದಲೂ ಅವಳಿಗೇ ಗೊತ್ತಿಲ್ಲದೆ ತಪ್ಪಾಗಬಹುದು. ಅಮೂಲ್ಯ ಪಾಯಸ ಮಾಡುವಾಗ ಅದಕ್ಕೆ ಅಲ್ಲಿ ಬೀಳಬಹುದು ಅದು ಅವಳಿಗೆ ಗೊತ್ತಾಗದೇ ಇರಬಹುದು ಎಂದೆಲ್ಲಾ ಹೇಳುತ್ತಾಳೆ. ಯಾರು ಏನೇ ಕೊಟ್ಟರೂ ತಿನ್ನಬೇಡ, ಕಾಳಜಿ ಇಟ್ಟುಕೋ ಎಂದು ಹೇಳುತ್ತಾಳೆ.

ಅಮೂಲ್ಯಗೆ ಆರತಿ ಅವಮಾನ

ಅಮೂಲ್ಯಗೆ ಆರತಿ ಅವಮಾನ

ಅಮೂಲ್ಯ ಪ್ರೀತಿಯಿಂದ ಆರತಿಗೆ ಪಾಯಸ ಮಾಡಿ ತರುತ್ತಾಳೆ. ಆರತಿಗೆ ಪಾಯಸ ಕೊಟ್ಟರೆ, ಅವಳು ನನಗೆ ಬೇಡ ಎಂದು ಹೇಳುತ್ತಾಳೆ. ಅಮೂಲ್ಯ ಎಷ್ಟು ಬಲವಂತ ಮಾಡಿದರೂ ಆರತಿ ಒಪ್ಪುವುದಿಲ್ಲ. ಗಲಾಟೆ ಮಾಡುತ್ತಾಳೆ. ತುಂಬಾ ಹಠ ಮಾಡುತ್ತಾಳೆ. ಅಮೂಲ್ಯ ನನ್ನ ಮೇಲೆ ಅನುಮಾನ ಪಡಬೇಡ. ನಾನು ನಿನಗೆ ಏನೂ ಮಾಡೋದಿಲ್ಲ ಎಂದು ಹೇಳಿದರೂ ಕೇಳುವುದಿಲ್ಲ.

ತಲೆಸುತ್ತಿ ಬಿದ್ದ ಆರತಿ

ತಲೆಸುತ್ತಿ ಬಿದ್ದ ಆರತಿ

ಆರತಿ ತನಗೆ ಪಾಯಸ ಬೇಡ ಎಂದು ಹಠ ಮಾಡಿದರೂ ಅಮೂಲ್ಯ ಕೇಳುವುದಿಲ್ಲ. ಸ್ವಲ್ಪ ತಗೋ ಎಂದು ಹೇಳುತ್ತಾಳೆ. ಆಗ ಆರತಿ ನನಗೆ ಏನು ಬೇಕು ಏನು ಬೇಡ ಎಂಬುದನ್ನು ನನಗಿಂತ ನೀವೇ ಹೆಚ್ಚು ಡಿಸೈಡ್ ಮಾಡುತ್ತೀರಾ. ನನಗೆ ನನ್ನ ನಿರ್ಧಾರಗಳನ್ನು ತೆಗೆದುಕೊಳ್ಳಲು ಬಿಡಿ ಎಂದು ಹೇಳಿ ತಲೆ ಸುತ್ತಿ ಬೀಳುತ್ತಾಳೆ. ವೈದ್ಯರು ಬಂದು ಸ್ಟ್ರೆಸ್ ಕೊಡಬೇಡಿ. ಇದರಿಂದ ಆರತಿ ಆರೋಗ್ಯಕ್ಕೆ ತೊಂದರೆಯಾಗುತ್ತದೆ ಎಂದು ಹೇಳುತ್ತಾರೆ.

ಅಮೂಲ್ಯಗೆ ಸುಹಾಸಿನಿ ಕ್ಲಾಸ್

ಅಮೂಲ್ಯಗೆ ಸುಹಾಸಿನಿ ಕ್ಲಾಸ್

ವೈದ್ಯರು ಆರತಿಗೆ ಸ್ಟ್ರೆಸ್ ಆಗಿದೆ ಎಂದು ಹೇಳಿದ್ದಕ್ಕೆ ಸುಹಾಸಿನಿ ಅಮೂಲ್ಯಗೆ ಕ್ಲಾಸ್ ತೆಗೆದುಕೊಂಡಿದ್ದಾಳೆ. ಅವಳಿಗೆ ಪ್ರಸಾದ ತಿನ್ನು ಅಂತ ನೀನೇ ಬಲವಂತ ಮಾಡಿರುತ್ತೀಯಾ. ಈಗ ಅವಳಿಗೆ ಮೂಡ್ ಸ್ವಿಂಗ್ಸ್ ಆಗುತ್ತಿರುತ್ತದೆ. ತೊಂದರೆ ಕೊಡಬೇಡ ಎಂದು ತರಾಟೆಗೆ ತೆಗೆದುಕೊಳ್ಳುತ್ತಾಳೆ. ನಂತರ ಅಮೂಲ್ಯ ವೇದಾಂತ್ ಹಾಗೂ ವಿಕ್ಕಿ ಎದುರಿಗೆ ನಾನೇನು ಮಾಡಿಲ್ಲ. ಈ ಪಾಯಿಸಕ್ಕೆ ನಾನೇನು ಹಾಕಿಲ್ಲ ಎಂದು ಹೇಳಿ ಅವರ ಎದುರಿಗೆ ಪಾಯಸ ತಿನ್ನುತ್ತಾಳೆ. ನೋಡಿ ನನಗೇನು ಹಾಕಿಲ್ಲ. ಅಕ್ಕನ ಪಾಯಸಕ್ಕೆ ನಾನೇನು ಮಿಕ್ಸ್ ಮಾಡಿಲ್ಲ ಎಂದು ಹೇಳುತ್ತಾಳೆ.

More from Filmibeat

English summary
Gattimela Serial Written Update On June 6th Episode. Suhasini and Arathi Blames Amulya. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X