Swathi: ಮತ್ತೊಮ್ಮೆ ಖಡಕ್ ವಿಲನ್ ಲುಕ್ ಕೊಡ್ತಿರೋ ನಟಿ ಸ್ವಾತಿ.. ಧಾರಾವಾಹಿ ಯಾವುದು?
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ 'ರಾಣಿ' ಧಾರಾವಾಹಿಯಲ್ಲಿ ಸೌದಾಮಿನಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ನಟಿ ಸ್ವಾತಿ. ಇದೇ ಏಪ್ರಿಲ್ ಮೂರರಿಂದ ಪ್ರಸಾರಗೊಳ್ಳುತ್ತಿರುವ ಹೊಚ್ಚ ಹೊಸ ಧಾರಾವಾಹಿ 'ರಾಣಿ' ಹೊಸ ರೀತಿಯ ಕಥೆಯೊಂದಿಗೆ ಕಿರುತೆರೆ ಪ್ರಿಯರನ್ನು ಮನರಂಜಿಸಲು ಮುಂದೆ ಬರುತ್ತಿದೆ.
'ಗಟ್ಟಿಮೇಳ', 'ಯಡಿಯೂರು ಶ್ರೀ ಸಿದ್ದಲಿಂಗೇಶ್ವರ', 'ಗೀತಾ' ಇತ್ಯಾದಿ ಧಾರಾವಾಹಿಗಳಲ್ಲಿ ನಟಿಸಿರುವ ನಟಿ ಸ್ವಾತಿ ಅವರು ಈ ಧಾರಾವಾಹಿಯಲ್ಲಿಯೂ ಒಂದು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಥೆಯ ನಾಯಕ ಅರ್ಜುನನ ತಾಯಿ ಸೌದಾಮಿನಿಯಾಗಿ ಅಭಿನಯಿಸುತ್ತಿರುವ ಇವರು ಒಬ್ಬ ಸ್ಟ್ರಿಕ್ಟ್ ತಾಯಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಖಡಕ್ ತಾಯಿ ಪಾತ್ರದಲ್ಲಿ ಸ್ವಾತಿ
ಕಥೆಯ ನಾಯಕ ಅರ್ಜುನ್ ಸದಾ ತನ್ನ ತಾಯಿಯ ಮಾತನ್ನು ಮೀರದವನು. ತಾಯಿಯ ಮಾತನ್ನೇ ವೇದವಾಕ್ಯವೆಂದು ಪಾಲಿಸಿಕೊಂಡು ಬರುವ ಇವನು ಒಂದು ಹಳ್ಳಿ ಹುಡುಗಿಯೊಂದಿಗೆ ಪ್ರೀತಿಯಲ್ಲಿ ಬೀಳುತ್ತಾನೆ.
ಫಾರಿನ್‌ನಲ್ಲಿ ತನ್ನ ವಿದ್ಯಾಭ್ಯಾಸ ಮುಗಿಸಿಕೊಂಡು ಬಂದ ಇವನು ಹಳ್ಳಿ ಹುಡುಗಿಯ ಮುಗ್ಧತೆಗೆ ಮಾರುಹೋಗುತ್ತಾನೆ. ಇದನ್ನು ಬಹಳವಾಗಿ ವಿರೋಧಿಸುವ ಇವನ ತಾಯಿ ಸೌದಾಮಿನಿ ಆ ಹುಡುಗಿ ಎಂದರೆ ಕಥೆಯ ನಾಯಕಿ ರಾಣಿಯನ್ನು ದ್ವೇಷಿಸಲು ಆರಂಭಿಸುತ್ತಾಳೆ. ಈ ದ್ವೇಷಕ್ಕೆ ಹಲವು ಬೇರೆ ಬೇರೆ ಕಾರಣಗಳು ಇವೆ. ಈ ರೀತಿಯ ಕಥಾ ಹಂದರ ಇರುವ ಈ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿರುವ ಸ್ವಾತಿಯವರು ಈಗಾಗಲೇ ಬೇರೆ ಬೇರೆ ಧಾರಾವಾಹಿಗಳಲ್ಲಿ ಖಳನಾಯಕಿಯಾಗಿ ಅಭಿನಯಿಸಿ ಒಳ್ಳೆಯ ಹೆಸರು ಪಡೆದಿದ್ದಾರೆ.

ಸದ್ದು ಮಾಡುತ್ತಿರುವ ಪ್ರೋಮೋ
ಆದರೆ, ಈ ಕಥೆಯ ನಿಜವಾದ ಟ್ವಿಸ್ಟ್ ಏನೆಂದರೆ ಕಥೆಯ ನಾಯಕಿ ರಾಣಿ ತನ್ನ ಬಾಲ್ಯದಲ್ಲಿಯೇ ಒಂದು ಕಹಿ ಘಟನೆಯಿಂದ ತಾಯಿ ಹಾಗೂ ಅಣ್ಣನನ್ನು ಕಳೆದುಕೊಂಡಿರುತ್ತಾಳೆ. ತಂದೆಯ ಪ್ರೀತಿಯಲ್ಲಿ ಬೆಳೆಯುವ ಇವಳಿಗೆ ತನ್ನ ಪುಟ್ಟ ಕುರಿಮರಿ ಚೆರಿ ಎಂದರೆ ಬಹಳ ಪ್ರೀತಿ. ಇಂತಹ ಮುಗ್ಧ ಜೀವವನ್ನು ಪ್ರೀತಿಸುವ ನಾಯಕ ಅರ್ಜುನ್ ಗೆ ನಂತರದಲ್ಲಿ ತಿಳಿಯುತ್ತದೆ.
ರಾಣಿಗೆ ಕಿವಿ ಕೇಳುವುದಿಲ್ಲವೆಂದು. ಬಾಲ್ಯದಲ್ಲಿ ನಡೆದ ಕಹಿ ಘಟನೆಯಿಂದ ಆಕೆ ತನ್ನ ಶ್ರವಣಶಕ್ತಿಯನ್ನು ಕಳೆದುಕೊಂಡಿರುತ್ತಾಳೆ. ಇಂತಹ ಟ್ವಿಸ್ಟ್ ಹೊಂದಿರುವ ಈ ಕಥೆ ಹೇಗೆ ಮುಂದುವರಿಯುತ್ತದೆ? ನಾಯಕ ತನ್ನ ಹುಡುಗಿಯನ್ನು ಹೇಗೆ ಪಡೆಯುತ್ತಾನೆ? ತಾಯಿಯ ಮಾತನ್ನು ವಿರೋಧಿಸದೆ ಹೇಗೆ ಎಲ್ಲವನ್ನು ಸರಿದೂಗಿಸುತ್ತಾನೆ? ಇತ್ಯಾದಿ ಕುತೂಹಲದಿಂದ ಕಿರುತೆರೆ ಪ್ರೇಕ್ಷಕರು ಕಾಯುತ್ತಿದ್ದಾರೆ.
ನಟಿ ಸ್ವಾತಿ ಅವರಂತೂ ತಮ್ಮ ಎಂದಿನ ಸ್ಟೈಲಿಶ್ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದ್ಭುತ ಅಭಿನಯದ ಮೂಲಕ ಈಗಾಗಲೇ ಪ್ರಿಯರ ಮನೆಗೆದ್ದಿರುವ ಇವರು ತಮ್ಮ ವಿಲನ್ ಪಾತ್ರಗಳಿಗೆ ಫೇಮಸ್ಸು. ಈಗ ಈ ಭಾರವಾಗಿ ಹೇಳಿ ಇವರ ಪಾತ್ರ ಹಾಗೂ ಅಭಿನಯ ಹೇಗಿರುತ್ತದೆ ಎಂಬುದನ್ನು ಕುತೂಹಲ ಮೂಡಿಸಿದೆ.


Click it and Unblock the Notifications











