ಗಟ್ಟಿಮೇಳ: ಕೋರ್ಟ್‌ಗೆ ಬಂದ ಧ್ರುವ, ನಕಲಿ ಅಮ್ಮನ ನಾಟಕ ಬಂದ್?
ವಿಕ್ಕಿಗೆ ಬೇಲ್ ಕೊಡಿಸಬೇಕೆಂದು ಪಣ ತೊಟ್ಟಿರುವ ವೇದಾಂತ್ ವಸಿಷ್ಠ ಕೋರ್ಟ್‌ನಲ್ಲಿ ವಾದ ಮಂಡಿಸುತ್ತಿದ್ದಾನೆ. ಆಕ್ಸಿಡೆಂಟ್ ಮಾಡಿದ ಲಾರಿ ಚಾಲಕನನ್ನು ಕರೆ ತಂದು ಕೋರ್ಟ್ ಕಟಕಟೆಯಲ್ಲಿ ನಿಲ್ಲಿಸಿದ್ದಾನೆ. ವಿಕ್ಕಿಗೆ ವಾಯ್ಸ್ ಮೆಸೇಜ್ ಕಳಿಸಲು ಕಾರಣ ಏನು ಎಂಬುದರ ಬಗ್ಗೆ ವಿಚಾರಣೆ ನಡೆಸುತ್ತಿದ್ದಾನೆ.
ಇದೆಲ್ಲವನ್ನೂ ನೋಡಿದರೆ, ವಿಕ್ಕಿಗೆ ಬೇಲ್ ಸಿಗುವುದು ಗ್ಯಾರೆಂಟಿ ಎಂಬಂತಾಗಿದೆ. ಆದರೆ ಅಷ್ಟರಲ್ಲಾಗಲೇ ಎದುರಾಳಿ ವಕೀಲರು ತುಂಬಾ ಸ್ಟ್ರಾಂಗ್ ಆಗಿದ್ದಾರೆ. ಹೇಗಾದರೂ ಮಾಡಿ ವಿಕ್ಕಿ ಜೈಲಿನಲ್ಲಿ ಕೊಳೆಯುವಂತಾಗಬೇಕು ಎಂದು ವಾದ ಮಂಡಿಸುತ್ತಿದ್ದಾರೆ. ಧ್ರುವ ಕೊಲೆಯಲ್ಲಿ ವಿಕ್ರಾಂತ್ ಅಷ್ಟೇ ಅಲ್ಲ ವೇದಾಂತ್ ಕೂಡ ಭಾಗಿ ಆಗಿದ್ದಾನೆ ಎಂದು ಆರೋಪಿಸುತ್ತಾರೆ.
ಲಾಯರ್ ಮಾತು ಕೇಳಿದ ವೇದಾಂತ್ ತಬ್ಬಿಬ್ಬಾಗಿದ್ದಾರೆ. ಎದುರಾಳಿ ಲಾಯರ್, ಆಸ್ತಿ ಆಸೆಗಾಗಿ ವೇದಾಂತ್ ಹಾಗೂ ವಿಕ್ರಾಂತ್ ಇಬ್ಬರೂ ಈ ಕೊಲೆ ಮಾಡಿಸಿದ್ದಾರೆ ಎಂದು ಹೇಳಿದ್ದಾರೆ. ಇವೆಲ್ಲವನ್ನೂ ಕೇಳಿದ ವೇದಾಂತ್ ಹಾಗೂ ಅವರ ಮನೆಯವರು ಎಲ್ಲರೂ ಬಿಟ್ಟ ಕಣ್ಣನ್ನು ಬಿಟ್ಟ ಹಾಗೆ ಶಾಕ್ ಆಗಿದ್ದಾರೆ.

ಧ್ರುವ ಮನೆಯಿಂದ ಆಚೆ ಇದ್ದು, ಆಟೋ ಓಡಿಸುತ್ತಿದ್ದರು. ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡಿದ್ದು, ಈ ವೇಳೆ ವೇದಾಂತ್ ವಸಿಷ್ಠ ಪದೇ ಪದೇ ಧ್ರುವ ಕೆಲಸಗಳಲ್ಲಿ ತೊಂದರೆ ಮಾಡಿದ್ದು ಹಾಗೂ ವೇದಾಂತ್ ಮತ್ತು ಧ್ರುವನ ಮಧ್ಯೆ ಇದ್ದ ಮನಸ್ತಾಪದ ಬಗ್ಗೆ ವಿಚಾರಣೆ ನಡೆಸುತ್ತಾನೆ. ಇದೆಲ್ಲಾ ನೋಡಿದರೆ, ವೇದಾಂತ್ ಹಾಗೂ ವಿಕ್ರಾಂತ್ ಸೇರಿ ಆಸ್ತಿಗಾಗಿ ಈ ಕೊಲೆ ಮಾಡಿಸಿದ್ದಾರೆ ಎಂದು ವಾದ ಮಾಡಿದ್ದಾರೆ. ಇದಕ್ಕೆ ವೇದಾಂತ್ ಪ್ರತಿಕ್ರಿಯಿಸಿದ್ದು, ಇಲ್ಲ ನಾನು ಸಂಪಾದಿಸಿದ ಆಸ್ತಿ ಎಲ್ಲವೂ ನನ್ನ ಸ್ವಯಾರ್ಜಿತ. ಅದನ್ನು ಧ್ರುವನಿಗೆ ಕೊಡಬೇಕಾ, ಬೇಡವಾ ಎಂದು ನಿರ್ಧಾರ ಮಾಡಬೇಕಿರುವುದು ನಾನು ಎಂದು ಹೇಳುತ್ತಾನೆ.
ಇದಾದ ಬಳಿಕ ಎದುರಾಳಿ ವಕೀಲರು, ಸ್ವಂತ ತಾಯಿ ಹಾಗೂ ಮಲತಾಯಿ ಎಂಬ ವಿಚಾರದ ಬಗ್ಗೆ ನಿಮ್ಮ ಮತ್ತು ಧ್ರುವ ನಡುವೆ ಮನಸ್ತಾಪವಿತ್ತೋ ಇಲ್ವೋ ಎಂದು ಕೂಡ ಪ್ರಶ್ನೆ ಮಾಡುತ್ತಾನೆ. ಬಹುಶ: ಧ್ರುವ ನಿಮ್ಮ ತಾಯಿಗೆ ಹುಟ್ಟಿರಲಿಲ್ಲ ಎನಿಸುತ್ತೆ. ಈ ಕಾರಣಕ್ಕೆ ಕೊಲೆ ಮಾಡಿಸಿರಬಹುದು ಎಂದು ಹೇಳುತ್ತಾರೆ. ಇದೇ ಕಾರಣಕ್ಕಾಗಿ ಧ್ರುವನನ್ನು 6 ವರ್ಷಗಳ ಕಾಲ ಮನೆಯಿಂದ ಆಚೆ ಹಾಕಿದ್ದರು. ಬಳಿಕ ಮತ್ತೆ ಮನೆಗೆ ಬಂದಿದ್ದ ಧ್ರುವನ ಮೇಲೆ ಮನಸ್ತಾಪ ಹೆಚ್ಚಾಗಿ, ಸುಪಾರಿ ಕೊಟ್ಟು ಕೊಲೆ ಮಾಡಿಸಿರಬೇಕು ಎಂದು ವಾದ ಮಾಡುತ್ತಾರೆ. ಆಗ ಲಾಯರ್, ವೇದಾಂತ್ ಅವರನ್ನು ನಿಮ್ಮ ಕಡೆ ಯಾರಾದರೂ ವಿಟ್ನೆಸ್ ಇದ್ದಾರಾ ಎಂದು ಕೇಳುತ್ತಾರೆ. ಆಗ ವೇದಾಂತ್ ಸ್ವಲ್ಪ ಕಾಲಾವಕಾಶ ಕೇಳುತ್ತಾನೆ.

ಊಟದ ನಂತರ ಕೋರ್ಟ್‌ಗೆ ಧ್ರುವನನ್ನು ಕರೆದುಕೊಂಡು ಆದಿತ್ಯ ಬರುತ್ತಾನೆ. ಇದನ್ನು ನೋಡಿ ಎಲ್ಲರೂ ಶಾಕ್ ಆಗುತ್ತಾರೆ. ಆಗ ಜಡ್ಜ್, ಪೊಲೀಸರಿಗೆ ಬೈಯುತ್ತಾರೆ. ಏನು ತನಿಖೆ ಮಾಡಿದ್ದೀರಾ. ಧ್ರುವ ಇನ್ನೂ ಬದುಕಿದ್ದಾರಲ್ಲ ಎಂದು ಕೇಳುತ್ತಾರೆ. ಆಗ ಆದಿತ್ಯನನ್ನು ವಿಚಾರಣೆ ಮಾಡಿದಾಗ ಧ್ರುವ ಸಾವಿನ ಬಗ್ಗೆ ನಡೆದ ಘಟನೆಗಳನ್ನು ವಿವರಿಸುತ್ತಾನೆ. ಕೇಸ್ ಬಗ್ಗೆ ತನಿಖೆ ನಡೆಸಿದ್ದು ಹೇಗೆ ಧ್ರುವ ಬದುಕಿರುವ ವಿಚಾರ ತಿಳಿದಿದ್ದು ಹೇಗೆ ಎಂಬ ಎಲ್ಲಾ ವಿಚಾರವನ್ನು ತಿಳಿಸುತ್ತಾ ಹೋಗುತ್ತಾನೆ. ಮುಂದೆ ಏನಾಗುತ್ತೆ ಅನ್ನೋದನ್ನು ಇಂದಿನ ಸಂಚಿಕೆಯಲ್ಲಿ ಕಾದು ನೋಡಬೇಕಿದೆ. ಇನ್ನು ಧ್ರುವ ಬದುಕಿರುವುದನ್ನು ನೋಡಿದ ಮನೆಯವರೆಲ್ಲಾ ಖುಷಿ ಪಟ್ಟಿದ್ದಾರೆ. ವಿಕ್ಕಿ, ಅಮೂಲ್ಯ, ಆರತಿ, ಆದ್ಯ, ವೈಜಯಂತಿ ಎಲ್ಲರೂ ಸಂತಸವನ್ನು ವ್ಯಕ್ತಪಡಿಸುತ್ತಾರೆ.
Recommended Video



Click it and Unblock the Notifications











