Gattimela : ಕೊಲೆ ಮಾಡಿ, ಮುಡಿ ಕಟ್ಟಲ್ಲ ಎಂದು ಸುಹಾಸಿನಿ ಹೊಸ ನಾಟಕ!
ಗಟ್ಟಿಮೇಳ ಧಾರಾವಾಹಿಯಲ್ಲಿ ಈಗ ಸೂತಕದ ವಾತಾವರಣ. ವೇದಾಂತ್ ಮನೆಯಲ್ಲಿ ರಾಜಣ್ಣನ ಸಾವಿನ ದುಃಖದಿಂದ ಸ್ಮಶಾನ ಮೌನ ಆವರಿಸಿದೆ. ವಿಕ್ಕಿಗೆ ಧ್ರುವ ಸಾವನ್ನಪ್ಪಿದ್ದಾನೆ ಎಂಬ ಸತ್ಯವನ್ನು ಅರಗಿಸಿಕೊಳ್ಳಲು ವೇದಾಂತ್ ಸಹಕರಿಸುತ್ತಿದ್ದಾನೆ.
ಧ್ರುವ ತನ್ನ ಲವರ್‌ಗೆ ಪ್ರಪೋಸ್ ಮಾಡಲು ಹೋಗಿದ್ದ, ಆ ಹುಡುಗಿಯನ್ನ ಪರಿಚಯ ಮಾಡಿಸುತ್ತೀನಿ ಎಂದು ವಿಕ್ಕಿ ರಾಜಣ್ಣ ಹೇಳಿದ್ದನ್ನು ನೆನಪು ಮಾಡಿಕೊಂಡು ಕಣ್ಣೀರು ಹಾಕುತ್ತಿದ್ದಾನೆ. ವೇದಾಂತ್ ವಿಕ್ಕಿಗೆ ಸಮಾಧಾನ ಮಾಡುತ್ತಾನೆ. ನಾವು ಅವನ ನೆನಪಿನ ಜೊತೆಗೆ ಬದುಕಬೇಕು ಎಂದು ಹೇಳುತ್ತಾನೆ.
ಇತ್ತ ವೈಜಯಂತಿ ಅಜ್ಜಿ ಮುಂದೆ ಕೂತು ಅಳುತ್ತಿರುತ್ತಾಳೆ. ಅಜ್ಜಿ, ''ವೇದಾಂತ್ ಬೇರೆ ಮಕ್ಕಳ ಥರ ಅಲ್ಲ. ಅವನು ತುಂಬಾ ಮೃದು ಸ್ವಾಭಾವದವನು ಎಂದು ಗೋಳಾಡುತ್ತಾರೆ. ಆಗ ವೈಜಯಂತಿ ಅಳೋದನ್ನು ಕೇಳಿ, ನಿನ್ನೆ ಮೊನ್ನೆ ಬಂದ ನಿನಗೇ ಹೀಗೆ ದುಃಖ ಆಗಬೇಕಾದರೆ, ಅವನು ಹುಟ್ಟಿದಾಗಿನಿಂದಲೂ ಜೊತೆಗಿದ್ದ ನಮಗೆ ಹೇಗೆ ಆಗಬೇಡ'' ಎಂದು ಕಣ್ಣೀರಿಡುತ್ತಾರೆ.

ಧ್ರುವ ಸಾವಿನ ಹಿನ್ನೆಲೆ ಮನೆಗೆ ಬಂದ ಪೋಲೀಸರು!
ಪೊಲೀಸರು ಮನೆಗೆ ಬರುತ್ತಾರೆ. ಪೊಲೀಸರನ್ನು ನೋಡಿದ ಮನೆಯವರೆಲ್ಲಾ ಶಾಕ್ ಆಗುತ್ತಾರೆ. ಸುಹಾಸಿನಿ ಪೊಲೀಸರನ್ನು ನೀವ್ಯಾಕೆ ಬಂದಿದ್ದು ಎಂದು ಕೇಳುತ್ತಾಳೆ. ಆಗ ವೇದಾಂತ್ ನಾನೇ ಬರೋದಕ್ಕೆ ಹೇಳಿದ್ದು, ಧ್ರುವ ಸಾವಿಗೆ ಕಾರಣವಾದೋರಿಗೆ ಶಿಕ್ಷೆ ಕೊಡಿಸಬೇಕು. ಹಾಗಾಗಿ ಕರೆಸಿದ್ದೇನೆ ಎನ್ನುತ್ತಾನೆ. ಪೊಲೀಸರು ಕೆಲ ಪ್ರಶ್ನೆಗಳನ್ನು ಕೇಳುತ್ತಾರೆ. ಆಗ ವೇದಾಂತ್ ಧ್ರುವನ ಅಭ್ಯಾಸಗಳು ಹಾಗೂ ಮನೆಯಿಂದ ಹೊರಟ ಬಗ್ಗೆ ಎಲ್ಲಾ ಮಾಹಿತಿ ನೀಡುತ್ತಾರೆ. ಇನ್ನು ಶತ್ರು ಬಗ್ಗೆ ಹೇಳುವಾಗ, ಧ್ರುವ ತುಂಬಾ ಒಳ್ಳೆಯವನು ಅವನಿಗೆ ಯಾರು ಶತ್ರುಗಳಿರೋಕೆ ಸಾಧ್ಯವಿಲ್ಲ ಎನ್ನುತ್ತಾನೆ.

ಪೊಲೀಸ್ ಮಾತಿಗೆ ಸುಹಾಸಿನಿ ಶಾಕ್!
ಆಗ ಪೊಲೀಸರು ಮನೆಯಲ್ಲೇ ಶತ್ರು ನಮ್ಮ ಜೊತೆಗೇ ಇರುತ್ತಾರೆ. ಯಾರವರು, ಯಾಕೆ ಶತ್ರು ಆದರೂ ಅನ್ನೋದೇ ಗೊತ್ತಾಗೊಲ್ಲ. ಮನೆಯಲ್ಲೇ ಶತ್ರುಗಳಿರುತ್ತಾರೆ ಅದನ್ನ ತಿಳಿಯಬೇಕಷ್ಟೇ ಎಂದು ಹೇಳುತ್ತಾರೆ. ಆಗ ಸುಹಾಸಿನಿ ಮತ್ತೆ ವೈಜಯಂತಿ ಮುಖ, ಮುಖ ನೋಡಿಕೊಳ್ಳುತ್ತಾರೆ. ಹೆತ್ತವರು ಮಕ್ಕಳನ್ನ, ಒಡಹುಟ್ಟಿದವರನ್ನ ಸಾಯಿಸೋ ಜನರನ್ನ ನಾವು ನೋಡಿದ್ದೀವಿ. ಅಷ್ಟು ಸುಲಭವಾಗಿ ಯಾವುದನ್ನೂ ತೆಗೆದು ಹಾಕೋಕೆ ಆಗೊಲ್ಲ ಎನ್ನುತ್ತಾರೆ.

ಧ್ರುವ ಪ್ರೀತಿ ವಿಚಾರ ಪೋಲಿಸರಿಗೆ ತಿಳಿಯುತ್ತದೆ!
ಆಗ ಸುಹಾಸಿನಿ ಮಾತನಾಡಿ, ನಿಮ್ಮ ಪ್ರಕಾರ ನಮ್ಮ ಮನೆಯಲ್ಲಿರುವವರೇ ಧ್ರುವನ ಕೊಂದಿದ್ದಾರೆ ಅಂತನಾ ಎಂದು ಕೇಳಿದಾಗ, ಪೊಲೀಸರು ಹಾಗಲ್ಲ ಹೇಳಿದ್ದಷ್ಟೇ ಎನ್ನುತ್ತಾರೆ. ಮತ್ತೆ ಸುಹಾಸಿನಿ ಇಲ್ಲ ಧ್ರುವ ತುಂಬಾ ಸಾಫ್ಟ್ ಮನುಷ್ಯ ಅವನಿಗೆ ಯಾರೂ ಶತ್ರುಗಳಿರಲಿಲ್ಲ. ಯಾರ ಮೇಲೂ ಅನುಮಾನವಿಲ್ಲ. ಹಾಗೇನಾದರೂ ಇದ್ದರೆ ಹೇಳುತ್ತೀವಿ ಎನ್ನುತ್ತಾಳೆ. ಇದೇ ಮಾತನ್ನು ವೇದಾಂತ್ ಕೂಡ ಹೇಳುತ್ತಾನೆ. ಧ್ರುವ ತನ್ನ ಲವರ್‌ಗೆ ಪ್ರಪೋಸ್ ಮಾಡಲು ಹೋಗಿದ್ದ ವಿಚಾರವನ್ನು ವೇದಾಂತ್ ಪೊಲೀಸರಿಗೆ ತಿಳಿಸುತ್ತಾನೆ.

ಕೊಲೆಗಡುಕರ ವಿರುದ್ಧ ವೇದಾಂತ್ ಕಿಡಿ!
ನನ್ನ ತಮ್ಮನ ಸಾವಿಗೆ ಕಾರಣರಾದವರಿ ತಕ್ಕ ಶಿಕ್ಷೆಯಾಗಲೇಬೇಕು ಸರ್, ಅಲ್ಲಿಯವರೆಗೂ ನಾನು ನಿದ್ದ ಮಾಡೋದಿಲ್ಲ ಎನ್ನುತ್ತಾನೆ. ಆಗ ಪೊಲೀಸರು ಆವೇಷಕ್ಕೆ ಒಳಗಾಗಬೇಡಿ ನಮ್ಮ ಕೆಲಸವನ್ನು ನಾವು ಮಾಡುತ್ತೇವೆ ಎನ್ನುತ್ತಾರೆ. ನಡುವೆ ಮಾತನಾಡಿದ ಸುಹಾಸಿನಿ, ನನ್ನ ಮಗನ ಸಾವಿಗೆ ಕಾರಣ ಆದವರಿಗೆ ತಕ್ಕ ಶಿಕ್ಷೆಯಾಗಬೇಕು. ಅಲ್ಲಿಯವರೆಗೂ ನಾನು ಈ ಮುಡಿನ ಕಟ್ಟಲ್ಲ ಅಂತ ಹೇಳಿ, ತನ್ನ ಜಡೆ ಬಿಚ್ಚುತ್ತಾಳೆ. ಅಷ್ಟೇ ಅಲ್ಲ ಧೃವನ ತಿಥಿ ಕಾರ್ಯ ಕೂಡ ಮಾಡಲ್ಲ. ಅವನ ಆತ್ಮಕ್ಕೆ ಶಾಂತಿ ಸಿಗಬೇಕು ಅಂದರೆ ತಪ್ಪಿತಸ್ಥನಿಗೆ ಶಿಕ್ಷೆಯಾಗಲೇಬೇಕು ಎನ್ನುತ್ತಾಳೆ.

ಧ್ರುವನ ಸಾವೇ ರೋಚಕ ಟ್ವಿಸ್ಟ್!
ಇತ್ತ ಅಧಿತಿ, ಧ್ರುವ ಸಾವಿಗೆ ತಾನೇ ಕಾರಣ, ಅಣ್ಣಂದಿರನ್ನ ಬಿಟ್ಟು ಬಾ ಅಂದೆ. ಆ ಶಾಕ್‌ನಲ್ಲಿ ಧ್ರುವ ರಸ್ತೆ ದಾಟುವಾಗ ಆಕ್ಸಿಡೆಂಟ್ ಆಗಿದೆ ಎಂದು ಬಿಕ್ಕಿ ಬಿಕ್ಕಿ ಅಳುತ್ತಿರುತ್ತಾಳೆ. ಅವಳ ತಂದೆ ತಾಯಿಯೂ ರಾಜಣ್ಣನ ಬಗ್ಗೆ ಮಾತನಾಡುತ್ತಾ ಕಣ್ಣೀರು ಹಾಕುತ್ತಿರುತ್ತಾರೆ. ಅತ್ತ ವಿಕ್ಕಿ ಅಳುತ್ತಿರುವುದನ್ನು ನೋಡಿ ಬಂದ ವೈಜಯಂತಿ ಬಂದು ಸಮಾಧಾನ ಮಾಡುತ್ತಾಳೆ. ವಿಕ್ಕಿ ವೈಜಯಂತಿ ಹೆಗಲ ಮೇಲೆ ತಲೆ ಇಡುತ್ತಾನೆ. ಇನ್ನು ನಿಜಕ್ಕೂ ಧ್ರುವ ಸತ್ತಿದ್ದಾನಾ.? ವಿಕ್ಕಿಗೆ ಕಳಿಸಿದ ವಾಯ್ಸ್ ಮೆಸೇಜ್ ನಿಂದ ಏನಾಗುತ್ತೆ ಅಂತ ತಿಳಿಯಲು ಪ್ರೇಕ್ಷಕರು ಕಾಯುತ್ತಿದ್ದಾರೆ.


Click it and Unblock the Notifications











