ಕಣ್ಣಮುಂದೆ ಇರುವ ತಾಯಿಯನ್ನು, ಊರೆಲ್ಲಾ ಹುಡುಕುತ್ತಿರುವ ಮಕ್ಕಳು!
'ಗಟ್ಟಿಮೇಳ' ಧಾರಾವಾಹಿಯಲ್ಲಿ ಈಗ ವಸಿಷ್ಠ ಕುಟುಂಬ ಮನೆಯ ಒಡತಿಯನ್ನು ಹುಡುಕಲು ಮುಂದಾಗಿದೆ. ವೇದಾಂತ್ ಹಾಗೂ ಸುಹಾಸಿನಿ ವೈದೇಹಿ ಸತ್ತಿದ್ದಾಳೆ ಎಂದರೂ ವಿಕ್ಕಿ ನಂಬಲು ತಯಾರಿಲ್ಲ. ಈಗ ವಿಚಾರವೇ ಧಾರಾವಾಹಿಯಲ್ಲಿ ಮೂಡಿ ಬರುತ್ತಿದೆ.
ಸುಹಾಸಿನಿ ಹೇಗಾದರೂ ಮಾಡಿ ಧೃವನನ್ನು ಕೊಲ್ಲಬೇಕು ಎಂದುಕೊಂಡಿದ್ದರೆ, ವಿಕ್ಕಿ ಅದಕ್ಕೂ ಬ್ರೇಕ್ ಹಾಕಿದ್ದಾನೆ. ಧೃವ ರೂಮಿನಲ್ಲಿ ಸಿಸಿಟಿವಿ ಕ್ಯಾಮೆರಾ ಹಾಕಿಸಿ, ಸುಹಾಸಿನಿ ಪ್ಲಾನ್‌ಗೆ ಅಡ್ಡ ಬಂದಿದ್ದಾನೆ.
ಅಧಿತಿಗೆ ಬೇರೆ ಮದುವೆ ಮಾಡಲು ಸುಹಾಸಿನಿ ಮುಂದಾಗಿದ್ದಾಳೆ. ಧೃವನನ್ನು ಅಧಿತಿ ಪ್ರೀತಿಸುತ್ತಿದ್ದಾಳೆ ಎಂಬುದನ್ನು ತಿಳಿದ ಸುಹಾಸಿನಿ. ಅಧಿತಿ ಮದುವೆಯನ್ನು ಬೇರೆ ಹುಡುಗನಿಗೆ ಕೊಟ್ಟು ಮದುವೆ ಮಾಡುತ್ತಿದ್ದಾಳೆ.

ಸುಹಾಸಿನಿ ಬಗ್ಗೆ ತಪ್ಪು ತಿಳಿದಿರುವ ವೇದಾಂತ್!
ವೇದಾಂತ್ ಮನೆಯವರಿಗಾಗಿ ಏನು ಬೇಕಾದರೂ ಮಾಡುತ್ತಾನೆ. ಅವನಿಗೆ, ತಮ್ಮಂದಿರು, ಮನೆಯವರು ಎಂದರೆ ತುಂಬಾ ಇಷ್ಟ. ಅವರಿಗಾಗಿ ಯಾವುದನ್ನು ಇಲ್ಲ ಎನ್ನುವುದಿಲ್ಲ. ಆದರೆ ಸುಹಾಸಿನಿ ವಿಚಾರದಲ್ಲಿ ಇನ್ನೂ ಒಂದು ಕೈ ಮೇಲಿರುತ್ತಾನೆ. ಯಾರ ಮಾತನ್ನೂ ಕೇಳುವುದಿಲ್ಲ. ಸುಹಾಸಿನಿ ಏನು ಹೇಳಿದರೂ ಮಾಡುತ್ತಾನೆ. ಸುಹಾಸಿನಿ ಮಾತನ್ನು ತುಂಬಾನೇ ನಂಬುತ್ತಾನೆ. ತಮ್ಮನ್ನು ಸ್ವಂತ ಮಕ್ಕಳಂತೆ ನೋಡಿಕೊಂಡಿದ್ದಾಳೆ ಎಂದು ತಿಳಿದಿದ್ದಾನೆ.

ಅಮೂಲ್ಯ ವಿಕ್ಕಿ ಸೇರಿ ಮಾಡಿದ ಪ್ಲ್ಯಾನ್!
ಸುಹಾಸಿನಿ ವಿಚಾರದಲ್ಲಿ ಮನೆಯಲ್ಲಿ ಒಬ್ಬೊಬ್ಬರದ್ದು ಒಂದೊಂದು ಅಭಿಪ್ರಾಯ. ಅಜ್ಜಿಗೆ ತನ್ನ ಮಗಳು ಸುಹಾಸಿನಿ ಕೆಟ್ಟವಳು ಎಂಬ ಸತ್ಯ ಗೊತ್ತಿದೆ. ಆದರೆ ಬೇರೆ ದಾರಿ ಇಲ್ಲದೇ ಸುಮ್ಮನಿದ್ದಾಳೆ. ಇನ್ನು ವಿಕ್ಕಿ, ಧೃವ ಹಾಗೂ ಅಮೂಲ್ಯಗೆ ಸುಹಾಸಿನಿ ಬುದ್ದಿ ಗೊತ್ತಾಗಿದೆ. ಆದರೆ ವೇದಾಂತ್‌ಗಾಗಿ. ಧೃವ ಈ ವಿಚಾರವಾಗಿಯೇ ಸುಹಾಸಿನಿ ಬಳಿ ಜಗಳ ಕೂಡ ಆಡಿದ್ದಾಳೆ. ಈ ಕಾರಣದಿಂದಲೇ ಸುಹಾಸಿನಿ ಹಾಗೂ ಧೃವಗೆ ಆಗಿ ಬರುತ್ತಿರಲಿಲ್ಲ. ಇನ್ನು ವಿಕ್ಕಿ ಹಾಗೂ ಅಮೂಲ್ಯ ಕೂಡ ಸುಹಾಸಿನಿ ಬಗ್ಗೆ ತಿಳಿದುಕೊಂಡಿದ್ದು, ಒಂದೆರಡು ಬಾರಿ ವಾದ ಕೂಡ ಮಾಡಿದ್ದಾರೆ. ಆದರೆ ವೇದಾಂತ್ ಅಡ್ಡ ಬಂದು ಹೆಂಡತಿ, ಸಹೋದರನಿಗಿಂತಲೂ ತನಗೆ ತಾಯಿಯೇ ಮುಖ್ಯ ಎಂದು ಹೇಳಿದ್ದಾನೆ.

ಮನೆಯಲ್ಲಿ ವೈದೇಹಿ ವಿಚಾರಕ್ಕೆ ಕಿರಿಕ್!
ಮನೆಯಲ್ಲಿ ಪ್ರತೀ ಸಲವೂ ತಮ್ಮ ಹೆತ್ತ ತಾಯಿ ವೈದೇಹಿ ವಿಚಾರಕ್ಕೆ ಕಿರಿಕ್ ಮಾಡಿಕೊಳ್ಳುತ್ತಿರುತ್ತಾರೆ. ವಿಕ್ಕಿ ಮಾತನ್ನು ವೇದಾಂತ್ ನಂಬುವುದೇ ಇಲ್ಲ. ವೈದೇಹಿ ಅಮ್ಮ ತೀರಿಕೊಂಡಿದ್ದಾರೆ ಎಂದು ವೇದಾಂತ್ ನಂಬಿದ್ದಾನೆ. ಆದರೆ ಈ ವೈದೇಹಿ ಮನೆಗೆ ಬಂದು ಸೇರಿಕೊಂಡಿದ್ದಾಳೆ. ಆದರೂ ವೇದಾಂತ್‌ಗೆ ಅದು ಗೊತ್ತಾಗಿಲ್ಲ. ಇನ್ನು ಇದೀಗ ಆದ್ಯಗೂ ಅವರ ಅಜ್ಜಿ ವೈದೇಹಿ ಬಗ್ಗೆ ಹೇಳಿದ್ದಾರೆ. ಇದರಿಂದ ಮನೆಯಲ್ಲಿ ಕಿರಿಕ್ ಆಗಿದೆ. ಜಗಳ ಮಾಡಿದ ಮೇಲೆ ವೇದಾಂತ್ ಅವರ ತಾಯಿಯನ್ನು ಹುಡುಕಲು ಪರ್ಮಿಷನ್ ಕೊಟ್ಟಿದ್ದಾನೆ.

ಮನೆಯಲ್ಲೇ ಇದ್ದಾಳೆ ವೈದೇಹಿ!
ವೈದೇಹಿ ಮನೆಯಲ್ಲೇ ಇದ್ದರೂ, ಅವಳೇ ವಸಿಷ್ಠ ಕುಟುಂಬದ ಒಡತಿ ಎಂಬುದು ಯಾರಿಗೂ ಗೊತ್ತಿಲ್ಲ. ಯಾಕೆಂದರೆ, ವೈದೇಹಿ ಬಗ್ಗೆ ತಿಳಿದಿರುವ ಅಜ್ಜಿಗೆ ಕಣ್ಣಿಲ್ಲ. ಸುಹಾಸಿನಿ ಬೇಕಂತಲೇ ವಿಚಾರವನ್ನು ಮುಚ್ಚಿಟ್ಟಿದ್ದಾಳೆ. ಈಗ ವೈದೇಹಿ ಹುಡುಕಲು ಮಕ್ಕಳು ಮುಂದಾಗಿದ್ದಾರೆ. ವೈದೇಹಿ ಸಿಗಬೇಕು ಎಂದರೆ ಪವಾಡಗಳೇ ನಡೆಯಬೇಕು. ಒಂದು ಅಜ್ಜಿಗೆ ಕಣ್ಣೂ ಬರಬೇಕು, ಇಲ್ಲವಾ ಧ್ರುವ ವಾಸ್ತವತೆಗೆ ಬರಬೇಕು. ತಮ್ಮ ಮನೆಯಲ್ಲಿಯೇ ವೈಜಯಂತಿಯಾಗಿ ಇರುವುದರಿಂದ ಇದು ಕಷ್ಟಕರವಾಗಿದೆ. ಹೀಗಾಗಿ ಯಾವ ಪವಾಡ ಜರುಗುತ್ತೆ ಎಂಬ ಕುತೂಹಲ ನೋಡುಗರಲ್ಲಿಯೂ ಇದೆ.


Click it and Unblock the Notifications











