ನರ್ಸ್ ಆಗಿ ನಾಟಕ ಮಾಡ್ತಿರೋ ಅದಿತಿ ಆಟ ಬಯಲು!

By ಪ್ರಿಯಾ ದೊರೆ

'ಗಟ್ಟಿಮೇಳ' ಧಾರಾವಾಹಿಯಲ್ಲಿ ಅದಿತಿ ನರ್ಸ್‌ ಆಗಿ ಅಕ್ಕಂದಿರ ಮನೆಯಲ್ಲಿ ಕದ್ದು ಮುಚ್ಚಿ ಕೆಲಸ ಮಾಡುತ್ತಿದ್ದಾಳೆ. ಮಂಜುನಾಥ್‌ ಮಕ್ಕಳ ಮನೆ ಕಾಯುವ ವಾಚ್ ಮ್ಯಾನ್‌ ಕೆಲಸವನ್ನು ಮಾಡುತ್ತಿದ್ದಾರೆ. ಇದು ಗೊತ್ತಿದ್ದರೂ ಗೊತ್ತಿಲ್ಲದಂತೆಯೇ ನಡೆದುಕೊಳ್ಳುತ್ತಿದ್ದಾಳೆ ಅಮೂಲ್ಯ.

ಅದಿತಿ ಧೃವ ಇಬ್ಬರೂ ಪ್ರೀತಿಸುತ್ತಿದ್ದು, ಈ ವಿಚಾರ ಇಷ್ಟು ದಿನ ಯಾರಿಗೂ ಗೊತ್ತಿರಲಿಲ್ಲ. ಆದರೆ ಈಗ ಆದ್ಯಾಗೆ ಸತ್ಯ ಗೊತ್ತಾಗಿದೆ. ಅಷ್ಟೇ ಅಲ್ಲದೇ, ಅದಿತಿಗೆ ಆದ್ಯ ಸಪೋರ್ಟ್ ಕೂಡ ಮಾಡುತ್ತಿದ್ದಾಳೆ. ಅದಿತಿಗೆ ಈಗ ಆದ್ಯ ಬೆಂಬಲ ಸಿಕ್ಕಿರುವುದು ಸಹಾಯವಾದಂತಾಗಿದೆ.

ಇನ್ನು ಆರತಿ ಅಪ್ಪ ಅಮ್ಮನ ಕಷ್ಟಕ್ಕೆ ಹೇಗಾದರೂ ಸಹಾಯ ಮಾಡಬೇಕು. ಅಮೂಲ್ಯ ಮನೆ ಕಟ್ಟಿಸೋದಕ್ಕೆ ಪ್ಲ್ಯಾನ್ ಮಾಡಿದ್ದಾಳೆ. ಅದಕ್ಕೆ ತಾನೂ ಹಣದ ಸಹಾಯ ಮಾಡಬೇಕು ಎಂದು ಹೂ ಕಟ್ಟುವ ತೀರ್ಮಾನ ಮಾಡಿದ್ದಾಳೆ.

ಅದಿತಿಯನ್ನು ನೋಡಿದ ಮಂಜುನಾಥ್‌

ಅದಿತಿಯನ್ನು ನೋಡಿದ ಮಂಜುನಾಥ್‌

ಅದಿತಿ ಕಾಪೌಂಡ್ ಹಾರಿ ಎಸ್ಕೇಪ್‌ ಆಗಿದ್ದಾಳೆ. ಇದನ್ನು ನೋಡಿದ ಅವರ ತಂದೆ ಮಂಜುನಾಥ್‌ ಯಾರು ಹಿಂದಿನ ಗೇಟ್‌ನಿಂದ ಹೋದವರು ಎಂದು ಗಮನಿಸುತ್ತಾನೆ. ಅದಿತಿ ಮಾಸ್ಕ್ ಹಾಕಿದ್ದಕ್ಕೆ ಗೊತ್ತಾಗಿಲ್ಲ. ಆದರೆ ಅದಿತಿ ಥರಾನೇ ಇದ್ದಾಳಲ್ಲ ಎಂದು ಅನುಮಾನಗೊಂಡಿದ್ದಾನೆ. ಇದೇ ವೇಳೆಗೆ ಸುಹಾಸಿನಿ, ನರ್ಸ್‌ ಬಂದು ಹೋಗಿದ್ದರ ಬಗ್ಗೆ ವಿಚಾರಿಸಿದ್ದು, ರಿಜಿಸ್ಟರ್‌ ನೋಡಿದ್ದಾಳೆ. ಬಳಿಕ ಅದೇ ರಿಜಿಸ್ಟರ್‌ ನೋಡಿದ ಮಂಜುನಾಥ್‌ ಶಾಕ್‌ ಆಗಿದ್ದಾರೆ. ಯಾಕೆಂದರೆ, ಅದಿತಿ ಹೆಸರು ಬೇರೆ ಇದ್ದರೂ, ಸೈನ್‌ ಮಾತ್ರ ಅದಿತಿ ಎಂದು ಮಾಡಿರುತ್ತಾಳೆ.

ಸಮರ್ಥ್ ಬಳಿ ಸಿಕ್ಕಾಕಿಕೊಂಡ ಆದ್ಯ

ಸಮರ್ಥ್ ಬಳಿ ಸಿಕ್ಕಾಕಿಕೊಂಡ ಆದ್ಯ

ಇನ್ನು ಮನೆ ತಲುಪಿದ ಅದಿತಿ, ಆದ್ಯ ಜೊತೆಗೆ ಫೋನ್‌ನಲ್ಲಿ ಮಾತನಾಡುತ್ತಿರುತ್ತಾಳೆ. ಥ್ಯಾಂಕ್ಸ್ ಅತ್ತಿಗೆ ನೀವಿರಲಿಲ್ಲ ಎಂದಿದ್ದರೆ ಇವತ್ತು, ಸುಹಾಸಿನಿ ಅತ್ತೆ ಹತ್ತಿರ ಸಿಕ್ಕಾಕಿಕೊಳ್ಳುತ್ತಿದ್ದೆ ಎಂದು ಹೇಳುತ್ತಾಳೆ. ಅದೇ ಸಮಯಕ್ಕೆ ಸಮರ್ಥ್ ಫೋನ್‌ ತೆಗೆದುಕೊಳ್ಳುತ್ತಾನೆ. ಆಗ ಸಮರ್ಥ್ ಸತ್ಯ ಹೇಳುವಂತೆ ಫೋರ್ಸ್‌ ಮಾಡುತ್ತಾನೆ. ಆದ್ಯ ಏನೋ ಒಂದು ಹೇಳಿ ಕಳಿಸಿ, ಅದಿತಿ ಬಳಿ ಮಾತನಾಡುತ್ತಾಳೆ. ನಿನ್ನ ಲವ್‌ಗೆ ನನ್ನ ಸಂಪೂರ್ಣ ಸಪೋರ್ಟ್ ಇರುತ್ತದೆ ಎಂದು ಹೇಳಿ ಧೈರ್ಯ ತುಂಬುತ್ತಾಳೆ.

ರಾತ್ರಿಯೆಲ್ಲಾ ನಿದ್ದೆಗೆಟ್ಟ ಆರತಿ!

ರಾತ್ರಿಯೆಲ್ಲಾ ನಿದ್ದೆಗೆಟ್ಟ ಆರತಿ!

ಇನ್ನು ಇತ್ತ ಆರತಿ ಅಪ್ಪ ಅಮ್ಮನಿಗೆ ಮನೆಕಟ್ಟಲು ಸಹಾಯ ಮಾಡಬೇಕು ಎಂದು ಹೂ ಕಟ್ಟಲು ತೀರ್ಮಾನ ಮಾಡಿದ್ದಾಳೆ. ಆದರೆ, ಮನೆಯವರಿಗೆ ಗೊತ್ತಾಗಬಾರದು ಎಂಬ ಕಾರಣಕ್ಕೆ ವಿಕ್ಕಿ ಮಲಗಿದ ಮೇಲೆ ಹೂ ಕಟ್ಟಬೇಕು ಎಂದು ಕಾಯುತ್ತಿರುತ್ತಾಳೆ. ವಿಕ್ಕಿ ರೂಮಿಗೆ ಬರುತ್ತಿದ್ದಂತೆಯೇ ಮಲಗುವಂತೆ ಬಲವಂತ ಮಾಡುತ್ತಾಳೆ. ತಾನೂ ನಿದ್ದೆ ಮಾಡಿದವಳಂತೆ ನಟಿಸುತ್ತಾಳೆ. ಆಮೇಲೆ ಎದ್ದು ರಾತ್ರಿ ಪೂರ ಹೂ ಕಟ್ಟಿ ಬೆಳಗಿನ ಜಾವದಲ್ಲಿ ಕೂತಲ್ಲೇ ನಿದ್ದೆ ಹೋಗಿರುತ್ತಾಳೆ.

ಧೃವನ ಬಗ್ಗೆ ಯೋಚಿಸುತ್ತಿರುವ ವಿಕ್ಕಿ, ಆದ್ಯ!

ಧೃವನ ಬಗ್ಗೆ ಯೋಚಿಸುತ್ತಿರುವ ವಿಕ್ಕಿ, ಆದ್ಯ!

ಇತ್ತ ಆದ್ಯ ನಿತ್ಯ ಧೃವನಿಗೆ ಮಾತನಾಡುವಂತಾಗಲಿ ಎಂದು ಒಂದಲ್ಲ ಒಂದು ಕಥೆಯನ್ನು ಹೇಳುತ್ತಲೇ ಇರುತ್ತಾಳೆ. ಆದರೆ ಧೃವ ರಿಯಾಕ್ಟ್ ಮಾಡುವುದು ತೀರಾ ಕಡಿಮೆ. ಈಗ ವಿಕ್ಕಿ ತಾನು ಅಪ್ಪ ಆಗುತ್ತಿದ್ದು, ಚಿಕ್ಕಪ್ಪ ನೀನು. ನನ್ನ ಮಗನ ಜೊತೆಗೆ ಆಡುವುದು ಯಾವಾಗ. ಬೇಗ ಚೇತರಿಸಿಕೊ ಎಂದು ಬಲವಂತವಾಗಿ ಹೇಳುತ್ತಿರುತ್ತಾನೆ. ಈ ಸಂಭ್ರಮವನ್ನು ಆಚರಿಸುವುದಿಲ್ಲವಾ ಎಂದು ಹೇಳುತ್ತಿರುತ್ತಾನೆ. ಈ ವೇಳೆಗೆ ವೈಜಯಂತಿ ಬಂದು ಆದ್ಯ ಹಾಗೂ ವಿಕ್ಕಿಯನ್ನು ಸಮಾಧಾನ ಮಾಡುತ್ತಾಳೆ. ತಾಳ್ಮೆಯಿಂದ ಇರಿ, ಇಂದಲ್ಲ ನಾಳೆ ಧೃವ ಚೇತರಿಸಿಕೊಳ್ಳುತ್ತಾನೆ ಎಂದು ಹೇಳುತ್ತಾಳೆ.

More from Filmibeat

English summary
Gattimela Tv Serial Written Update On July 8th Episode, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X