Gattimela Serial: ಸ್ವಂತ ಅಮ್ಮನನ್ನು ಪತ್ತೆ ಹಚ್ಚಲು ದೊಡ್ಡ ಸಾಕ್ಷಿ ಸಿಕ್ಕಿದೆ!
'ಗಟ್ಟಿಮೇಳ' ಧಾರಾವಾಹಿಯಲ್ಲಿ ಧೃವ ಪ್ರೀತಿಯನ್ನು ಅದಿತಿ ಒಪ್ಪಿಕೊಂಡಿದ್ದು, ಇಬ್ಬರು ಈಗ ರೊಮ್ಯಾಂಟಿಕ್ ಮೂಡ್‌ನಲ್ಲಿದ್ದಾರೆ. ಇತ್ತ ಮನೆಯಲ್ಲಿ ಆದ್ಯ, ಅಮೂಲ್ಯ ಸೇರಿ ಧೃವ ಹೇಗೆ ಪ್ರಪೋಸ್ ಮಾಡಿರಬಹುದು ಎಂಬುದನ್ನು ತಮಾಷೆ ಮಾಡುತ್ತಾ ಸ್ಕಿಟ್ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಒಂದು ಎಡವಟ್ಟು ಆಗಿದೆ.
ಪ್ರೇಮಿಗಳು ಇಬ್ಬರೇ ಇರುವಾಗ ಮನೆಯನ್ನು ನೆನಪಿಸಿಕೊಂಡ ಅಧಿತಿ, ಧ್ರುವ ಬಳಿ ಏನೋ ಕೇಳಿದ್ದಾಳೆ. ಮದುವೆಯಾದ ಮೇಲೆ ಇಬ್ಬರು ನಮ್ಮ ಮನೆಯಲ್ಲೇ ಇರೋಣ, ನಿಮ್ಮ ಮನೆಯಲ್ಲಿ ಇರೋದು ಬೇಡ ಎಂದು ಕೇಳುತ್ತಾಳೆ. ಇದಕ್ಕೆ ಧ್ರುವ ಶಾಕ್ ಆಗಿ ನಿಮ್ಮ ಅಕ್ಕಂದಿರು ಇರೋ ಕಡೆ ಇರೋಕೆ ನಿನಗ್ಯಾಕೆ ಇಷ್ಟ ಇಲ್ಲ ಎನ್ನುತ್ತಾನೆ.
ಆಗ ಅಧಿತಿ ಇದು ಸ್ವಾಭಿಮಾನದ ಪ್ರಶ್ನೆ. ಬೇಕಿದ್ದರೆ ಈಗಲೇ ವೇದಾಂತ್, ವಿಕ್ಕಿ ಭಾವ ಬಳಿ ಈ ವಿಚಾರ ಮಾತಾಡು ಎಂದು ಹೇಳಿದ್ದಾಳೆ. ನಂತರ ಅಪ್ಪ ಅಮ್ಮ ಒಂಟಿಯಾಗುತ್ತಾರೆ. ಅವರು ನಮ್ಮನ್ನು ಕಷ್ಟಪಟ್ಟು ಸಾಕಿದ್ದಾರೆ. ನನ್ನ ಅಕ್ಕಂದಿರ ಬಗ್ಗೆ ನನಗೆ ಹೆಮ್ಮೆ ಇದೆ. ನನ್ನ ಅಪ್ಪ ಅಮ್ಮನನ್ನು ಬಿಟ್ಟಿರೋಕೆ ಆಗಲ್ಲ. ನೀನು ಇವತ್ತೇ ಮನೆಯಲ್ಲಿ ಮಾತನಾಡ್ತೀಯಾ ಅಲ್ವಾ ಎಂದಾಗ ಧ್ರುವ ನೀನು ಆರಾಮಾಗಿ ಕೇಳಿಬಿಟ್ಟೆ. ಆದರೆ ನನಗೆ ಅದು ಕಷ್ಟವಾಗುತ್ತೆ ಎಂದಿದ್ದಾನೆ.

ಇದಕ್ಕೆ ಅದಿತಿ, ನೀನು ಯಾವಾಗಬೇಕಿದ್ರೂ ನಿಮ್ಮ ಅಣ್ಣಂದಿರನ್ನು ನೋಡಬಹುದು. ನನ್ನದೇನು ಅಡ್ಡಿಯಿಲ್ಲ. ಆದರೆ ನಾನು ಮಾತ್ರ ಸೊಸೆಯಾಗಿ ಆ ಮನೆಗೆ ಬರೋಕೆ ಇಷ್ಟವಿಲ್ಲ. ನನ್ ಕಂಡೀಷನ್‌ಗೆ ಓಕೆ ನಾ ಬೇಗ ಹೇಳು. ಆಗಲೇ ನಾವು ಮದುವೆಯಾಗೋಕೆ ಆಗೋದು ಎನ್ನುತ್ತಾಳೆ. ಈ ಮಾತುಗಳನ್ನು ಕೇಳಿ ಧ್ರುವ ಶಾಕ್ ಆಗುತ್ತಾನೆ. ಅದಕ್ಕೆ ಅಧಿತಿ ಚಿಕ್ಕ ಮನೆಯಲ್ಲಿ ಇರೋದು ಸಮಸ್ಯೆನಾ ಎಂದು ಕೇಳಿದ್ದಕ್ಕೆ ಇಲ್ಲ ಅದಿತಿ, ನಾನು ಚಿಕ್ಕ ವಯಸ್ಸಿಗೆ ಎಲ್ಲವನ್ನು ಅನುಭವಿಸಿದ್ದೀನಿ. ಒಂದು ಟೈಮ್‌ನಲ್ಲಿ ಮನೆ ಕೂಡ ಇರಲಿಲ್ಲ. ಆಟೋ ಓಡಿಸಿ ಬದುಕಿದ್ದೀನಿ.
ಅಷ್ಟೇ ಅಲ್ಲದೇ ನಿಮ್ಮ ಮನೆ ಅನ್ನ ತಿಂದಿದ್ದೀನಿ. ನಾನು ಈಗಲೇ ಆಫೀಸ್‌ಗೆ ಹೋಗಿ ಮಾತಾಡುತ್ತೀನಿ ಎಂದು ಧ್ರುವ ಅಲ್ಲಿಂದ ಹೊರಡುತ್ತಾನೆ. ಆಗ ಅದಿತಿ ಬೇಜಾರ್ ಮಾಡ್ಕೊಂಡ ಅನ್ಸುತ್ತೆ. ಅದಕ್ಕೆ ಹೀಗೆ ನನ್ನ ಬಿಟ್ಟು ಹೋಗ್ತಿದ್ದಾನೆ ಎಂದು ಕೊಳ್ಳುತ್ತಾಳೆ. ಕೂಗಿದ್ರೂ ಕೇಳಿಸದಂತೆ ಧ್ರುವ ಕಾರ್ ಸ್ಟಾರ್ಟ್ ಮಾಡ್ಕೊಂಡು ಹೋಗಿ ಬಿಡುತ್ತಾನೆ.
ಇತ್ತ ರಜೆ ದಿನವೂ ಆಫೀಸಿಗೆ ಬಂದ ಪ್ರಜ್ವಲ್‌ಗೆ ಒಂದು CD ಸಿಕ್ಕಿರುತ್ತದೆ. ಅದು ವಿಕ್ಕಿ, ವೇದಾಂತ್ ಹಾಗೂ ಧ್ರುವ ತಾಯಿ ಇರುವ ಕ್ಯಾಸೆಟ್ ಆಗಿರುತ್ತದೆ. ಆ ಕ್ಯಾಸೆಟ್ ಟಿವಿಗೆ ಹಾಕಿ ಪ್ರಜ್ವಲ್ ನೋಡುತ್ತಾನೆ.
ವ್ಯಕ್ತಿಯೊಬ್ಬ ನಿಮ್ಮ ತಾಯಿ ಇರುವ ಸಾಧ್ಯತೆ ಇದೆ ಎಂದು ಹೇಳುತ್ತಾನೆ. ಅದಕ್ಕೆ ವಿಕ್ಕಿ ಲಾಸ್ಟ್ ಟೈಮ್ ಥರ ಮಾಡ್ಬೇಡ ನಾನು ವೇದಾಂತ್ ಹತ್ರ ಬೈಸ್ಕೋತೀನಿ ಅಂದಾಗ , ಇಲ್ಲ ಸರ್ ಎಂದು ಪ್ರಜ್ವಲ್ ಹೇಳುತ್ತಾನೆ. ಟೈಮ್ ಆಯ್ತು ಅಂತ ವಿಕ್ಕಿ ಮನೆಯಲ್ಲೇ ಫೋನ್ ಮರೆತು ಹೋಗ್ತಾನೆ. ಹೋಗುವಾಗ ಅಮೂಲ್ಯಗೆ ಈ ವಿಷಯ ಹೇಳುತ್ತಾನೆ.
ಅಮೂಲ್ಯ ಕೂಡ ವಿಕ್ಕಿ ಜೊತೆ ಹೋಗುತ್ತಾಳೆ. ಅಷ್ಟರಲ್ಲಿ ಆಫೀಸ್ ಕೆಲಸದವಳು ಸುಹಾಸಿನಿಗೆ ಕರೆ ಮಾಡಿ ಹೇಳುತ್ತಾಳೆ. ಆಗ ಸುಹಾಸಿನಿ, ವಿಕ್ಕಿಗೆ ಎಷ್ಟು ಅವಮಾನ ಮಾಡಿದರೂ, ಅವನು ವೈದೇಹಿನ ಹುಡುಕೋದು ಬಿಟ್ಟಿಲ್ಲ. ಹೀಗೆ ಸುಮ್ಮನಿದ್ದರೆ, ವೈದೇಹಿ ಬಗ್ಗೆ ಗೊತ್ತಾಗುತ್ತೆ. ಏನಾದರೂ ಮಾಡಬೇಕು ಎಂದು ಹೇಳುತ್ತಾಳೆ. ಇತ್ತ, ಅದಿತಿ ಮಾತಿನಿಂದ ಗೊಂದಲದಲ್ಲಿರುವ ಧ್ರುವ ವಿಕ್ಕಿಗೆ ಕರೆ ಮಾಡುತ್ತಾನೆ. ಆದರೆ ವಿಕ್ಕಿ ಫೋನ್ ಅನ್ನು ಮನೆಯಲ್ಲೇ ಬಿಟ್ಟಿರುತ್ತಾನೆ.
ಈಗ ವೇದಾಂತ್, ವಿಕ್ಕಿ, ಧ್ರುವ ಹಾಗೂ ಅಮೂಲ್ಯ ಎಲ್ಲರೂ ಒಬ್ಬರಿಗೊಬ್ಬರು ಗೊತ್ತಿಲ್ಲದಂತೆ ಆಫೀಸ್ ಕಡೆ ಹೊರಟಿದ್ದಾರೆ. ಪ್ರಜ್ವಲ್ ವೀಡಿಯೋ ನೋಡಲು ಪ್ರಯತ್ನಿಸುತ್ತಿರುತ್ತಾನೆ. ವೈದೇಹಿನೇ ಅವರ ಅಮ್ಮ ಅನ್ನೋದು ಗೊತ್ತಾಗುತ್ತೋ ಇಲ್ವೋ ಅನ್ನೋದನ್ನು ಇಂದಿನ ಎಪಿಸೋಡ್‌ನಲ್ಲಿ ನೋಡಬೇಕಿದೆ.


Click it and Unblock the Notifications











