ಬಿಗ್ ಬಾಸ್ ಆಯ್ಕೆ ಸದಸ್ಯರಿಂದ ಅಸಭ್ಯ ವರ್ತನೆ: ನಟಿ ಗಾಯಿತ್ರಿ ಪೊಲೀಸ್ ದೂರು
ಯಾವುದೇ ಭಾಷೆಯ ಬಿಗ್ ಬಾಸ್ ಶೋಗಳಲ್ಲಿ ಸ್ಪರ್ಧಿಗಳನ್ನ ಆಯ್ಕೆ ಮಾಡಬೇಕಾದರೆ, ಅದಕ್ಕಾಗಿ ಒಂದು ವಿಶೇಷ ತಂಡ ಕೆಲಸ ಮಾಡುತ್ತೆ. ಹಲವು ಕ್ಷೇತ್ರಗಳ, ಹಲವು ವ್ಯಕ್ತಿಗಳನ್ನ ಭೇಟಿ ಮಾಡಿ ಎಲ್ಲ ಷರತ್ತುಗಳಿಗೆ ಒಪ್ಪಿಕೊಂಡ್ರೆ, ಈ ಶೋಗೆ ಅವರು ಸೂಕ್ತವೆನಿಸಿದರೇ ಅಂತವರನ್ನ ಬಿಗ್ ಮನೆಗೆ ಕರೆತರಲಾಗುತ್ತೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರ.
24 ಗಂಟೆಯೂ ಈ ಶೋನಲ್ಲಿ ಏನೆಲ್ಲಾ ನಡೆಯುತ್ತೆ ಎಂಬುದನ್ನ ನೋಡಲು ಸಾಧ್ಯವಿಲ್ಲವಾದರೂ, ಒಂದು ಗಂಟೆಯಲ್ಲಿ ಎಷ್ಟು ಬೇಕೋ ಅಷ್ಟು ತೋರಿಸಲಾಗುತ್ತೆ. ಅದರಲ್ಲೂ ಕೆಲವೊಂದು ವಿವಾದಾತ್ಮಕ ದೃಶ್ಯಗಳು ಪ್ರಸಾರವಾಗಿರುವ ಉದಾಹರಣೆ ಇದೆ.
ಇದುವರೆಗೂ ಬಿಗ್ ಬಾಸ್ ಆಯ್ಕೆಗಾರರ ಮೇಲೆ ಯಾವುದೇ ಆರೋಪಗಳು ಬಂದಿಲ್ಲ. ಆದ್ರೀಗ, ತೆಲುಗು ಬಿಗ್ ಬಾಸ್ ಆಯ್ಕೆಗಾರರ ವಿರುದ್ಧ ನಟಿ ಗಾಯಿತ್ರಿ ಗುಪ್ತಾ ಪೊಲೀಸ್ ದೂರು ನೀಡಿದ್ದಾರೆ. ನಿಮ್ಮನ್ನ ಆಯ್ಕೆ ಮಾಡಿದ್ರೆ 'ಬಿಗ್ ಬಾಸ್'ನ ಹೇಗೆ ತೃಪ್ತಿ ಪಡಿಸುತ್ತೀರಾ? ಎಂದು ಪರೋಕ್ಷವಾಗಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ದೂರಿದ್ದಾರೆ. ಏನಿದು? ಮುಂದೆ ಓದಿ.....

ಅಗ್ರಿಮೆಂಟ್ ಮಾಡಿ, ನಿರಾಕರಿಸಿದ್ರು
ತೆಲುಗು ಬಿಗ್ ಬಾಸ್ ಮೂರನೇ ಆವೃತ್ತಿಯಲ್ಲಿ ಸ್ಪರ್ಧಿಯಾಗಿ ಭಾಗವಹಿಸಿಲು ನಟಿ ಗಾಯಿತ್ರಿ ಗುಪ್ತಾ ಅವರನ್ನ ಆಯ್ಕೆಗಾರ ತಂಡ ಸಂಪರ್ಕಿಸಿತ್ತಂತೆ. 'ನೀವು ಆಯ್ಕೆ ಆಗಿದ್ದಿರಾ ಎಂದು ಹೇಳಿ ಅಗ್ರಿಮೆಂಟ್ ಮಾಡಿಸಿಕೊಂಡು, ಆಮೇಲೆ ರಿಜೆಕ್ಟ್ ಮಾಡಿದ್ದಾರೆ' ಎಂದು ಆರೋಪಿಸಿದ್ದಾರೆ.

'ಬಾಸ್'ನ ಹೇಗೆ ತೃಪ್ತಿ ಪಡಿಸುತ್ತೀರಾ?
ಗಾಯಿತ್ರಿ ಗುಪ್ತಾ ಅವರನ್ನ ಸಂದರ್ಶಿಸಿದ ವೇಳೆ ಆಯ್ಕೆಗಾರರ ತಂಡದವರು, 'ನಿಮ್ಮನ್ನು ಆಯ್ಕೆ ಮಾಡಿದ್ರೆ ನೀವು 'ಬಿಗ್ ಬಾಸ್'ನ ಹೇಗೆ ಸಂತೃಪ್ತಿ ಪಡಿಸುತ್ತೀರಾ?' ಎಂದು ಕೇಳಿದ್ರಂತೆ. ನನ್ನಿಂದಅವರು ಏನೋ ನಿರೀಕ್ಷೆ ಮಾಡಿದ್ರು. ಅದಕ್ಕೆ ನಾನು ಸ್ಪಂದನೆ ನೀಡದಿದ್ದಾಗ ನನ್ನನ್ನು ರಿಜೆಕ್ಟ್ ಮಾಡಿದ್ರು' ಎಂದು ಗಾಯಿತ್ರಿ ಗುಪ್ತಾ ಹೇಳಿಕೊಂಡಿದ್ದಾರೆ.

ಅಷ್ಟಕ್ಕೂ 'ಬಿಗ್ ಬಾಸ್' ಯಾರು?
ಕಳೆದ ಎರಡು ಆವೃತ್ತಿಯಲ್ಲೂ ಗಮನಿಸಿದ್ರೆ, ಬಿಗ್ ಬಾಸ್ ಎನ್ನುವುದು ವ್ಯಕ್ತಿ ಅಲ್ಲ. ಅದೊಂದು ಧ್ವನಿ. ಸ್ಪರ್ಧಿಗಳಿಗೆ ಸೂಚನೆ ನೀಡರುವ ಧ್ವನಿ. ಸೋ, ಬಿಗ್ ಬಾಸ್ ಸಂತೃಪ್ತಿ ಪಡಿಸುತ್ತಿಯಾ ಅಂದ್ರೆ ಏನು ಅರ್ಥ ಎಂದು ಪ್ರಶ್ನಿಸಿದ್ದಾರೆ. ಬಿಗ್ ಬಾಸ್ ಎಂಬ ಹೆಸರಿನಲ್ಲಿ ಕೆಲವರು ಕಮಿಟ್ ಮೆಂಟ್ ಗೆ ಒತ್ತಾಯ ಮಾಡುತ್ತಿದ್ದಾರೆ. ಲೈಂಗಿಕವಾಗಿ ಬಳಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ನಟಿ ಗಾಯಿತ್ರಿ ಪೊಲೀಸ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ವಿವಾದಿಂದಲೇ ಆರಂಭ.!
ಅಂದ್ಹಾಗೆ, ತೆಲುಗು ಬಿಗ್ ಬಾಸ್ ಮೂರನೇ ಆವೃತ್ತಿ ಇನ್ನು ಆರಂಭವಾಗಿಲ್ಲ. ಈ ವಾರಾಂತ್ಯಕ್ಕೆ ಮೂರನೇ ಆವೃತ್ತಿಗೆ ಚಾಲನೆ ಸಿಗುತ್ತಿದೆ. ಈಗಾಗಲೇ ಎಲ್ಲ ಸ್ಪರ್ಧಿಗಳು ಪಕ್ಕಾ ಆಗಿದ್ದಾರೆ. ಅಧಿಕೃತವಾಗಿ ಶೋ ಆರಂಭವಾಗುವುದಕ್ಕೂ ಮುಂಚೆ ಹಲವು ವಿವಾದಗಳನ್ನ ಎಳೆದುಕೊಂಡು ಬಿಗ್ ಬಾಸ್ ಆರಂಭವಾಗುತ್ತಿದೆ. ಮುಂದಿನ ದಿನದಲ್ಲಿ ಮತ್ತೇನು ಅವಾಂತರ ಸೃಷ್ಟಿಸಿತ್ತೋ ಈ ಬಿಗ್ ಬಾಸ್ ಕಾದುನೋಡಬೇಕಿದೆ.


Click it and Unblock the Notifications











