For Quick Alerts
  ALLOW NOTIFICATIONS  
  For Daily Alerts

  ಈ ವಾರಾಂತ್ಯದಲ್ಲಿ ಟಿವಿ ಪ್ರೇಕ್ಷಕರನ್ನು ರಂಜಿಸಲು ಬರ್ತಿದೆ 'ಗೀತಾ'

  |

  ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಗೀತಾ' ಸಿನಿಮಾ ಕಿರುತೆರೆಗೆ ಬರ್ತಿದೆ. ಜುಲೈ 4ರಂದು ಭಾನುವಾರ ಸಂಜೆ 4.30ಕ್ಕೆ ಜೀ ಕನ್ನಡ ಮತ್ತು ಜೀ ಕನ್ನಡ ಎಚ್.ಡಿ.ಯಲ್ಲಿ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಕಾಣ್ತಿದೆ.

  ವಿಜಯ ನಾಗೇಂದ್ರ ನಿರ್ದೇಶಿಸಿರುವ ಈ ಸಿನಿಮಾದಲ್ಲಿ ಗಣೇಶ್ ಬಹಳ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡ ಉಳಿಸುವ ಗೋಕಾಕ್ ಚಳವಳಿಯ ಹಿನ್ನೆಲೆಯಲ್ಲಿ ರೂಪುಗೊಂಡಿರುವ ಈ ನವಿರಾದ ಪ್ರೇಮಕಥೆಯುಳ್ಳ 'ಗೀತಾ' ಚಿತ್ರದಲ್ಲಿ, ಗಣೇಶ್ ಎರಡು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ತಾರೆ. ಎರಡು ಕಾಲಘಟ್ಟದಲ್ಲಿ ನಡೆಯುವ ಕಥೆಯನ್ನು, ವಿಶಿಷ್ಟವಾಗಿ ಕಟ್ಟಿ ಕೊಟ್ಟಿದ್ದಾರೆ ನಿರ್ದೇಶಕರು.

  ನೋವುಗಳ ನಡುವೆ ಸಂಭ್ರಮ ಬೇಡ; ಅಭಿಮಾನಿಗಳಿಗೆ ನಟ ಗಣೇಶ್ ಪತ್ರ ನೋವುಗಳ ನಡುವೆ ಸಂಭ್ರಮ ಬೇಡ; ಅಭಿಮಾನಿಗಳಿಗೆ ನಟ ಗಣೇಶ್ ಪತ್ರ

  'ಗೀತಾ' ಚಿತ್ರದಲ್ಲಿ ಶಾನ್ವಿ ಶ್ರೀವಾಸ್ತವ, ಪ್ರಯಾಗ್ ಮಾರ್ಟಿನ್‌ ಹಾಗೂ ಪಾರ್ವತಿ ಅರುಣ್‌ ನಾಯಕಿಯರು. ಗಣೇಶ್‌ ತಂದೆ-ತಾಯಿ ಪಾತ್ರದಲ್ಲಿ ಡೈನಾಮಿಕ್‌ ಹೀರೋ ದೇವರಾಜ್‌, ಸುಧಾರಾಣಿ ನಟಿಸಿದ್ದಾರೆ. ಚಿತ್ರದಲ್ಲಿ ಬಹುತಾರಾಗಣವಿದ್ದು, ಮನೆ ಮಂದಿಯೆಲ್ಲಾ ಕೂತು ನೋಡಬಹುದಾದ ಮನರಂಜನಾತ್ಮಕ ಸಿನಿಮಾ.

  ಕೊಲ್ಕತ್ತಾ, ಮೈಸೂರು, ಬೆಂಗಳೂರು, ಮನಾಲಿ ಸೇರಿದಂತೆ, ಕಣ್ಮನ ಸೆಳೆವ ಹಲವಾರು ಸುಂದರ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ. ಗಣೇಶ್‌ ಹೋಮ್‌ ಬ್ಯಾನರ್‌ನಲ್ಲಿ ತಯಾರಾಗಿರುವ 'ಗೀತಾ' ಸಿನಿಮಾವನ್ನು ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಇದೇ ಮೊದಲ ಬಾರಿಗೆ ಪ್ರಸಾರ ಮಾಡಲಾಗ್ತಿದೆ. ಜುಲೈ 2 ರಂದು ಗಣೇಶ್ ಹುಟ್ಟುಹಬ್ಬವಿದೆ.

  ಸಿನಿಮಾ ಕೊಲ್ಕತಾದಲ್ಲಿ ಪ್ರಾರಂಭಗೊಳ್ಳುತ್ತದೆ. ಆಕಾಶ್ (ಗಣೇಶ್‌) ತನ್ನ ಪ್ರೀತಿಯನ್ನು ಗೀತಾಗೆ (ಪ್ರಯಾಗಾ ಮಾರ್ಟಿನ್‌) ವ್ಯಕ್ತಪಡಿಸಲು ಕಾಯುತ್ತಿರುತ್ತಾನೆ. ಆದರೆ ಗೀತಾಗೆ ಪ್ರೇಮ್ ಜೊತೆಯಲ್ಲಿ ನಿಶ್ಚಿತಾರ್ಥವಾಗಿರುತ್ತದೆ. ಗೀತಾ ನಿಶ್ಚಿತಾರ್ಥದಲ್ಲಿ ಆಕಾಶ್ ಪ್ರಿಯಾ(ಶಾನ್ವಿ ಶ್ರೀವಾಸ್ತವ)ಳನ್ನು ಭೇಟಿಯಾಗುತ್ತಾನೆ. ಕಾಲ ಕಳೆದಂತೆ ಅವರ ಬಾಂಧವ್ಯ ದೃಢವಾಗುತ್ತದೆ. ಈ ಮಧ್ಯದಲ್ಲಿ ಆಕಾಶ್ ತಂದೆ ತನ್ನ ಪ್ರೇಮಕಥೆಯನ್ನು ಬಿಚ್ಚಿಡುತ್ತಾನೆ. ಪ್ರಿಯಾ ಮಾಸ್ಟರ್ಸ್ ಕಲಿಯಲು ಯು.ಎಸ್.ಎಗೆ ತೆರಳುತ್ತಾಳೆ. ಆಕಾಶ್ ಕೊಲ್ಕತಾಗೆ ಕೆಲಸದ ಮೇಲೆ ಹೋಗುತ್ತಾನೆ. ಅಲ್ಲಿ ಗೀತಾಳನ್ನು ಭೇಟಿಯಾಗುತ್ತಾನೆ. ಅಲ್ಲಿ ಗೀತಾ ತನ್ನ ನಿಶ್ಚಿತಾರ್ಥ ರದ್ದುಪಡಿಸಿದ್ದನ್ನು ತಿಳಿಯುತ್ತಾಳೆ.

  Geetha Movie Will Premiere on Zee Kannada on July 4th

  ಸಮಯ ಕಳೆದಂತೆ ಆಕಾಶ್ ಮತ್ತು ಗೀತಾ ನಡುವೆ ಬಾಂಧವ್ಯ ಗಟ್ಟಿಯಾಗುತ್ತದೆ. ಬೆಂಗಳೂರಿನಲ್ಲಿ ಪ್ರಿಯಾಳೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳುವಾಗ ಆಕಾಶ್ ಗೆ ತಾನು ಪ್ರೇಮಿಸಿದ್ದು ಗೀತಾಳನ್ನು ಎಂದು ಅರಿವಾಗುತ್ತದೆ. ಆಗ ನಿಶ್ಚಿತಾರ್ಥ ರದ್ದುಪಡಿಸಿ ಗೀತಾಗೆ ತನ್ನ ಪ್ರೇಮ ನಿವೇದಿಸುತ್ತಾನೆ.

  English summary
  Golden Star Ganesh starrer Geetha movie will premiere on Zee Kannada on July 4th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X