ಎಂಗೇಜ್ ಆದ ನಟ ಧನುಷ್ ಗೌಡ : ಫೊಟೋ ನೋಡಿ ಅಭಿಮಾನಿಗಳು ಶಾಕ್
ಕಲರ್ಸ್ ಕನ್ನಡ ವಾಹಿನಿಯಲ್ಲಿ 2020ರಲ್ಲಿ ಪ್ರಾರಂಭವಾದ 'ಗೀತಾ' ಧಾರಾವಾಹಿ ಸಾವಿರಕ್ಕೂ ಹೆಚ್ಚು ಸಂಚಿಕೆಗಳು ಪ್ರಸಾರವಾಗಿದೆ. ಈ ಧಾರಾವಾಹಿಯ ನಾಯಕ ನಟ ಧನುಷ್ ಗೌಡ ಈಗ ಮದುವೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಧನುಷ್ ಎಂಗೇಜ್‌ಮೆಂಟ್ ಫೋಟೋಸ್ ಅನ್ನು ನೋಡಿದ ಅಭಿಮಾನಿಗಳು ಫುಲ್ ಶಾಕ್ ಆಗಿದ್ದಾರೆ. ಅಭಿಮಾನಿಗಳ ನಿರೀಕ್ಷೆ ಹುಸಿಯಾದಂತೆ ಕಂಡಿದೆ.
'ಗೀತಾ' ಧಾರಾವಾಹಿಯಲ್ಲಿ ಗೀತಾ ಮತ್ತು ವಿಜಯ್ ಹಲವು ವರ್ಷಗಳ ಕಾಲ ಪ್ರೀತಿಸಿ, ಮದುವೆಯಾಗಿರುತ್ತಾರೆ. ಅದೇ ರೀತಿಯಲ್ಲಿ ನಿಜ ಜೀವನದಲ್ಲೂ ಇವರಿಬ್ಬರೇ ಮದುವೆಯಾಗುತ್ತಾರೆ ಎಂದು ನಂಬಿದ್ದ ಅಭಿಮಾನಿಗಳ ನಂಬಿಕೆ ಸುಳ್ಳಾಗಿದೆ.

ನಿಶ್ಚಿತಾರ್ಥ ಮಾಡಿಕೊಂಡ ಧನುಷ್
ನಟ ಧನುಷ್ ಸೈಲೆಂಟ್ ಆಗಿ ತಮ್ಮ ನೆಚ್ಚಿನ ಹುಡುಗಿಯ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಧನುಷ್, ಸಂಜನಾ ಎಂಬುವರ ಜೊತೆಗೆ ಉಂಗುರ ಬದಲಾಯಿಸಿಕೊಂಡಿದ್ದಾರೆ. ನಿಶ್ಚಿತಾರ್ಥಕ್ಕೆ ನಟಿ ಭವ್ಯಾ ಗೌಡ ಕೂಡ ಆಗಮಿಸಿದ್ದು, ಗೆಳೆಯನ ನಿಶ್ಚಿತಾರ್ಥದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಗೆಳೆಯನ ಹೊಸ ಜೀವನಕ್ಕೆ ಶುಭ ಹಾರೈಸಿದ್ದಾರೆ. ಸದಾ ಭವ್ಯ ಜೊತೆಗೆ ಧನುಷ್ ಟ್ರಾವೆಲ್ ಕೂಡ ಮಾಡುತ್ತಿದ್ದರು. ಇದನ್ನು ಗಮನಿಸಿದ ಅಭಿಮಾನಿಗಳು, ಧನುಷ್ ಮತ್ತು ಭವ್ಯ ಇಬ್ಬರೂ ರಿಯಲ್ ಲೈಫ್‌ನಲ್ಲೂ ಒಂದಾಗುತ್ತಾರೆ ಎಂದುಕೊಂಡಿದ್ದರು. ಆದರೆ ಈಗ ಧನುಷ್ ನಿಶ್ಚಿತಾರ್ಥದ ಫೋಟೋಗಳನ್ನು ನೋಡಿ ಅಭಿಮಾನಿಗಳು ಬೇಸರ ವ್ಯಕ್ತ ಪಡಿಸಿದ್ದಾರೆ.
ಧನುಷ್ ನಟನೆಯ ಜರ್ನಿ
ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿರುವ ಧನುಷ್ ಗೌಡ ಅವರು ಬಣ್ಣದ ಲೋಕಕ್ಕೆ ಗೀತಾ ಧಾರಾವಾಹಿ ಮೂಲಕ ಎಂಟ್ರಿ ಕೊಟ್ಟವರು. ಇದೇ ಧಾರಾವಾಹಿ ಧನುಷ್‌ಗೆ ಯಶಸ್ಸನ್ನು ಕೂಡ ತಂದು ಕೊಟ್ಟಿದೆ. ನಟನಾಗಬೇಕು ಎಂದು ಧನುಷ್ ಗೌಡ ನಿರ್ಧಾರ ಮಾಡಿದಾಗ ಅವರಿಗೆ ನಟನೆಯ ಗಂಧ ಗಾಳಿ ಗೊತ್ತಿರಲಿಲ್ಲ. ಇದಕ್ಕಾಗಿ ಧನುಷ್ ನಟನಾ ತರಬೇತಿ ಪಡೆಯುವ ನಿರ್ಧಾರ ಮಾಡಿದ ಧನುಷ್ ನಾಗತಿಹಳ್ಳಿ ಚಂದ್ರಶೇಖರ್ ಅವರ ಟೆಂಟ್ ಸಿನಿಮಾ ಸೇರಿ ನಟನೆಯನ್ನು ಕಲಿತುಕೊಂಡರು. ಈಗ ಕಳೆದ ಮೂರು ವರ್ಷಗಳಿಂದ ವೀಕ್ಷಕರನ್ನು ರಂಜಿಸುತ್ತಿದ್ದಾರೆ.

ನೆಗೆಟಿವ್, ಪಾಸಿಟಿವ್ ರೋಲ್‌ನಲ್ಲಿ ಧನುಷ್
ಮೊದಲ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸುವ ಅವಕಾಶ ಸಿಕ್ಕಾಗ ಧನುಷ್ ಆದ ಸಂತಸಕ್ಕೆ ಪಾರವಿರಲಿಲ್ಲವಂತೆ. ಧನುಷ್ ಗೌಡಗೆ 'ಗೀತಾ' ಧಾರಾವಾಹಿ ತುಂಬಾ ಸ್ಪೆಷಲ್ ಅಂತೆ. ಆರಂಭದಲ್ಲಿ ನೆಗೆಟಿವ್ ರೋಲ್‌ನಲ್ಲಿ ಕಾಣಿಸಿಕೊಂಡ ಧನುಷ್ ಅವರು ಈಗ ಹೀರೋ ಆಗಿ ಪಾಸಿಟಿವ್ ರೋಲ್‌ನಲ್ಲಿ ಮಿಂಚುತ್ತಿದ್ದಾರೆ. ಇನ್ನು ತಮ್ಮ ಫಿಟ್ನೆಸ್ ಬಗ್ಗೆ ಸಾಕಷ್ಟು ಕಾಳಜಿಯನ್ನು ತೋರುತ್ತಿರುವ ನಟ ತಮ್ಮ ಸಿಕ್ಸ್ ಪ್ಯಾಕ್ ತೋರಿಸುವಂತಹ ಫೋಟೋಗಳನ್ನೇ ಹಂಚಿಕೊಳ್ಳುತ್ತಿರುತ್ತಾರೆ.
ಹಿರಿತೆರೆಗೆ ಹಾರುತ್ತಾರಾ ಧನುಷ್..?
ಕಳೆದ ವರ್ಷ ನಡೆದ ಅನುಬಂಧ ಅವಾರ್ಡ್ಸ್ ವೇದಿಕೆಯಲ್ಲಿ ಧನುಷ್ ಗೌಡ 'ಮನೆ ಮೆಚ್ಚಿದ ಅಳಿಯ' ಪ್ರಶಸ್ತಿ ಪಡೆದಿದ್ದರು. ಧನುಷ್ ಗೌಡ ಈ ಬಾರಿಯ ಕಲರ್ಸ್ ಕನ್ನಡ ಅನುಬಂಧ ಅವಾರ್ಡ್ಸ್‌ನಲ್ಲಿ 'ಮನೆ ಮೆಚ್ಚಿದ ಮಗ' ಪ್ರಶಸ್ತಿ ಪಡೆದುಕೊಂಡಿದ್ದಾರೆ. ಇದೀಗ ಇವರ ನಿಶ್ಚಿತಾರ್ಥ ಅದ್ಧೂರಿಯಾಗಿ ನಡೆದಿದ್ದು, ಮದುವೆ ಬಗ್ಗೆ ಹಾಗೂ ಹುಡುಗಿ ಸಂಜನಾ ಬಗ್ಗೆ ಧನುಷ್ ಅವರೇ ಹೆಚ್ಚಿನ ಮಾಹಿತಿಯನ್ನು ನೀಡಬೇಕಿದೆ. ಧನುಷ್ ಗೌಡ ಮುಂದೊಂದು ದಿನ ಹಿರಿತೆರೆಗೆ ಕಾಲಿಡುತ್ತಾರಾ ಕಾದು ನೋಡಬೇಕಾಗಿದೆ.


Click it and Unblock the Notifications











